ಅಶೋಕ್ ಕುಮಾರ್ ಎ. | Aug 29, 2010
ಪಠ್ಯಪುಸ್ತಕಗಳು ಬಾಡಿಗೆಗೆ!
ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಖರೀದಿಸದಿದ್ದರೆ ಅವರ ಕಲಿಕೆ ಕುಂಠಿತವಾಗುವುದು ಖಂಡಿತ. ಬೇಕೆಂದಾಗ ಪುಸ್ತಕ ಲಭ್ಯವಿಲ್ಲವಾದರೆ ಅವರ ಓದಿಗೆ ತೊಂದರೆಯಾಗುತ್ತದೆ. ಪುಸ್ತಕ ಖರೀದಿಸೋಣವೆಂದರೆ, ಹೆತ್ತವರಿಗೆ ಹೊರೆಯಾಗುತ್ತದಲ್ಲ ಎನ್ನುವ ಹಪಹಪಿ. ಹೆತ್ತವರೂ ಪುಸ್ತಕಗಳ ವಿಚಾರಕ್ಕೆ ಬಂದಾಗ ಗ್ರಂಥಾಲಯ ದಿಂದ ಎರವಲು ಪಡೆ ಯಬಹುದಲ್ಲ ಎಂದೇ ಸಲಹೆ ನೀಡುವುದಿದೆ. http://www.chegg.com ತಾಣದಲ್ಲಿ ಪುಸ್ತಕಗಳು ಬಾಡಿಗೆಗೆ ಸಿಗುತ್ತವೆ. ಸೆಮಿಸ್ಟರ್ ಆರಂಭದಲ್ಲಿ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿ ಸೆಮಿಸ್ಟರ್ ಪೂರ್ತಿ ಇಟ್ಟುಕೊಂಡು, ಅನಂತರ ವಾಪಸು ಮಾಡಬಹುದು. ಕೊರಿಯರ್ ಸೇವೆಯ ಮೂಲಕ ಪುಸ್ತಕವನ್ನು ಕಳುಹಿಸುವ ವ್ಯವಸ್ಥೆಯನ್ನು ಅಂತರ್ಜಾಲ ತಾಣವು ಮಾಡುತ್ತದೆ. ಸದ್ಯಕ್ಕೆ ಇಂತಹ ಸೇವೆಯನ್ನು ನೀಡುವ ಅಂತರ್ಜಾಲ ತಾಣಗಳು ನಮ್ಮಲ್ಲೂ ಬೇಕು ಅನಿಸುವುದಿಲ್ಲವೇ?
ನಿಮ್ಮದೇ ಅಂತರ್ಜಾಲ ಪತ್ರಿಕೆ
ಟಿÌಟರ್ ಅಥವಾ ಫೇಸ್­ಬುಕ್ ಅಂತರ್ಜಾಲ ತಾಣದಲ್ಲಿ ದಿನನಿತ್ಯ ನೀವು ಓದಿದ ಅಂತರ್ಜಾಲ ತಾಣಗಳ ಕೊಂಡಿಗಳನ್ನು ಹಾಕುವ ಅಭ್ಯಾಸ ಹೊಂದಿದ್ದೀರಾ? ಆ ಕೊಂಡಿಗಳನ್ನು ಪತ್ರಿಕೆಯ ಸುದ್ದಿಯಾಗಿ ಪತ್ರಿಕೆಯ ರೂಪಕ್ಕಿಳಿಸುವ ಸೇವೆ ಈಗ ಲಭ್ಯ. ಈ ಸೇವೆಯನ್ನು ಪಡೆಯಲು  ಅಂತರ್ಜಾಲ ತಾಣ http://paper.liನೋಡಿ. ಟಿÌಟರ್ ಖಾತೆ ಅಥವಾ ಫೇಸ್­ಬುಕ್ ಖಾತೆಯನ್ನು ಲಾಗಿನ್ ಆಗಲು ಈ ಅಂತರ್ಜಾಲ ಸೇವೆಗೆ ನೀವು ಅನುಮತಿಸಬೇಕಾಗುತ್ತದೆ. ಕೊಂಡಿಗಳನ್ನು ಓರಣವಾಗಿ ಪತ್ರಿಕೆಯ ರೂಪಕ್ಕಿಳಿಸಿ ನಿಮ್ಮ ಪತ್ರಿಕೆಯಾಗಿಸುವ ಅದ್ಭುತ ನಡೆಯುತ್ತದೆ. ಇದನ್ನೂ ಟಿÌಟರ್ ಅಥವಾ ಫೆೇಸ್­ಬುಕ್ ಮೂಲಕ ಹಂಚಿಕೊಂಡು ಸಂತಸ ಪಡಬಹುದು. ನಿಮ್ಮ ಆಸಕ್ತಿಯ ಸುದ್ದಿಗಳನ್ನು, ಬರಹಗಳನ್ನು ನಿಮ್ಮ ಗೆಳೆಯರ ಗಮನಕ್ಕೆ ತರುವ ವಿಧಾನಗಳಲ್ಲಿ ಇದೂ ಒಂದು. ಅಂದಹಾಗೆ ನಿಮ್ಮನ್ನು ಹಿಂಬಾಲಿಸುವವರು ಹಾಕಿರುವ ಕೊಂಡಿಗಳೂ ಇದರಲ್ಲಿ ಕಾಣಿಸಿಕೊಳ್ಳುತ್ತವೆ! ಇಂತಹ ಒಂದು ಪತ್ರಿಕೆಯ ಇಣುಕು ನೋಟಕ್ಕಾಗಿ http://paper.li/ashok567 ನೋಡಿ.
ಹೊಸ ಅಂತರ್ಜಾಲ ಶಿಷ್ಟಾಚಾರ
ಸದ್ಯ ನಾವು ಐಪಿ4 ಎನ್ನುವ ಶಿಷ್ಟಾಚಾರದ ಮೂಲಕ ಅಂತರ್ಜಾಲ ಸೇವೆಯನ್ನು ಪಡೆಯುತ್ತಿದ್ದೇವೆ. ಆದರೆ ಹೆಚ್ಚುತ್ತಿರುವ ಬಳಕೆದಾರರು ಮತ್ತು ಹೊಸ ಹೊಸ ಸೇವೆಗಳನ್ನು ನೀಡಲು ಅಗತ್ಯವಾದ ಹೆಚ್ಚಿನ ಅಂತರ್ಜಾಲ ತಾಣಗಳಿಗೆ ಮತ್ತು ಶರವೇಗದ ಸಂಪರ್ಕ, ಮೇಲ್ಮಟ್ಟದ ಭದ್ರತಾ ಸವಲತ್ತು ಗಳಿಗೆ ಐಪಿ4 ಸಾಲದು. ಹಾಗಾಗಿ ಐಪಿ6 ಎಂಬ ಶಿಷ್ಟಾಚಾರವನ್ನು ಬಳಕೆಗೆ ತರುವ ಅಗತ್ಯವಿದೆ. ಸರಕಾರವು ನಮ್ಮಲ್ಲೂ ಇದಕ್ಕೆ ತಯಾರಿ ನಡೆಸಲು ಸೂಚನೆ ನೀಡಿದೆ. ಜುಲೈ ತಿಂಗಳಲ್ಲಿ ಈ ಬಗ್ಗೆ ಪ್ರಕಟನೆ ನೀಡಲಾಗಿದ್ದು, ಅಂತರ್ಜಾಲ ಸೇವಾದಾತೃಗಳು ತಮ್ಮ ಕಂಪ್ಯೂಟರ್ ಜಾಲಗಳನ್ನು ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಹೊಸ ಶಿಷ್ಟಾಚಾರಕ್ಕೆ ಸನ್ನದ್ಧಗೊಳಿಸುವಂತೆ ಸೂಚನೆ ನೀಡಲಾಗಿದೆ. 2012ರ ವೇಳೆಗೆ ಸಂಪೂರ್ಣ ಸೇವೆಯನ್ನು ಹೊಸ ಶಿಷ್ಟಾಚಾರದ ಪ್ರಕಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಐಪಿ4ರಲ್ಲಿ 32 ಬಿಟ್­ಗಳ ಅಂತರ್ಜಾಲ ಐಪಿ ವಿಳಾಸಗಳನ್ನು ಬಳಸಿದರೆ, ಐಪಿ6ರಲ್ಲಿ 128 ಬಿಟ್ ವಿಳಾಸಗಳನ್ನು ಬಳಸಬಹುದು. ಇದರಿಂದ ವಿಳಾಸಗಳ ಲಭ್ಯತೆ ಭಾರೀ ಸಂಖ್ಯೆಯಲ್ಲಿ ಏರುತ್ತದೆ. ಈಗ ಮುಕ್ತ ವಿಳಾಸಗಳು ಮುಗಿಯುತ್ತಾ ಬಂದಿದೆ.
ಮೂಬೈಲ್ ಮೂಲಕ ಶೇರು ವ್ಯವಹಾರ
ಸೆಬಿಯು ಮೂಬೈಲ್ ಸಾಧನ ಬಳಸಿ, ನಿಸ್ತಂತು ಸೇವೆಯ ಮೂಲಕ ಶೇರು ವ್ಯವಹಾರ ಮಾಡುವುದಕ್ಕೆ ಅನುಮತಿ ನೀಡಿದೆ. ಮೂಬೈಲ್ ಅಥವಾ ಲ್ಯಾಪ್­ಟಾಪ್ ಮೂಲಕ ನಿಸ್ತಂತು ಜಾಲ ಬಳಸಿ ಶೇರು ವ್ಯವಹಾರವನ್ನು ಸಂಚಾರದ ವೇಳೆಯೂ ಮಾಡಲು ಅಗತ್ಯವಾದ ಮೂಲಸೌಕರ್ಯವನ್ನು ಕೋಟಕ್, ಬಿಎನ್ಪಿ, ಐಸಿಸಿಐ ಡೈರೆಕ್ಟ್, ಜಿಯೋಜಿತ್, ಏಂಜೆಲ್ ಟೆÅàಡಿಂಗ್, ಮೋತಿಲಾಲ್ ಓಸ್ವಾಲ್ ಮುಂತಾದ ಬ್ರೋಕಿಂಗ್ ಕಂಪೆನಿಗಳು ಹೊಂದಿವೆ. ಈಗವುಗಳ ಸೇವೆಯನ್ನು ಬಳಸಿಕೊಳ್ಳಲು ಶೇರುದಾರರಿಗೆ ಸಾಧ್ಯ.
ಜಿಮೇಲ್­ನಿಂದ ಧ್ವನಿ ಕರೆ ಸೇವೆ
ಇನ್ನು ಮುಂದೆ ಕಂಪ್ಯೂಟರ್ ಮೂಲಕ ಧ್ವನಿ ಕರೆಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗುವುದು ಖಂಡಿತ. ಜಿಮೇಲ್ ತನ್ನ ಬಳಕೆದಾರರಿಗೆ ಈ ಸೇವೆ ಯನ್ನು ಉಚಿತವಾಗಿ ನೀಡಲು ಆರಂಭಿಸಿದ ಮೂದಲ ದಿನವೇ ಒಂದು ದಶ ಲಕ್ಷ ಜನರು ಧ್ವನಿ ಕರೆಗಳನ್ನು ಮಾಡಿದ್ದಾರೆ. ಕಂಪ್ಯೂಟರಿನಿಂದ ಮೂಬೈಲ್ ಮತ್ತು ಲ್ಯಾಂಡ್ಲೈನುಗಳಿಗೆ ಕರೆ ಮಾಡಲು ಅವಕಾಶವಿದ್ದರೂ ಅವುಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಕಂಪ್ಯೂಟರ್ ಮೂಲಕ ಇತರ ಕಂಪ್ಯೂಟರ್ ಬಳಕೆದಾರರಿಗೆ ಕರೆ ಮಾಡಲು ಇಬ್ಬರೂ ಜಿಮೇಲ್ ಸೇವೆ ಬಳಸುತ್ತಿರಬೇಕು. ಕಂಪ್ಯೂಟರ್ ಅಥವಾ ಸಾಧನ ದಲ್ಲಿ ಮೈಕ್ ಮತ್ತು ಸ್ಪೀಕರ್ ಬೇಕು ಎನ್ನುವುದನ್ನು ಪ್ರತ್ಯೇಕ ವಾಗಿ ಹೇಳಬೇಕಾಗಿಲ್ಲವಷ್ಟೇ? ಕೆನಡ, ಯುಎಸ್­ಗಳಲ್ಲಿ ಸೇವೆ ಈಗಾಗಲೇ ಲಭ್ಯವಿದ್ದು, ದೇಶದೊಳಗೆ ಕರೆಗಳು ಉಚಿತ. ಹೊರದೇಶಗಳಿಗೆ ಕರೆ ಮಾಡಲು ಪ್ರತಿ ನಿಮಿಷಕ್ಕೆ ಆರೇಳು ಸೆಂಟು ದರ ನೀಡಬೇಕಾಗುತ್ತದೆ. ಚಾÂಟ್ ಸೇವೆಯಲ್ಲಿ ಕಾಲ್ಫೋನ್ ಸೇವೆ ಸಶಕ್ತವಾಗಿದ್ದರೆ ಕರೆಗಳನ್ನು ಏರ್ಪಡಿಸಲು ಬರುತ್ತದೆ. ಸ್ಕೆ$çಪ್ ಎನ್ನುವ ತಾಣವು ಇದುವರೆಗೆ ಇಂತಹ ಅಂತರ್ಜಾಲ ಮೂಲಕ ಧ್ವನಿ ಮತ್ತು ವೀಡಿಯೋ ಕರೆಗಳಿಗೆ ಅವಕಾಶ ನೀಡಿ ಜನಪ್ರಿಯವಾಗಿತ್ತು. ಅದನ್ನು ಈಗಾಗಲೇ ಆರು ಕೋಟಿಯಷ್ಟು ಬಳಕೆ ದಾರರು ಬಳಸುತ್ತಿದ್ದಾರೆ.
ಟಿÌಟರ್ ಚಿಲಿಪಿಲಿ
* ಮಳೆಯು ಜನರನ್ನು ಒಂದುಗೂಡಿಸುತ್ತದೆ...ಒಂದೇ ಕೊಡೆಯಲ್ಲಿ ನಾಲ್ಕು ಜನರು ಸಾಗುತ್ತಿರುವುದೇ ಸಾಕ್ಷಿ.
* ಇವು ನಾನು ಪಾಲಿಸುವ ನಿಯಮಗಳು. ನಿಮಗಿಷ್ಟವಾಗಲಿಲ್ಲವೇ? ಸರಿ ಬಿಡಿ, ನಾನು ಪಾಲಿಸುವ ಇನ್ನೂ ಕೆಲವು ನಿಯಮಗಳಿವೆ.
* ಯಾರಾದರೂ ಶ್ರೀಮಂತ, ತನ್ನ ಶ್ರೀಮಂತಿಕೆಗೆ ಕಠಿನ ದುಡಿಮೆಯೇ ಕಾರಣ ಎಂದಾಗ, ಯಾರ ಕಠಿನ ದುಡಿಮೆ ಎಂದು ಕೇಳಿ ಬಿಡಿ.
* ಕನ್ನಡ ವಿಕಿಪೀಡಿಯಾದಲ್ಲಿನ ಬರಹಗಳ ಸಂಖ್ಯೆ 9,000 ಗಡಿ ದಾಟಿದೆ.
* ಸಂಪದ ಸಮುದಾಯ ತಾಣವನ್ನು ನಿರ್ವಹಿಸಲು ಮಾಧ್ಯಮದ ಬಗ್ಗೆ ಆಸಕ್ತಿ ಹೊಂದಿದ ನಿರ್ವಾಹಕರು ಬೇಕಾಗಿದ್ದಾರೆ. ಆಸಕ್ತರು ಹರಿಪ್ರಸಾದ್ ನಾಡಿಗ್ ಅವರನ್ನು hpnadig@sampada.net ಸಂಪರ್ಕಿಸಿ.