Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಾಹಿತ್ಯವೂ ರಾಜಕೀಯವೂ
    • ಸಾಹಿತ್ಯ ಕೇಸರಿಗಳು ಯಾವಾಗಲೂ ರಾಜಕೀಯ ಕೇಸರಿಗಳಾಗಿರಲು ಸಾಧ್ಯವಿಲ್ಲವೆಂಬುದು ಸುಸ್ಪಷ್ಟ

      • ಶಿವ ವಿಶ್ವನಾಥನ್‌ | Feb 05, 2012

        ಇತ್ತೀಚೆಗೆ ಜೈಪುರದಲ್ಲಿ ನಡೆದ ಸಾಹಿತ್ಯೋತ್ಸವ ನಿಜಕ್ಕೂ ಯಾವುದೇ ವಿವಾದವನ್ನಾಗಲಿ ಸಾಹಿತ್ಯಿಕ ಚರ್ಚೆ-ಸಂವಾದವನ್ನಾಗಲಿ ಸೃಷ್ಟಿಸುವ ಬದಲಿಗೆ ವಿವಾದಿತ ಲೇಖಕ ಸಲ್ಮಾನ್‌ ರಶಿª ಅವರ ದ ಸೆಟಾನಿಕ್‌ ವರ್ಸಸ್‌ ಕಾದಂಬರಿಯ ನೀಳ ನೆರಳಿನ ಲೀಲಾ ವಿನೋದದ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿತು. ಸಾಹಿತ್ಯ ಸಮ್ಮೇಳನ ಹೀಗೆ ಮುಜುಗರ ಹುಟ್ಟಿಸುವ ಸಂದರ್ಭವಾಗಿ ಮಾರ್ಪಟ್ಟಿರುವುದು ವಿಷಾದನೀಯವೆಂದೇ ಹೇಳಬೇಕು. ನಾಲ್ವರು ಲೇಖಕರು ರಶಿªಯವರ ನಿಷೇಧಿತ ಕಾದಂಬರಿಯ ಭಾಗಗಳನ್ನು ಅವರ ಅನುಪಸ್ಥಿತಿಯಲ್ಲಿ ವಾಚಿಸುವ ಮೂಲಕ, ರಶಿªಯವರ ಪ್ರಾಣಾಪಾಯವನ್ನು ಅಂಶತಃ ಹೆಚ್ಚಿಸಿದಂತೆಯೇ ಆಗಿದೆ.

        ಹೀಗೆ ವಿವಾದಿತ ಕೃತಿಯ ಪುಟಗಳನ್ನು ಆ ನಾಲ್ವರು ಸಾಹಿತಿಗಳು "ಪ್ರತಿಭಟನೆಯ ಸಂಕೇತವಾಗಿ' ವಾಚಿಸಿದ ಘಟನೆ ನನ್ನಲ್ಲಿ ತಳಮಳವನ್ನೂ ಅಸಮಾಧಾನವನ್ನೂ ಮೂಡಿಸಿತೆಂದು ಹೇಳಲೇಬೇಕು. ನನ್ನ ಈ ಮಾತನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತೇನೆ - ರಶಿª ಅವರ ಈ ಪುಸ್ತಕಕ್ಕೆ ನಿಷೇಧ ಹೇರಿರುವ ಕ್ರಮ ಅಸಮರ್ಥನೀಯವೇ ಹೌದು. ನಮ್ಮ ಸ್ವಾತಂತ್ರ್ಯಕ್ಕೆ ಗೆದ್ದಲು ಹತ್ತಿರುವ ಈ ದಿನಗಳಲ್ಲಿ ವಾಕ್‌ ಸ್ವಾತಂತ್ರ್ಯ ಹಾಗೂ ಸೃಜನಶೀಲತೆಯ ಸ್ವಾತಂತ್ರ್ಯ ತುಂಬಾ ಮುಖ್ಯವೂ ಹೌದು. ಆದರೆ ಸಾಹಿತಿಗಳಾಗಿ ನಾವು ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ - ಕೃತಿಯ ಮೇಲಿನ ನಿಷೇಧ ತೆಗೆದರೆ ಅದರ ಬೆನ್ನಿಗೇ ಉದ್ಭವಿಸುವ ದಂಗೆ ಅಥವಾ ಸಾವುನೋವು ಕುರಿತಂತೆ ನಮ್ಮ ಜವಾಬ್ದಾರಿ ಏನು? ರಶಿª ಒಬ್ಬ ಅದ್ಭುತ ಬರಹಗಾರ.
        ಆದರೆ, ಜೈಪುರ ಸಾಹಿತ್ಯೋತ್ಸವದಲ್ಲಿ ತಮ್ಮ ಕೃತಿಯನ್ನು ಸಮರ್ಥಿಸಿ ಕೆಲ ಸಾಹಿತಿಗಳು ನಡೆಸಿದ ಪ್ರತಿಭಟನೆಗೆ ಅವರು ಸಾಕ್ಷಿಯಾಗಬೇಕಾಯಿತಲ್ಲ , ಇದು ಅವರು ಅವರಿಗೇ ಮಾಡಿಕೊಂಡ ಅನ್ಯಾಯ ಎನ್ನಿಸುತ್ತಿದೆ ನನಗೆ.

        ಈ ಘಟನೆಯನ್ನು ನಾನು ಅರ್ಥಮಾಡಿಕೊಂಡ ಬಗೆಯನ್ನು ವಿವರಿಸುತ್ತೇನೆ - ಅಲ್ಲಿ ಕೆಲ ಸಾಹಿತಿಗಳು, ವಿಶೇಷವಾಗಿ ಹರಿ ಕುಂಜುÅ, ವಿಮರ್ಶಕ ಅಮಿತಾವ್‌ ಕುಮಾರ್‌, ಕವಿ ಗೀತ್‌ ತಾಯಿಲ್‌ ಹಾಗೂ ಚಿತ್ರ ನಿರ್ಮಾತೃ ರುಚಿರ್‌ ಜೋಶಿ ಇವರುಗಳು ಸೆಟಾನಿಕ್‌ ವರ್ಸಸ್‌ನ ಕೆಲವು ಭಾಗಗಳನ್ನು ವಾಚಿಸಿದರು. ಈ ಕೃತಿಯನ್ನು ನಿಷೇಧಿಸಲಾಗಿದೆಯೆಂಬುದರಿಂದ ಅವರ ಈ ಕೃತ್ಯ ಕಾನೂನಿಗೆ ವಿರುದ್ಧ.
        ಪ್ರತಿಭಟನಾಕಾರರಾಗಿ ಕಾಣಿಸಿಕೊಂಡ ಈ ಸಾಹಿತಿಗಳು ತಮ್ಮ ನಿಲುವಿಗೆ ಬದ್ಧರಾಗಿ ಸಮ್ಮೇಳನದ ಸ್ಥಳದಲ್ಲೇ ಜಗ್ಗದೆ ಉಳಿಯಬೇಕಿತ್ತು. ಆದರೆ, ಹಾಗೆ ಮಾಡದೆ ಇವರೆಲ್ಲ ದಸ್ತಗಿರಿಯಾಗಬಹುದೆಂಬ ಭೀತಿಯಿಂದ ಅಲ್ಲಿಂದ ಕಾಲ್ಕಿತ್ತರು.

        ಅಂದರೆ, ಇದ್ದಕ್ಕಿದ್ದಂತೆ ನಾಟಕದಲ್ಲಿ ಬೇರೆಯೇ ದೃಶ್ಯ ಮೂಡಿಬಂತು. ಪ್ರತಿಭಟನೆಯ ದ್ಯೋತಕವಾಗಿ ನಡೆಯುತ್ತಿದ್ದ ಪ್ರದರ್ಶನ ಕ್ಷುಲ್ಲಕವಾಗಿ, ಬಹುತೇಕ ಹದಿವಯಸ್ಕರ ಹಾರಾಟವಾಗಿ ತೋರಿಬಂತು. ಹೇಡಿತನದ ನಡೆಯಾಗಿ ಕಂಡುಬಂತು. ಪ್ರತಿಭಟನೆಯ ರಾಜಕೀಯಕ್ಕೆ ಪೂರಕ ಕೊಡುಗೆ ಕೊಡಬೇಕಿದ್ದ ಅವರು ತಮ್ಮನ್ನೇ ಹಾಸ್ಯಾಸ್ಪದ ವಸ್ತುಗಳನ್ನಾಗಿಸಿಕೊಂಡರು. ಸಾಹಿತ್ಯದ ತಾರ್ಕಿಕತೆ ಹಾಗೂ ಪ್ರತಿಭಟನೆಯ ವ್ಯಾಕರಣಕ್ಕೆ ಅವುಗಳದೇ ಆದ ಪ್ರತ್ಯೇಕ ನಿರೀಕ್ಷೆಗಳಿರುತ್ತವೆ. ಪ್ರತಿಭಟನೆಗೆ ತನ್ನದೇ ಸಂಕೇತ ಭಾಷೆಯಿದೆ; ಶಿಷ್ಟ ನಡವಳಿಕೆಗಳ ಸಂಹಿತೆಯಿದೆ. ಅದು ನಿರೀಕ್ಷಿಸುವುದು ದೃಢ ಸಂಕಲ್ಪ ಹಾಗೂ ಧೈರ್ಯವನ್ನು, ಸಂದೇಶಗಳಲ್ಲಿನ ಸ್ವಷ್ಟತೆಯನ್ನು. ಆದರೆ ಜೈಪುರದಲ್ಲಿ ನಡೆದ ಪ್ರತಿಭಟನೆಗೆ ಸತ್ಯಾಗ್ರಹದ ನಿಯಮಾವಳಿಯೆಂಬುದು ಇರಲಿಲ್ಲ. ಅಲ್ಲದೆ ಅದು ಅನ್ಯಾಯದ ಕಾನೂನನ್ನು ಭಂಗಿಸಿ ದಸ್ತಗಿರಿಯಾಗಿ ಜೈಲು ಸೇರಬೇಕೆಂಬ ಸಂಕಲ್ಪದ ಅಸಹಕಾರ ಚಳವಳಿಯೂ ಆಗಿರಲಿಲ್ಲ. ಅದೊಂದು ಗಂಭೀರ ಚಳವಳಿಯಾಗಬಲ್ಲಂಥ ಸಾಧ್ಯತೆಗಳಿದ್ದವು. ಒಬ್ಬ ಥೋರೋ, ಒಬ್ಬ ಗಾಂಧಿ ಅಥವಾ ಒಬ್ಬ ಸೊಲ್ಸೆನಿತ್ಸಿನ್‌ ಅಂದು ಜೈಲಿಗೆ ಹೋಗಲೂ ಸಿದ್ಧರಿದ್ದರು. ಕುಂಜುÅ ಹಾಗೂ ಅಮಿತಾವ್‌ ಕುಮಾರ್‌ ಹಾಗೆ ಮಾಡಿದ್ದಲ್ಲಿ ಜನರ ಕಣ್ಣಲ್ಲಿ ಅವರ ಬಗೆಗಿನ ಗೌರವ ಕೊಂಚ ಹೆಚ್ಚಿರುತ್ತಿತ್ತು. ಹಾಗೆ ಮಾಡದೆ ಅವರು ಕೇವಲ ಜನರ ಲಕ್ಷ್ಯ
        ಸೆಳೆಯಬೇಕೆಂಬ ತುಡಿತದ, ವೇದಿಕೆ - ವರಾತದ ಜೀವಿಗಳಾಗಿ ಕಂಡುಬಂದರು. ಇದಕ್ಕಿಂತಲೂ ಕೆಡುಕಿನ ಸಂಗತಿಯೆಂದರೆ, ಅವರು ಇಂಗ್ಲಿಷ್‌ ಮಾತನಾಡುವ ಪ್ರತಿಷ್ಠಿತರ ಸಂಸ್ಕೃತಿಯ ಹಾಗೂ ಪ್ರಾದೇಶಿಕ ಸಂಸ್ಕೃತಿಯ ಮಧ್ಯೆ ತೂಗುವ ಮಾದರಿಗಳಿಗೆ ಜೀವತುಂಬುವವರಂತಿದ್ದರು. ಸಾಹಿತ್ಯದ ಕೆಲಸ, ಸಿದ್ಧಮಾದರಿಗಳನ್ನು ಮುರಿದು ಹಾಕುವುದೇ ಹೊರತು ಅವುಗಳಿಗೆ ಜೀವ ತುಂಬುವುದಲ್ಲ.

        ಈ ಪ್ರತಿಭಟನಕಾರರು ಬಹುಶಃ ಸಂಘಟಕರ ಸೂಚನೆ ದೊರೆತವರಂತೆ ಜೈಪುರದಿಂದ ಕಾಲ್ಕಿತ್ತದ್ದು ಒಂದು ಹುಡುಗಾಟದ ನಡೆಯಾಗಿಯೇ ಕಂಡುಬಂದಿದೆ. ಧೈರ್ಯವೆನ್ನುವುದು ಕೇವಲ ಶ್ರವ್ಯ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಮೆರೆಯುವವರಲ್ಲಿರುವ ಮನಃಸ್ಥಿತಿಯಷ್ಟೇ ಅಲ್ಲ. ವಾಕ್‌ ಸ್ವಾತಂತ್ರ್ಯವನ್ನು ಸಮರ್ಥಿಸುವ ಅಥವಾ ಮೂಲಭೂತವಾದವನ್ನು ಪ್ರತಿಭಟಿಸುವ ನಡೆಯಾಗಿ ಸಾರ್ಥಕಗೊಳ್ಳಬೇಕಿದ್ದ ಪ್ರದರ್ಶನವೊಂದು ಕೇವಲ ಬೊಗಳೆ ಮಾತುಗಳ, ಬರಿದೆ ಭಾವೋದ್ರೇಕದ, ಹುರುಳಿಲ್ಲದ ಹಗುರು ಪ್ರದರ್ಶನವಾಗಿ ಮಾರ್ಪಟ್ಟಿತು.

        ಕುಂಜುÅ ಅವರ ನಡವಳಿಕೆಯನ್ನು ಒಬ್ಬ ತೀಸ್ತಾ ಸೀತಲ್ವಾಡ್‌, ಒಬ್ಬ ಅರುಣಾರಾಯ್‌ ಅಥವಾ ಒಬ್ಬ ಮೇಧಾ ಪಾಟ್ಕರ್‌ ಅವರ ನಡೆಗಳೊಂದಿಗೆ ಮುಖಾಮುಖೀಯಾಗಿಸಿ ನೋಡಿ. ಸೀತಲ್ವಾಡ್‌, ಅರುಣಾರಾಯ್‌, ಮೇಧಾ ಪಾಟ್ಕರ್‌ ಇವರುಗಳೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಲ್ಲಿ ಇದು ವಿಭಿನ್ನ ಸಂದೇಶವೊಂದನ್ನು ರವಾನಿಸುವ ಸಾಧ್ಯತೆಯಿತ್ತು. ಆ ಸಂದೇಶದಲ್ಲೊಂದು ಧೈರ್ಯದ ಅಂಶವಿರುತ್ತಿತ್ತು.
        ಸೌಂದರ್ಯ ಶಾಸ್ತ್ರದ ನೈತಿಕತೆಯ ಹಾಗೂ ರಾಜಕಾರಣದ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಮೊನ್ನೆ ನಡೆದ ಸೆಟಾನಿಕ್‌ ವರ್ಸಸ್‌ನ ವಾಚನ ಒಂದು ಹುಸಿ ಹುಡುಗಾಟದ, ಅತಿ ಪ್ರಚಾರ ದಕ್ಕಿಸಿಕೊಂಡ ಕಾರ್ಯಕ್ರಮ ಎನ್ನಬೇಕು.

        ಕೇವಲ ಮೇಲೊ¤àರಿಕೆಯ ಈ ಪ್ರದರ್ಶನ ಪ್ರಸಂಗವನ್ನು ಅಣ್ಣಾ ಹಜಾರೆಯಂಥವರ ಪ್ರತಿಭಟನಾ ಪ್ರದರ್ಶನಗಳಿಗೆ ಹೋಲಿಸಿ ನೋಡೋಣ. ಅಣ್ಣಾ ಹಜಾರೆ ಅವರು ಕುಂಜುÅ ಅಥವಾ ಕುಮಾರ್‌ ಮತ್ತಿತರರಷ್ಟು ಉದಾರರಾಗಿಲ್ಲದಿರಬಹುದು. ಆದರೆ, ಅವರು ತಮ್ಮ ನಿಲುವಿಗೆ ಬದ್ಧರಾದವರು. ಅವರ ಪಾಲಿಗೆ ಅವರ ಮಾತೇ ಅವರ ಕರಾರು ಪತ್ರ. ಕುಮಾರ್‌ ಹಾಗೂ ಕುಂಜುÅ ತಮ್ಮ ಮಾತಿನ ಮರ್ಯಾದೆಯನ್ನು ಗಾಳಿಗೆ ತೂರಿದರು. ನಿಜ ಇಂಥ ಕಸರತ್ತುಗಳಿಂದ ಹಜಾರೆ ಚಳವಳಿಗಳಂಥವನ್ನು ಎಂದೂ ಸೃಷ್ಟಿಸಲಾರೆವು.

        ಈ ಇಬ್ಬರು ಸಾಹಿತ್ಯ ಕೇಸರಿಗಳಿಗೆ ನನ್ನದೊಂದು ಕಿವಿ ಮಾತಿದೆ - ಭಾರತದ ಎಲ್ಲೆಡೆಗಳಲ್ಲೂ ಚರ್ಚಾ ವೇದಿಕೆಗಳಿವೆ. ಕರ್ನಾಟಕದ ಹೆಗ್ಗೊàಡಿನಲ್ಲಿ ಅದ್ಭುತವಾದ ರಂಗತಂಡವೊಂದಿದೆ. ಇದು ಪ್ರತಿವರ್ಷವೂ ಜೈಪುರ ಸಾಹಿತ್ಯೋತ್ಸವವನ್ನು ಮಟ್ಟ ಹಾಕಬಲ್ಲಂಥ ಗಂಭೀರ ರಂಗೋತ್ಸವ - ಸಾಹಿತ್ಯೋತ್ಸವವನ್ನು ಏರ್ಪಡಿಸುತ್ತ ಬಂದಿದೆ ! ರಂಗಭೂಮಿ ಹಾಗೂ ಸಾಹಿತ್ಯ ಪ್ರೀತಿಯುಳ್ಳ ಸಮುದಾಯವೊಂದು ಇಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿ ಸೃಷ್ಟಿಯಾಗುವ ಸಾಹಿತ್ಯ ಕೃತಿಗಳ ಬಗೆಗಿನ ಗಂಭೀರ ವಿಚಾರಗೋಷ್ಠಿಗಳನ್ನು ನಡೆಸುತ್ತದೆ. ಆಶೀಷ್‌ ನಂದಿ ಹಾಗೂ ಯು.ಆರ್‌. ಅನಂತಮೂರ್ತಿಯವರಂಥ ಲೇಖಕರು ಆಗಾಗ ಹೆಗ್ಗೊàಡಿಗೆ ಬರುತ್ತಿರುತ್ತಾರೆ, ಅಲ್ಲಿ ಸಾಹಿತ್ಯ ಹಾಗೂ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸುತ್ತಾರೆ.
        ದಯವಿಟ್ಟು ಒಮ್ಮೆ ಹೆಗ್ಗೊàಡಿಗೆ ಬನ್ನಿ. ಇಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಹಿತ್ಯ ಹೇಗೆ ಒಗ್ಗೂಡಿ ಕಾರ್ಯಾಚರಿಸುತ್ತವೆಂಬುದನ್ನು ನೋಡಿ.

        ಸೆನ್ಸಾರ್‌ಶಿಪ್‌ ಅಥವಾ ಪುಸ್ತಕ ನಿಷೇಧದ ವಿರುದ್ಧದ ಹೋರಾಟ ಕೇವಲ ವಾಗಾಡಂಬರವಲ್ಲ, ಅದೊಂದು ವಾಸ್ತವಿಕತೆಯ ವಿಶಾಲ ಬಯಲಲ್ಲಿ ಮಾತ್ರ ಪ್ರಯೋಗ ಕಾಣಲು ಸಾಧ್ಯವಿರುವ ತುಂಬು ಜೀವಂತಿಕೆಯ ರಂಗಪ್ರದರ್ಶನ ಎಂಬ ಸತ್ಯವನ್ನು ಇಲ್ಲಿ ನಡೆಯುವ ಚರ್ಚೆ-ಸಂವಾದಗಳು ನಿಮಗೆ ಮನಗಾಣಿಸಿಯಾವು. ಪ್ರತಿಭಟನೆ ಈ ಡಿಜಿಟಲ್‌ ಎದೆಗಾರಿಕೆಯ ಯುಗದಲ್ಲೂ ಮೂರ್ತರೂಪ ಪಡೆಯಬೇಕಾದ ಅಗತ್ಯವಿದೆ. ಸಾಹಿತ್ಯ ಕೇಸರಿಗಳು ಯಾವಾಗಲೂ ರಾಜಕೀಯ ಕೇಸರಿಗಳಾಗಿರಲು ಸಾಧ್ಯವಿಲ್ಲವೆಂಬುದು ಸುಸ್ಪಷ್ಟ .

        ದಯವಿಟ್ಟು ಅರ್ಥ ಮಾಡಿಕೊಳ್ಳಿ - ನಾನು ನಿಮ್ಮ ಬರಹವನ್ನು ಮೆಚ್ಚಿಕೊಳ್ಳಬಹುದೇನೋ ನಿಜ. ಆದರೆ, ಬದುಕು ಹಾಗೂ ಸಾಹಿತ್ಯ ಕೃತಿ ರಾಜಕಾರಣದಿಂದ ಪ್ರತ್ಯೇಕಗೊಂಡು ನಿಲ್ಲುತ್ತವೆ/ನಿಲ್ಲಬೇಕು ಎಂದು ನನಗೆ ಅನ್ನಿಸುವುದಿಲ್ಲ. ಪ್ರತಿಭಟನೆಯೆಂಬುದು ಗ್ರಂಥವೊಂದರ ಬದುಕು ಹಾಗೂ ಬದುಕಿನ ಗ್ರಂಥ ಎರಡೂ ಸಂಗಮಿಸುವ ಸ್ಥಾನ. ನನ್ನ ಈ ಅಭಿಪ್ರಾಯ ತಪ್ಪಿದ್ದರೆ ಅದನ್ನು ಹಾಗೆಂದು ಋಜುಪಡಿಸುವ; ಸಾಹಿತ್ಯ ಹಾಗೂ ಪ್ರಜಾಪ್ರಭುತ್ವಗಳ ನಡುವಣ ಸಂವಾದಕ್ಕೆ ನಿಮ್ಮದೂ ದನಿಗೂಡಿಸುವ ಅವಕಾಶ ಇದೋ ನಿಮ್ಮ ಮುಂದಿದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus