Monday, May 20, 2013
Last Updated: 11:19:02 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅನುತ್ಪಾದಕ ಸೊತ್ತುಗಳಿಗೆ ಲಗಾವಾಗುವ ತೆರಿಗೆಯಿದು
    • ವೆಲ್ತ್‌ ಟಾಕ್ಸ್‌ ಬಗ್ಗೆ ತಿಳಿಯಿರಿ
    • ಕಾಸು-ಕುಡಿಕೆ
    • ವೆಲ್ತ್‌ ಟಾಕ್ಸ್‌ ಬಗ್ಗೆ ತಿಳಿಯಿರಿ

      • ಜಯದೇವ ಪ್ರಸಾದ ಮೊಳೆಯಾರ | Aug 05, 2012

        ಅನುತ್ಪಾದಕ ಸೊತ್ತುಗಳ ಮೇಲೆ ಕರ ಹೇರುವ ಉದ್ದೇಶದ ವೆಲ್ತ್‌ ಟ್ಯಾಕ್ಸ್‌ ನಮ್ಮ ದೇಶದಲ್ಲಿ ಇನ್ನೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಬಹುತೇಕ ತೆರಿಗೆದಾರರು, ಕರ ಇಲಾಖೆಯವರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ತೆರಿಗೆಗೆ ಅರ್ಹವಾದ ಆಸ್ತಿ ಬಹುತೇಕ ಕಾಳಧನಗ್ರಸ್ತ ಚಿನ್ನ ಮತ್ತು ಸ್ತಿರಾಸ್ತಿಗಳೇ ಆಗಿರುವ ಕಾರಣ ಅವುಗಳ ಮೇಲೆ ಕರ ಪಡೆಯುವುದು ಕಷ್ಟಕರವೇ ಸರಿ.

        ಲಕ್ಷ ರೂಪಾಯಿಗಳಿಗಿಂತ ಜಾಸ್ತಿ ಮೊತ್ತದ ಒಟ್ಟು ಆಸ್ತಿಪಾಸ್ತಿಗಳುಳ್ಳವರು ವೆಲ್ತ್‌ ಟ್ಯಾಕ್ಸ್‌ ಅಥವಾ ಐಶ್ವರ್ಯ ಕರ ಕಟ್ಟಬೇಕೆಂಬ ಮಾತು ಕಿವಿಗೆ ಬೀಳುತ್ತಲೇ ಬಹೂರಾಣಿಯ ಕಿವಿ ನೆಟ್ಟಗಾಯಿತು. "ಅಯ್ಯೋ ದೇವ್ರೇ, ಈಗ ನಾವಿರೋ ಮನೆಯೇ ಈಗಿನ ಬೆಲೆಯಲ್ಲಿ ಸುಮಾರು 50 ಲಕ್ಷ ಹೇಗಾದರೂ ಆಗಬಹುದು. ಮತ್ತಿನ್ನು ಅಪ್ಪನ ಮನೆಯಿಂದ, ಇಲ್ಲಿ ಇವರು ಮಾಡಿಸಿಕೊಟ್ಟದ್ದು ಅಂತ ಚಿನ್ನವೇ ಸುಮಾರು 500 ಗ್ರಾಮ್‌ ಆದರೂ ಇರಬಹುದು. ಗ್ರಾಮಿಗೆ 3,000ದಂತೆ ಅದೇ ಸುಮಾರು 15 ಲಕ್ಷ! ಇನ್ನು ಎಫ್ಡಿ, ಗಿಫಿx, ಶೇರೂ ನಾರು ಎÇÉಾ ಸೇರಿಸಿದರೆ ಸರಿ ಸುಮಾರು ಒಂದು ಕೋಟಿಯೇ ಆಗಬಹುದು. ಅಬ್ಬಬ್ಟಾ! ನಾವೂ ಕೋಟ್ಯಾಧೀಶರೇ? ಯೋಚನೆ ಬರುತ್ತಲೇ ಬಹೂ ರಾಣಿಯ ಮೈಮನ ಪುಳಕಿತವಾಯಿತು. ಆದರೆ ಈ ವೆಲ್ತ್‌ ಟ್ಯಾಕ್ಸ್‌ ಎಂಬ ಭೂತವನ್ನು ಏನು ಮಾಡುವುದು? ಸರಿ. ಇವತ್ತು ಮನೆಗೆ ಹೋದ ಕೂಡಲೇ ಮಾವಯ್ಯನನ್ನು ಎಲರ್ಟ್‌ ಮಾಡಬೇಕು ಎಂದುಕೊಂಡು ತನ್ನ ಆಫೀಸು ಕೆಲಸದಲ್ಲಿ ಮಗ್ನಳಾದಳು.
        ಆರಾಮು ಕುರ್ಚಿಯಲ್ಲಿ ಬಂಡೆಯಂತೆ ಬಿದ್ದುಕೊಂಡು "ಸೊರ್‌...' ಅಂತ ಸೊಸೆ ಕೊಟ್ಟ ಚಾ ಹೀರುತ್ತಿದ್ದ ಗುರುಗುಂಟಿರಾಯರು "ನಾವು ಇನ್ನು ವೆಲ್ತ್‌ ಟ್ಯಾಕ್ಸ್‌ ಕಟ್ಟಬೇಕು ಮಾವಯ್ನಾ' ಎನ್ನುವ ಸೊಸೆಯ ಮಾತು ಕೇಳುತ್ತಲೇ ಬೆಚ್ಚಿಬಿದ್ದರು. ಗಾಬರಿಯಲ್ಲಿ ಕೈ ನಡುಗಿದ ರಾಯರ ಮೈಮೇಲೆ ಒಂದಿಷ್ಟು ಬಿಸಿ ಚಹ ಕೂಡ ಬಿತ್ತು. ಈಗಷ್ಟೇ ಇನ್‌ಕಂ ಟ್ಯಾಕ್ಸ್‌ನ ರಾಮಾಯಣ ಮುಗಿಸಿ ಆರಾಮವಾಗಿ ಕುಳಿತಿರುವಾಗ ಇದೀಗ ಇನ್ನೊಂದು ಟ್ಯಾಕ್ಸೇ? ರಾಯರಿಗೆ ಬೆವತಿತು. "ಇದ್ಯಾವುದಪ್ಪಾ$ವೆಲ್ತ್‌ ಟ್ಯಾಕ್ಸ್‌ ಎಂಬ ಈ ಹೊಸ ಪ್ರಾಣಿ? ಅಯ್ಯೋ ಗ್ರಹಚಾರವೇ?' ಅಂತ ಗುರುಗುಂಟಿರಾಯರು ಕಣ್ಣು ಬಾಯಿ ಬಿಟ್ಟು ಗಾಬರಿಯಿಂದ ಸೊಸೆಯ ಮುಖವನ್ನೇ ಗುರುಗುಟ್ಟಿ ನೋಡತೊಡಗಿದರು. 

        ಅನುತ್ಪಾದಿತ ಸೊತ್ತುಗಳ ಮೇಲೆ ಕರ ಹೇರುವ ಉದ್ದೇಶವುಳ್ಳ ಈ ವೆಲ್ತ್‌ ಟ್ಯಾಕ್ಸ್‌ ಬಗ್ಗೆ ಒಂದಿಷ್ಟು ಸಂಕ್ಷಿಪ್ತವಾಗಿ ತಿಳಿಯೋಣ:

        ವೆಲ್ತ್‌ ಟ್ಯಾಕ್ಸ್‌ನ ವ್ಯಾಪ್ತಿ:

        1. ಒಂದಕ್ಕಿಂತ ಜಾಸ್ತಿ ಮನೆ/ಗಳು - ಖಾಲಿ ಬಿದ್ದಿದ್ದರೆ ಮಾತ್ರ. ಸ್ವಂತ ವಾಸದ ಒಂದು ಮನೆಯ ಮೇಲೆ ಈ ಕರ ಇಲ್ಲ. ಅಲ್ಲದೆ, ಎರಡನೆಯ/ಇತರ ಮನೆಯನ್ನು ಕೂಡ ಬಾಡಿಗೆಗೆ ನೀಡಿದ್ದರೆ (ಆ ವರ್ಷದಲ್ಲಿ ಕನಿಷ್ಠ 300 ದಿನ) ಅದರ ಮೇಲೆ ವೆಲ್ತ್‌ ಟ್ಯಾಕ್ಸ್‌ ಇರುವುದಿಲ್ಲ. ಇನ್‌ಕಂ ಟ್ಯಾಕ್ಸ್‌ ಮಾತ್ರ ಇರುತ್ತದೆ. ಆದರೆ ಆ ಮನೆ ಖಾಲಿ ಬಿದ್ದಿದ್ದರೆ ಮಾತ್ರ ಅದು ವೆಲ್ತ್‌ ಟ್ಯಾಕ್ಸ್‌ ವ್ಯಾಪ್ತಿಯೊಳಗೆ ಬರುತ್ತದೆ. ಖಾಲಿ ಮನೆಯ ಮೇಲೂ ಮುನಿಸಿಪಾಲಿಟಿ ದರದಲ್ಲಿ ಒಂದು ನೋಶನಲ್‌ ಅಥವಾ ಪ್ರಕಲ್ಪಿತ ಬಾಡಿಗೆ ತೋರಿಸಿ ಅದರ ಮೇಲೆ ಆದಾಯ ಕರ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಅದು ನೈಜವಾಗಿ ಖಾಲಿ ಇದ್ದ ಕಾರಣ ಅದರ ಮೇಲೆ ವೆಲ್ತ್‌ ಟ್ಯಾಕ್ಸ್‌ ಕಟ್ಟಲೂ ಬೇಕು. ಇದು ವಿಪರ್ಯಾಸವಾದರೂ ಸತ್ಯ.
        2. ಚಿನ್ನ ಮತ್ತು ಆಭರಣಗಳು.
        3. ರೂ. 50,000 ಮೀರಿದ ನಗದು.
        4. ಚಿತ್ರ , ಕೈಕುಸುರಿ , ಲಕ್ಸುರಿ ಕಾರ್‌, ವಾಚುಗಳು, ನೌಕೆ, ವಿಮಾನ.
        ವೆಲ್ತ್‌ ಟ್ಯಾಕ್ಸ್‌ ವ್ಯಾಪ್ತಿಯ ಹೊರಕ್ಕಿರುವ ಸೊತ್ತುಗಳು:
        1. ಕಮರ್ಷಿಯಲ್‌ ಅಥವಾ ವಾಣಿಜ್ಯ ಪ್ರಾಪರ್ಟಿ.
        2. ಯಾವುದೇ ಒಂದು ಮನೆ; ನಿಮ್ಮ ಆಯ್ಕೆಯಂತೆ, ಸ್ವಂತ ವಾಸಕ್ಕೆಂದು ಪರಿಗಣಿಸಲ್ಪಟ್ಟಿದ್ದು.
        3. ವಿತ್ತೀಯ ಆಸ್ತಿಗಳು (ಫೈನಾನ್ಶಿಯಲ್‌ ಅಸೆಟ್ಸ್‌) - ಶೇರು ಮ್ಯೂಚುವಲ್‌ ಫ‌ಂಡುಗಳು, ಬಾಂಡುಗಳು, ಡಿಬೆಂಚರ್ಸ್‌, ಗೋಲ್ಡ್‌ ಫ‌ಂಡ್‌, ಬ್ಯಾಂಕ್‌ ಬ್ಯಾಲನ್ಸ್‌, ಇತರ).
        4. ವೆಲ್ತ್‌ ಟ್ಯಾಕ್ಸ್‌ ಅನ್ವಯವಾಗುವ ಸೊತ್ತುಗಳ ಮೇಲಿನ ಬಾಕಿ ಸಾಲದ ಮೊತ್ತವನ್ನು ಆಯಾ ಸೊತ್ತುಗಳ ಮೌಲ್ಯದಿಂದ ಕಳೆಯಬಹುದಾಗಿದೆ. 

        ಕ್ಲಬ್ಬಿಂಗ್‌ ಪ್ರೊವಿಶನ್‌:

        ಆದಾಯ ಕರದಲ್ಲಿ ಇರುವಂತೆಯೇ ಈ ಸಂಪತ್ತು ತೆರಿಗೆಯಲ್ಲೂ ಕ್ಲಬ್ಬಿಂಗ್‌ ಪ್ರೊವಿಶನ್‌ ಅನ್ವಯವಾಗುತ್ತದೆ. ಅಂದರೆ, ಇರುವ ಸಂಪತ್ತನ್ನು ಹೆಂಡತಿ ಮತ್ತು ಮೈನರ್‌ ಮಕ್ಕಳ ಹೆಸರಿನಲ್ಲಿ ಹಂಚಿಡುವುದರಿಂದ ಕರ ತಪ್ಪಿಸಲಾಗುವುದಿಲ್ಲ. ಅವನ್ನೆÇÉಾ ವಾಪಾಸು ನಿಮ್ಮದೇ ಸಂಪತ್ತಿಗೆ ಸೇರಿಸಿ ಕರ ನಿರ್ಣಯ ಮಾಡತಕ್ಕದ್ದು.

        ವೆಲ್ತ್‌ ಟ್ಯಾಕ್ಸ್‌ ಎಷ್ಟು?

        ಈ ಮೇಲಿನ ಸೊತ್ತುಗಳ ಒಟ್ಟು ಬೆಲೆ ವರ್ಷಾಂತ್ಯದಂದು (ಮಾರ್ಚ್‌ 31) ರೂ. 30 ಲಕ್ಷವನ್ನು ಮೀರಿದ್ದರೆ ಆ ಹೆಚ್ಚುವರಿ ಮೌಲ್ಯದ ಶೇ.1 ದರದಲ್ಲಿ ವೆಲ್ತ್‌ ಟ್ಯಾಕ್ಸ್‌ ನೀಡತಕ್ಕದ್ದು. ಅಂದರೆ ಒಟ್ಟು ಮೌಲ್ಯ ರೂ. 50 ಲಕ್ಷ ಇದ್ದರೆ 50-30=20 ಲಕ್ಷದ ಮೇಲೆ ಶೇ. 1 ಅಂದರೆ, ರೂ. 20,000 ವೆಲ್ತ್‌ ಟ್ಯಾಕ್ಸ್‌ ಕಟ್ಟಬೇಕು. ಆದಾಯ ಕರದಲ್ಲಿ ಇರುವಂತೆ ವೆಲ್ತ್‌ ಟ್ಯಾಕ್ಸ್‌ ಮೇಲೆ ಎಜುಕೇಶನ್‌ ಸೆಸ್‌ ಇರುವುದಿಲ್ಲ. 

        ಟ್ಯಾಕ್ಸ್‌ ಮೇಲೆ ದಂಡ: ಪ್ರತಿ ವರ್ಷದ ವೆಲ್ತ್‌ ಟ್ಯಾಕ್ಸ್‌ ಅನ್ನು ಚಲನ್‌ ಮೂಲಕ ಸರಕಾರಕ್ಕೆ ಕಟ್ಟುವ ಕೊನೆಯ ದಿನಾಂಕ ಮಾರ್ಚ್‌ 31. ಪ್ರತಿ ತಿಂಗಳ ಅಥವಾ ಅದರ ಭಾಗದ ವಿಳಂಬಕ್ಕೂ ಶೇ.1ರಂತೆ ಟ್ಯಾಕ್ಸ್‌ ಮೇಲೆ ದಂಡ ತೆರಬೇಕಾಗುತ್ತದೆ. ಇದು ವಿಳಂಬಕ್ಕೆ. ಆದರೆ ಕರಕಳ್ಳತನ ಮಾಡಿ ಸಿಕ್ಕಿಬಿದ್ದಲ್ಲಿ ಕರದ ಮೇಲೆ ಶೇ. 100- ಶೇ. 500 ತಪ್ಪು$ದಂಡ ವಿಧಿಸಲಾಗುತ್ತದೆ. ರೂ. 1 ಲಕ್ಷದಿಂದ ಹೆಚ್ಚಿನ ಮೊತ್ತದ ವೆಲ್ತ್‌ ಟ್ಯಾಕ್ಸ್‌ ಕಳ್ಳತನಕ್ಕೆ 6 ತಿಂಗಳಿನಿಂದ 7 ವರ್ಷದವರೆಗಿನ ಜೈಲು ಶಿಕ್ಷೆಯೂ ಆಗಬಹುದು.

        ರಿಟರ್ನ್ ಫೈಲಿಂಗ್‌: ವೆಲ್ತ್‌ ಟ್ಯಾಕ್ಸ್‌ ಅನ್ವಯವಾಗುವವರು ಅದರ ರಿಟರ್ನ್ ಫೈಲಿಂಗ್‌ ಮಾಡುವುದೂ ಕಡ್ಡಾಯ. ಆದಾಯ ಕರದಂತೆಯೇ ಇದಕ್ಕೂ ಕೊನೆಯ ದಿನಾಂಕ ಜುಲೈ 31. ನಾಲ್ಕು ಪುಟಗಳ ಸವಿವರವಾದ ಫಾರ್ಮ್-ಆಅ ಉಪಯೋಗಿಸತಕ್ಕದ್ದು.

        ಡಿಟಿಸಿ: ಈಗಿರುವ ಆದಾಯ ತೆರಿಗೆ ಕಾನೂನಿನ ಬದಲಿಗೆ ಹೊಸತಾಗಿ ಬರಲಿರುವ ಸಮಗ್ರ ಕಾನೂನು "ಡೈರೆಕ್ಟ್ ಟ್ಯಾಕ್ಸ್‌ ಕೋಡ್‌' ಅಥವಾ ಡಿಟಿಸಿಯಲ್ಲೂ ವೆಲ್ತ್‌ ಟ್ಯಾಕ್ಸ್‌ ಇದೆ. ಆದರೆ ಈ ಕಾನೂನಿನ ಕರಡು ಪ್ರಸ್ತಾವದ ಪ್ರಕಾರ ವೆಲ್ತ್‌ ಟ್ಯಾಕ್ಸ್‌ ಮಿತಿಯನ್ನು ರೂ.50 ಕೋಟಿಗೆ ಏರಿಸಲಾಗುವುದು ಮತ್ತು ಕರದರವನ್ನು ಶೇ. 0.25ಕ್ಕೆ ಇಳಿಸಲಾಗುವುದು. ಆದರೆ ಈ 50 ಕೋಟಿ ರೂ. ಮಿತಿಯಲ್ಲಿ ಯಾವುದೇ ರಿಯಾಯಿತಿಯಿಲ್ಲದೆ ಎÇÉಾ ಸೊತ್ತುಗಳನ್ನೂ ಸೇರಿಸಲಾಗುವುದು. 

        ನಮ್ಮ ದೇಶದಲ್ಲಿ ವೆಲ್ತ್‌ ಟ್ಯಾಕ್ಸಿನ ಸರಿಯಾದ ಅನುಷ್ಠಾನ ಇನ್ನೂ ನಡೆದಿಲ್ಲ. ಬಹುತೇಕ ತೆರಿಗೆದಾರರು ಇದನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುವುದೇ ಇಲ್ಲ. ಸರಕಾರಕ್ಕೆ ವಾರ್ಷಿಕ ರೂ. 1,000 ಕೋಟಿಗಿಂತಲೂ ಕಡಿಮೆ ಆದಾಯ ನೀಡುವ ಈ ಕರವನ್ನು ಸ್ವಯಂ ಕರ ಇಲಾಖೆಯವರೇ ಅಷ್ಟು ಸೀರಿಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ. ತೆರಿಗೆಗೆ ಅರ್ಹ ಆಸ್ತಿ ಬಹುತೇಕ ಕಾಳಧನಗ್ರಸ್ತ ಚಿನ್ನ ಮತ್ತು ಸ್ತಿರಾಸ್ತಿಗಳೇ ಆಗಿರುವ ಕಾರಣ ಅವುಗಳ ಮೇಲೆ ಕರ ಪಡೆಯುವುದು ಕಷ್ಟಕರವೇ ಸರಿ. 

        ಮೇಲ್ನೋಟಕ್ಕೆ 30 ಲಕ್ಷ ಕಡಿಮೆ ಮೊತ್ತವೆಂದು ಕಂಡರೂ ವೆಲ್ತ್‌ ಟ್ಯಾಕ್ಸ್‌ಗೆ ಒಳಪಡುವ ಸೊತ್ತುಗಳನ್ನು ಪರಿಗಣಿಸಿದಾಗ ಬಹುತೇಕ ಮಧ್ಯಮ ವರ್ಗದವರ ಮೇಲೆ ಇದರ ಹೊರೆ ಬರಲಾರದು. ರಾಯರು ಮತ್ತು ಬಹುರಾಣಿ ಗಾಬರಿ ಪಡುವ ಅಗತ್ಯವೇ ಇಲ್ಲ. ಯಾಕೆಂದರೆ ಅವರ ಒಂದು ಸ್ವಂತ ವಾಸದ ಮನೆ ಮತ್ತು ಶೇರು ನಾರುಗಳಂತಹ ವಿತ್ತೀಯ ಸೊತ್ತುಗಳು ಇದರ ವ್ಯಾಪ್ತಿಗೆ ಬರುವುದೇ ಇಲ್ಲ. ಆದರೂ ಇಷ್ಟು ಬೇಗ ಸುಲಭವಾಗಿ ರಾಯರ ಕಿವಿಗೆ ಈ ಸುದ್ದಿ ಹಾಕಬೇಡಿ. ಒಂದು ಸ್ವಲ್ಪ ಸ್ಟಡಿ ಮಾಡಲಿ ಬಿಡಿ. ಇಲ್ದಿದ್ರೆ ಸುಮ್ನೆà ಕೂತು ಇನ್ನೇನು ಮಾಡುತ್ತಾರೆ? ಪೇಟೆಗೆ ಹೋಗಿ ಯಾರ್ಯಾರನ್ನೋ ಗೋಳು ಹೊಯೊRಳ್ಳುದಕ್ಕಿಂತ ಮನೆಯÇÉೇ ಕೂತು ಈ ಟ್ಯಾಕ್ಸಾಧ್ಯಯನ ಮಾಡುವುದೇ ಲೇಸು. ಸ್ವಲ್ಪ$ಚಾಪುಡಿ ಜಾಸ್ತಿ ಖರ್ಚಾದರೂ ಚಿಂತಿಲ್ಲ.

        ಇವಿಷ್ಟು ಸ್ಥೂಲವಾಗಿ ಐಶ್ವರ್ಯ ಕರದ ಬಗ್ಗೆ ಮಸಾಲೆ. ಅರ್ಥೈಸಲು ಮತ್ತು ಚರ್ಚಿಸಲು ಸುಲಭವಾಗುವ ರೀತಿಯಲ್ಲಿ ಚಿಕ್ಕದಾಗಿ ಅರೆದುಕೊಟ್ಟಿದ್ದೇನೆ. ಇದು ಕರ ಕಾನೂನಿನ ಯಥಾನಕಲು ಅಲ್ಲ. ಪ್ರತಿಯೊಬ್ಬರಿಗೂ ಅವರವರ ಸಂದರ್ಭಾನುಸಾರ ಉಂಟಾಗುವ ವ್ಯತ್ಯಾಸಗಳು ಇಲ್ಲಿ ಪ್ರತಿಫ‌ಲಿತವಾಗುವುದಿಲ್ಲ. ವಿವರವಾದ ಚರ್ಚೆಗೆ ಒಬ್ಬ ನುರಿತ ಚಾರ್ಟರ್ಡ್‌ ಅಕೌಂಟಂಟ್‌ರನ್ನು ಸಂಪರ್ಕಿಸಿ.

        ಕಾಸುಕುಡಿಕೆ ಈಗ ನನ್ನ ಬ್ಲಾಗ್‌ www.kasukudike.wordpress.com ನಲ್ಲೂ ಲಭ್ಯ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus