Updated at Wed,26th Jul, 2017 8:25AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟ್ವಿಟಾಪತಿ

ಜನರಿಗೆ ಸೂಚನೆ: ಹೊಸ ನಿಷೇಧಗಳಿಗಾಗಿ ಮೋದಿ ಸಂಪರ್ಕಿಸಿ, ಹೊಸ ಜೋಕುಗಳಿಗೆ ರಾಹುಲ್‌ ಸಂಪರ್ಕಿಸಿ, ಹೊಸ ಆಫ‌ರ್‌ಗಳಿಗೆ ಅಂಬಾನಿ ಸಂಪರ್ಕಿಸಿ
*ರಿಶು1809
ಬಿಜೆಪಿ ರಾಷ್ಟ್ರಪತಿ ಆಯ್ಕೆ ನಿಜಕ್ಕೂ ಅಚ್ಚರಿ: 'Ram'ಇದೆ 'Kov'ಇದೆ, ಕೊನೆಯಲ್ಲಿ'Ind'ನೂ ಇದೆ!
*ರಮೇಶ್‌ ಶ್ರೀವತ್ಸ
ಪಾಕಿಸ್ತಾನದಲ್ಲಿ ಬದುಕು ಅಂದರೆ: ಹುಟ್ಟು, ಅನ್ನಕ್ಕಾಗಿ ಪರದಾಟ,ಕೊನೆಗೆ ಬಾಂಬ್‌ ದಾಳಿಯಲ್ಲಿ ಸಾವು!
*ಓಲ್ಡ್‌ಸ್ಕೂಲ್‌ಮಾಂಕ್‌
ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಭಾಷೆ ಅಂದರೆ ಮಲಯಾಳ!
*ಸಾಗರ್‌ಕಸಮ್‌
ಇದೀಗ ಸರ್ಕಾರದಿಂದ "ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌'; ಆ್ಯಪಲ್‌ ಬೆಲೆಗೆ ಟೊಮೆಟೋ ಕೂಡ ಲಭ್ಯ!
*ಲೊಲ್‌ಮಾಲ್‌
ಆಗಸ್ಟ್‌ 15ರಿಂದ ಫೀಚರ್‌ ಫೋನ್‌ ಬಳಕೆದಾರರಿಗೆ "ಡಿಜಿಟಲ್‌ ಸ್ವಾತಂತ್ರ್ಯ' ಸಿಗುವ ದಿನ. ಖುಷ್‌ ಹುವಾ ಭಾರತ್‌.
*ಆರ್‌.ಎನ್‌.
ಜಿಯೋ ಫೋನ್‌ ಬೆಲೆ 0 ರೂ. ಭದ್ರತಾ ಠೇವಣಿ 1500 ರೂ. 150 ರೂ.ಗೆ ಅನಿಯಮಿತ ಡೇಟಾ... ಈಗ ಏರ್‌ಟೆಲ್‌ ಮತ್ತು ವೊಡಾಫೋನ್‌ಗಾಗಿ 2 ನಿಮಿಷ ಮೌನಾಚರಣೆ.
*ರವೀಂದ್ರ
ಸೊನ್ನೆ(0)ಯನ್ನು ಕಂಡುಹಿಡಿದಿದ್ದು ಆರ್ಯಭಟ. ಆದರೆ, ಇದರ ಮೌಲ್ಯವನ್ನು ಮುಖೇಶ್‌ ಅಂಬಾನಿ ಬಳಸಿದಷ್ಟು ಆರ್ಯಭಟ ಕೂಡ ಬಳಸಿರಲಿಕ್ಕಿಲ್ಲ.
*ಪನ್‌ ಆಟಿ
ನೀವು ಸರಕು ಖರೀದಿಸಿದರೆ, ನಾನು ಜಿಎಸ್‌ಟಿಯಾಗಿ ಹಿಂಬಾಲಿಸುತ್ತೇನೆ; ನೀವು ಹಣ ಹೆಚ್ಚು ಇಟ್ಟುಕೊಂಡಿದ್ದರೆ, ನಾನು ತೆರಿಗೆಯಾಗಿ ಹಿಂಬಾಲಿಸುತ್ತೇನೆ- ಅರುಣ್‌ ಜೇಟ್ಲಿ
*ಲೊಲ್‌ಮಾಲ್‌
ಬಿಜೆಪಿಯವ್ರು: ಕೋವಿಂದ್‌ ಗೆದ್ರು.. ಕೋವಿಂದ್‌ ಗೆದ್ರು.. ಮೀರಾಕುಮಾರ್‌: ಸೈಲೆನ್ಸ್‌.. ಸೈಲೆನ್ಸ್‌ ಆಪ್‌ ಪ್ಲೀಸ್‌ ಬೈಟ್‌ ಜಾಯಿಯೇ...
*ಮನೀಶ್‌
ಬಿಜೆಪಿಯವರ ಘೋಷಣೆ: ಬೋಲೋ ರಾಮನಾಥ ಕೋವಿಂದ.. ಕೋವಿಂದ..!
*ಆರ್‌.ಆರ್‌
ಆತ: ಡಿವೋರ್ಸ್‌ ಮಾಡಿದ್ರೆ, ಅರ್ಧ ಸಂಬಳ ಕೊಡ್ಬೇಕಾಗುತ್ತೆ ಅಂದ್ರೂ ಯಾಕೋ ಒಪ್ಕೊಂಡೆ..? ಈತ: ಅರ್ಧ ಸಂಬಳನಾದ್ರೂ ನಂಗೇ ಸಿಗುತ್ತಲ್ಲ..!
*ಆರ್‌.ಆರ್‌.
ಲಂಚ ಕೊಟ್ಟು ಶಶಿಕಲಾ ಪ್ರತ್ಯೇಕ ಅಡುಗೆ ಮನೆ ಮಾಡಿದ್ಯಾಕೆ?; "ಪನೀರ್‌' ಕೊಡೋದು ಬೇಡ ಅಂತ!
*ಸಂದೇಶ್‌ ಎಸ್‌.
ನಾಡಧ್ವಜ ಎಲ್ಲ ಬ್ಯಾನ್‌ ಆಗ್ಬೇಕ್‌...; ನಾಡ ಬಾವುಟ ಸಾಕ್‌ ನನ್‌ ಮಗಂದ್‌!
*ಅರುಣ್‌
ರಾಜ್ಯಸಭೆ ಸದಸ್ಯತನಕ್ಕೆ ಮಾಯಾವತಿಯವರು ರಾಜೀನಾಮೆ ಕೊಟ್ಟ ಹಿಂದಿನ ರಹಸ್ಯ; ಸದಸ್ಯತನ ಅವಧಿ ಮುಗಿಯಲು ಇನ್ನು ಕೆಲ ತಿಂಗಳಷ್ಟೇ ಬಾಕಿ!
*ಗೀತಿಕಾ

Pages

Back to Top