Wednesday, May 22, 2013
Last Updated: 3:22:11 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮದುವೆ ಎಂಬುದೊಂದು ಖಾಸಗಿ ಸಂಗತಿ
      • Udayavani | Jul 16, 2012

        ಆಧಾರ : ಚಿನುವಾ ಅಚೆಬೆಯ 

        ಮ್ಯಾರೇಜ್‌ ಇಸ್‌ ಎ ಪ್ರçವೇಟ್‌ ಅಫೇರ್‌

        ಕನ್ನಡ ರೂಪ : ಗುಬ್ಬಚ್ಚಿ ಸತೀಶ್‌

        ನÇÉೆ ನೇನೆ ತನ್ನನ್ನು ಪ್ರೀತಿಸುತ್ತಿದ್ದ ನಲ್ಲ ಎಮೇಕಾನಿಗೆ, ""ನಮ್ಮ ಮದುವೆಯ ವಿಷಯ ನಿನ್ನ ತಂದೆಗೆ ತಿಳಿಸಿದ್ದೀಯಾ?' ಎಂದು ಕೇಳಿದಾಗ ಅವನು, ""ರಜೆಗೆ ಹಳ್ಳಿಗೆ ಹೋದಾಗ ತಿಳಿಸುತ್ತೇನೆ' ಎನ್ನುತ್ತಾನೆ. ""ರಜೆ ಬರುವುದಕ್ಕೆ ಇನ್ನೂ ತುಂಬಾ ದಿನಗಳಿವೆಯಲ್ಲ...' ಅವಳ ಚಿಂತನೆ. ಯೋಚಿಸುತ್ತ ಕುಳಿತ ಎಮೇಕಾ, "" ಈ ವಿಷಯ ನಮ್ಮ ತಂದೆಗೆ ಸಂತಸವನ್ನುಂಟು ಮಾಡುತ್ತದೆ ಎಂದು ಭಾವಿಸಬಹುದೆ?"" ಎನ್ನುತ್ತಾನೆ. ""ಹೌದು, ಅವರಿಗೆ ಸಂತೋಷವಾಗಲೇಬೇಕು. ಯಾಕಾಗಬಾರದು?' ಎಂಬ ಪ್ರಶ್ನೆ ನೇನೆಯದು. ಅದಕ್ಕವನು, ""ನೀನು ನಿನ್ನ ಜೀವನವನ್ನೆÇÉಾ ಪಟ್ಟಣದÇÉೇ ಬಾಳಿದ್ದೀಯಾ? ನಿನಗೆ ದೇಶದ ಹಳ್ಳಿಗಳಲ್ಲಿ ವಾಸಿಸುವ ಜನರ ಬಗ್ಗೆ ಅಷ್ಟಾಗಿ ತಿಳಿದಿಲ್ಲ' ಎಂದು ಹೇಳಿ ಸುಮ್ಮನಿರಲು ಪ್ರಯತ್ನಿಸುತ್ತಾನೆ.

        ""ನೀನು ಅದನ್ನೇ ಯಾವಾಗಲೂ ಹೇಳುತ್ತೀಯಾ. ಆದರೆ, ತಮ್ಮ ಮಗನ ಮದುವೆ ನಿಶ್ಚಿತವಾದರೆ ಯಾರೂ ದುಃಖೀಸುವುದಿಲ್ಲ...ಅಲ್ಲವೇ?' ಎಂದು ಕೇಳುತ್ತಾಳೆ.

        ""ಹೌದು. ಆದರೆ, ಮದುವೆ ಅವರಿಂದ ನಿಶ್ಚಿತವಾಗಿಲ್ಲದಿದ್ದರೆ ಖಂಡಿತ ದುಃಖೀಸುತ್ತಾರೆ. ನಮ್ಮ ವಿಷಯದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆಯಿದೆ. ಯಾಕೆಂದರೆ, ನೀನು ನಮ್ಮ ಇಬೋ (ಐಚಿಟ)  ಜನಾಂಗಕ್ಕೆ ಸೇರಿದವಳಲ್ಲ .

        ಅವನು ಅದೆಷ್ಟು ಗಂಭೀರನಾಗಿ ಹೇಳಿದೆನೆಂದರೆ, ನಾಯಕಿಗೆ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ನಗರದ ಕಾಸೊ¾ಪಾಲಿಟಿನ್‌ ಪರಿಸರದಲ್ಲಿ ಅವಳಿಗೆಂದೂ ಜನಾಂಗವೊಂದು ಮದುವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅನ್ನಿಸಿರಲೇ ಇಲ್ಲ. ಅದನ್ನು ತಮಾಷೆೆಯೆಂದೇ ತಿಳಿದಿದ್ದಳು.
        ಕಡೆಗೆ ಅವಳೇ ಸಮಾಧಾನದಿಂದ, ""ಅದೊಂದೇ ಕಾರಣದಿಂದ ಅವರು ನಮ್ಮ ಮದುವೆಯನ್ನು ತಿರಸ್ಕ‌ರಿಸುತ್ತಾರೆಂದು ನೀನು ಹೇಳುತ್ತಿಲ್ಲವಷ್ಟೇ? ನಿಮ್ಮ ಜನಾಂಗದವರು ಬಹಳ ಮೆದು ಮನಸ್ಸಿನವರು ಎಂದು ತಿಳಿದಿದ್ದೇನೆ' ಎಂದಳು.

        ""ಹೌದು, ನಮ್ಮ ಜನ ಮೆದು ಮನಸ್ಸಿನವರೇನೋ ನಿಜ. ಆದರೆ, ಮದುವೆಯ ವಿಷಯಕ್ಕೆ ಬಂದಾಗ, ಅದು ಅಷ್ಟೊಂದು ಸರಳವಲ್ಲ. ಇದು ಇಬೋಗಳಿಗೆ ಮಾತ್ರ ಸೀಮಿತವಲ್ಲ. ನಿಮ್ಮ ತಂದೆ ಜೀವಂತವಾಗಿದ್ದು, ನಮ್ಮ ಜನರ ನಡುವೆಯೇ ಬದುಕಿದ್ದರೆ, ಅವರೂ ನಮ್ಮ ತಂದೆಯಂತೆಯೇ ಇರುತ್ತಿದ್ದರು'

        ""ನನಗೆ ಗೊತ್ತಿಲ್ಲ. ಏನಾದರಾಗಲಿ, ನಿಮ್ಮ ತಂದೆ ನಿನ್ನನ್ನು ತುಂಬಾ ಇಷ್ಟ ಪಡುತ್ತಾರೆ. ನಿನ್ನನವರು ಖಂಡಿತ ಕ್ಷಮಿಸುತ್ತಾರೆ. ಆದುದರಿಂದ ಒಳ್ಳೆಯ ಹುಡುಗನಾದ ನೀನು ಅವರಿಗೊಂದು ಸುಂದರ ಪತ್ರವನ್ನು ಈಗಲೇ ಬರೆದುಬಿಡು'

        ""ಒಂದು ಪತ್ರದ ಮೂಲಕ ಅವರಿಗೆ ವಿಷಯವನ್ನು ತಿಳಿಸುವುದು ಅಷ್ಟು ಸಮಂಜಸವಲ್ಲ. ಅದು ಅವರಿಗೆ ಶಾಕ್‌ ಕೂಡ ನೀಡಬಹುದು'

        ""ಆಗಲಿ ಬಿಡು. ನೀನು ಸರಿಯಾಗಿ ಸಿದ್ಧನಾಗು. ನಿನ್ನ ತಂದೆ ನಿನಗೇ ಗೊತ್ತು'

        ಆ ಸಂಜೆ ಮನೆಗೆ ನಡೆಯುತ್ತ ಬಂದ ಎಮೇಕಾ ತನ್ನ ತಂದೆ ಒಕೋಕೆಯನ್ನು ಒಪ್ಪಿಸುವ ಹಲವು ಸಾಧ್ಯತೆಗಳ ಬಗ್ಗೆ ಚಿಂತಿಸುತ್ತ ಇದ್ದ. ಅದರಲ್ಲೂ ಅವನ ತಂದೆ ಇವನಿಗಾಗಿ ಒಬ್ಬಳು ಹುಡುಗಿಯನ್ನು ನೋಡಿ¨ªಾನೆ. ಈ ವಿಷಯವನ್ನು ಹೊತ್ತು ಬಂದಿರುವ ಪತ್ರವನ್ನು ನೇನೆಗೆ ತೋರಿಸಬೇಕೆಂದುಕೊಂಡರೂ ಈಗ ಬೇಡ ಎಂದು ಸುಮ್ಮನಾಗಿದ್ದ. ಮನೆಗೆ ಬಂದ ನಂತರ ಮತ್ತೆ ಆ ಪತ್ರವನ್ನು ಓದಿದ ಎಮೇಕಾನಿಗೆ ನಗು ತಡೆಯಲಾಗುತ್ತಿಲ್ಲ. ತಂದೆ ನೋಡಿರುವ ಹುಡುಗಿ ಇವನಿಗೆ ಚೆನ್ನಾಗಿ ನೆನಪಿ¨ªಾಳೆ, ಶಾಲಾದಿನಗಳಲ್ಲಿ.

        ""ನಾನು ನಿನಗೊಬ್ಬಳು ಒಪ್ಪುವ ಹುಡುಗಿಯನ್ನು ನೋಡಿದ್ದೇನೆ. ನಮ್ಮ ನೆರೆಯವರ ಮಗಳಾಕೆ. ಅವಳು ಸರಿಯಾದ ರೀತಿಯಲ್ಲಿ ಕ್ರಿಶ್ಚಿಯನ್‌ ಆಗಿ ಬೆಳೆದಿ¨ªಾಳೆ. ಕೆಲವು ವರ್ಷಗಳ ಹಿಂದೆ ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದಾಗ ಅವಳ ತಂದೆ (ಸರಿಯಾದ ನಿರ್ಧಾರವುಳ್ಳ ಮನುಷ್ಯ) ಅವಳನ್ನು ಪಾದ್ರಿಯೊಬ್ಬರ ಮನೆಯಲ್ಲಿರಿಸಿ ಗೃಹಿಣಿಗೆ ಬೇಕಾದ ಎÇÉಾ ತರಬೇತಿಯನ್ನು ಕೊಡಿಸಿ¨ªಾರೆ. ಅವಳ ಭಾನುವಾರದ ಶಾಲೆಯ ಶಿಕ್ಷಕರು ಅವಳು ಬೈಬಲ್‌ ಅನ್ನು ನಿರರ್ಗಳವಾಗಿ ಓದುತ್ತಾಳೆ ಎಂದು ನನಗೆ ಹೇಳಿ¨ªಾರೆ. ನೀನು ದಶಂಬರಕ್ಕೆ ಬಂದಾಗ ಮದುವೆಯ ಮಾತುಕತೆಯನ್ನು ಆಡಬಹುದೆಂದು ಭಾವಿಸುತ್ತೇನೆ'

        ಎಮೇಕಾ ಸುಮ್ಮನಿದ್ದ.  ಎರಡನೇ ದಿನದ ಸಂಜೆ ಎಮೇಕಾ ತನ್ನ ತಂದೆಯೊಡನೆ ಒಂದು ಮರದ ಕೆಳಗೆ ಕುಳಿತ. ಅದು ಅವರ ತಂದೆ ವಿಶ್ರಮಿಸುವ ಸ್ಥಳ. ಚುರುಗುಡುವ ಸೂರ್ಯ ಅಸ್ತ‌ಮಿಸಿ, ತಂಗಾಳಿ ಬೀಸುವ ಸಮಯಕ್ಕೆ ಅವರಲ್ಲಿ ಬೈಬಲ್‌ ಓದಲು ತೊಡಗುತ್ತಿದ್ದರು.

        ""ಅಪ್ಪಾ, ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಂದಿದ್ದೇನೆ' ಎಂದು ಮೌನಮುರಿದ ಎಮೇಕಾ.
        ""ಕ್ಷಮೆ!? ಯಾವುದಕ್ಕೆ ಮಗನೇ!?' ಆಶ್ಚರ್ಯದಿಂದ ನುಡಿದ.

        ""ಇದು ಈ ಮದುವೆಯ ಕುರಿತ ಪ್ರಶ್ನೆ'

        ""ಯಾವ ಮದುವೆಯ ಪ್ರಶ್ನೆ?'

        ""ನನಗಾಗೋಲ್ಲ... ನಾನು ಖಂಡಿತ... ನಮ್ಮ ನೆರೆಯವನ ಮಗಳನ್ನು ಮದುವೆಯಾಗಲು ಸಾಧ್ಯವಿಲ್ಲ'
        ""ಸಾಧ್ಯವಿಲ್ಲ? ಏಕೆ?' ತಂದೆ ಕೇಳಿದ.

        ""ನನಗವಳ ಮೇಲೆ ಪ್ರೀತಿ ಇಲ್ಲ'

        ""ನೀ ಪ್ರೀತಿಸು ಎಂದು ಯಾರೂ ನಿನಗೆ ಹೇಳಿಲ್ಲವಲ್ಲ. ನೀನ್ಯಾಕೆ ಪ್ರೀತಿಸಬೇಕು?'

        ""ಮದುವೆ ಇಂದು ಬದಲಾಗಿದೆ...'

        ""ನೋಡು ಮಗನೇ, ಯಾವುದೂ ಬದಲಾಗಿಲ್ಲ. ಒಬ್ಬಳು ಗೃಹಿಣಿಗೆ ಬೇಕಾದದ್ದು ಸನ್ನಡತೆ ಮತ್ತು ಕ್ರಿಶ್ಚಿಯನ್‌ ಸಂಸ್ಕಾರ' ಮಗನ ಮಾತನ್ನು ತಡೆದು ನುಡಿದ.

        ಅದಾಗ ಎಮೇಕಾನಿಗೆ ತಂದೆಯೊಡನೆ ವಾದಿಸುವುದರಲ್ಲಿ ಯಾವುದೇ ಭರವಸೆ ಕಾಣಲಿಲ್ಲ.
        ""ಅಷ್ಟಕ್ಕೂ, ನೀವು ನೋಡಿರುವ ಹುಡುಗಿಯ ಎÇÉಾ ಗುಣಗಳನ್ನು ಹೊಂದಿರುವ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಮತ್ತು ಅವಳು...'

        ಅವನ ತಂದೆಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ""ನೀ ಏನು ಹೇಳ್ತಾ ಇದ್ದೀಯಾ?' ಗಲಿಬಿಲಿಯಿಂದ ಕೇಳಿದ.

        ""ಅವಳೂ ಒಳ್ಳೆಯ ಕ್ರಿಶ್ಚಿಯನ್ನು ' ಮುಂದುವರೆಯುತ್ತಾ ಹೇಳಿದ, ಮತ್ತು ಲಾಗೋಸ್‌ನ ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿ¨ªಾಳೆ.

        ""ಶಿಕ್ಷಕಿ...!? ಅದು ಉತ್ತಮ ಗೃಹಿಣಿಯಾಗಲು ಅರ್ಹತೆಯಾದರೆ, ನಿನಗೊಂದು ವಿಷಯ ಹೇಳುತ್ತೇನೆ ಕೇಳು, ನಮ್ಮ ಧರ್ಮದ ಮಹಿಳೆ ಪಾಠ ಮಾಡಬಾರದು. ಸಂತ ಪೌಲ್‌ ತನ್ನದೊಂದು ಪತ್ರದಲ್ಲಿ ಮಹಿಳೆಯರು ಮೌನವಾಗಿರಬೇಕು ಎಂದು ಹೇಳಿ¨ªಾರೆ'ಎಂದು ಹೇಳಿ ನಿಧಾನವಾಗಿ ಮೇಲೆದ್ದು ಅತ್ತಿಂದಿತ್ತ ಓಡಾಡತೊಡಗಿದ. ಇದು ಅವನಿಗೆ ಬಹಳ ಇಷ್ಟದ ವಿಚಾರ. ದೇವಮಂದಿರಗಳಲ್ಲಿ ಮಹಿಳೆಯರು ಪಾಠ ಮಾಡುವುದನ್ನು ಉಗ್ರವಾಗಿ ವಿರೋಧಿಸುತ್ತಿದ್ದ. ಸ್ವಲ್ಪ ಸಮಾಧಾನಗೊಂಡ ಬಳಿಕ ಮಗನ ನಿಶ್ಚಿತಾರ್ಥದ ವಿಷಯಕ್ಕೆ ಮರಳಿದ.

        ""ಹೋಗಲಿ, ಅವಳು ಯಾರ ಮಗಳು?' ಮೆದುವಾಗಿ ಕೇಳಿದ.

        ಅವಳು... ""ನೇನೆ ಅತಂಗ್‌'

        ""ಏನು!?' ಮರಳಿದ್ದ ಮೆದುಭಾವ ಅಲ್ಲಿರಲಿಲ್ಲ. ""ನೀ ಹೇಳುವುದು ನೇನೆ ಅತಂಗ. ಅಂದರೆ ಏನು?' ಅವನ ಸ್ವರ ಗಡುಸಾಯಿತು.

        ""ಕ್ಯಾಲಬಾರ್‌ನ ನೇನೆ ಅತಂಗ. ನಾ ಮದುವೆಯಾಗುವುದಾದರೆ ಅವಳನ್ನು ಮಾತ್ರ'
        ಈ ಕಡು ಉತ್ತರದಿಂದ ಎಮೇಕಾ ತನ್ನ ತಂದೆ ಸಿಡಿಯಲಿ¨ªಾರೆ ಎಂದು ಎಣಿಸಿದ್ದ. ಆದರೆ, ಅದಾಗಲಿಲ್ಲ. ಅವನ ತಂದೆ ಸುಮ್ಮನೆ ತನ್ನ ಕೊಠಡಿಗೆ ತೆರಳಿದ. ಇದು ಅನಿರೀಕ್ಷಿತವಾಗಿತ್ತು ಮತ್ತು ಎಮೇಕಾನನ್ನು ಗಾಬರಿಪಡಿಸಿತು. ಅವನ ತಂದೆಯ ಮೌನ ಮಾತಿಗಿಂತ ಹರಿತವಾಗಿ ಇರಿದಿತ್ತು. ಆ ರಾತ್ರಿ ಅವನ ತಂದೆ ಊಟವನ್ನು ಮಾಡಲಿಲ್ಲ.

        ಮರುದಿನ ಎಮೇಕಾನನ್ನು ಕಳುಹಿಸುವ ಮುನ್ನ ಮಗನ ಮನವೊಲಿಸುವ ಎÇÉಾ ಪ್ರಯತ್ನವನ್ನು ತಂದೆ ಮಾಡಿದ. ಮಗನ ನಿರ್ಧಾರ ಖಚಿತವಾದದ್ದು ಎಂದರಿತ ಮೇಲೆ ಸುಮ್ಮನಾಗಿಬಿಟ್ಟ.

        ""ತಿಳಿದಿರು ಮಗನೇ, ನಿನಗೆ ಸರಿ ತಪ್ಪು ಯಾವುದೆಂದು ಹೇಳುವುದು ನನ್ನ ಕರ್ತವ್ಯವೆಂದು ಹೇಳಿದೆ. ನಿನ್ನ ತಲೆಗೆ ಈ ವಿಷಯವನ್ನು ಯಾರು ತುಂಬಿದರೋ ಅವರು ನಿನ್ನ ಕುತ್ತಿಗೆಯನ್ನು ಸೀಳಿದ್ದರೆ ಚೆನ್ನಾಗಿತ್ತು. ಇದು ಸೈತಾನನ ಕೆಲಸವೇ ಸರಿ' ಎಂದು ಹೇಳುತ್ತ ಮಗನೆಡೆಗೆ ಬೀಳ್ಕೊಡಲು ಕೈ ಬೀಸಿದ.
        ""ನೀವು ನೇನೆಯ ಬಗ್ಗೆ ತಿಳಿದರೆ, ನಿಮ್ಮ ನಿರ್ಧಾರವನ್ನು ಬದಲಿಸುತ್ತೀರಾ, ಅಪ್ಪ?'
        ""ನಾನವಳನ್ನು ಎಂದೂ ನೋಡುವುದಿಲ್ಲ ' ಎಂಬ ಉತ್ತರ ಬಂದಿತು.

        ಆ ರಾತ್ರಿಯಿಂದ ಮಗನೊಡನೆ ಮಾತು ಅಪರೂಪವಾಯಿತು. ತನ್ನ ಮಗನಿಗೆ ತನ್ನ ನಿರ್ಧಾರದಿಂದ ಆಗಬಹುದಾದ ಅಪಾಯಗಳು ಅರ್ಥವಾಗಬಹುದೆಂಬ ಭರವಸೆಯಿಂದ ಹಗಲು, ರಾತ್ರಿ ಮಗನ ಒಳಿತಿಗಾಗಿ ಪ್ರಾರ್ಥಿಸತೊಡಗಿದ.

        ಎಮೇಕಾ ತನ್ನ ತಂದೆಯ ದುಃಖದಿಂದ ಬಹಳ ನೊಂದುಕೊಂಡ. ಈ ಕೆಟ್ಟ ಸಮಯ ಕಳೆದು ಹೋಗುತ್ತದೆಯೆಂಬ ಆಶಾಭಾವ ಹೊಂದಿದ್ದ. ಇತಿಹಾಸದÇÉೇ ಯಾರೂ ಈ ರೀತಿ ಮದುವೆಯಾಗಿಲ್ಲವಾಗಿದ್ದರೆ ಅವನಿಗೆ ಇಷ್ಟು ಭರವಸೆ ಉಳಿಯುತ್ತಿರಲಿಲ್ಲ.

        ""ಯಾವತ್ತೂ ಇದನ್ನು ನಿರೀಕ್ಷಿಸಿರಲಿಲ್ಲ 'ಎಂಬ ಒಂದೇ ಸಾಲಿನ ಪತ್ರ ಕೆಲವು ವಾರಗಳ ನಂತರ ಬಂದಿತು. ಅದರಲ್ಲಿ ತನ್ನೆÇÉಾ ಜನರ ಪರವಾಗಿ ಆತ ಹೇಳಿದಂತಿತ್ತು.
        .
        ಒಕೋಕೆಯ ಪರವಾಗಿ ಅನುಕಂಪದಿಂದ ಮಾತನಾಡಲು ಅವನ ಸಮುದಾಯದ ಕೆಲವರು ಬಂದರು. ಅಷ್ಟರಲ್ಲಿ  ಅವರ ಮಗನು ಲಾಗೋಸ್‌ಗೆ ಹಿಂತಿರುಗಿದ್ದ.

        ""ಯಾವತ್ತೂ ಇದನ್ನು ಕೇಳಿರಲಿಲ್ಲ ' ದುಃಖದಿಂದ ತಲೆಯಾಡಿಸುತ್ತ ಮುದುಕ ನುಡಿದ.
        ""ನಮ್ಮ ದೇವರು ಏನನ್ನು ಹೇಳುತ್ತಾರೆ?' ಮತ್ತೂಬ್ಬ ಜಂಟಲ್‌ಮಾÂನ್‌ ನುಡಿದ.
        ""ಮಕ್ಕಳು ತಂದೆಯ ವಿರುದ್ಧ ನಿಲ್ಲುತ್ತಾರೆ ಎಂದು ಹೋಲಿ ಪುಸ್ತಕದಲ್ಲಿದೆ'
        ""ಇದು ಮುಕ್ತಾಯದ ಆರಂಭ!' ಮತ್ತೂಬ್ಬ ನುಡಿದ.

        ಈ ರೀತಿ ನಡೆಯುತ್ತಿದ್ದ ಚರ್ಚೆ ವೇದಾಂತದತ್ತ ಹೊರಳಿತು. ಒಬ್ಬ ಪಕ್ಕಾ ಪ್ರಾಕ್ಟಿಕಲ್‌ ಮನುಷ್ಯ, ಚರ್ಚೆಯನ್ನು ಸರಳೀಕರಣಗೊಳಿಸಲು ತೊಡಗಿದ.

        ""ನೀನು ಯಾರಾದರೂ ಸ್ಥಳೀಯ ವೈದ್ಯರನ್ನು ಭೇಟಿಮಾಡಬೇಕಿತ್ತು' ಎಂದು ಎಮೇಕಾನ ತಂದೆಗೆ ಸೂಚಿಸಿದ.

        ""ಅವನೇನೂ ರೋಗಿಯಲ್ಲ ' ಎಂಬ ಉತ್ತರ ಬಂತು.

        ""ಮತ್ತಿನ್ನೇನು? ಅವನ ತಲೆ ಕೆಟ್ಟಿದೆಯಷ್ಟೆ. ಇದನ್ನು ಒಬ್ಬ ಒಳ್ಳೆಯ ಗಿಡಮೂಲಿಕೆಯ ತಜ್ಞನೊಬ್ಬ ಸರಿದಾರಿಗೆ ತರಬಹುದು. ಅವನಿಗೆ ಅಮಲೈನ್‌ ಎಂಬ ಔಷಧಿಯ ಅಗತ್ಯವಿದೆ. ಹಾದಿ ಬಿಡುವ ಗಂಡನನ್ನು ತನ್ನ ಹತೋಟಿಯಲ್ಲಿಟ್ಟು ಕೊಳ್ಳಲು ಹೆಣ್ಣು ಇದನ್ನು ಸರಿಯಾಗಿ ಬಳಸುತ್ತಾಳೆ'

        ""ಅವನು ಹೇಳಿದ್ದು ಸರಿ' ಮತ್ತೂಬ್ಬ ನುಡಿದು, ಮುಂದುವರಿಯುತ್ತ, ""ಇದಕ್ಕೆ ಖಂಡಿತ ಮದ್ದಿನ ಅಗತ್ಯವಿದೆ' ಎಂದನು.

        ""ನಾನು ಯಾವುದೇ ಸ್ಥಳೀಯ ವೈದ್ಯರನ್ನು ಭೇಟಿಯಾಗುವುದಿಲ್ಲ' ಎಮೇಕಾನ ತಂದೆ ತನ್ನ ಮೌಡ್ಯ ನೆರೆಯವರಿಗಿಂತ ಮುಂದಿದ್ದು, ಇವರ ಮಾತಿಗೆÇÉಾ ಜಗ್ಗದವನಾಗಿದ್ದ. ""ನಾನು ಮತ್ತೂಬ್ಬ ಶ್ರೀಮತಿ ಒಚುಬನಾಗಲಾರೆ. ನನ್ನ ಮಗ ತನ್ನಷ್ಟಕ್ಕೆ ತನ್ನನ್ನು ಕೊಂದು ಕೊಳ್ಳುತ್ತಾನೆಂದರೆ, ಕೊಂದು ಕೊಳ್ಳಲಿ. ನಾ ಅವನಿಗೆ ಸಹಾಯ ಮಾಡುವುದಿಲ್ಲ'

        ""ಇದು ಅವಳ ತಪ್ಪು ' ಮತ್ತೂಬ್ಬ ನುಡಿದ, ""ಅವಳು ಯಾವನೋ ವೈದ್ಯನನ್ನು ಸಂರ್ಪಕಿಸಿ¨ªಾಳೆ. ಬಹುಶ‌ಃ ಮೋಸದ ಹೆಂಗಸಿರಬೇಕು'

        .

        ಆರು ತಿಂಗಳ ನಂತರ, ಎಮೇಕಾ ತನ್ನ ಹೆಂಡತಿಗೆ ತಂದೆಯಿಂದ ಬಂದ ಒಂದು ಸಣ್ಣ ಪತ್ರವನ್ನು ತೋರಿಸುತ್ತಿದ್ದ:

        ""ನಿನ್ನ ಮದುವೆಯ ಫೋಟೋವನ್ನು ಕಳುಹಿಸಲು ನಿನಗೆ ಮನಸ್ಸು ಬಂದದ್ದು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ. ನಾನು ಅದನ್ನು ಕತ್ತರಿಸಿ ನಿನಗೇ ವಾಪಸು ಕಳುಹಿಸುತ್ತಿದ್ದೇನೆ. ಏಕೆಂದರೆ, ಅವಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೊಂದಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಲು ನನಗೆ ಮನಸ್ಸಾದರೂ ಹೇಗೆ ಬಂದೀತು'

        ಪತ್ರವನ್ನೋದಿದ ನೇನೆ ಕತ್ತರಿಸಿದ್ದ ತನ್ನ ಫೋಟೋವನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಳು.
        ""ಅಳಬೇಡ ನೇನೆ' ಎಂದು ಗಂಡ ಸಮಾಧಾನ ಮಾಡಲು ಯತ್ನಿಸಿದ, ""ಅವನು ಸ್ವಭಾವತಃ ಒಳ್ಳೆಯ ಮನುಷ್ಯ. ಒಂದಲ್ಲ ಒಂದು ದಿನ ನಮ್ಮ ಮದುವೆಯನ್ನು ಒಪ್ಪಿಯೇ ಒಪ್ಪುತ್ತಾನೆ'
        ಹಲವು ವರ್ಷಗಳು ಕಳೆದರೂ ಆ ದಿನ ಬರಲೇ ಇಲ್ಲ.

        ಎಂಟು ವರ್ಷಗಳು, ಒಕೋಕೆ ಮತ್ತು ಎಮೇಕಾನ ನಡುವೆ ಯಾವ ಚರ್ಚೆಯೂ ನಡೆಯಲಿಲ್ಲ. ಮೂರು ಬಾರಿ ಮಾತ್ರ, ಅದೂ ಎಮೇಕಾ ತನ್ನ ರಜೆಯನ್ನು ಕಳೆಯಲು ಊರಿಗೆ ಬರಲು ಕೇಳಲು ಬರೆದಿದ್ದನು.
        ""ನಿನ್ನನ್ನು ನನ್ನ ಮನೆಯಲ್ಲಿ ಸೇರಿಸುವುದಿಲ್ಲ ' ಒಮ್ಮೆ ತಂದೆ ಪ್ರತಿಕ್ರಿಯಿಸಿ ಬರೆದಿದ್ದ ,""ನೀನು ನಿನ್ನ ರಜೆಯನ್ನು ಅಥವಾ ಜೀವನವನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತೀಯಾ ಎಂಬುದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ ' ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದ.

        ಎಮೇಕಾನ ಮದುವೆಯ ಬಗ್ಗೆ ಆತನ ಹಳ್ಳಿಯಲ್ಲಷ್ಟೇ ಪೂರ್ವಾಗ್ರಹ ಪೀಡಿತರಿರಲಿಲ್ಲ. ಲಾಗೋಸ್‌ನಲ್ಲೂ ಕೆಲಸಮಾಡುತ್ತಿದ್ದ ಎಮೇಕಾನ ಕುಲದವರು ತಾರತಮ್ಯ ತೋರುತ್ತಿದ್ದರು. ಎಮೇಕಾನ ಕುಲದ ಹೆಂಗಸರು ತಮ್ಮ ಹಳ್ಳಿ ಜನರ ಸಭೆ ಸೇರಿದಾಗ ನೇನೆಯನ್ನು ದ್ವೇಷಿಸದಿದ್ದರೂ, ಅವಳನ್ನು ಬಹಳ ಗೌರವ ಮನೋಭಾವದಿಂದ ನೋಡುವ ಮೂಲಕ ಅವಳು ತಮ್ಮವಳಲ್ಲ ಎಂಬುದನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಸಮಯ ಕಳೆದಂತೆ ನೇನೆ ಅವರಲ್ಲೂ ಗೆಳತಿಯರನ್ನು ಸಂಪಾದಿಸುವ ಮೂಲಕ ಅವರೊಳಗೊಬ್ಬಳಾಗಿ ಅವರ ಮನಗೆದ್ದಳು. ಸ್ವಲ್ಪ ತಡವಾಗಿಯಾದರೂ ಅವರು ನೇನೆ ತಮಗಿಂತಲೂ ತನ್ನ ಮನೆಯನ್ನು ಅಚ್ಚುಕಟ್ಟಾಗಿಯೇ ಇಟ್ಟುಕೊಳ್ಳುತ್ತಾಳೆ ಎಂದು ಹೊಟ್ಟೆಕಿಚ್ಚಿನಿಂದಲೇ ಒಪ್ಪಿಕೊಳ್ಳತೊಡಗಿದರು.

        ಇಬೋ ಪ್ರದೇಶದ ಹೃದಯ ಭಾಗದಲ್ಲಿದ್ದ ಹಳ್ಳಿಯೊಂದರಲ್ಲಿ ಇವರಿಬ್ಬರೂ ಸಂತೋಷದಿಂದ ವಾಸಿಸುತ್ತಿರುವ ವಿಷಯ ತಿಳಿಯದಿದ್ದ ಕೆಲವೇ ಜನರಲ್ಲಿ ಎಮೇಕಾನ ತಂದೆಯೂ ಸೇರಿದ್ದ. ತನ್ನ ಮಗನ ಹೆಸರನ್ನು ಹೇಳಿದರೆ ಉರಿದುಬೀಳುತ್ತಿದ್ದುದನ್ನು ಕಂಡು, ಯಾರೂ ಎಮೇಕಾನ ಹೆಸರನ್ನು ಅವನ ಬಳಿ ಎತ್ತುತ್ತಿರಲಿಲ್ಲ. ತನ್ನ ಮನಃಶಕ್ತಿಯಿಂದ ಮಗನನ್ನು ಮನದ ಮೂಲೆಗೆ ಸೇರಿಸಲು ಸಫಲನಾಗಿದ್ದ. ಆ ನೋವು ಆತನಿಗೆ ಮಾರಣಾಂತಿಕವಾಗಿತ್ತು. ಆದರೂ ತಾನು ಗೆದ್ದಿರುವೆನೆಂದು ಭ್ರಮಿಸಿದ್ದ.

        ಒಂದು ದಿನ ನೇನೆಯಿಂದ ಬಂದ ಪತ್ರವನ್ನು ಕಾಟಾಚಾರಕ್ಕೆ ಓದಲು ಶುರುಮಾಡಿದವನ ಮುಖದ ಭಾವನೆಗಳು ಬದಲಾಗತೊಡಗಿದವು ಮತ್ತು ಇದೀಗ ಗಮನವಿಟ್ಟು ಓದತೊಡಗಿದ,

        ""ನಮ್ಮಿಬ್ಬರು ಮಕ್ಕಳು ತಮಗೆ ತಾತ ಇ¨ªಾರೆ ಎಂದು ತಿಳಿದ ದಿನದಿಂದ ನಿಮ್ಮಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಪೀಡಿಸುತ್ತಿ¨ªಾರೆ. ನೀವು ಅವರನ್ನು ನೋಡಲು ಇಷ್ಟಪಡುವುದಿಲ್ಲವೆಂದು ಹೇಳಲು ನನಗೆ ಮನಸ್ಸಾಗುತ್ತಿಲ್ಲ. ಮುಂದಿನ ತಿಂಗಳ ರಜೆಯಲ್ಲಿ ಅವರನ್ನು ನಿಮ್ಮಲ್ಲಿಗೆ ಕರೆದುಕೊಂಡು ಬರಲು ಎಮೇಕಾಗೆ ಅವಕಾಶ ನೀಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ನಾನು ಲಾಗೋಸ್‌ನÇÉೇ ಉಳಿಯುತ್ತೇನೆ...'

        ಆತನಿಗೆ ಒಂದು ಕ್ಷಣ ಇಷ್ಟು ವರ್ಷಗಳ ತನ್ನ ನಿರ್ಧಾರ ಸಡಿಲವಾದಂತೆ ತೋರಿತು. ತನ್ನಷ್ಟಕ್ಕೆ ತಾನು ಸೋಲಬಾರದು ಎಂದುಕೊಂಡ. ಎÇÉಾ ಭಾವನೆಗಳನ್ನು ತಡೆಯಲು ಯತ್ನಿಸಿದ. ಮತ್ತೂಂದು ಸಂಘರ್ಷ ಅವನಿಗೆದುರಾಯಿತು. ಕಿಟಕಿಗೆ ಆತುಕೊಂಡು ಹೊರಗೆ ನೋಡತೊಡಗಿದ. ಆಕಾಶದಲ್ಲಿ ಕಾರ್ಮೋಡ ಕವಿದು, ಜೋರಾದ ಗಾಳಿ, ಒಣಗಿದ ಎಲೆಗಳು ಮತ್ತು ಧೂಳಿನಿಂದ ಕೂಡಿತ್ತು. ಮಾನವನ ಸಂಘರ್ಷದಲ್ಲಿ ಪ್ರಕೃತಿಯೂ ಕೈ ಜೋಡಿಸಿದ ಒಂದು ಅಪೂರ್ವ ಕ್ಷಣವದು. ಕ್ಷಣಕಾಲದಲ್ಲಿ ಶುರುವಾದ ಮಳೆ, ವರ್ಷದ ಮೊದಲ ಮಳೆಯಾಗಿತ್ತು. ದಪ್ಪ ದಪ್ಪ ಮೊನಚಾದ ಹನಿಗಳು ಮಿಂಚು, ಗುಡುಗಿನೊಂದಿಗೆ ಮಳೆಗಾಲ ಆರಂಭವಾದದ್ದನ್ನು ತಿಳಿಯಲೆತ್ನಿಸುತ್ತಿದ್ದವು. ತನ್ನಿಬ್ಬರು ಮೊಮ್ಮಕ್ಕಳನ್ನು ನೆನೆಯದಿರಲು ಒಕೋಕೆ ಪ್ರಯತ್ನಿಸುತ್ತಿದ್ದ. ಆದರೆ, ಈ ಬಾರಿಯ ಸಂಘರ್ಷದಲ್ಲಿ ತನಗೆ ಸೋಲು ಎಂಬುದು ಅವನಿಗೆ ಅರಿವಾಗತೊಡಗಿತ್ತು. ತನಗಿಷ್ಟವಾದ ದೇವರ ಸ್ತೋತ್ರವನ್ನು ಗುನುಗಲು ಆರಂಭಿಸಿದ. ಆದರದು ಮಳೆಯ ಚಟಪಟ ಸದ್ದಿನಲ್ಲಿ ಲೀನವಾಯಿತು. ತತ್‌ಕ್ಷಣ ಆತನ ಮನಸ್ಸು ಮೊಮ್ಮಕ್ಕಳೆಡೆಗೆ ಹರಿಯಿತು. ಅವರಿಗೆ ತನ್ನ ಮನೆಯ ಬಾಗಿಲನ್ನು ಹೇಗೆ ತಾನೇ ಮುಚ್ಚಿಯಾನು? ಕುತೂಹಲಭರಿತ ಅವನ‌ ಮನಸ್ಸಿನಲ್ಲಿ ಆ ಮಕ್ಕಳು ಅಳುತ್ತ ಭೀಕರ ಮಳೆಯಲ್ಲಿ ತನ್ನ ಮನೆಯ ಹೊರಗೆ ಅನಾಥವಾಗಿ ನಿಂತಿರುವುದನ್ನು ಕಲ್ಪಿಸಿಕೊಂಡ.

        ಪಶ್ಚಾತ್ತಾಪದಿಂದ ಮತ್ತು ಅವರನ್ನು ಸೇರದೆ ಸಾಯುತ್ತೇನೆಂಬ ಅನಿಶ್ಚಿತ ಭಯದಿಂದ ಅವನಿಗೆ ಆ ರಾತ್ರಿ ನಿದ್ರೆ ಬರಲಿಲ್ಲ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus