Updated at Tue,25th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನೀ ದೂರ ಹೋದರೆ ನಾ ಏನು ಮಾಡಲಿ?

ಅಂದು ನಿನ್ನ ಅಮ್ಮ ನನ್ನನ್ನು ಹಿಂದೆ ಬಚ್ಚಿಟ್ಟುಕೊಂಡು ಬಂದು ಪರಿಚಯ ಮಾಡಿದ ದಿನವನ್ನು ನೆನೆಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ. ಮೆಲ್ಲಗೆ ನನ್ನನ್ನು ಕುತೂಹಲದಿಂದ ನೋಡಿದ ಆ ನಿನ್ನ ಕಣ್ಣು ನನಗೆ ಇಂದಿಗೂ ತುಂಬಾ ಇಷ್ಟ.  

ಹೌದು! ನಿನ್ನ ಸ್ನೇಹ ಮಾಡಿದ ದಿನದಿಂದ ನಾನು ತುಂಬಾ ಖುಷಿಯಾಗಿದ್ದೀನಿ. ಯಾಕೆ ಗೊತ್ತಾ? ಅಷ್ಟು ದಿನ ನಾನೊಬ್ಬನೇ ಇದ್ದು ಸಾಕಾಗಿ ಹೋಗಿತ್ತು. ಇಂತಹ ಸಮಯದಲ್ಲಿ ನೀನು ಸಿಗುವಾಗ ಖುಷಿಯಾಗದೆ ಇರುತ್ತಾ ಹೇಳು? ನನಗೆ ನಿನ್ನ ಸನಿಹ ತುಂಬಾ ಹಿತ ನೀಡಿದೆ. ನಿನ್ನ ಮೊದಲ ಸ್ವರ್ಶ ಇಂದಿಗೂ ನನ್ನ ಹೃದಯದಲ್ಲಿ ಬೆಚ್ಚಗೆ ಇದೆ. ಆ ನಿನ್ನ ನಯವಾದ ಪಾದ ನನಗೆ ಇಂದಿಗೂ ಒಳ್ಳೆಯ ಭಾವನೆಯನ್ನು ಕೊಡುತ್ತದೆ. ನೀನು ನನ್ನನ್ನು ಕದ್ದು ಮುಚ್ಚಿ ಪದೇ ಪದೇ ನೋಡುತ್ತಿದ್ದ. ಆ ನೋಟ ನನಗೆ ತುಂಬಾ ಇಷ್ಟ ಅಂತ ಗೊತ್ತಲ್ವ ನಿಂಗೇನೇ. 

ಆದ್ರೆ ಇತ್ತೀಚೆಗೆ ನೀನು ಯಾಕೆ ನನ್ನ ಯಾಕೆ ತುಂಬಾ ದೂರ ಮಾಡ್ತಿದೀಯಾ ಹೇಳು. ಮೊದಮೊದಲು ನಿಂಗೆ ನನ್ನನ್ನು ನೋಡದಿದ್ರೆ ನಿದ್ದೇನೇ ಬರ್ತಾ ಇರ್ಲಿಲ್ಲ ಅಲ್ವಾ? ಯಾಕೆ ಹೇಳು? ನನ್ನನ್ನು ನಾಯಿ ಏನಾದ್ರು ಕಚ್‌ಕೊಂಡು ಹೋಗುತ್ತೆ ಅನ್ನೋ ಭಯದಿಂದ!   

ನಿನ್ನನ್ನು ನಾನು ತುಂಬಾ ಸಲ ಸರಿ ದಾರೀಲಿ ನಡೆಸಿಕೊಂಡು ಹೋಗಿದ್ದೀನಿ. ಆದ್ರೆ ನಿಂಗೆ ಅದೆಲ್ಲ ಎಲ್ಲಿ ನೆನಪಿರುತ್ತೆ ಹೇಳು? ಒಂದೊಂದು ಸಲ ನಿಂಗೆ ಹುಷಾರಿಲ್ಲದೆ ಇರುತ್ತೆ. ಆವಾಗಲೆಲ್ಲಾ ನಾನು ನಿನ್ನ ಜೊತೆಗಿರುತ್ತಿದ್ದೆ. ನಂಗೆ ಹುಷಾರಿಲ್ಲದೆ ಇರುವಾಗ ನೀನು ನನಗೆ ಸರಿ ಶಾಪ ಹಾಕಿ ನನ್ನನ್ನು ಅರ್ಧ ದಾರೀಲಿ ಬಿಟ್ಟು ಹೋಗಿ ಬರುವಾಗ ನನ್ನನ್ನು ಕರೆದುಕೊಂಡು ಬರಿ¤ದ್ದೆ. ಆದ್ರೆ ಒಮ್ಮೆ ಆದ್ರೂ ಯೋಚೆ° ಮಾಡಿದ್ದೀಯಾ, ನೀನು ಬರುವವರೆಗೂ ನಾನು ಒಬ್ಬಂಟಿಯಾಗಿರುತ್ತೀನಿ ಅಂತ? ಆದ್ರೂ ನಾನು ನಿನ್ನನ್ನು ನಗು ನಗುತ್ತಾ ಸ್ವಾಗತಿಸಿ. ಬರಮಾಡಿಕೊಂಡ ದಿನ ನೆನಪಿದೆಯಾ? ನಿನ್ನ ಪಾದ ಸ್ಪರ್ಶ ಸಿಕ್ಕರೆ ಸಾಕು: ನನ್ನ ನೋವನ್ನೆಲ್ಲ ಮರೆತುಬಿಡ್ತಿದ್ದೆ. ಅದಾದರೂ ನಿಂಗೆ ಗೊತ್ತಿದೆ ಅಂದೊRಂಡಿದ್ದೀನಿ.  

ನಿನ್ನನ್ನು ನಾನು ಕೆಟ್ಟ ದಾರಿ ಬಿಟ್ಟು, ಒಳ್ಳೆ ದಾರೀಲಿ ನಡೆಸಿದೀನಿ ಅನ್ನೋ ನಂಬಿಕೆ ನನಗಿದೆ. ಆದ್ರೆ ನನ್ನನ್ನು ಕೂಡ ನೀನೆ ನಡೆಸಿಕೊಂಡು ಹೋಗೋದು ಅನ್ನೋದು ನನಗೆ ಸರಿಯಾಗಿ ನೆನಪಿದೆ. ಆ ಖುಣವನ್ನು ನಾ ಯಾವತ್ತೂ ಮರೆಯೋದಿಯಲ್ಲ.     
     
ಇತೀ ನಿನ್ನವ                       
ಲೂನಾರ್ ಸ್ಲಿಪ್ಪರ್‌  

- ಶಿವರಂಜಿನಿ ಕೊಯಿಲ, ಉಜಿರೆ  


More News of your Interest

Trending videos

Back to Top