Updated at Fri,23rd Jun, 2017 1:33PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉ.ಪ್ರ.ಸಚಿವರ ನಿವಾಸಕ್ಕೆ ಮೋದಿ ಬೀಗ: ವೈರಲ್‌ ಆಗಿದೆ ಫೋಟೋ

ಉತ್ತರ ಪ್ರದೇಶದಲ್ಲಿ ಹಳೆ ಸಚಿವರು ಕಚೇರಿ, ಅಧಿಕೃತ ನಿವಾಸಗಳಿಂದ ತೆರಳುವ ಸಮಯ ಬಂದಿದೆ. ಈ ವೇಳೆ ತಮಾಷೆಯೊಂದು ನಡೆದಿದೆ. ನಿವಾಸದಿಂದ ತೆರಳಲಿರುವ ಹಿಂದಿನ ಎಸ್‌ಪಿ ಸರ್ಕಾರದ ಸಚಿವ ರವಿದಾಸ್‌ ಮೆಹೋತ್ರ ಅವರ ನಿವಾಸದ ಹೊರ ಬಾಗಿಲಿಗೆ ಹಾಕಿರುವ ಬೀಗದ ಬ್ರಾಂಡ್‌ ಹೆಸರು "ಮೋದಿ ಮ್ಯಾಜಿಕ್‌' ಎಂದು ಇದೆ. ಇದಕ್ಕೆ ಅಡಿ ಬರಹ "ಡಬಲ್‌ ಲಾಕಿಂಗ್‌' ಎಂದಿದೆ.

ಇದರ ಫೋಟೊವನ್ನು ಸುದ್ದಿ ಸಂಸ್ಥೆಯೊಂದು ಟ್ವೀಟ್‌ ಮಾಡಿತು. ಸದ್ಯ ಇದು ಸ್ವಾರಸ್ಯಕರ ಟ್ವೀಟ್‌ಗಳ ಜೊತೆ ಮರುಟ್ವೀಟ್‌ ಆಗುತ್ತಿದೆ. "ಇಲ್ಲಿ ಡಬಲ್‌ ಲಾಕಿಂಗ್‌ ಎಂದರೆ ಲೋಕಸಭೆ, ವಿಧಾನಸಭೆ ಎರಡೂ ಲಾಕ್‌ ಎಂದರ್ಥ' ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.


More News of your Interest

Back to Top