Updated at Mon,24th Jul, 2017 9:14PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆಸ್ಟ್ರೇಲಿಯಾದಲ್ಲಿ ಕೇರಳ ಮೂಲದ ಪಾದ್ರಿಗೆ ಇರಿತ

ಮೆಲ್ಬೋರ್ನ್: ಅಮೆರಿಕದಲ್ಲಿ ಭಾರತೀಯ ನಾಗರಿಕರ ಮೇಲೆ ನಡೆಯುತ್ತಿದ್ದ ಜನಾಂಗೀಯ ದಾಳಿ ಈಗ ಆಸ್ಟ್ರೇಲಿಯಾದಲ್ಲೂ ಆರಂಭವಾಗಿದೆ. ಮೆಲ್ಬೋರ್ನ್ನಲ್ಲಿ ವ್ಯಕ್ತಿಯೊಬ್ಬ ಭಾರತ ಮೂಲದ ಕ್ಯಾಥೋಲಿಕ್‌ ಪಾದ್ರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಕೇರಳದವರಾದ ಪಾದ್ರಿ ಟಾಮಿ ಕಲಥೂರ್‌ ಮ್ಯಾಥಿವ್‌, ಸಾಮೂಹಿಕ ಬೋಧನೆಗೆ ಸಿದ್ಧತೆ ನಡೆಸುವಾಗ ಅವರಿದ್ದ ಜಾಗಕ್ಕೆ ನುಗ್ಗಿದ ವ್ಯಕ್ತಿ, "ಭಾರತೀಯನಾಗಿರುವ ನೀನು, ಹಿಂದೂ ಅಥವಾ ಮುಸ್ಲಿಂ ಆಗಿರಬೇಕು. ಹೀಗಾಗಿ ನೀನು ಪಾದ್ರಿ ಸ್ಥಾನಕ್ಕೆ ಯೋಗ್ಯನಲ್ಲ' ಎಂದು ಹೇಳಿ ಚಾಕುವಿನಿಂದ ಪಾದ್ರಿಯ ಕತ್ತಿನ ಎಡ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ಮ್ಯಾಥಿವ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಶಂಕಿತನೊಬ್ಬನನ್ನು ಬಂಧಿಸಲಾಗಿದೆ.

ಹಿಂದೂ, ಸಿಖ್‌ರೇ ಗುರಿ: ಅಮೆರಿಕದಲ್ಲಿ ಇಸ್ಲಾಮೋ ಫೋಬಿಯಾ ಮತ್ತು ಕ್ಸೆನೋಫೋಬಿಯಾ ಹೆಸರಿನಲ್ಲಿ ಭಾರತ ಮೂಲದ ಹಿಂದೂ ಹಾಗೂ ಸಿಖ್‌ ಸಮುದಾಯದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಅಮೆರಿಕಸಲ್ಲಿರುವ ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ.


Back to Top