Updated at Fri,21st Jul, 2017 10:16AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭಾರತದ 11 ವನಿತೆಯರಿಗೆ ಪ್ರಶಸ್ತಿ

ಸಿಂಗಾಪುರ: ಸಮಾಜಸೇವೆಗೆ ತಮ್ಮ ಬದುಕನ್ನೇ ಮುಡುಪಿಟ್ಟ ಭಾರತದ 11 ಮಹಿಳೆಯರು ಈ ಬಾರಿಯ "ವಿಮೆನ್‌ ಐಕಾನ್‌' ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಸಿಂಗಾಪುರ ನನ್ಯಾಂಗ್‌ ತಾಂತ್ರಿಕ ವಿವಿ ನೆರವಿನೊಂದಿಗೆ ಬ್ಯುಸಿನೆಸ್‌ ಎಕ್ಸೆಲೆನ್ಸ್‌ ಆಂಡ್‌ ರಿಸರ್ಚ್‌ ಗ್ರೂಪ್‌ ನೀಡುವ ಈ ಪ್ರಶಸ್ತಿ ಪಡೆದ ಏಷ್ಯಾದ 25 ಮಂದಿ ಮಹಿಳೆಯರ ಪೈಕಿ ಭಾರತದ 11 ಮಹಿಳೆಯರೂ ಇದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಾಧಕಿಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಶಸ್ತ್ರಪಡೆಯಲ್ಲಿ ದಶಕದ ಕಾಲ ಕಾರ್ಯನಿರ್ವಹಿಸಿ, "ಸಮವಸ್ತ್ರದಲ್ಲಿರುವ ಮಹಿಳೆ' ಕುರಿತು ಇದ್ದ ಹಲವು ಪೂರ್ವಗ್ರಹ­ಗಳನ್ನು ತೊಡೆದುಹಾಕಿದ, ನಂತರ ಕಾರ್ಪೊರೇಟ್‌ ಜಗತ್ತಿಗೂ ಲಗ್ಗೆಯಿಟ್ಟ ವಂದನಾ ಶರ್ಮಾ, ಸಾಧಕಿಯರಲ್ಲಿ ಒಬ್ಬರು.

2007ರಲ್ಲಿ ಪತಿ ನಿಧನರಾದ ನಂತರ ಹತ್ತು ತಿಂಗಳ ಕಾಲ ಮುಂಬೈನಲ್ಲಿ ಟ್ಯಾಕ್ಸಿ ಓಡಿಸಿ, ಕುಟುಂಬ ನಿರ್ವಹಣೆ ಮಾಡಿದ ದಿಟ್ಟ ಮಹಿಳೆ ರೇವತಿ ಸಿದ್ಧಾಥೆì ರಾಯ್‌ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ "ಜಫಿ#àರೊ ಲರ್ನಿಂಗ್‌' ಎಂಬ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ರೇವತಿ, ನೂರಾರು ಮಹಿಳೆಯರಿಗೆ ದ್ವಿಚಕ್ರವಾಹನ ಚಾಲನೆ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ 120 ಮಹಿಳೆಯರು ಬೆಂಗಳೂರು, ಮುಂಬೈನಲ್ಲಿ ಇ-ಕಾಮರ್ಸ್‌ ಮಾರುಕಟ್ಟೆ ಉತ್ಪನ್ನಗಳ ಪೂರೈಕೆಯಲ್ಲಿ ತೊಡಗಿದ್ದಾರೆ. ಇವರಲ್ಲದೆ, ಡಾ. ಅಪರ್ಣಾ ಹೆಗ್ಡೆ, ಡಾ. ಶ್ರೀಮತಿ ಕೇಶನ್‌, ದೀಕ್ಷಿತಾ ಸೇರಿ 11 ಭಾರತೀಯರು "ವಿಮೆನ್‌ ಐಕಾನ್‌' ಗೌರವಕ್ಕೆ ಪಾತ್ರರಾಗಿದ್ದಾರೆ.


Back to Top