ಸ್ಥಿತಿ 


Team Udayavani, Jan 8, 2017, 3:45 AM IST

sap-9.jpg

ಬೆಂಕಿ ಹಚ್ಚಿದ್ದ ಬ್ರಿಸ್ಟಾಲ್‌ ಸಿಗರೇಟನ್ನು ತುಟಿಯೊಂದಿಗೆ ಸಂಬಂಧ ಬೆಳೆಸಿ, ಒಂದು ದೊಡ್ಡ ಉಸಿರಿನೊಂದಿಗೆ ಹೃದಯದ ಕವಾಟದೊಳಗೆ ಫೋರ್ಸಿಲೆ ನುಗ್ಗುವಂತೆ ಜಗ್ಗಿ ನಿಧಾನವಾಗಿ ಸಿಗರೇಟಿನ ಹೊಗೆಯನ್ನು ಸುರುಳಿ ಸುರುಳಿಯಾಗಿ ಮೂಗಿನಿಂದ ಹೊರ ಬಿಡುತ್ತ ಉಫ್ ಎಂದು ಶೆಟ್ಟರು ಬಕ್ಕಾನತ್ತ ನೋಡಿದರು. ಶೆಟ್ಟರು ನೋಡಿದ ನೋಟಕ್ಕೆ ದೇವರೇ ತನ್ನತ್ತ ನೋಡಿದ ಎಂಬ ಪರಮಾನಂದ ಭಾವ ಬಕ್ಕಾನ ಮುಖದಲ್ಲಿ ಮೂಡಿತ್ತು. ದಲಾಲಿ ಅಂಗಡಿಯೊಳಗಿದ್ದ ಇಲಿಗಳು ಅಲ್ಲಿದ್ದ ಕಾಳುಕಡ್ಡಿ ತಿನ್ನಲು ಆಗಾಗ ಶೆಟ್ಟರಿಗೆ ಮುಖ ತೋರಿಸಿ ಹೋಗುವ ರೀತಿಯಲ್ಲಿ ಒಪ್ಪ ಓರಣವಾಗಿ ಒಟ್ಟಿದ್ದ ಕಾಳುಕಡ್ಡಿಯ ನಿಟ್ಟಿನೊಳಗಿನ ಸಂದಿಯಿಂದ ಆಗಾಗ ಬಂದು ಇಣುಕಿ ಹೋಗುತ್ತಿದ್ದವು. ಕಾಳುಕಡ್ಡಿಗಳ ಚೀಲ ಕಡಿದು ಲುಕ್ಸಾನು ಮಾಡುತ್ತಿದ್ದ  ಇಲಿಗಳ ಕಾಟಕ್ಕಿಂತ ಹೆಚ್ಚಾಗಿ ತನ್ನ ಅಂಗಡಿಗೆ ಸಾಲ ಕೇಳಲು ಬರುತ್ತಿದ್ದ ಜನರ ಕಾಟವೇ ಶೆಟ್ಟರಿಗೆ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿಯೇ ಶೆಟ್ಟರು ತಮ್ಮ ಗುಮಾಸ್ತ ಗಂಗ್ಯಾನಿಗೆ “ಸಾವಾRರು ಊರಾಗ ಇಲ್ಲ ಎಂದು ಹೇಳಿ ಕಳಿಸು’ ಎಂದು ಬಾಗಿಲಲ್ಲೇ ಕುಳ್ಳಿರಿಸಿ ಬಿಟ್ಟಿದ್ದರು. ಅದ್ಹೇಗೋ ಬಕ್ಕಾ ಮಾತ್ರ ಅಂಗಡಿ ಒಳಗ ಬಂದು ಶೆಟ್ಟರು ಕುಳಿತಿದ್ದ ಗುಡಾರದ ಅಂಚಿನ ಮುಂದ ಈರ್‌ಮಂಡಿಗಾಲಲಿ ಕುಳಿತುಕೊಂಡು ಸಾಕ್ಷಾತ್‌ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಭಾವಪರವಶನಾಗಿ ಶೆಟ್ಟರನ್ನು ನೋಡುತ್ತಿದ್ದ. 

ಬ್ರಿಸ್ಟಾಲ್‌ ಸಿಗರೇಟಿನ ಹೊಗೆಯ ನಶೆಯಿಂದ ತುಸು ಹೊರಬಂದ ಶೆಟ್ಟರ ಕಣ್ಣಿಗೆ ಧುತ್ತೆಂದು ಕಂಡವನು ಬಕ್ಕಾé. ಪಾಪ ಶೆಟ್ಟರಾದರೂ ಏನು ಮಾಡಿಯಾರು? ತಾವು ಊರಲ್ಲಿ ಇಲ್ಲ ಎಂದು ಬಂದವರಿಗೆ ಹೇಳು ಎಂದು ಕಿವಿಯೊಳಗೆ ತಿದಿಯೂದಿ ಅಂಗಡಿಯ ಮುಂದೆ ಕುಳ್ಳಿರಿಸಿದ್ದ ಗುಮಾಸ್ತ ಗಂಗ್ಯಾನ ಮಾತು ಕೇಳದೆ ಬಕ್ಕಾ ಹಟ್ಟಿಯೊಳಗ ಮರಿಯನ್ನು ಕಾಣಲು ರಭಸದಿ ನುಗ್ಗುವ ಕುರಿಯಂತೆ ನುಗ್ಗಿದ್ದ. ಬಂದಿರೋ ಬಕ್ಕಾ ಖಾಯಂ ಆಗಿ ಅವನು ಬೆಳೆದ ಮಾಸೀಲನನ್ನು ನನ್ನ ಅಂಗಡಿಗಲ್ಲದೆ ಬೇರೆ ಯಾರ ಅಂಗಡಿಗೂ ಹೊಡೆದಿಲ್ಲ. ಮಾಸೀಲು ಹೊಡೆದ ಮೇಲೂ ಲಾಭ ಅಂತ ಅವಾ ಒಂದೂ ನಯಾಪೈಸೆಯನ್ನು ಯಾವತ್ತೂ ತೆಗೆದುಕೊಂಡು ಹೋಗಿರಲಿಲ್ಲ. ಯಾಕೆಂದರೆ, ಮಾಸೀಲು ಶೆಟ್ರ ಅಂಗಡಿ ಮುಟ್ಟುವುದರೊಳಗಾಗಿ ಬಕ್ಕಾ ಆಗಾಗ ಬಂದು ಕಳೆ ಕಾಸಿಗೆಗೆ, ಆಳು-ಹೋಳಿಗೆ ಕೊಡಬೇಕು ಎಂದು ಹಣ ತೆಗೆದುಕೊಂಡು ಹೋಗುತ್ತಿದ್ದ. ಬಕ್ಕಾನ ಸಪ್ಪೆ ಮೋರೆ ನೋಡಿ ಶೆಟ್ಟರಿಗೆ ಅನಿಸಿತ್ತು. ಏನೋ ಹಣದ ದರ್ದು ಇರಬಹುದು. ಅದಕ್ಕಾಗಿ ಬಕ್ಕಾé ಬಂದಿರಬಹುದು ಎಂದು ಊಹಿಸಿಕೊಂಡರು ಶೆಟ್ಟರು. ಶೆಟ್ಟರ ಊಹೆ ನಿಜವಾಗಿತ್ತು. ಪಾಪ ! ಬಕ್ಕಾ$Âನ ಬಗ್ಗೆ ಶೆಟ್ಟರಿಗೆ ಒಂದಿಷ್ಟು ಕನಿಕರ ಹುಟ್ಟಿತಾದರೂ ಏನು ಮಾಡೋದು ನೋಟು ಬ್ಯಾನ್‌ ಬಿಸಿ ಶೆಟ್ಟರಿಗೂ ತಟ್ಟಿ , ವ್ಯಾಪಾರ ಇಲೆª ನೊಣ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕಂದ್ರ ಶೆಟ್ರಾ ದಂಧೆ ಮಾಡುತ್ತಿದ್ದಿದ್ದೆ ನಂಬರ್‌ ದೋನಲ್ಲಿ. ಈಗ ಅದೆಲ್ಲದಕ್ಕೂ ಫ‌ುಲ್‌ಸ್ಟಾಪ್‌ ಬಿದ್ದು ಶೆಟ್ಟರ ಟೋಪಿ ಉಲ್ಟಾ ಹಾಕಿಕೊಳ್ಳೋ ಪರಿಸ್ಥಿತಿ ಬಂದಿತ್ತು. ಅದೆಲ್ಲವನ್ನು ನೆನೆದು ಶೆಟ್ಟರು ನಿಟ್ಟುಸಿರು ಹಾಕುತ್ತಾ ತಾವೇ ಮೌನ ಮುರಿದು ಬಕ್ಕಾನನ್ನು ಮಾತನಾಡಿಸಿದರು. “”ಏನಪಾ ಬಕ್ಯಾ ಇಷ್ಟ್ ಬಿಸಲೊತ್ತಿನ್ಯಾಗ ಪ್ಯಾಟಿಗೆ ಬಂದೀದೆಲ್ಲಾ? ಏನ್‌ ಇಸೇಸ” ಎಂದು ಪ್ರಶ್ನಿಸಿದರು. ಶೆಟ್ಟರು ಮಾತನಾಡಿಸಿದ್ದರಿಂದ ಬಕ್ಯಾನ ಮುಖ ಹಿಗ್ಗಿ ಹಿರೇಕಾಯಿಯಂತಾಯಿತು. ಹೆಗಲ ಮೇಲಿದ್ದ ಕಮಟು ವಾಸನೆಯ ಶಲ್ಯ ತೆಗೆದು ಮುಖ ಒರೆಸಿಕೊಳ್ಳುತ್ತ ಶೆಟ್ಟರ ಮುಂದೆ ತನ್ನ ಬಿನ್ನಹದ ಪೀಠಿಕೆ ಹಾಕಿದ. “”ಏನಿಲ್ಲ ಸಾವಾRರ್ರೆ, ಹಿರಿಮಗಳು ಉಲ್ಲವ್ವ ಎಲ್ಡನೆ ಹೆರಿಗಿಗೆ ಬಂದಾಳ. ನಿನ್ನೆ ರಾತ್ರಿಯಿಂದ ಒಂದೆ ಸಮನೆ ಬ್ಯಾನಿ ತಿನ್ನಾಕತ್ಯಾಳ. ಇನ್ನ ಸಣ್ಣ ಮಗ ಈರ್ಯಾನ ಪರೀಕ್ಷೆ ಪೀಜು ಕಟೆºàಕು. ನನ್‌ ಹತ್ರ ನಯಾಪೈಸೆ ಇಲ್ಲ. ನಮ್‌ ಕಷ್ಟಕಾಲ್ದಾಗೆ ಕೈ ಹಿಡಿಯೋರು ನೀವೆ ಅಲ್ವಾ? ನಿಮ್ಮತ್ರ ಅಲೆª ನಾನು ಯಾರ ಬಳಿನೂ ಯವಾರ ಇಟ್ಕಂಡಿಲ್ಲ. ಅದ್ಕ ಒಂದ್‌ ಹತ್‌ ಸಾವ್ರ ರುಪಾಯಿ ಸಾಲ ಇಸ್ಕಂಡ್‌ ಹೋಗೋಣ ಅಂತ ಬಂದೆ ರೀ ಯಪ್ಪಾ” ಎಂದು ಹೇಳಿ ತನ್ನ ಮಾತಿಗೆ ಬಕ್ಕಾ ವಿರಾಮ ಹಾಕಿದ. ಬಕ್ಕಾನ ಬಿನ್ನಹ ಕೇಳಿದ ಶೆಟ್ಟರಿಗೆ ಸೇದಿದ್ದ ಬ್ರಿಸ್ಟಾಲ್‌ ಸಿಗರೇಟಿನ ಎಲ್ಲ ಗುಂಗು ಇಳಿದು ಹೋಯ್ತು. ಬಕ್ಕಾ ಬಂದ್‌ ಸಾಲ ಕೇಳಿದಾಗ ಖಾಯಂ ಗಿರಾಕಿ, ನಂಬಿಕಸ್ಥ ಮನಷ್ಯ ಅಂತ ಇಲ್ಲ ಅನೆª ಐದ್‌ ಸಾವ್ರ ಕೇಳಿದ್ರೆ ಎರಡು ಸಾವ್ರಾನಾದ್ರೂ ಕೊಟ್‌ ಕಳಿಸ್ತಿದ್ರು ಶೆಟ್ರಾ. ಈಗ ನೋಟ್‌ ಬ್ಯಾನ್‌ ಆದ್ಮೇಲೆ ಶೆಟ್ಟರ ಬಳಿ ಹಣ ಇದ್ದರೂ ಅದಕ್ಕೆ ಬೆಲೆ ಇಲ್ಲದಂಗಾಗಿತ್ತು. ಹತ್ತು ರೂಪಾಯಿ ಯಾರಿಗಾದ್ರೂ ಕೊಟ್ರೂ ಅದರ ಲೆಕ್ಕ ಬರೆದುಕೊಳ್ಳುವಂಥ‌ ಜರೂರತ್ತು ಸನ್ನಿವೇಶ ಬಂದೊದಗಿತ್ತು. ಹೀಗಾಗಿ, ಶೆಟ್ರಾ ಬಕ್ಕಾ ಕೇಳಿದ ಹಣದ ಬಗ್ಗೆ ಯೋಚೆ° ಮಾಡುವಂತೆ ಮಾಡಿತು.  

ಹಂಗೂ ಹೀಂಗೂ ಯೋಚನೆ ಮಾಡಿದ ಶೆಟ್ರೂ ಬಕ್ಕಾಗೆ ಏನಾದ್ರೂ ಹೇಳಿ ತಮ್ಮ ದಲ್ಲಾಲಿ ಅಂಗಡಿಯಿಂದ ಹೊರಗೆ ಕಳಿಸುವ ಯೋಚೆ°ಯಲ್ಲಿ ಮುಳುಗಿದರು. ಅಷ್ಟರಲ್ಲಿ ಶೆಟ್ರ ಗುಮಾಸ್ತ ಗಂಗ್ಯಾ ಬಂದು “”ಸಾವಾರ್ರ ಬಳ್ಳೋಳ್ಳಿ ಸಾವಾRರು ಅದೇನೋ ಮಾತಾಡ್ಬೇಕು ಅಂತ ಆವಾಗ್ಲೆ ಕೇಳಿಕೊಂಡು ಬಂದಿದ್ರು. ಹೇಳ್ತಿನಿ ಸಾವಾರೆ ಅಂತ ಹೇಳಿದ್ದೆ” ಎಂದು ಗಂಗ್ಯಾ ಹೊಸ ವಾರ್ತೆಯೊಂದನ್ನು ಹೇಳಿದ. ಗಂಗ್ಯಾನ ವಾರ್ತೆಯಿಂದ ಹೇಗೋ ಹೊರಗೆ ಹೋಗೋಕೆ ಕಾರಣ ಸಿಕ್ತಲ್ಲ ಎಂದುಕೊಂಡ ಶೆಟ್ರ ಕಿವಿ ನಿಮಿರಿದವು. ಆದರೆ, ಹಾಗೆ ಎದ್ದು ಹೋಗೋಕೆ ಆಗೋದಿಲ್ವಲ್ಲ. ಅದ್ಕೆ ಶೆಟ್ರಾ ತಮ್ಮ ಧೋತರದ ಲಂಗಟ ಸರಿ ಮಾಡಿಕೊಳ್ತಾ ಬಕ್ಕಾನಿಗೆ ಹೇಳಿದರು. “”ನೋಡು ಬಕ್ಯಾ… ನೀ ಕೇಳಿದಾಗ ಯಾವಾಗ್ಲೂ ಇಲ್ಲ ಅಂತ ಹೇಳಿಲ್ಲ. ಆದರ ನನ್‌ ಬಳಿ ಹಳೆನೋಟ್‌ ಅದಾವ, ಹತ್‌ ಸಾವ್ರ ಯಾಕ್‌? ಇಪ್ಪತ್‌ ಸಾವ್ರ ಕೊಡ್ತೀನಿ. ಬ್ಯಾಂಕ್‌ನಲ್ಲಿ ನಿಂದು ಅಕೌಂಟ್‌ ಐತೇನ್ಲ” ಎಂದು ಬಕ್ಕಾನ ಎನ್‌ಕ್ವೆ„ರಿ ಮಾಡಿದರು ಶೆಟ್ರಾ. ಬಕ್ಕಾ ಸಾಲಿ ಕಟ್ಟಿ ಹತ್ತಿದವನು ಅಲ್ಲ. ಬಕ್ಕಾನ ಅಪ್ಪಗೂರಲು ನಿಂಗ ಸತ್‌ ಮ್ಯಾಲ ಇಡೀ ಮನೆತನ ಜವಾಬ್ದಾರಿಯನ್ನು ಚಿಕ್ಕವಯಸ್ಸಲ್ಲೆ ತಗೊಂಡಿದ್ದ. ಆವಾಂಗಿದೆ ವಕ್ಕಲುತನಕ್ಕೆ ಇಳಿದಿದ್ದ. ಈಗ ಬಕ್ಯಾನ ತಲೆಗೂದಲು ನರೆತಿವೆ. ಮೊಮ್ಮಕ್ಕಳನ್ನು ಕಂಡಿದ್ದಾನೆ. ಇಷ್ಟ್ ವ ಆದ್ರೂ ಬಕ್ಕಾ ಬ್ಯಾಂಕಿನಲ್ಲಿ ಒಂದ್‌ ಅಕೌಂಟ್‌ ತೆರೆದಿರಲಿಲ್ಲ. ಶೆಟ್ರಾ “ಬ್ಯಾಂಕ್‌ ಅಕೌಂಟ್‌ ಐತೇನ್ಲ’ ಅಂತ ಕೇಳಿದಾಗ “”ಇಲಿ ಯಪ್ಪಾ. ನಾವೇನ್‌ ದೊಡ್‌ ಸಾವಾರೇನ್ರಿ? ರೊಕ್ಕ ಬ್ಯಾಂಕಿನ್ಯಾಡ ಇಡಾಕ. ದುಡಿದಿದ್ದು ಹೊಟ್ಟಿ ಹೊರಿಯಾಕ ಸಾಲವಲುª. ಮಗಳ ಮದ್ವಿಗೆ ಮಾಡಿದ ಸಾಲ ಹೆಗಲೇರಿತಿ. ಬ್ಯಾಂಕಿನಲ್ಲಿ ಎಲ್ಲಿ ಇಡಬೇಕ್ರಿ ಸಾವಾರ” ಎಂದು ಬಕ್ಕಾ ಕತಿ ಹೇಳಿದ. ಬಕ್ಕಾನ ಪುರಾಣ ಕೇಳುವ ಜರೂರತ್ತು ಶೆಟ್ರಿಗೆ ಇಲೆª ಹೋಯ್ತು. “”ಸಾಕ್‌ ಸಾಕ್‌” ಅಂತ ಅವನ ಮಾತು ನಿಲ್ಲಿಸುವಂತೆ ಹೇಳುವ ರೀತಿಯಲ್ಲಿ “”ನೋಡ್‌ ಬಕ್ಕಾ ಹ್ಯಾಂಗೂ ನಾಳೆ ಮೂಲಿಮನಿ ಸಿದ್ದ ಬರ್ತಿನಿ ಅಂತ ಹೇಳಾನ. ಅವ° ಕೈಲಿ ಹೇಳಿ ಕಳಿಸ್ತೀನಿ ನೀ ಇನ್‌ ಮನಿ ಕಡೆ ಹೊಂಡ್‌” ಅಂತ ಹೇಳಿ ಶೆಟ್ರಾ ಹೊರನಡೆದರು. ರೊಕ್ಕ ಕೊಡೋ ಶೆಟ್ರೆ ಹೋದ್ಮೇಲೆ ಇಲ್ಲಿ ಏನು ಗೀಟಾಂಗಿಲ್ಲ ಅಂದೊಡ ಬಕ್ಕಾ ಕಮಟು ವಾಸನೆಯಿಂದ ಕೂಡಿದ್ದ ಶಲ್ಯವನ್ನು ಜಾಡಿಸಿಕೊಂಡು ಕುಂಡಿ ಭಾಗಕ್ಕೆ ಹತ್ತಿದ್ದ ಧೂಳನ್ನು ಒರೆಸಿಕೊಂಡು ಸಪ್ಪೆಮೋರೆಯೊಂದಿಗೆ ತನ್ನೂರತ್ತ ಹೊರಟ.

ಶೆಟ್ರಾ ಕೈಕೊಟ್ಟ ಮ್ಯಾಲೆ ತನ್ನ ಪರಿಚಯದವರ ಹತ್ರ ಹೋಗಿ ರೊಕ್ಕ ಕೇಳಿದ್ರೂ ನಯಾ ಪೈಸೆಯೂ ಹುಟ್ಟಲಿಲ್ಲ ಬಕ್ಕಾನಿಗೆ. ಮುಂಜಾನೆ ಮನೇಲಿ ರೊಟ್ಟಿ , ಕಾರಬ್ಯಾಳಿ ರೆಡಿ ಇದ್ರೂ ತಿನ್ನದ ಹಂಗ ಉಪವಾಸ ಬಂದಿದ್ದ ಬಕ್ಕಾ. ಶೆಟ್ರಾ ರೊಕ್ಕ ಕೊಟ್ರ ಅಲ್ಲೇ ಸಾವಜಿ ವಿಷ್ಣಪ್ಪನ ಹೊಟೊಳ ಇಡ್ಲಿ ವಡಾ ಕಪ್ಪರಿಸಿದ್ರಾತು ಎಂದುಕೊಂಡು ಹಂಗಾ ಬಂದಿದ್ದ. ಬರುವ ದಾರಿಯಲ್ಲಿ ಸಾವಜಿ ವಿಷ್ಣಪ್ಪನ ಹೋಟಿನ ಇಡ್ಲಿ, ವಡಾ ನೆನೆದು ಬಾಯಲ್ಲಿ ನೀರೂರಿಸಿಕೊಂಡು ಬಂದಿದ್ದ ಬಕ್ಕಾ. ಶೆಟ್ರಾ ರೊಕ್ಕ ಕೊಡದಿದ್ದಾಗ ಸಪ್ಪೆ ಮೋರೆ ಮಾಡಿಕೊಂಡು ಊಟವಿಲ್ಲದೆ ಮನೆಯತ್ತ ಬಂದಿದ್ದ. ಬಕ್ಕಾ ಊರಿಗೆ ಬರೋದೊಳಗಾಗಿ ಕೆಂಪಗೆ ಟೊಮ್ಯಾಟೋ ಥರ ಆಗಿದ್ದ ಸೂರ್ಯ ಭೂತಾಯಿಯ ಮಡಿಲೊಳಗೆ ಅವಿತುಕೊಳ್ಳುತ್ತಿದ್ದ. ಊಟವಿಲ್ಲದೆ ತಳಮಳಗೊಂಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಬಕ್ಕಾನಿಗೆ ಧುತ್ತೆಂದು ಎದುರಾದ ತೆಗ್ಗಿನಮನಿ ಬಸ್ಯಾ. ಬಸ್ಯಾನ ಹೊಟ್ಟೆಯೊಳಗೆ ಆಗಲೇ ಶಂಕರಿ ಹೋಗಿ ತಕಧಿಮಿ ಆಡಿಸುತ್ತಿದ್ದಳು. ಅದಾಗಲೇ ಬಸ್ಯಾನ ನಾಲಿಗಿ ಅವನ ಹಿಡಿತದಿಂದ ಕೈತಪ್ಪಿಹೋಗಿತ್ತು. ಹೀಗೆ ನಾಲಿಗಿ ಹಿಡಿತ ಕಳೆದುಕೊಂಡಿದ್ದರಿಂದಲೇ ಊರವರ ಜೊತೆ ಜಗಳ ಮಾಡಿ ಮುಂದಿನ ನಾಲ್ಕು ಹಲ್ಲು ಉದುರಿಸಿಕೊಂಡಿದ್ದ ಬಸ್ಯಾ. ಆದರೂ ತನ್ನ ಚಾಳಿ ಬಿಟ್ಟಿರಲಿಲ್ಲ. ಏನೇನೋ ಲೆಕ್ಕಾಚಾರ ಹಾಕಿಕೊಂಡು ಹೋಗಿ ಖಾಲಿ ಕೈಲಿ ವಾಪಸ್‌ ಬಂದಿದ್ದ ಬಕ್ಕಾ ಆ ಬಸ್ಯಾ ನೋಡಿದ್ರೆ ಏನಾದ್ರೂ ಮತ್ತೆ ಇಲ್ಲಿ ಆದೀತು ಅಂದುಕೊಂಡು ಅವನನ್ನು ನೋಡಿದರೂ ನೋಡದಂತೆ ಜೋರಾಗಿ ಹೆಜ್ಜೆ ಹಾಕಿದ. ಬಸ್ಯಾ ಶಂಕರಿಯ ಆಣತಿಯಂತೆ ಏನೇನೋ ಉಸುರಿದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಮನೆ ತಲುಪಿದ.

ಅಷ್ಟೊತ್ತಿಗಾಗಲೇ ಮಗಳು ಉಲ್ಲವ್ವ ಹೆರಿಗೆ ಬ್ಯಾನಿ ತಿನ್ನುತ್ತಿದ್ದಳು. ನಾಲ್ಕಾರು ಹೆಣ್ಮಕ್ಕಳು ಹಾಗೂ ಸೂಲಗಿತ್ತಿ ಸಿದ್ದವ್ವ ಅತ್ತಿಂದಿತ್ತ, ಇತ್ತಿಂದತ್ತ ದೊಡ್ಡಾಸ್ಪತ್ರೆಗಳಲ್ಲಿನ ಐಸಿಯೂ ಮುಂದೆ ಡಾಕ್ಟರ್‌ಗಳು, ನರ್ಸ್‌ಗಳು ಓಡಾಡುವಂತೆ ಬಕ್ಕಾನ ಮನಿ ಒಳಗ ಹೊರಗ ಓಡಾಡುತ್ತಿದ್ದರು. ಬಕ್ಕಾ ಬಂದಿದ್ದನ್ನು ನೋಡಿ ಬಕ್ಕಾನ ಹೆಣಿ¤ ರತ್ನಿ ಬಂದು ಮಗಳು ಪಡುತ್ತಿರುವ ಯಾತನೆಯನ್ನು ಹೇಳಿ ಸೆರಗಲ್ಲಿ ಕಣ್ಣೀರು ಒರೆಸಿಕೊಂಡಳು. “”ನೋಡ… ಮಗಳ ಡಿಲೇವರಿ ಇಲ್ಲಿ ಆಗಲ್ಲಂತೆ. ಕೂಸು ಹೊಟ್ಟಿಯೊಳಗ ಅಡ್ಡ ಸಿಕ್ಕಂಡೈತಂತೆ. ಅದ್ಕ ಆಸ್ಪತ್ರೆಗೆ ಕರ್ಕೊಂಡ್‌ ಹೋಗಾಮ ನಡಿ” ಎಂದು ಬಕ್ಕಾನ ಕೈ ಹಿಡಿದು ತವಕದಲಿ ಹೇಳಿದಳು. ಒತ್ತರಸಿ ಬಂದ ದುಃಖವನ್ನು ಹತ್ತಿಕ್ಕುತ್ತಾ, “”ನೋಡು ಕೈಯ್ನಾಗ ನಯಾ ಪೈಸೆ ಇಲ್ಲ. ಬರೀ ಕೈಲಿ ಹ್ಯಾಂಗ್‌ ಹೋಗೋದು? ಅದ್ರಗಾ ದವಾಖಾನಿ ಅಂದ್ರ ಹಂಗ ಅಕ್ಕತೇನು? ಆ ಚಾಂಡಾಲ ದೇವರು ನಮ್ಮಂತಹ ಬಡವರಿಗೆ ಇಂತಹ ಪರೀಕ್ಷೆ ಒಡ್ತಾನ” ಎಂದು ತನ್ನ ಸ್ಥಿತಿಯ ಬಗ್ಗೆ ತಾನೇ ಹಳಿದುಕೊಂಡ ಬಕ್ಕಾ. ಹಡೆದ ತಾಯಿ ಕರುಳು ಸುಮ್ಮನಿರಲಿಲ್ಲ. “”ಏನಾದ್ರೂ ಮಾಡಿ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಾಮ” ಎಂದು ರತ್ನಿ ಗೋಗರೆದಳು. ಮುಂದ ದೇವರ ಇಚ್ಛೆ ಎಂದುಕೊಂಡು ಆಸ್ಪತ್ರೆಗೆ ಹೊರಡಲು ಸಜ್ಜಾjದರು. ಸಾಲಿ ಕಟ್ಟಿ ಹತ್ತಿ, ಮೊಬೈಲ್‌ ಇದ್ದ ಹುಡುಗ 108ಗೆ ಫೋನ್‌ ಮಾಡಿದ್ದರಿಂದ. ಫೋನ್‌ ಮಾಡಿದ ಅರ್ಧ ಗಂಟಿಯೊಳಗ ವೌಂವ್‌ ವೌಂವ್‌ ಎಂದು ಜೋರಾಗಿ ಸೌಂಡ್‌ ಮಾಡುತ್ತಾ ಅಂಬುಲೆನ್ಸ್‌ ಗಾಡಿ ಬಂದು ಬಕ್ಯಾನ ಮನಿ ಮುಂದ ನಿಂತಿತು. ಗಾಡಿಯಲ್ಲಿದ್ದವರು ಹಾಗೂ ಅಲ್ಲಿದ್ದ ಹೆಣ್ಮಕ್ಳು ಆ ಆ್ಯಂಬುಲೆನ್ಸ್‌ ನಲ್ಲಿ ಉಲ್ಲವ್ವನನ್ನು ತಂದು ಕೂರಿಸಿದರು. ಮಗಳ ಜೊತೆ ಬಕ್ಕಾ ಹಾಗೂ ಆತನ ಹೆಣಿ¤ ರತ್ನಿಯೂ ಗಾಡಿಯಲ್ಲಿ ಹತ್ತಿದರು. ಬಂದ ಸ್ಪೀಡಿನಲ್ಲೇ ಆ ಆ್ಯಂಬುಲೆನ್ಸ್‌ ಧೂಳೆಬ್ಬಿಸುತ್ತ ಹೋಯ್ತು.

  ಇತ್ತ ಇರುವ ಎರಡು ಎಕರೆಯಲಿ ಬಕ್ಯಾ ಬೆಳೆದಿದ್ದ ಮೆಕ್ಕೆಜೋಳ ಕಟಾವಿಗೆ ಬಂದಿತ್ತು. ಮಳೆ ಕೈಕೊಟ್ಟರೂ ನಾಕಾಣೆ ಹಿಸ್ಸೆಯಂತೆ ನೀರು ಪಡೆದುಕೊಂಡು ಮೆಕ್ಕೆ ಜೋಳ ಬೆಳದಿದ್ದ. ಮೆಕ್ಕೆಜೋಳ ಬೀಜ, ಗೊಬ್ಬರ, ಆಳು ಅಂತ ಆಗಾಲೇ ಶೆಟ್ರ ದಲಾಲಿ ಅಂಗಡಿಯೊಳಗ ಸಾಲ ಮಾಡಿದ್ದ. ಬರುವ ಪೀಕಿನಲ್ಲಿ ಸಾಲ ತೀರಿಸಿದರಾಯ್ತು ಎಂಬ ಅಗಾಧ ನಂಬಿಕೆಯಲಿ. ಇವನ ದುರಾದೃಷ್ಟವೋ ಏನೋ ಮಳೆಯಾಗಲೇ ಇಲ್ಲ. ಬಿತ್ತಿದ ಬೆಳೆಯನ್ನಾದರೂ ಉಳಿಸಿಕೊಳ್ಳೋದಕ್ಕೆ ಪಿಂಜಾರ ಫ‌ಕ್ರಪ್ಪನ ಬೋರ್‌ನಿಂದ ನಾಕಾಣೆ ಹಿಸ್ಸೆ ಮಾತಾಡಿ ಬೆಳೆಗೆ ನೀರು ಹರಿಸಿದ್ದ. ಬೆಳೆ ಕಟಾವಿಗೆ ಬಂದ ವ್ಯಾಳೆಯೊಳಗ ಮಗಳನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೊಡು ಹೋಗಿದ್ದ. ಮನೇಲಿದ್ದ ಮಗ ಈರ್ಯಾನಿಗೆ ತನ್ನಕ್ಕ ಉಲ್ಲವ್ವ ಡಿಲೇವರಿ ಸರಾಳಾಗೇತಿ ಅಂತ ಯಾರೋ ಪ್ಯಾಟಿಯಿಂದ ಬಂದವರು ವಾರ್ತೆ ಹೇಳಿದ್ದರು. ಇದರಿಂದ ಈರ್ಯಾನೂ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟ. ಅಪ್ಪ ಬರುವುದರೊಳಗಾಗಿ ಆಳು ಕರಕೊಂಡು ಮೆಕ್ಕೆಜೋಳ ಮುರಿಸೋಣ ಎಂದುಕೊಂಡು ಆಳಿನೊಂದಿಗೆ ಬೆರೆತು ಈರ್ಯಾ ಮೆಕ್ಕೆಜೋಳ ಮುರಿಸಿದ. ರಾಶಿ ಮಾಡಿದ. ತಾನು ಮಾಡುತ್ತಿರುವ ಕೆಲಸದ ಬಗ್ಗೆ ಪ್ಯಾಟಿಗೆ ಹೋದವರ ಕೈಲಿ ಅಪ್ಪನಿಗೆ ತಿಳಿಸುವಂತೆ ಹೇಳಿದ್ದ. ಹೇಗೋ ಮಗ ಜಬಾದಾರಿ ತಗೋಂಡ್‌ ಮಾಡಕತ್ಯಾನ ಅಂತ ಬಕ್ಕಾ ನಿರುಮ್ಮಳನಾದ. ಹೆರಿಗೆಯಾದ ಮಗಳನ್ನು ಕರೆದುಕೊಂಡು ಬಕ್ಕಾ ಮನೆಗೆ ಬಂದ. ಬಂದವನೇ ಸೀದಾ ಹೊಲದ ಕಡೆ ಹೆಜ್ಜೆ ಹಾಕಿದ. ಅಷ್ಟೊತ್ತಿಗಾಗಲೇ ಮಗ ಈರ್ಯಾ ಮೆಕ್ಕೆಜೋಳ ರಾಶಿ ಮಾಡಿ ಪ್ಯಾಟಿಗೆ ಹೋಗಾಕ ರೆಡಿ ಮಾಡಿದ್ದ. ಪ್ಯಾಟಿಗೆ ಹೋಗಿ ಶೆಟ್ಟರ ದಲಾಲಿ ಅಂಗಡಿಯಲ್ಲಿ ತೂಕ ಹಾಕಿಸಿ ಲೆಕ್ಕ ಮಾಡಿಸಿಕೊಂಡು ಬರೋದು ಈರ್ಯಾನಿಗೆ ಗೊತ್ತಿರಲಿಲ್ಲ. ಮಾತಿನಂತೆ ಬಕ್ಕಾ ಪಿಂಜಾರ ಫ‌ಕ್ರಪ್ಪನಿಗೆ ಸೇರಬೇಕಾಗಿದ್ದ ನಾಕಾಣೆ ಭಾಗದ ಮೆಕ್ಕೆಜೋಳವನ್ನು ಅಲ್ಲಿಯೇ ಬಿಟ್ಟು ಬಂಡಿಯಲ್ಲಿ ಹೇರಿಕೊಂಡು ಪ್ಯಾಟಿಗೆ ಹೊಂಟು ನಿಂತ. ಬಕ್ಕಾನಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದ ಎತ್ತುಗಳು ಬಂಡಿಯನ್ನು ಎಳೆದುಕೊಂಡು ಶೆಟ್ಟರ ದಲಾಲಿ ಅಂಗಡಿ ಮುಂದ ಬಂದು ನಿಂತವು. ತಂದಿದ್ದ ಮಾಸೀಲನ್ನು ಶೆಟ್ಟರ ಅಂಗಡಿಯೊಳಗ ನಿಟ್ಟು ಒಟ್ಟಿದ. ಬೆವರು ಒರೆಸಿಕೊಳ್ಳುತ್ತಾ “”ಸಾವಾರ್ರೆ ಮಾಸೀಲ್‌ ತಂದು ಹಚ್ಚಿನ್ರಿ. ನಾಳೆ ಬೇಸ್ತವಾರ. ನಾಳೆ ಸವಾಲ್‌ ಆಗುತ್ತ. ಅದಕ ಈಗ ದುಡ್‌ ಕೊಡ್ರಿ. ಮನೇಲಿ ಡಿಲೇವರಿ ಆದ ಮಗಳದಾಳ. ಆಕೀಗೆ ಬಾಣೆತನ ವೆಚ್ಚ ಒಯೆºàಕು” ಎಂದು ಶೆಟ್ರ ಮುಂದ ಹಲ್ಲುಗಿಂಜಿದ. ಅದ್ಕ ಶೆಟ್ರಾ “”ನೋಡು ಬಕ್ಕಾ ನೋಟ್‌ ಬ್ಯಾನ್‌ ಆದ್ಮೇಲೆ ನಮ್‌ ಆಟನ ನಿಂತ್‌ ಹೋಗೇತಿ. ಬ್ಯಾಂಕ್‌ ಎಟಿಎಂಗಳ ಮುಂದ ನಿಂತ್‌ ಸಾಕಾಗೇತಿ. ಈಗ ಬರೀ ಎಲ್ಡ ಸಾವ್ರ ರೊಕ್ಕ ತಕ್ಕೋಬೋದು. ನನ್‌ ಹತ್ರ ರೊಕ್ಕಾನ ಇಲ್ಲ. ಅದಲ್ದ ನೀ ತಂದಿರೋ ಮಾಲ್‌ ವ್ಯಾಪಾರ ಆದ್ರೂ ಅದ್ರಾಗ ನೀನ ನನಗ ಇನ್ನೂ ಸಾಲಗಾರ ಆಗ್ತಿ. ಅದ್ಕ ರೊಕ್ಕ ಇಲ್ಲ” ಎಂದು ಶೆಟ್ರಾ ಖಂಡಾತುಂಡವಾಗಿ ಹೇಳಿದರು. ಶೆಟ್ರ ಬಾಯಿಂದ ಇಷ್ಟೊಂದು ಕಠೊರವಾದ ಮಾತನ್ನು ಯಾವತ್ತೂ ಕೇಳಿರದ ಬಕ್ಕಾ ತನ್ನನ್ನು ತಾನೇ ನಂಬದಂತಾದ. ಅಷ್ಟರಲ್ಲಿ ಶೆಟ್ರಾ ಅದೇ ತಮ್ಮ ಖಾಯಂ ಬ್ರಾಂಡ್‌ ಬ್ರಿಸ್ಟಾಲ್‌ ಸಿಗರೇಟನ್ನು ತುಟಿಗೆ ಅಂಟಿಸಿಕೊಂಡು ಹೊರಟು ಹೋಗಿದ್ದರು. ವಾಸ್ತವಕ್ಕೆ ಬಂದ ಬಕ್ಕಾ ಹೆಗಲ ಮೇಲಿದ್ದ ಟವಲ್‌ ಕೊಡವಿಕೊಂಡು ತನ್ನ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳ ಬಳಿ ಬಂದು ಕಣ್ಣಿರು ಹಾಕಿದ. ಇದು ಈ ದೇಶದ ಅನ್ನದಾತನ ಸ್ಥಿತಿ ನೋಡು ಬಸವಣ್ಣ ಎಂದು ತನ್ನದೆ ಆದ ಶೈಲಿಯಲಿ ಬಕ್ಕಾ ಬಸವನ ಮುಂದೆ ಬಡಬಡಿಸಿದ. ಆದರೆ, ಬಕ್ಕಾ ತೋಡಿಕೊಳ್ಳುತ್ತಿದ್ದ ಸಂಕಟವನ್ನು ತಮ್ಮದೇ ಭಾವದಲ್ಲಿ ಅರ್ಥ ಮಾಡಿಕೊಂಡಿರುವಂತೆ ಬಡಕಲು ದೇಹದ ಆ ಎತ್ತುಗಳು ಮೆಕ್ಕೆಜೋಳ ಹೇರಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕಿದ್ದ ಅದೇ ಮೆಕ್ಕೆಜೋಳದ ರವದಿಯನ್ನು ತಿಂದಿದ್ದನ್ನೇ ಮತ್ತೆ ಮರಳಿಸಿ ಬಾಯಿಗೆ ತಂದುಕೊಂಡು ಮೆಲುಕು ಹಾಕಿದವು. ಕಷ್ಟಪಟ್ಟು ದುಡಿಯುವ ನನಗೆ, ನಿನ್ನ ಜೊತೆ ಇರುವ ನನಗೆ ಇದೇ ಸ್ಥಿತಿ ಎಂದು ಮೆಲುಕು ಹಾಕುತ್ತಿದ್ದ ಬಡಕಲು ದೇಹದ ಆ ಎತ್ತುಗಳು ಹೇಳಿದಂತಿತ್ತು.

ಮೌನೇಶ್‌ ಎಸ್‌. ಬಡಿಗೇರ್‌

ಟಾಪ್ ನ್ಯೂಸ್

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.