Updated at Thu,25th May, 2017 3:04AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪುಟಿವ ಆತ್ಮವಿಶ್ವಾಸ, ಉತ್ಸಾಹ,ಆರೋಗ್ಯವಾಗಿದ್ದರೆ ಹೆಚ್ಚು ಸಂಬಳ!

ಸಂಬಳ ಕಡ್ಮೆ ಕಣೋ.. ಸಾಕೇ ಆಗ್ತಿಲ್ಲ.. ತಿಂಗಳ ಕೊನೆಗೆ ಸಾಲ..ಸಾಲ.. ಅಂತ  ಬೇಸರಿಸುತ್ತಿರಬಹುದು.. ಅವ್ರಿಗೆ ಅಷ್ಟು ಸಿಗುತ್ತಂತೆ.. ಗೊತ್ತಾ.. ಅನ್ನೋ ಮಾತುಗಳೂ ಇರಬಹುದು. ಆದರೆ ಸಂಬಳ ಹೆಚ್ಚು ತೆಗೆದುಕೊಳ್ಳಲು ಒಳ್ಳೇ ಕೆಲಸ ಮಾಡಬೇಕು. ಕಚೇರಿಯಲ್ಲಿ ದಿ ಬೆಸ್ಟ್‌ ಅನಿಸಿಕೊಂಡಿರಬೇಕು ಎಂಬುದೆಲ್ಲ ಇದೆ ನಿಜ. ಆದರೆ ನಿಜಕ್ಕೂ ವ್ಯಕ್ತಿ ಸುಂದರ, ಆತ್ಮವಿಶ್ವಾಸಿ, ಆರೋಗ್ಯಕರವಾಗಿದ್ದರೆ ಸಾಕು ಭರ್ಜರಿ ಸಂಬಳ ಗ್ಯಾರೆಂಟಿ ಎಂದು ಸಮೀಕ್ಷೆಯೊಂದು ಹೇಳಿದೆ.

ಬುದ್ಧಿವಂತರಾಗಿದ್ದು, ನೋಡಲೂ ಚೆನ್ನಾಗಿದ್ದಾರೆ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ ಎಂದರೆ ಗಳಿಕೆ ಹೆಚ್ಚಾಗುತ್ತದೆ ಎಂದು ಸ್ಪ್ರಿಂಗರ್ ಜರ್ನಲ್‌ ಆಫ್ ಬ್ಯುಸಿನೆಸ್‌ ಆ್ಯಂಡ್‌ ಸೈಕಾಲಜಿಯಲ್ಲಿ ಪ್ರಕಟವಾಗಿದೆ.

ಕಚೇರಿಗಳಲ್ಲಿ ಇಂತಹವರು ಹೆಚ್ಚು ಪ್ರಭಾವ ಬೀರುತ್ತಾರೆ. ತಮ್ಮ ಬಾಸ್‌ಗಳಿಗೂ ಇವರು ಹೆಚ್ಚು ಪ್ರಭಾವ ಬೀರಬಲ್ಲರು. ಪರಿಣಾಮ ಅವರ ಸಂಬಳ ಹೆಚ್ಚಾಗುತ್ತದೆ. ಜೊತೆಗೆ ಇಂತಹವರಲ್ಲಿ ಹೆಚ್ಚಿನವರು ಒಳ್ಳೇ ಕೆಲಸಗಾರರೂ ಆಗಿರುತ್ತಾರೆ ಎಂದು ಸಮೀಕ್ಷೆ ಹೇಳಿದೆ. ವ್ಯಕ್ತಿತ್ವ 
ಆಕರ್ಷಕವಾಗಿದ್ದಷ್ಟೂ ಅವರ ಸಂಬಳ ಸಾಮಾನ್ಯರಿಗಿಂತ ಹೆಚ್ಚಾಗಿರುತ್ತದೆ ಎಂದು ಸಮೀಕ್ಷೆ ಹೇಳಿದೆ. 

ಫ‌ಲಿತಗಳು...
*ಆಕರ್ಷಕ ವ್ಯಕ್ತಿತ್ವದವರಿಗೆ ಸಂಬಳ ಹೆಚ್ಚಂತೆ!

*ಆಕರ್ಷಕ ವ್ಯಕ್ತಿತ್ವದವರು ಕಚೇರಿಯಲ್ಲಿ ಎಲ್ಲರನ್ನೂ ಪ್ರಭಾವಿಸುತ್ತಾರೆ. ಬಾಸ್‌ ಗಳ ಮೇಲೂ ಇವರ ಪ್ರಭಾವ ಹೆಚ್ಚಾಗಿರುತ್ತದೆ.

*ಆತ್ಮವಿಶ್ವಾಸಿ, ಆರೋಗ್ಯಕರ ವ್ಯಕ್ತಿ, ಸುಂದರವಾಗಿದ್ದವರು ಕಚೇರಿಯಲ್ಲಿ ಹೆಚ್ಚು ಚಟುವಟಿಕೆ ನಡೆಸುತ್ತಾರೆ. ಅದಕ್ಕೇ ಅವರಿಗೆ ಸಂಬಳ ಹೆಚ್ಚು!


More News of your Interest

Trending videos

Back to Top