CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭಾರತ- ಬಾಂಗ್ಲಾ ನಡುವೆ ಮೆಕ್ಸಿಕೋ ರೀತಿಯ ಗೋಡೆ!

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್‌ ಕಾಲ್‌ ಮಾಡಿದಾಗ ಒಂದು ಮಹತ್ವದ ವಿಚಾರ ಚರ್ಚೆ ಆಯ್ತು. ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುತ್ತಿರುವಂತೆ ಭಾರತ- ಬಾಂಗ್ಲಾದೇಶದ ಗಡಿಯಲ್ಲೂ ಗೋಡೆ ನಿರ್ಮಿಸುವಂತೆ ಮೋದಿಗೆ ಸಲಹೆ ಕೊಟ್ಟರು.

ಪ್ರಧಾನಿಯವರು ರಾತ್ರೋರಾತ್ರಿ ಅಧಿಕಾರಿಗಳನ್ನು ಕರೆದು, ಮೆಕ್ಸಿಕೋ ಗೋಡೆ ಮುಗಿಯುವ ಮೊದಲೇ ನಮ್ಮಲ್ಲಿ ಗೋಡೆ ನಿರ್ಮಿಸಿ ಎಂದು ಆದೇಶಿಸಿದ್ದಾರೆ. ಈ ಮಾಹಿತಿ ಹಲವೆಡೆ ಸೋರಿಕೆ ಆಗಿದ್ದು, ಬಾಂಗ್ಲಾ ವಲಸಿಗರ ಕಿವಿಗೂ ಬಿದ್ದಿದೆ. ವಲಸಿಗರ ಸಂಘದ ಅಧ್ಯಕ್ಷ ಫ‌ರ್ಹಾನ್‌ ಢಾಕಾದಲ್ಲಿ ಸಭೆ ಕರೆದಿದ್ದು, "ಮೋದಿ ಅವರ ಯೋಜನೆಗೆ ನೀವು ತಲೆಕೆಡಿಸಿಕೊಳ್ಬೇಡಿ. ನಾವೆಲ್ಲ ಈಗೆಲ್ಲ ಬೀದಿಯ ಗೋಡೆಗಳಿಗೆ ಮೂತ್ರ ಮಾಡ್ತಿದ್ದೀವಿ. ಅದೇ ರೀತಿ, ಹೆಚ್ಚಿನ ಸಂಖ್ಯೆಯಲ್ಲಿ ಆ ಗೋಡೆಗಳ ಮೇಲೆ ಮೂತ್ರ ಮಾಡಿದ್ರೆ, ಅದನ್ನು ಬೀಳಿಸೋದು ಕಷ್ಟವೇ ಆಗೋದಿಲ್ಲ' ಎಂದು ಸಲಹೆ ಕೊಟ್ಟಿದ್ದಾರೆ!

Back to Top