Updated at Fri,18th Aug, 2017 5:49PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಿರಿಯಡಕ: ಸಿರಿಜಾತ್ರೆ ಸಂಪನ್ನ

ಹೆಬ್ರಿ: ಸಿರಿಜಾತ್ರೆ ಆಚರಣೆಯ ಪ್ರಧಾನ ಕೇಂದ್ರವಾದ ಇತಿಹಾಸ ಪ್ರಸಿದ್ಧ ಪೌರಾಣಿಕ ಹಿನ್ನೆಲೆಯುಳ್ಳ ಉಡುಪಿ ತಾಲೂಕಿನ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮೇ 10ರಂದು ವೈಭವದ ಸಿರಿಜಾತ್ರೆ ಉತ್ಸವ ಸಂಪನ್ನಗೊಂಡಿತು.

ಬೆಳಗ್ಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡು ಪೂರ್ಣಿಮಾ ಉತ್ಸವ, ರಾತ್ರಿ ಬಲಿ, ಹಾಲು ಹಬ್ಬ,ಆರಾಧನಾ ಪೂಜೆ, ಸವಾರಿ ಬಲಿ, ಬ್ರಹ್ಮಮಂಡಲ, ಭೂತಬಲಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಮಾತ್ರವಲ್ಲದೆ ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತಲ ಸಹಸ್ರಾರು ಭಕ್ತರು ಪಗ್ಗು ಹುಣ್ಣಿಮೆಯಂದು ನಡೆಯುವ ಸಿರಿಜಾತ್ರೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿ ತಾಧಿಕಾರಿ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಸಹಸ್ರ ಸಂಖ್ಯೆಯ ಜನಸಂದಣಿಯನ್ನು ನಿಯಂತ್ರಿಸಲು ಹಿರಿಯಡಕ ಠಾಣಾಧಿಕಾರಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Back to Top