Tuesday, May 21, 2013
Last Updated: 12:59:34 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕತೆ
    • ಬೊಂಬೆ ಮತ್ತು ಬೀಡಿ
      • ಅಭಿಲಾಷ್‌ ಎಚ್‌. ಎನ್‌. | Jul 29, 2012

        ದೀಪಾವಳಿಗೆಂದು ದೊಡ್ಡಮ್ಮನ ಮನೆಗೆ ಹೋಗಿದ್ದೆ. ವಾಸ್ತವವಾಗಿ ಅದು ನನಗೆ ಅಜ್ಜಿಯ ಮನೆಯಾದರೂ ಒಂದು ರೀತಿಯಲ್ಲಿ ದೊಡ್ಡಮ್ಮನ ಮನೆಯೇ. ದೀಪಾವಳಿ ಬೇರೆ. ಕೇಳಬೇಕೆ ಸಂಭ್ರಮ! ಸಿಹಿತಿಂಡಿಗಳಾದ ಹೋಳಿಗೆ, ಪಾಯಸದ ಜೊತೆಗೆ ನನಗೆ ಇಷ್ಟವಾದ "ದೊಡ್ಡಮ್ಮನ ಕೋಡುಬಳೆ'.
        ತಲುಪಿದ್ದು ಮಧ್ಯಾಹ್ನವಾದ್ದರಿಂದ ಹೋದ ತತ್‌ಕ್ಷಣ ಸವಿಯುವ ಅವಕಾಶ. ಸರಿಯಾಗಿ ತಿನ್ನಬೇಕೆಂದುಕೊಂಡೇ ಕೈಕಾಲು ತೊಳೆದು ಬಂದು ಕೂತೆ. ದೊಡ್ಡಪ್ಪನೂ ಅಷ್ಟರಲ್ಲಿ ಪೇಟೆಗೆ ಹೋಗಿಬಂದಿದ್ದರು.

        ಒಟ್ಟಿಗೇ ಊಟಕ್ಕೆ ಕುಳಿತೆವು. ಈ ಬಾರಿ ಅಣ್ಣಂದಿರೆಲ್ಲ ಇಲ್ಲ. ಅವರಿಗೆಲ್ಲ ಕೆಲಸ ಸಿಕ್ಕಿ ಬೇರೆಡೆ ಇದ್ದಾರೆ. ಅವರು ಇದ್ದಿದ್ದರೆ... ಮಾತು, ವಿನೋದಗಳ ಜೊತೆಗೇ ಊಟ ಮುಂದುವರಿಯಿತು.
        "ಥತ್‌ ಬಾಗಿಲು ಹಾಕೆºàಕಿತ್ತು. ಆ ಪೀಡೆ ಒಳಕ್ಕೆ ಬರತ್ತೆ' ಎಂದ ದೊಡ್ಡಪ್ಪ ಮೇಲೆದ್ದರು.
        "ಯಾವ ಪೀಡೆ ದೊಡ್ಡಪ್ಪಾ?'

        "ಅಯ್ಯೋ ಬಿಡು ಮಾರಾಯ. ಅದರ ಬಗ್ಗೆ ಯಾಕೆ ಚಿಂತೆ? ಅಪರೂಪಕ್ಕೆ ಬಂದಿದ್ದೀಯ. ಮೊದಲು ಚೆನ್ನಾಗಿ ತಿನ್ನು. ಹೌದು, ನಿಮ್‌ ಕಾಲೇಜಿನಲ್ಲಿ ಊಟ ಹ್ಯಾಗಿರತ್ತೆ?' ಎಂದು ಬಂದು ಕುಳಿತರು.
        "ಪರವಾಗಿಲ್ಲ, ಆದರೂ ನಮ್ಮ ದೊಡ್ಡಮ್ಮನ ಕೈರುಚಿಯಷ್ಟಿಲ್ಲ'

        "ಅದೇನೋ ಗೊತ್ತಿಲ್ಲ ಮಾರಾಯ, ನಿನ್ನ ದೊಡ್ಡಮ್ಮ ನೀನಿದ್ದಾಗ ಮಾತ್ರ ಚೆನ್ನಾಗಿ ಮಾಡ್ತಾರೆ'
        "ಆಹಾಹಾ ಮಾತಾಡ್‌ ನೋಡು, ಪರೋಕ್ಷವಾಗಿ ಕಂಪ್ಲೇಂಟ್‌. ಈಗೊಂದ್‌ ನಾಲ್ಕು ಸೌಟು ಪಾಯಸ ಬಡಿಸಿದರೆ ಈ ನಾಲಿಗೆ ಸುಮ್ಮನಾಗುತ್ತೂ?' ಎಂದ ದೊಡ್ಡಮ್ಮ ಸೌಟೆತ್ತಿದ್ದರು.

        ಹೀಗೆ ಒಂದೆರಡು ನಿಮಿಷ ಕಳೆದಿರಬಹುದು. ಧಡ್‌ ಎಂದು ಬಾಗಿಲು ನೂಕಿದ ಶಬ್ದ ಕೇಳಿಸಿತು. ಹಿಂದೆಯೇ ಒಬ್ಬ ಹುಡುಗ ಕೈಲಿ ಗೊಂಬೆ ಹಿಡಿದು ಬಂದ.

        ಅವನ ರೂಪ ನೋಡಲು ವಿಕಾರವಾಗಿತ್ತು. ತಲೆ ಕೆದರಿತ್ತು. ಎಡಗೆನ್ನೆಯ ಮೇಲೆ ಸುಟ್ಟ ಗಾಯ! ಅಂಗಿ ಹೆಚ್ಚು ಕಡಿಮೆ ಹರಿದಿತ್ತು. ಚಡ್ಡಿ ಆತನಿಗೆ ದೊಡ್ಡದಾದರೂ ಬಿಗಿಯಾಗಿ ಕಟ್ಟಿಕೊಂಡಂತಿತ್ತು. ಕಣ್ಣಿನಲ್ಲಿ ಶೂನ್ಯಭಾವ. ಧಡ್‌ ಎಂದು ಬಾಗಿಲು ನೂಕಿದವ ಸೀದಾ ಒಳಗೆ ಬಂದ.

        "ಥತ್‌, ಹಬ್ಬದ ಹಿಂದಿನ್‌ ದಿನಾನೂ ಈ ಪೀಡೆ ಕಾಟ. ಏಯ್‌ ಕತ್ತೆ ಯಾಕೋ ಒಳಗೆ ಬಂದೆ?' ಸಿಟ್ಟಿನಿಂದ ಗದರಿಸುತ್ತ ದೊಡ್ಡಪ್ಪ ಮೇಲೆದ್ದರು.

        ಆ ಹುಡುಗ ತಾನೇ ಈ ಮನೆಯ ಮಾಲೀಕ ಎಂಬಂತೆ ಒಳಬಂದವನೇ ಹಾಲ್‌ನಲ್ಲಿ ನಿಂತು ಅಧಿಕಾರವಾಣಿಯಲ್ಲಿ "ಬೀಡಿ ಕೊಡಿ' ಎಂದು ದೊಡ್ಡ ಧ್ವನಿಯಲ್ಲಿ ಕೂಗಿದ. ದೊಡ್ಡಪ್ಪ ಬಯ್ಯುತ್ತಲೇ ದನ ಹೊಡೆವ ಕೋಲು ಹುಡುಕತೊಡಗಿದರು. ನನಗೆ ಆಶ್ಚರ್ಯ.

        ಎರಡು ಸೆಕೆಂಡಿನ ನಂತರ ಮತ್ತೆ ಅದೇ ರೀತಿ ಕೂಗಿದ. ಆ ಕ್ಷಣದಲ್ಲೇ ಕೋಲಿನ ಜೊತೆ ಬಂದ ದೊಡ್ಡಪ್ಪ ಅವನ ಬೆನ್ನಿಗೆ ಸರಿಯಾಗಿ ಬಿಟ್ಟರು.

        ಹೊಡೆತದ ರಭಸ ಜೋರಾಗಿತ್ತು. ತತ್‌ಕ್ಷಣ ""ಅಮ್ಮಾ' ಎಂದು ಚೀರಿದ. ನನಗೆ ಕರುಳು ಚುರ್‌ ಅಂತು. "ಭಂಡ ಬರಿ¤àಯಾ ಮತ್ತೆ ಒಳಕ್ಕೆ? ಇನ್ಯಾವತ್ತೂ ಈ ಕಡೆ ತಲೆ ಹಾಕೆºàಡ. ಈವತ್ತು ಕೋಲು ತಂದಿದೀನಿ, ನಾಳೆ ಕುಡುಗೋಲು ತರಿ¤àನಿ. ನಡೆಯೋ ಆಚೆ' ಎಂದ ದೊಡ್ಡಪ್ಪ ಇನ್ನೊಂದು ಏಟು ಹಾಕಿದರು. ತತ್‌ಕ್ಷಣ ದೊಡ್ಡಪ್ಪನನ್ನು ದುರುಗುಟ್ಟಿ ನೋಡಿದ. "ದುರುಗುಟ್ಟುತ್ತೀಯಾ...?' ಎಂದವರೇ ಕೆನ್ನೆಗೆ ಫ‌ಟಾರನೆ ಬಿಟ್ಟರು. ಸುಟ್ಟ ಗಾಯದಿಂದ ರಕ್ತ ಸುರಿಯಲು ಆರಂಭವಾಯ್ತು. "ದೊಡ್ಡಪ್ಪ , ಹೊಡೀಬೇಡಿ' ನಾನು ಹೆಚ್ಚು ಕಡಿಮೆ ಜೋರಾಗಿಯೇ ಕೂಗಿದೆ. ""ಇನ್ನೇನೋ ಮಾಡ್ತೀಯಾ ಇವನನ್ನ?' ಎಂದವರೇ ಕುತ್ತಿಗೆ ಹಿಡಿದು ಅವನನ್ನು ದರದರ ಎಳೆದುಕೊಂಡು ಹೋಗಿ ಹೊರಕ್ಕೆ ದಬ್ಬಿದರು.

        ಬಯ್ಯುತ್ತಲೇ ದೊಡ್ಡಪ್ಪ ಒಳಕ್ಕೆ ಬಂದರು. ಕೈ ತೊಳೆದುಕೊಂಡವರು ಊಟಕ್ಕೆ ಕುಳಿತರು. ನಂತರದ ಊಟ ಮೌನದಲ್ಲೇ ಸಾಗಿತು. ಪದ್ಧತಿ ಹಾಗೇ. ದೊಡ್ಡಪ್ಪ ಮುಂಗೋಪಿ. ಸಿಟ್ಟು ಬಂದಾಗ ಯಾರೂ ಅವರನ್ನು ಮಾತಾಡಿಸುವುದಿಲ್ಲ. ಸಿಟ್ಟಿಳಿದ ಮೇಲೆ ಅವರೇ ಮಾತಾಡಿಸಲು ಬರುತ್ತಾರೆ.

        ಸಂಜೆ ಊರಿನ ಪೇಟೆಗೆ ಹೊರಟಿದ್ದೆ. ದೊಡ್ಡಮ್ಮ , "ಪಕೋಡ ಮಾಡುತ್ತೀನಿ' ಎಂದರು. ಈರುಳ್ಳಿ ಕಡಿಮೆಯಾದ್ದರಿಂದ ತರಲು ಹೊರಟಿದ್ದೆ. ದಾರಿಯಲ್ಲಿ ಗೋಪಿ ಫೋನ್‌ ಮಾಡಿದ್ದ. ಕಳೆದ ವಾರ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಸೀಟ್‌ ಸಿಕ್ಕಿತೆಂದವನು ಸೋಮವಾರ ಹೊರಟೇಹೋಗಿದ್ದ. ಮಾತಾಡುತ್ತಲೇ ನಡೆದೆ. ಮಾತು ಮುಗಿದ ಮೇಲೆ ಸಮಯ ನೋಡಿದೆ. ನಂತರ ರಸ್ತೆ ದಾಟಲೆಂದು ಹಿಂದಕ್ಕೆ ತಿರುಗಿದೆ.

        ಹಿಂದೆ ಅದೇ ಬಾಲಕ ನಿಂತಿದ್ದ. ಅವನೇ ಮೊನ್ನೆ ದೊಡ್ಡಪ್ಪನಿಂದ ಏಟು ತಿಂದವ. ಸುಮಾರು ಏಳನೇ ಕ್ಲಾಸಿರಬಹುದು. ಸುಟ್ಟ ಗಾಯದಿಂದ ಬಂದ ರಕ್ತ ಹೆಪ್ಪುಗಟ್ಟಿ ಕರ್ರಗೆ ಕಾಣಿಸುತ್ತಿತ್ತು. ಅದೇ ಶೂನ್ಯಭಾವದಿಂದ ನನ್ನನ್ನೇ ನೋಡುತ್ತಿದ್ದ.

        "ಏನು?'

        "ಬೀಡಿ ಕೊಡಿ'

        "ಯಾರಿಗೆ?'

        "ಇದಕ್ಕೆ' ಎಂದವ, ಬೊಂಬೆಯೆತ್ತಿ ತೋರಿಸಿದ.

        ಅದೇ ಗೊಂಬೆ, ಪ್ಲಾಸ್ಟಿಕ್‌ ಹುಡುಗಿ. ನೋಡಲು ಸುಂದರವಾಗಿತ್ತು. ಆದರೆ, ಬಾಯಿಯ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳಿದ್ದವು.

        "ಓಡಿಸೋಣ' ಅಂದುಕೊಂಡೆ. ಆದರೆ, ಸಿಗರೇಟು ಕೊಟ್ಟರೆ ಏನು ಮಾಡುತ್ತಾನೆ ಎನ್ನಿಸಿತು. ಜೇಬಿಗೆ ಕೈ ಹಾಕಿದೆ. ಪೊಟ್ಟಣ ಖಾಲಿಯಾಗಿತ್ತು. ಅಲ್ಲೇ ಪಕ್ಕದ ಅಂಗಡಿಗೆ ಹೋಗಿ ಬಂದು ಸಿಗರೇಟನ್ನು ಅವನ ಕೈಯಲ್ಲಿಟ್ಟೆ.

        ಅವನ ಮುಖ ಅರಳಿತು. ತತ್‌ಕ್ಷಣ "ನೋಡು ಅಪ್ಪಾ , ಅಣ್ಣ ನಿನಗೆ ಬೀಡಿ ಕೊಡಿಸಿದ್ದಾನೆ. ಥ್ಯಾಂಕ್ಯೂ ಹೇಳು' ಎಂದು ಬೊಂಬೆಯ ಕಿವಿಯಲ್ಲಿ ಉಸುರಿದ. ಅನಂತರ ಬೊಂಬೆಯನ್ನು ಮುಖಕ್ಕೆ ಹಿಡಿದು "ಅಪ್ಪ ಥ್ಯಾಂಕ್ಯೂ ಹೇಳುತ್ತಿದ್ದಾರೆ' ಎಂದ.

        ನನಗೆ ಅರ್ಥವಾಗಲಿಲ್ಲ. ಆದರೂ ಬಗ್ಗಿ ಒಂದು ಸೆ¾„ಲ್‌ ಕೊಟ್ಟೆ. ಅವನೂ ಕಿಸಿದ.

        ನಾನು ಸಿಗರೇಟು ಹಚ್ಚಿದೆ. ಅನಂತರ ಅವನೂ ಬೆಂಕಿಪೊಟ್ಟಣ ಇಸ್ಕೊಂಡು ಸಿಗರೇಟು ಉರಿಸಿದ. ಆತನ ಸಿಗರೇಟು ಹಚ್ಚುವ ರೀತಿ ನೋಡಿ ನನಗೆ ಮೂಗಿನ ಮೇಲೆ ಬೆರಳಿಡುವಂತಾಯ್ತು. ಆದರೆ, ದಮ್ಮು ಎಳೆಯಲು ಹೋಗಿ ಕೆಮ್ಮಲು ಶುರುಮಾಡಿದ. ನನಗೆ ನಗು ಬಂತು. ಚೋಟುದ್ದ ಇದಾನೆ, ಸಿಗರೇಟು ಸೇದ್ತಾನೆ !

        ಅವನು ಸೇದಿದ ನಂತರ ಅದನ್ನು ಬೊಂಬೆಯ ಬಾಯಿಗೆ ಹಿಡಿದ. ಉಲ್ಟಾ ಹಿಡಿದಿದ್ದರಿಂದ ಅದರ ಬಾಯಿ ಇನ್ನೊಮ್ಮೆ ಸುಡುವಂತಾಯ್ತು. ಇನ್ನೇನು ನಾನು ಎರಡು ಸಾರಿ ಎಳೆದಿರಬೇಕು, ಅಷ್ಟರಲ್ಲಿ ಅವನ ಭಾವ ಬದಲಾಯಿತು.

        "ಊಹೂಂ... ಇನ್ನೂ ಎಳೀಬಾರ್ಧು...' ಎಂದವನೇ ಸಿಗರೇಟನ್ನು ಹಿಂದಕ್ಕೆಳೆದುಕೊಂಡು, ಮತ್ತೆ ಅದರ ಬಾಯಿಗೆ ತುರುಕಿದ.

        "ಸಾಕು ಅಪ್ಪಾ...' ಎಂದವನೇ ಮತ್ತೆ ಮೊದಲಿನಂತೆ ಮಾಡಿದ.

        ಈ ಬಾರಿ ವ್ಯಗ್ರನಾಗಿ, "ಸಾಕು ಅಂದ್ರೆ ಗೊತ್ತಾಗಲ್ವ... ಕೆಟ್ಟ ಅಪ್ಪ , ನೀನು ಕೆಟ್ಟ ಅಪ್ಪ , ಕೆಟ್ಟ ಅಪ್ಪ !' ಎಂದು ಕಿರುಚಿದವ ಒಂದು ಸಾರಿ ಗೊಂಬೆಯನ್ನು ಹಿಚುಕಿ, ನೆಲಕ್ಕೆ ತೂರಿ ಅಳುತ್ತ ಓಡಲು ಶುರುಹಚ್ಚಿದ.
        ನನಗೆ ಗಾಬರಿ ! ಯಾರ ಹುಡುಗನೋ ಏನೋ, ನಾನು ಇವನಿಗೆ ಸಿಗರೇಟು ಕೊಟ್ಟಿದ್ದು ತಿಳಿದರೆ ಏನು ಮಾಡುತ್ತಾರೋ ಏನೋ?! ಯಾಕಪ್ಪಾ ಬೇಕಾಗಿತ್ತು ಇದೆಲ್ಲಾ... ಎಂದುಕೊಂಡು ಬೊಂಬೆಯನ್ನೆತ್ತಿಕೊಂಡು ಅವನನ್ನು ಕೂಗುತ್ತಾ ಬೆನ್ನುಹತ್ತಿದೆ. ಬೀದಿಯಲ್ಲಿರುವ ಜನ ಇತ್ತ ನೋಡಿದರಾದರೂ ಇದೇನೋ
        "ಸಾಮಾನ್ಯ' ಎನ್ನುವಂತೆ ಮುಖ ತಿರುಗಿಸಿದರು. ಹುಡುಗ ಚುರುಕಾಗಿದ್ದ. ನಾನೇ ದಪ್ಪ ಇದ್ದದ್ದರಿಂದ ಅವನನ್ನು ಹಿಡಿಯುವುದು ಕಷ್ಟವಾಗತೊಡಗಿತು. ಆತ ಅಳುತ್ತಾ ಹೋಗಿ ಒಂದು ಗುಡಿಸಲನ್ನು ಹೊಕ್ಕ. ನಾನು ಹಿಂಬಾಲಿಸಿದೆ.

        ಅಲ್ಲೊಬ್ಬ ಮುದುಕ ಕುಳಿತಿದ್ದ, ನೆಲದ ಮೇಲೆ. ಅವನು ಈ ಹುಡುಗನ ಅಜ್ಜನಾಗಬೇಕೇನೋ... ಅವನಿಗೂ ಇವನಿಗೂ ರೂಪದಲ್ಲಿ ಹೆಚ್ಚು ವ್ಯತ್ಯಾಸವಿರಲಿಲ್ಲ. ಆದರೆ, ಈ ಅಜ್ಜನ ಬಲಗಾಲು ಮೊಂಡಾಗಿತ್ತು. ಈ ಮೊಂಡು ಕಾಲಿನ ಮೇಲೆ ಸುಟ್ಟಗಾಯಗಳಾಗಿದ್ದು ಕೀವು ತುಂಬಿಕೊಂಡಿದ್ದವು. ಈ ಹುಡುಗ ಆ ಅಜ್ಜನನ್ನು ತಬ್ಬಿಕೊಂಡು ಅಳಲಾರಂಭಿಸಿದ. ಅಜ್ಜ ಸಮಾಧಾನ ಮಾಡುತ್ತಿದ್ದ. ಅವನು ತನ್ನ ಇರುವಿಕೆಯನ್ನು ಗಮನಿಸಿಲ್ಲವೆಂದು ಕಾಣುತ್ತದೆ. ನನ್ನ ನೋಡಿದ ಕೂಡಲೇ, "ಓಹ್‌, ನೀವ್ಯಾರು?' ಎಂದ.

        "ಅಲ್ಲಾ... ಈ ಹುಡುಗ, ನನ್ಹತ್ರ ಬಂದು...'

        "ಓಹ್‌, ನಿಮ್ಮನ್ನೂ ಪೀಡಿÕದ್ನ?... ಕ್ಷಮಿಸಿ'

        "ಅಲ್ಲಾ, ಇದೆಲ್ಲಾ ಏನ್‌ ಕ...'

        "ಅಯ್ಯೋ ಸ್ವಾಮಿ, ಕ್ಷಮಿಸಿ ಅಂದ್ನಲ್ಲ... ದಯವಿಟ್ಟು ನಮ್ಮನ್ನು ನಮ್‌ ಪಾಡಿಗೆ ಬಿಟಿºಡಿ'.
        ಅಷ್ಟರಲ್ಲಿ ಆ ಹುಡುಗ ತಲೆಯೆತ್ತಿ ನೋಡಿದ. ಗೊಂಬೆ ನನ್ನ ಕೈಯಲ್ಲಿದ್ದದ್ದು ಅವನಿಗೆ ಸರಿ ಕಾಣಲಿಲ್ಲ. ನನ್ನ ಹತ್ತಿರ ಓಡಿಬಂದು ನನ್ನ ಕೈಗೆ ಎರಡು ಏಟು ಹಾಕಿ ಬಿಡಿಸಿಕೊಂಡು, ಮತ್ತೆ ಅಜ್ಜನ ಹತ್ತಿರ ಓಡಿ ಹೋಗಿ ಅದನ್ನು ಅವಚಿಕೊಂಡೇ ಕುಳಿತ. ನಾನು ಮಿಕಮಿಕ ನೋಡುತ್ತಿದ್ದೆ.

        ಆ ಅಜ್ಜ ಎದ್ದು ನಿಂತ, ತನ್ನ ಬಿದಿರಿನ ಊರುಗೋಲು ಹಿಡಿದುಕೊಂಡು. ಅಲ್ಲೇ ಅಡುಗೆ ಮನೆಯಂತಿದ್ದ ಮೂಲೆಗೆ ಹೋಗಿ, ಲೋಟದಲ್ಲಿ ಅದೇನೋ... ಬಹುಶಃ ಹಾಲಿರಬೇಕು, ತಂದು ಆ ಹುಡುಗನಿಗೆ ಕೊಟ್ಟ .
        "ಅಪ್ಪ ಹಾಲು ಕುಡೀತಾನೆ...' ಎಂದ ಹುಡುಗ ಆ ಗೊಂಬೆಗೆ ಹಾಲು ಕುಡಿಸೋ ಆಟವಾಡುತ್ತಾ ಕುಡಿಯತೊಡಗಿದ.

        "ಅಪ್ಪ ಜಾಸ್ತಿ ಹಾಲು ಕುಡೀಯೊದಿಲ್ವಂತೆ...ಅವನಿಗೆ ಜಾಸ್ತಿ ಕುಡಿಸ್ಬೇಡ' ಎಂದ ಅಜ್ಜ ಒಂದು ಲೋಟದಲ್ಲಿ ನೀರು ತಂದು ನನಗೆ ಕೊಟ್ಟ .

        "ಕುಡೀರಿ, ತುಂಬಾ ಸುಸ್ತಾದಂಗಿದೀರಾ...'

        ನಾನು ಕುಡಿಯಲು ಶುರುಮಾಡಿದೆ. ಮಧ್ಯದಲ್ಲಿ ನಿಲ್ಲಿಸಿ, "ಈ ಹುಡುಗ ಯಾಕೆ ಹೀಗಿದಾನೆ?' ಎಂದೆ.
        "ಹುಡುಗ ಸರಿಯಾಗಿದ್ದ ಕಣಪ್ಪ , ಅವರಪ್ಪನ್ನ ಆ ಕುಡುಕರು ಬಿಟ್ಟಿದ್ದಿದ್ರೆ ಸರಿಯಾಗೆ ಇರಿ¤ದ್ದ'.
        "ಯಾವ ಕುಡುಕರು... ಏನು... ನಂಗೊಂದೂ ಅರ್ಥ ಆಗ್ತಿಲ್ಲ'

        "ಅದೇನೂ ಒಳ್ಳೆ ಕಥೆಯಲ್ಲಪ್ಪ , ಅದನ್ಯಾಕೆ ಕೇಳ್ತಿ...?'

        "ಪರವಾಗಿಲ್ಲ ಹೇಳಜ್ಜ...'

        ಅಜ್ಜ ದೊಡ್ಡದಾದ ಉಸಿರು ಬಿಟ್ಟು ಕುಳಿತುಕೊಂಡ. ಕಣ್ಣಲ್ಲಿ ದುಃಖ, ಜಿಗುಪ್ಸೆ ಎದ್ದು ಕಾಣುತ್ತಿತ್ತು. ಇನ್ನೊಂದು ಉಸಿರು ಬಿಟ್ಟು ಕಥೆ ಹೇಳಲು ಶುರುಮಾಡಿದ.

        "ನೋಡಪ್ಪಾ , ನಮುª ಮರದ ಕಸುಬು. ನಂಗೊಬ್ಬ ಮಗ ಇದ್ದ. ಎಂಥೋನು ಅಂದ್ರೆ ಅವನನ್ನು ಪಡಿಯೋಕೆ ನಾನು ಏಳು ಜನ್ಮದ ಪುಣ್ಯ ಮಾಡಿರಬೇಕು. ಹಾಗೆ ಚಿನ್ನ , ಚಿನ್ನ ಅಂಥಾರಲ್ಲ ಹಾಗಿದ್ದ. ಅವನಿಗೆ ಬೆಣ್ಣೆಯಂಥ ಉಡುಗೀನ ತಂದು ಮದ್ವೆ ಮಾಡೆª. ಒಂದು ವರ್ಷಕ್ಕೆ ಇವನು ಹುಟ್ಟಿದ. ಅಪ್ಪನಿಗಂತೂ ನೂರು ಮರ ಕಡದಷ್ಟು ಖುಶಿಯಾಯ್ತು. ಅದಕ್ಕೆ ಸರಿಯಾಗಿ ಮಗ ಅಪ್ಪನ್ನ ಹಚೊRಂಬಿಟ್ಟ...

        "ಮಗ ಬೆಳೀತಿರ್ಬೇಕಾದ್ರೆ ಒಂದಿನ ಅಪ್ಪ ಮಗಂಗೆ ಮರದಲ್ಲಿ ಒಂದು ಗೊಂಬೆ ಮಾಡ್ಕೊಟ್ಟ . ಮಗಂಗೆ ಎಷ್ಟು ಖುಶಿಯಾಯ್ತು ಅಂತೀಯ. ಒಂದಿನಾನೂ ಅದನ್‌ ಬಿಟ್ಟು ಅವ್ನು ಇರಿ¤ರ್ಲಿಲ್ಲ. ರಾತ್ರಿ ಮಲಗಬೇಕಾದ್ರೆ ಅದನ್ನ ಹಿಡ್ಕೊಂಡೆ ಮಲ್ಕೊತ್ತಿದ್ದ...

        "ಇದನ್ನ ನೋಡಿ ಅಪ್ಪಂಗೆ, ಮಗಂಗೆ ಇನ್ನೂ ಒಳ್ಳೇ ಗೊಂಬೆ ಕೊಡಿಸಬೇಕು ಅನ್ನಿಸಿತು. ಇನ್ನೂ ಹೆಚ್ಚು ಕೆಲಸ ಮಾಡ್ಲಿಕ್ಕೆ ಶುರುಮಾಡª. ಆದ್ರೂ ತಂದಿದ್‌ ಕಾಸು ಎರಡು ಹೊತ್ತು ಊಟಕ್ಕೂ ಸಾಕಾಗುತ್ತಿರಲಿಲ್ಲ. ಅಷ್ಟರಲ್ಲಿ ಈ ಶನಿಗಳು ವಕ್ಕರಿಸಿಕೊಂಡುÌ' ಅಷ್ಟರಲ್ಲಾಗಲೇ ಅಜ್ಜನ ಕಣ್ಣಿನಲ್ಲಿ ನೀರು ಇಣುಕಿಯಾಗಿತ್ತು.
        "ಸಮಾಧಾನ ಮಾಡ್ಕಳಿ ಅಜ್ಜ...'

        "ಏನೋಪ್ಪಾ... ನೋಡು, ನಿನ್ಹಂಗೆ ಆಗಾಗ ಜನ ಸಿಟ್ಟಾಗಿ ಬರ್ತಾರೆ, ಇವನಿಗೆ ನನಗೆ ಬಯ್ತಾರೆ. ಹೊಡೀತಾರೆ. ನಿನ್ಹಂಗೆ ಸಮಾಧಾನವಾಗಿ ಮಾತಾಡಿÕದ್ದು ಇದೇ ಮೊದುÉ'

        "ಇರ್ಲಿ ಬಿಡಿ... ನೀವು ಮುಂದುವರಿÕ'

        ಅಜ್ಜ ಕಣ್ಣೊರೆಸಿಕೊಂಡರು.

        "ಹೂಂ... ಕೇಳು... ಹೀಗೆ ಇವ್ನಿಗೆ ಇನ್ನೂ ದುಡ್ಡು ಮಾಡ್ಬೇಕು ಅನ್ನೋ ಆಸೆ ಉಟಾªಗ ಕಾಣಿಸಿಕೊಂಡ್ರು'
        "ಯಾರು?'

        "ಯಾರೋ ಯಾರಿಗ್ಗೊತ್ತು? ಇವ° ಕಿವೀಲಿ ಅದೇನ್‌ ತುಂಬಿದ್ರೋ ಏನೋ, ಇವ್ನು ಜೂಜಾಡೋಕೆ ಶುರು ಮಾಡª. ಕುಡಿಯೋದು, ಸೇದೋದು ಅದೇನೋ ಕಲ್ತುಕೊಂಡ, ಆ ಚಂಡಾಲರಿಂದ. ಮೊದ್ಲು ಮೊದ್ಲು ಚೆನ್ನಾಗಿ ಆಡ್ತಿದ್ನಂತೆ. ಆಗ ನೋಡು, ಮರದ ಗೊಂಬೆ ಓಗಿ ಪ್ಲಾಸ್ಟಿಕ್‌ ಗೊಂಬೆ ಬಂತು. ಈ ಗುಡುÛ ಬದುÉ ಪಕ್ಕದಲ್ಲಿ ಸಣ್ಣ ಮನೆ ಕಟª. ಅಷ್ಟಾದ್ರೂ ಅವನ ಜೂಜಿನ ಚಟ ಓಗ್ಲಿಲ್ಲ. ನಾವು ಬಡ್ಕೊàತಿದ್ವಿ ಬ್ಯಾಡ ಅಂತ, ಕೇಳ್ಬೇಕಲ್ಲ ? ರಾತ್ರಿ ಆಗಾಗ ಮನೇಲಿ ಜಗಳ ಆಡ್ತ ಇದ್ದ. ಹೀಗೆ, ಒಂದಾÕರಿ ಸಿಟ್ಟಾಗಿ ನನ್ನನ್ನ ಈ ಆಡಿನ ಕೊಟ್ಟಿಗೆಗೆ ಹಾಕª'.

        ಕಣ್ಣೀರು ಹರಿಯುತ್ತಲೇ ಇತ್ತು. ನಾನು ಸುಮ್ಮನಿದ್ದೆ. ಮತ್ತೆ ಮುಂದುವರಿಸಿದರು.

        "ಹೀಗೆ ರಾತ್ರಿ ಒಂದಿನ ಕುಡುª ಬಂದು ಮುಂದುಗಡೆ ಬೀಡಿ ಸೇದ್ತಾ ಕುಳಿತಿದ್ದ. ಆಗ ಬಂದ್ರು ನೋಡು, ಬಡ್ಡಿ ಮಕ್ಳು. ಇವನು ಏನೋ ಸಾಲ ಕೊಡ್ಬೇಕು ಅಂತ ತಗಾದೆ ತೆಗುದ್ರು. ಇವನೂ ಗಲಾಟೆ ಮಾಡª. ಕೊನೆಗೆ ಬಡಿಯೋಕೆ ಶುರುವಾಯ್ತು. ಅದ್ರಲ್ಲಿ ಇವ° ತಲೆಗೆ ಏಟು ಬಿತ್ತು. ಇವ°ನ್ನ ಮನೆ ಒಳ್ಗೆ ದಬ್ಬಿ , ಬಾಗ್ಲಿಗೆ ಚಿಲಕ ಹಾಕಿದ್ರು ಚಂಡಾಲುÅ. ಮನೆಗೆ ಬೆಂಕಿನೂ ಹಚಿºಟ್ರಾ. ಹೆಂಡ್ತಿ ಮಗೂ ಜೊತೆಗೆ ಇನ್ನೂ ವಳಗೇ ಮಲಿYದುÉ.
        ನಾನು ಆಡ್ನ ಎಳ್ಕೊàಬರೋಕೆ ಓದೊನು  ನೋಡಿ ಓಡºಂದೆ. ಬೆಂಕಿ ಆಗ್ಲೆà ಪೂರ್ತಿ ಹತ್ತಿಕೊಂಡಿತ್ತು. ಬಾಗುÉ ಮುರ್ಧು ಒಳಗ್ಬಂದೆ. ಗಂಡ, ಹೆಂಡ್ತಿ ಆಗ್ಲೆà ಸತ್ತೋಗಿಬಿಟ್ಟಿದ್ರು. ಈ ಮಗ ಗ್ಯಾನ ತಪ್ಪಿ ಬಿದ್ದಿತ್ತು. ಅವ°ನ್ನ ಎತ್ಕೊಂಡು ಹೊರಗೆ ಬರೋಷ್ಟರಲ್ಲಿ ಎಡವಿ ಬಿದ್ದೆ. ಆಗ್ಲೆà ಸುಡ್ತಿರೋ ಒಂದು ದಿಮ್ಮಿ ಬಲಗಾಲ್ಮೇಲೆ ಬಿತ್ತು. ಸದ್ಯ ಮಗೂಗೆ ಏನೂ ಆಗ್ಲಿಲ್ಲ. ಅದೇನ್‌ ಪಾಪ ಮಾಡಿದೊ° ನನ್ನ ಮಗನ್‌ ಸಂಸಾರ ಹಾಳಾಗೊದನ್ನ ನೋಡ್ಬೇಕಾಯ್ತು...

        ""ಆಮೇಲೆ ಈ ಗುಡಿÛಗೆ ಬಂದ್ವಿ. ಈ ಮಗ ಸರಿಯಾಗ್ಲೆà ಇಲ್ಲ. ಈಗ್ಲೂ ಅವನು ಕೈಲಿ ಅವಚಿಕೊಂಡೇ ತಗೊಂಡು ಬಂದ ಆ ಗೊಂಬೇನ "ಅಪ್ಪ' ಅಂತ್ಲೆà ಕರೀತಾನೆ. ಅಪ್ಪನ ರೀತಿನ ಈ ಗೊಂಬೆ ಮಾಡೋಹಾಗೆ ಮಾಡ್ತಾನೆ. ಆಗಾಗ ಸಿಟ್ಟು ಬಂದು ಅದನ್ನೆಲ್ಲೋ ಎಸುª ಬರ್ತಾನೆ. ಮತ್ತೆ ಉಡುಕ್ಕೊಂಡು ಹೋಗಿ ರಾತ್ರಿಯಾದ್ರೂ ಬರೋದಿಲ್ಲ...'

        ಹೀಗೆ ಮುಗಿಸಿ ಅಜ್ಜ ಕಣ್ಣೊರೆಸಿಕೊಂಡರು. ನಾನೂ ಕಣ್ಣೊರೆಸಿಕೊಂಡೆ. ಅವನತ್ತ ನೋಡಿದೆ. ಅವನು ಆ ಗೊಂಬೆಯ ಜೊತೆ ಅದೇ ಆಟ ಆಡ್ತಿದ್ದ. ಮುಂದೆ ಮಾತು ಬರ್ಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ.
        "ಬರಿ¤àನಜ್ಜ...'

        "ಆಯ್ತಪ್ಪ ನೀನ್‌ ಯಾವ್‌ ಜನ್ಮದ್‌ ಬಂಧುನೋ... ಈ ರೀತಿ ನಮ್ಮ ದುಃಖ ಹಂಚೊRಡಿದ್ದೀಯ, ನಿನೆY ದ್ಯಾವರು ಒಳ್ಳೇದು ಮಾಡ್ಲಿ'.

        ಆ ಹುಡುಗನಿಗೆ ಒಂದು ಮಾತು ಹೇಳ್ಳೋಣ ಅಂದೊRಂಡೆ. ಆದ್ರೆ ಉಪಯೋಗ ಇಲ್ಲ ಅನ್ನಿಸಿತು.
        ಹೊರಗೆ ಬಂದೆ. ಪಕ್ಕದಲ್ಲೇ ಒಂದು ಮನೆ ಉರಿದುಹೋದ ಅವಶೇಷಗಳಿದ್ದವು. ಅಜ್ಜ ಹೇಳಿದ ಘಟನೆಗಳೆಲ್ಲ ಒಂದಾದ ಮೇಲೆ ಒಂದರಂತೆ ನನ್ನ ಕಲ್ಪನೆಯಲ್ಲಿ ಹಾದು ಹೋಯಿತು. ಏನಾದರೂ ಸಹಾಯ ಮಾಡ್ಬೇಕು ಎನ್ನಿಸಿತು. ಮುಂದಕ್ಕೆ ಹೆಜ್ಜೆ ಹಾಕಿದೆ.

        ದಾರಿಯಲ್ಲಿ ನನ್ನ ಮನಸ್ಸು ಅತ್ತಲೇ ಸೆಳೆಯುತ್ತಿತ್ತು. ಮಧ್ಯದಲ್ಲಿ ಒಮ್ಮೆ ನಿಂತೆ. ಜೇಬಿನಿಂದ ಸಿಗರೇಟು ಪೊಟ್ಟಣ ತೆಗೆದೆ. ಅದನ್ನು ಆ ಹುಡುಗ ಆ ಗೊಂಬೆಯನ್ನು ನೆಲಕ್ಕೆ ತೂರಿದ ರೀತಿಯಲ್ಲಿ ತೂರಿ ಮುಂದಡಿಯಿಟ್ಟೆ .


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus