ಉಳಿತಾಯದ ಹಣದಲ್ಲಿ ವಿಶ್ವ ಸುತ್ತಿದ ಬೆಡಗಿ
Team Udayavani, Mar 21, 2017, 7:36 AM IST
ನೀವು ಇದ್ದಕ್ಕಿದ್ದಂತೆ ಕೆಲಸ ಬಿಟ್ಟು, ಇಷ್ಟು ವರ್ಷ ಬೆವರು ಸುರಿಸಿ ಕೂಡಿಟ್ಟ ದುಡ್ಡನ್ನೆಲ್ಲಾ ತೆಗೆದುಕೊಂಡು ಜಗತ್ತನ್ನು ಸುತ್ತಲು ಹೊರಡಲು ತಯಾರಿದ್ದೀರಾ? ಸಾಧ್ಯವೇ ಇಲ್ಲ. ಕಷ್ಟ ಪಟ್ಟು ಉಳಿಸಿದ ಹಣವನ್ನು ಮಜಾ ಉಡಾಯಿಸೋಕೆ ಆಗುತ್ತಾ? ಅದೂ ಕೂಡ ಕೆಲಸ ಬಿಟ್ಟು! ಆದರೆ ಅಡಿಲೇಡ್ನ 28ರ ಹರೆಯದ ಯುವತಿ ಇಂಥ ಕೆಲಸ ಮಾಡಿದ್ದಾಳೆ.
ಒಳ್ಳೆ ಸಂಬಳ ಬರುತ್ತಿದ್ದ ಸಲೂನ್ ಮ್ಯಾನೇಜರ್ ಕೆಲಸಕ್ಕೆ ಗುಡ್ಬೈ ಹೇಳಿ, ಹಲವು ವರ್ಷಗಳಿಂದ ತಾನು ದುಡಿದು ಕೂಡಿಟ್ಟಿದ್ದ ಹಣವನ್ನೆಲ್ಲಾ ತೆಗೆದುಕೊಂಡು ಪ್ರಪಂಚ ಸುತ್ತುತ್ತಿದ್ದಾಳೆ. ಆಕೆ ಹೆಸರು ಕಸ್ಸಾಂದ್ರ ಫುರ್ಫರಿ. “ಜೀವನದಲ್ಲಿ ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ಹಣ ಉಳಿಸಿ ಪ್ರಯೋಜನವೇನು’ ಎಂದು ಪ್ರಶ್ನಿಸುವ ಕಸ್ಸಾಂದ್ರ, ಒಟ್ಟು 12 ತಿಂಗಳು ವರ್ಲ್ಡ್ ಟೂರ್ ಮಾಡಿದ್ದು, ಅದಕ್ಕೆ ಬರೋಬ್ಬರಿ 15 ಲಕ್ಷ ರೂ. ವೆಚ್ಚ ಮಾಡಿದ್ದಾಳೆ. ಈ ವೇಳೆ ಭಾರತಕ್ಕೂ ಬಂದಿದ್ದ ಕಸ್ಸಾಂದ್ರ, ಇಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾಳೆ. ಇದೀಗ ಈಕೆ ಸ್ವಂತ ಸ್ಟಾರ್ಟಪ್ ಆರಂಭಿಸುವ ಯೋಜನೆಯಲ್ಲಿದ್ದಾಳೆ.