ಕಾರ್ಕಳ/ಕಾಪು: ನಾಯಿಯನ್ನು ಬೇಟೆಯಾಡಿಕೊಂಡು ಹೋಗುವಾಗ ಚಿರತೆಯೊಂದು ನಾಯಿಯೊಂದಿಗೆ ಬಾವಿಗೆ ಬಿದ್ದ ಘಟನೆ ತಾಲೂಕಿನ ಸೂಡಾ ಗ್ರಾಮದಲ್ಲಿ ಸೆ. 5ರಂದು ಸಂಭವಿಸಿದೆ.ಗ್ರಾಮದ ಪಂಜರ್ಲಪಾದೆ ಬಳಿಯ ಪೂವಪ್ಪ ಸಪಲಿಗ ಅವರ ಮನೆಗೆ ರಾತ್ರಿ 1 ಗಂಟೆ ಸುಮಾರಿಗೆ ಆಗಮಿಸಿದ ಚಿರತೆ ಕರುವಿಗಾಗಿ ಕೊಟ್ಟಿಗೆ ಕಡೆಗೆ ಹೋಗುವಾಗ ನಾಯಿ ಎಚ್ಚರಗೊಂಡು ಬೊಗಳಲು ಆರಂಭಿಸಿತು. ಈ ಸಂದರ್ಭದಲ್ಲಿ ಚಿರತೆ ನಾಯಿಯನ್ನು ಹಿಡಿಯಲು ಪ್ರಯತ್ನಿಸಿದಾಗ ನಾಯಿ ತಪ್ಪಿಸಿಕೊಂಡು ಓಡಿ ಮನೆಯ ಅಂಗಳದ ಆವರಣವಿಲ್ಲದ ಬಾವಿಗೆ ಬಿದ್ದಿತು. ನಾಯಿಯನ್ನು ಅನುಸರಿಸಿದ ಚಿರತೆಯೂ ಬಾವಿಗೆ ಬಿತ್ತು. ನಾಯಿ ಬೊಗಳಿದ ಶಬ್ದ ಕೇಳಿ ಮನೆಯವರು ಬಾವಿಯಲ್ಲಿ ನೋಡಿದಾಗ ಬಾವಿಯಲ್ಲಿದ್ದ ಗುಹೆಯಲ್ಲಿ ಎರಡೂ ಪ್ರಾಣಿಗಳು ಇದ್ದುವು.ಬೆಳಗ್ಗೆ ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಆಗಮಿಸಿ ಬಲೆ ಹಾಕಿ ಚಿರತೆಯನ್ನು ಹಿಡಿದು ಪಂಜರದ ಗಾಡಿಯಲ್ಲಿ ತಗೆದುಕೊಂಡು ಹೋಗಿ ಕಾಡಿಗೆ ಬಿಟ್ಟರು.ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆಯೊಂದು ಅಡ್ಡಾಡುತ್ತಿದ್ದು, ಎರಡು ಕರು ಹಾಗೂ ಹಲವಾರು ನಾಯಿಗಳು ಇದಕ್ಕೆ ಬಲಿಯಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.
naayige Enaaytu?
This is not Cheeta This is Leopard Right..? Chiratey alla Chitte Huli
chirate ok naayi?
Look forward to more such stories