Saturday, May 25, 2013
Last Updated: 4:32:03 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
  • ಉದಯವಾಣಿ
  • ವೆ ಬ್
  • ಹುಡುಕಿ
image
  • ಮುಖ್ಯಾಂಶಗಳು:   
  • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

    'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Aug 08, 2012 | Comments 4 | ShareShare
------------------------------------------------------------------------------------
ಅದು ಸ್ವಾವಲಂಬನೆಯ ಶೈಲಿ


ಇಂಗ್ಲೆಂಡ್‌ ಪ್ರವಾಸದ ಸಂದರ್ಭದಲ್ಲಿ ಲಂಡನ್‌ನಲ್ಲಿ ನಾವು ಉಳಿದುಕೊಂಡದ್ದು ವೈಎಂಸಿಎ ಇಂಡಿಯನ್‌ ಸ್ಟೂಡೆಂಟ್ಸ್‌ ಹಾಸ್ಟೆಲ್‌ನಲ್ಲಿ. ನಾನು ಮತ್ತು ಅಶೋಕ್‌ ಶೇಟ್‌ ಇಲ್ಲಿಗೆ ಬರುವ ಮಾಹಿತಿ ನೀಡಿದಾಗಲೇ ಆತಿಥೇಯ ಡಾ| ಅರವಿಂದ್‌ ಅವರು ಈ ಕೊಠಡಿಯನ್ನು ಕಾದಿರಿಸಿದ್ದರು.

ಥೇಮ್ಸ್‌ ನದಿಯ ಲಂಡನ್‌ ಬ್ರಿಜ್‌ನಲ್ಲಿ ಲೇಖಕ

ಚಿತ್ರ: ಅಶೋಕ್‌ ಶೇಟ್‌

ಹಾಸ್ಟೆಲ್‌ನ ಸ್ವರೂಪ ಭಾರತೀಯ ಪರಂಪರೆಯನ್ನು ನೆನಪಿಸುವ ರೀತಿಯಲ್ಲಿತ್ತು. ಕೊಠಡಿ ಸಹಿತ ವ್ಯವಸ್ಥೆಗಳೆಲ್ಲ ಪೂರ್ಣ ಆಂಗ್ಲೀಯವಾದರೂ ಬಹುಸಂಖ್ಯೆಯ (ವಿಶೇಷವಾಗಿ ಕರ್ನಾಟಕದ) ಭಾರತೀಯ ಪ್ರವಾಸಿಗರು ಇಲ್ಲಿ ತಂಗುತ್ತಾರೆ.  ವೈಎಂಸಿಎ ಮಂಗಳೂರು ಘಟಕ ಕೂಡಾ ಅನೇಕ ಸಮಾಜಮುಖೀ ಚಟುವಟಿಕೆಗಳಿಂದ ಪ್ರಸಿದ್ಧವಾಗಿದೆ. ವೈಎಂಸಿಎ ಸಂಘಟನೆಯನ್ನು 1844ರಲ್ಲಿ ಸರ್‌ಜಾರ್ಜ್‌ ವಿಲಿಯಮ್ಸ್‌ ಅವರು ಇಂಗ್ಲೆಂಡಿನಲ್ಲಿ ಸ್ಥಾಪನೆ ಮಾಡಿದ್ದರು. ಯುವಜನತೆಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನದ ಆಶಯದ ಈ ಅಭಿಯಾನ ಈಗ 130 ದೇಶಗಳಲ್ಲಿ ಪಸರಿಸಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಇಲ್ಲಿ ಹಾಸ್ಟೆಲ್‌ ಸೌಲಭ್ಯವಿದೆ. ಪ್ರವಾಸಿಗರಿಗೆ ಪ್ರತ್ಯೇಕ ವ್ಯವಸ್ಥೆಗಳಿವೆ. ಮಹಾತ್ಮಾಗಾಂಧಿಯವರ ಹೆಸರಿನ ಬೃಹತ್‌ ಸಭಾಂಗಣವಿದೆ. ಭಾರತೀಯ ನಾಯಕರ ಭಾವಚಿತ್ರಗಳಿವೆ.

 

ಭವ್ಯ ಪರಂಪರೆಯ ನಗರ ಲಂಡನ್‌

ಕೊಠಡಿಗಳ ಬಾಡಿಗೆ ಇತರೆಡೆಗೆ ಹೋಲಿಸಿದರೆ ಇಲ್ಲಿ ಕಡಿಮೆ ಎಂದೇ ಹೇಳಬಹುದು. ಸ್ವಯಂಸೇವಾ ಸಂಸ್ಥೆಯಾದ್ದರಿಂದ ಈ ಕೊಡುಗೆ. ಸೆಂಟ್ರಲ್‌ ಲಂಡನ್‌ನ ಹೃದಯಭಾಗದಲ್ಲಿರುವುದರಿಂದ ಓಡಾಟಕ್ಕೂ ಅನುಕೂಲ. ಕೊಠಡಿಯ ಸೌಲಭ್ಯದೊಂದಿಗೆ ಬೆಳಗ್ಗಿನ ಉಪಾಹಾರ ಮತ್ತು ರಾತ್ರಿಯ ಭೋಜನ ಶುಲ್ಕರಹಿತವಾಗಿ ದೊರೆಯುವುದು ಇಲ್ಲಿನ ಇನ್ನೊಂದು ವಿಶೇಷ. ಇಂಟರ್‌ನೆಟ್‌, ಲಾಂಡ್ರಿ, ದೂರವಾಣಿ ಇತ್ಯಾದಿಗಳೆಲ್ಲ ಕನಿಷ್ಠ ಶುಲ್ಕ ಪಾವತಿಯೊಂದಿಗೆ ಇಲ್ಲಿ ದೊರೆಯುತ್ತದೆ.

ಐತಿಹಾಸಿಕ ಹಿನ್ನೆಲೆಯ ಲಂಡನ್‌

ಇಂಗ್ಲೆಂಡ್‌ ಪ್ರವಾಸದ ಸಂದರ್ಭದಲ್ಲಿ, ಯಾರಾದರೂ ಈ ಸೌಲಭ್ಯವನ್ನು ಬಳಸಿಕೊಳ್ಳಲು ಬಯಸಿದರೆ- ನಾವು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕೊಠಡಿಗಳ ಬಾಡಿಗೆ ಹೀಗಿತ್ತು: ಡಿಲಕ್ಸ್‌ ಕೊಠಡಿ- 75 ಪೌಂಡ್‌, ಸಿಂಗಲ್‌ ಡಿಲಕ್ಸ್‌- 45, ಡಬಲ್‌ ಕೊಠಡಿ- 62, ಸಿಂಗಲ್‌- 46, ಕಾಮನ್‌ ಬಾತ್‌ ಡಬಲ್‌ ಕೊಠಡಿ-40. ನಾಲ್ಕು ಹಾಸಿಗೆಗಳ ಡಾರ್ಮಿಟರ್‌- ತಲಾ 22 ಪೌಂಡ್‌ ಮತ್ತು ಹೆಚ್ಚುವರಿ ಬೆಡ್‌- 15 ಪೌಂಡ್‌. ವಿದ್ಯಾರ್ಥಿಗಳಿಗೆ ಇದರಲ್ಲಿ ಮತ್ತಷ್ಟು ರಿಯಾಯಿತಿಗಳಿವೆ. ಸಮ್ಮೇಳನ, ತರಬೇತಿ ಇತ್ಯಾದಿಗಳಿಗಾಗಿ ವಾರಕ್ಕಿಂತ ಹೆಚ್ಚು ಅವಧಿ ಉಳಿದುಕೊಳ್ಳುವವರಿಗೆ ರಿಯಾಯಿತಿ ಕೂಡ ಇದೆ.

ಮುಂದುವರಿದ ದೇಶಗಳಲ್ಲಿ ಸಾಮಾನ್ಯವಾಗಿ ಕಾರ್ಮಿಕರ ಕೊರತೆ ಇದ್ದೇ ಇರುತ್ತದೆ. ಇಂತಹ ಕೊಠಡಿ ಸೌಲಭ್ಯಗಳಲ್ಲಿ ಅಥವಾ ಹೊಟೇಲ್‌ ಕೊಠಡಿಗಳಲ್ಲಿ ರೂಮ್‌ಬಾಯ್‌ಗಳಿರುವುದಿಲ್ಲ. ಉಪಾಹಾರ ಗೃಹಗಳಲ್ಲಿ ವೇಟರ್‌ಗಳು ಇರುವುದಿಲ್ಲ. ವಸ್ತುಶಃ ಸ್ವಸಹಾಯ ಪದ್ಧತಿಯಲ್ಲಿ ಇಲ್ಲಿ ಕಾರ್ಯ ಸಾಗುತ್ತದೆ. ಹೊಟೇಲ್‌ಗ‌ಳಲ್ಲಿ ಶುಲ್ಕ ಪಾವತಿಸಿಯೇ ತಿಂಡಿತಿನಿಸು ಪಾನೀಯ ಖರೀದಿಸಬೇಕಾಗುತ್ತದೆ. ಉಳಿಕೆ ವಸ್ತುಗಳನ್ನು ಮೂಲೆಯಲ್ಲಿರುವ ಕಸದ ಬುಟ್ಟಿಗೆ ನಾವೇ ತುಂಬಿಸಬೇಕಾಗುತ್ತದೆ. ಒಂದು ರೀತಿಯಲ್ಲಿದು ಸಮಗ್ರವಾಗಿ ಸ್ವಾವಲಂಬನೆಯ ಪಾಠ ಕೂಡಾ ಹೌದು. 

ಲಂಡನ್‌ ಇಂಡಿಯನ್‌ ವೈಎಂಸಿಎ ಎದುರಿನಲ್ಲಿ ಅಶೋಕ್‌ ಶೇಟ್‌- ಲೇಖಕ ಮನೋಹರ ಪ್ರಸಾದ್‌.


ಚಿತ್ರ: ಡಾ| ಅರವಿಂದ್‌

ನಾವಿದ್ದ ವ್ಯವಸ್ಥೆಯಲ್ಲಿ ಕೊಠಡಿ ಶುಚೀಕರಣ ಇತ್ಯಾದಿ ಹಲವರ ಪಾಲಿಗೆ ದುಡಿಮೆಯ ಮಾರ್ಗವೂ ಆಗಿದೆ. ನಿರ್ದಿಷ್ಟ ಅಥವಾ ಸೂಚಿತ ಅವಧಿಯಲ್ಲಿ ಈ ಕಾರ್ಯವನ್ನು ನಡೆಸುವವರು ಬಹುತೇಕ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು. ಒಂದು ತಾಸಿಗೆ ಇಂತಿಷ್ಟು ಪೌಂಡ್‌ ಎಂಬ ಶುಲ್ಕವನ್ನು ಅವರು ಈ ಕಾರ್ಯದ ಮೂಲಕ ಪಡೆಯುತ್ತಾರೆ. ಸಂಘಸಂಸ್ಥೆಗಳನ್ನು ಆಧರಿಸಿ ಈ ಶುಲ್ಕ 4 ರಿಂದ 6 ಪೌಂಡ್‌ಗಳಷ್ಟಿರಬಹುದು. ಎರಡು ಮೂರು ತಾಸುಗಳ ದುಡಿಮೆಯಿಂದ ಅವರು ಪಾಕೆಟ್‌ಮನಿ ಮಾತ್ರವಲ್ಲ, ತಮ್ಮ ಶೈಕ್ಷಣಿಕ ವೆಚ್ಚವನ್ನು ಕೂಡಾ ಭರಿಸಿಕೊಳ್ಳುತ್ತಾರೆ.


ಬೇರೆ ಉದ್ಯೋಗಗಳಲ್ಲಿರುವವರು ಕೂಡಾ ತಮ್ಮ ಇತರ ವೆಚ್ಚಗಳಿಗಾಗಿ ಈ ರೀತಿಯ "ಪಾರ್ಟ್‌ ಟೈಂ' ಕೆಲಸವನ್ನು ಮಾಡುತ್ತಾರೆ. ಏಕೆಂದರೆ, ಇಲ್ಲಿ ಯಾವ ಕೆಲಸವನ್ನೂ ಮಾಡಿದರೂ ಅದಕ್ಕೆ ಗೌರವ ಇದೆ. ಅಂದರೆ, ಡಿಗ್ನಿಟಿ ಆಫ್‌ ಲೇಬರ್‌.


(ಮುಂದಿನ ಭಾಗ: ಬಂಕಿಂಗ್‌ ಹ್ಯಾಂ ಅರಮನೆಯಲ್ಲಿ)


 

  • Other Blogs By ಮನೋಹರ ಪ್ರಸಾದ್‌
    • ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.
    • ಯಾಣದ ಆಕರ್ಷಣೆ ಎರಡು ಬೃಹತ್‌ ಶಿಲಾರಚನೆಗಳು. ಹೆಸರು: ಭೈರಮೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಈ ಶಿಲೆಗಳು ಕಪ್ಪುವರ್ಣದ ಕ್ರಿಸ್ಟಲೈನ್‌ ಲೈಮ್‌ಸ್ಟೋನ್‌ನಿಂದ ರಚನೆಯಾಗಿವೆ. ಭೈರಮೇಶ್ವರ ಶಿಖರ 390 ಅಡಿ; ಮೋಹಿನಿ ಶಿಖರ 300 ಅಡಿ ಎತ್ತರವಿದೆ.
  • POSTED COMMENTS
  • pic

  • Oct 07, 2012
    Author: lathamadhu.bhat@gmail.com

    very useful information, waiting for more.....

  •  
  • pic

  • Oct 07, 2012
    Author: lathamadhu.bhat@gmail.com

    very useful information, waiting for more.....

  •  
  • pic

  • Oct 07, 2012
    Author: lathamadhu.bhat@gmail.com

    very useful information, waiting for more.....

  •  
  • pic
  • Indian YMCA
    Aug 21, 2012
    Author: prakash.samaga@gmail.com

    Nice write up sir... It is good to know specialties of different countries... Thank you.

  • Blog Archive
Keywords:   
From:
To:
  • POST YOUR COMMENTS
  • Name *
  •  
  • Subject
  • Email ID *
  •  
  • Comment *
  • Comments are moderated and will not be posted if found irrelevant or offensive.
  • Copyright @ 2009 Udayavani.All rights reserved.
  • Designed & Hosted By 4cplus