ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಲ್ಲಿಗುಡ್ಡೆ ಮಾರಡ್ಕ ಬಳಿ ಸಂಕಪ್ಪ ರಾಣ್ಯರ ಮನೆಯ ಮೇಲೆ ತೆಂಗಿನ ಮರ ಬಿದ್ದು ಇಬ್ಬರು ಗಾಯಗೊಂಡ ಘಟನೆ ಸಂಭವಿಸಿದೆ.ಶುಕ್ರವಾರ ಮುಂಜಾನೆ ಬೀಸಿದ ಗಾಳಿ, ಮಳೆಗೆ ಪಕ್ಕದ ಮನೆಯ ಹಳೆ ತೆಂಗಿನ ಮರ ಬುಡದಿಂದ ತುಂಡಾಗಿ ಮನೆಯ ಮೇಲೆ ಬಿದ್ದುದರಿಂದ ಸುಮಾರು 80 ಸಾವಿರಕ್ಕೂ ಮಿಕ್ಕಿ ನಷ್ಟ ಉಂಟಾಗಿದೆ. ಸಂಕಪ್ಪ ರಾಣ್ಯ ಹಾಗೂ ಅವರ ಪತ್ನಿಯ ಮೇಲೆ ಮನೆಯ ಪಕ್ಕಾಸು ಹಾಗೂ ಹೆಂಚು ಬಿದ್ದು ತಲೆಗೆ ಮತ್ತು ಕಾಲಿಗೆ ಗಾಯವಾಗಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿ ಚಿಕ್ಕ ಮಕ್ಕಳು ಸಹಿತ 9 ಮಂದಿ ಇದ್ದರು. ಇತರರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿ ನಿತ್ಯಾನಂದ ದಾಸ್, ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ , ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಮಾಜಿ. ಜಿ.ಪಂ. ಸದಸ್ಯೆ ಶೈಲಾ ಸಿಕೇÌರಾ, ಪಂ. ಸದಸ್ಯ ಸುನಿಲ್, ಪಿಡಿಒ ಭೇಟಿ ನೀಡಿದ್ದಾರೆ.