Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೇಂದ್ರದ ಮೇಲೆ ಬಿಜೆಪಿ ಸುಳ್ಳು ಆರೋಪ :ಸಿದ್ದರಾಮಯ್ಯ
    • ಕೇಂದ್ರ ಸರ್ಕಾರದ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪವನ್ನು ವ್ಯರ್ಥವಾಗಿ ಮಾಡುತ್ತಿದೆ

      • Udayavani | Oct 09, 2011

        ರಾಜ್ಯ ಬೊಕ್ಕಸ ಖಾಲಿ ಎಂಬುದಕ್ಕೆ ವೃದ್ಧರ ವೇತನ ನಿಲುಗಡೆಯೇ ಸಾಕ್ಷಿ * ಈಶ್ವರಪ್ಪ ತಲೆಕೆಟ್ಟಂತೆ

        ಮಾತನಾಡಬೇಡಿ


        ಅರಸೀಕೆರೆ: ರಾಜ್ಯದಲ್ಲಿನ ಬಿಜೆ ಪಿ ಸರ್ಕಾರ ತನ್ನ ಆಡಳಿತ ವೈಫ‌ಲ್ಯತೆ ಹಾಗೂ ನಡೆಸಿರುವ ಭ್ರಷ್ಟಚಾರವನ್ನು ಜನಮಾನಸದಿಂದ ಮುಚ್ಚುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪವನ್ನು ವ್ಯರ್ಥವಾಗಿ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

        ಪಟ್ಟಣದ ಹೊರವಲಯದಲ್ಲಿನ ಜೆ.ಪಿ. ಎನ್‌ ಫಾರಂ ಹೌಸ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕಳೆದ ಮೂರು ವರ್ಷದಲ್ಲಿ ರಾಜ್ಯ ಸರ್ಕಾರ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡದೆ ಅದನ್ನು ಖರೀದಿಸುವ ಮೂಲಕ ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸಿದ ಕಾರಣ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅತಂಕ ವ್ಯಕ್ತಪಡಿಸಿದರು.

        ರಾಜ್ಯದ ಖಜಾನೆಯಲ್ಲಿ ಹಣ ಇಲ್ಲದೆ ಸುಮಾರು 12 ಸಾವಿರ ಕೋಟಿ ಹಣವನ್ನು ಏಸ್ಕಾಂಗೆ ಬಾಕಿ ನೀಡಬೇಕಾಗಿದೆ. ರಾಯಚೂರಿನ ಶಾಖ ವಿದ್ಯುತ್‌ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 210 ಮೇಗಾ ವ್ಯಾಟ್‌ನ ಮೂರು ಘಟಕಗಳು ಕಲ್ಲಿದ್ದಲು ಇಲ್ಲದೆ ನಿಲ್ಲುವ ಸಾಧ್ಯತೆ ಇದೆ. ರಾಜ್ಯ ಮುಂದಿನ ದಿನಗಳಲ್ಲಿ ಭೀಕರ ವಿದ್ಯುತ್‌ ಸಮಸ್ಯೆಎದುರಿಸಬೇಕಾಗುತ್ತದೆ ಎಂದರು.

        ಇಂಧನ ಸಚಿವರು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿ¨ªಾರೆ. ಮಂತ್ರಕ್ಕೆ ಎಂದು ಮಾವಿನ ಕಾಯಿ ಬೀಳುವುದಿಲ್ಲ. ಎಂಬ ಸತ್ಯವನ್ನು ಅರಿತು ಕೆಲಸ ಮಾಡಬೇಕು. ರಾಜ್ಯದ ಅನೇಕ ಭಾಗದಲ್ಲಿ ಭೀಕರ ಬರಗಾಲ ಎದುರಾಗಿದೆ. ಈ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಪರಿಹರಿಸಬೇಕಾದ ಮುಖ್ಯಮಂತ್ರಿಗಳು ಮೂರು ದಿನ ಮೈಸೂರಿನಲ್ಲಿ ಕುಳಿತು ದಸರಾ ಹಬ್ಬವನ್ನು ಆಚರಿಸುತ್ತಾರೆ. ಆದರೆ , ಪಕ್ಕದ ಚಾಮರಾಜನಗರಕ್ಕೆ ಹೋಗುವ ಮನಸ್ಸು ಮಾಡದಿರುವುದು ಮೂಡನಂಬಿಕೆಯ ವಿಪರ್ಯಾಸ ಸಂಗತಿ ಎಂದು ಲೇವಡಿ ಮಾಡಿದರು.

        ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬುದಕ್ಕೆ ಸಾಕ್ಷಿ ಯಾಗಿ ಜನಪರ ಯೋಜನೆಗಳಾದ ಸಂಧ್ಯಾಸುರûಾ, ವಿಧವಾವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಸಮಸ್ಯೆ ನಿವಾರಣೆ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗುವುದಾದರೆ ತಮ್ಮ ತಕಾರಾರು ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬುದನ್ನು ತಾವು ವಿರೋಧಿಸುವುದಾಗಿ ಹೇಳಿದರು.

        ರಾಜ್ಯಪಾಲರು ಸಂವಿಧಾನ ಬದ್ಧ ಅಧಿಕಾರ ನಡೆಸುತ್ತಿ¨ªಾರೆ. ಆದರೆ, ಕೆ. ಎಸ್‌. ಈಶ್ವರಪ್ಪ ಅವರು ಈ ಬಗ್ಗೆ ತಲೆ ಕೆಟ್ಟವರಂತೆ ಮಾತನಾಡುವುದು ಶೋಭೆಯಲ್ಲ. ಹಿರಿಯ ಗಾಂಧಿವಾದಿ ಅಣ್ಣಾಹಜಾರೆ ಅವರ ಮೇಲೆ ತಮಗೆ ಗೌರವವಿದೆ. ಅವರು ರಾಜಕಾರಣ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ, ಆದರೆ , ಕಾಂಗ್ರೆಸ್‌ ಪಕ್ಷದ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿರುವ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಆಕ್ಷೇಪಿಸಿದರು.

        ಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡ ಜೆ. ಪಿ. ಎನ್‌. ಜಯಣ್ಣ ಉಪಸ್ಥಿತರಿದ್ದರು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus