Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇಂಗ್ಲಂಡ್‌ ತಂಡಕ್ಕೆ ಬೊಪಾರ ಸೇರ್ಪಡೆ
    • ಜೊನಾಥನ್‌ ಬದಲಿಗೆ 27ರ ಹರೆಯದ ಎಸೆಕ್ಸ್‌ನ ಪ್ರಮುಖ ತಾರೆ ಬೊಪಾರ ಅವರನ್ನು ಸೇರಿಸಿಕೊಳ್ಳಲಾಗಿದೆ.

      • Udayavani | Jul 15, 2012

        ಓವಲ್‌ : ಮುಂದಿನ ಗುರುವಾರದಿಂದ ಓವಲ್‌ನಲ್ಲಿ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ರವಿವಾರ ಇಂಗ್ಲಂಡ್‌ ತಂಡವನ್ನು ಪ್ರಕಟಿಸಲಾಗಿದೆ. 13 ಸದಸ್ಯರ ತಂಡಕ್ಕೆ ರವಿ ಬೊಪಾರ ಅವರನ್ನು ಸೇರಿಸಿಕೊಳ್ಳಲಾಗಿದೆ.

        ಈ ವಾರದ ಆರಂಭದಲ್ಲಿ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು 4-0 ಅಂತರದಿಂದ ಗೆಲ್ಲುವಲ್ಲಿ ಪಾತ್ರ ವಹಿಸಿದ್ದ ಬೊಪಾರ ಅವರಿಗೆ ಅವಕಾಶ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ ಅವರು 182 ರನ್‌ ಮತ್ತು 4 ವಿಕೆಟ್‌ ಪಡೆದಿದ್ದರು.

        ವೆಸ್ಟ್‌ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿನಲ್ಲಿ ನೀರಸ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಆಟಗಾರ ಜೊನಾಥನ್‌ ಬೇರ್‌ಸ್ಟೊ ಬದಲಿಗೆ 27ರ ಹರೆಯದ ಎಸೆಕ್ಸ್‌ನ ಪ್ರಮುಖ ತಾರೆ ಬೊಪಾರ ಅವರನ್ನು ಸೇರಿಸಿಕೊಳ್ಳಲಾಗಿದೆ.

        ಸದ್ಯ ಇಂಗ್ಲಂಡ್‌ ವಿಶ್ವದ ನಂಬರ್‌ ವನ್‌ ಟೆಸ್ಟ್‌ ತಂಡವಾಗಿದೆ. ಆದರೆ ಈ ಮೂರು ಪಂದ್ಯಗಳ ಸರಣಿಯನ್ನು ಒಂದು ವೇಳೆ ದಕ್ಷಿಣ ಆಫ್ರಿಕಾ ಕ್ಲೀನ್‌ಸಿÌàಪ್‌ ಮೂಲಕ ಗೆದ್ದರೆ ಅದು ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.

        ಟೆಸ್ಟ್‌ ತಂಡಕ್ಕೆ ಮರಳಲು ಬೊಪಾರ ಬಹಳಷ್ಟು ಶ್ರಮ ವಹಿಸಿದ್ದಾರೆ. ಅವರು ಈ ಬೇಸಗೆಯಲ್ಲಿ ಇನ್ನೂ ಯಾವುದೇ ಟೆಸ್ಟ್‌ ಆಡಿಲ್ಲ ಎಂದು ರಾಷ್ಟ್ರೀಯ ಆಯ್ಕೆಗಾರ ಜೆಫ್ ಮಿಲ್ಲರ್‌ ಹೇಳಿದ್ದಾರೆ.

        ಕಳೆದ ಕೆಲವು ತಿಂಗಳಿಂದ ನಾವು ಎಲ್ಲ ಪ್ರಕಾರಗಳ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದೇವೆ ಮತ್ತು ವೆಸ್ಟ್‌ಇಂಡೀಸ್‌ ಮತ್ತು ಆಸ್ಟ್ರೇಲಿಯ ವಿರುದ್ಧ ಸರಣಿ ಜಯಿಸಿದ್ದೇವೆ ಮತ್ತು ಕೆಲವು ತಿಂಗಳ ಏಕದಿನ ಕ್ರಿಕೆಟ್‌ನ ಬಳಿಕ ನಾವು ಟೆಸ್ಟ್‌ ಸರಣಿಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಮಿಲ್ಲರ್‌ ತಿಳಿಸಿದರು.

        ಈ ಮೂರು ಪಂದ್ಯಗಳ ಸರಣಿಯನ್ನು ಗೆಲ್ಲಬೇಕಾದರೆ ನಾವು ಅಮೋಘ ಆಟದ ಪ್ರದರ್ಶನ ನೀಡಬೇಕೆಂದು ತಿಳಿದಿದೆ. ಮೊದಲ ಟೆಸ್ಟ್‌ನಲ್ಲಿ ಉತ್ತಮ ನಿರ್ವಹಣೆ ನೀಡುವ ಮೂಲಕ ಇದನ್ನು ಸಾಬೀತುಪಡಿಸಬೇಕಾಗಿದೆ ಎಂದವರು ವಿವರಿಸಿದರು.

        ಮೊದಲ ಟೆಸ್ಟ್‌ಗೆ ಇಂಗ್ಲಂಡ್‌ ತಂಡ:

        ಆ್ಯಂಡ್ರೂé ಸ್ಟ್ರಾಸ್‌, ಅಲಸ್ಟೇರ್‌ ಕುಕ್‌, ಜೊನಾಥನ್‌ ಟ್ರಾಟ್‌, ಕೆವಿನ್‌ ಪೀಟರ್‌ಸನ್‌, ಇಯಾನ್‌ ಬೆಲ್‌, ರವಿ ಬೊಪಾರ, ಮ್ಯಾಟ್‌ ಪ್ರಯರ್‌, ಸ್ಟುವರ್ಟ್‌ ಬ್ರಾಡ್‌, ಟಿಮ್‌ ಬ್ರೆಸ್ನನ್‌, ಗ್ರೇಮ್‌ ಸ್ವಾನ್‌, ಜೇಮ್ಸ್‌ ಆ್ಯಂಡರ್ಸನ್‌, ಸ್ಟೀವನ್‌ ಫಿನ್‌, ಗ್ರಹಾಂ ಓನಿಯನ್ಸ್‌.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus