ಅಶೋಕ್ ಕುಮಾರ್ ಎ. | Aug 05, 2012
ದೆಡೆ ಮಳೆ ಕೈಕೊಟ್ಟು ದೇಶವು ಬರದತ್ತ ಭರದಿಂದ ನುಗ್ಗುತ್ತಿರುವಾಗ, ವಿದ್ಯುತ್ತಿಗೆ ಬೇಡಿಕೆ ಹೆಚ್ಚುವುದು ಸಹಜ. ಮಳೆಯಿಲ್ಲದಿರುವುದರಿಂದಾಗಿ ನೀರಾವರಿ ವ್ಯವಸ್ಥೆಯಿದ್ದವರು ಹೆಚ್ಚೆಚ್ಚು ಕೃಷಿ ಪಂಪ್‌ಸೆಟ್ ಬಳಸುತ್ತಾರೆ. ಅದರ ಜತೆ ನಮ್ಮ ಈಗಿನ ಜೀವನಶೈಲಿ ವಿದ್ಯುತ್ಛಕ್ತಿಯನ್ನು ಬಹಳಷ್ಟು ಅವಲಂಬಿಸಿದೆ. ಹೊಸ ವಿದ್ಯುತ್ ಉತ್ಪಾದನೆ ಯೋಜನೆಗಳನ್ನು ಹಮ್ಮಿಕೊಂಡು ವಿದ್ಯುತ್ ಮೂಲಸೌಕರ್ಯವನ್ನು ಉತ್ತಮ ಪಡಿಸಿಕೊಳ್ಳಬೇಕಾದ ರಾಜ್ಯ ಸರಕಾರಗಳು ಜನರ ಅಸಹಕಾರ, ಬಂಡವಾಳ ಕೊರತೆ ಮುಂತಾದ ಕಾರಣಗಳಿಂದ ಬಳಲುತ್ತಿವೆ. ಇದರ ಪರಿಣಾಮವಾಗಿ ವಿದ್ಯುತ್ ಕಡಿತದಂತಹ ತಾತ್ಕಾಲಿಕ ಕ್ರಮಗಳಿಗೆ ಶರಣಾಗಬೇಕಾಗುತ್ತದೆ. ಅದು ಮಿತಿಮೀರಿದಾಗ ಜನರು ವಿರೋಧಿಸುತ್ತಾರೆ. ಗತ್ಯಂತರವಿಲ್ಲದೆ ರಾಜ್ಯದ ವಿದ್ಯುತ್ ಮಂಡಳಿಗಳು ವಿದ್ಯುತ್ ಗ್ರಿಡ್‌ಗಳಿಂದ ಅಕ್ರಮವಾಗಿ ಹೆಚ್ಚು ವಿದ್ಯುತ್ಛಕ್ತಿಯನ್ನು ಸೆಳೆದುಕೊಳ್ಳುವ ಸುಲಭೋಪಾಯ ಹಿಡಿಯುತ್ತವೆ.
ಹೀಗೆ ಹಲವಾರು ರಾಜ್ಯಗಳು ಅಧಿಕ ವಿದ್ಯುತ್ ಸೆಳೆದದ್ದರಿಂದ ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಗ್ರಿಡ್ ಕುಸಿತ ಸಂಭವಿಸಿ ಗಂಟೆಗಟ್ಟಲೆ ಜನರು ತ್ರಾಸ ಪಟ್ಟರು. ನೀರು ಪೂರೈಕೆ, ಸಂಚಾರ, ವೈದ್ಯಕೀಯ ಸೇವೆ -ಹೀಗೆ ಪೂರ್ತಿ ಜನಜೀವನ ಬಾಧಿತವಾಯಿತು. ನೀರಿನ ಕೊರತೆಯಿಂದ ಉಷ್ಣವಿದ್ಯುತ್ ಸ್ಥಾವರ ಮತ್ತು ಜಲವಿದ್ಯುತ್ ಸ್ಥಾವರಗಳ ಕಾರ್ಯದಲ್ಲಿ ಏರುಪೇರಾಗುವುದು ಒಂದೆಡೆಯಾದರೆ, ಕಲ್ಲಿದ್ದಲ ಕೊರತೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ತಪ್ಪು ಮಾಡುವ ರಾಜ್ಯ ವಿದ್ಯುತ್ ಮಂಡಳಿಗಳ ಮೇಲೆ ರಾಜಕೀಯ ಕಾರಣಗಳಿಂದಾಗಿ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುತ್ತಿಲ್ಲ.
ಈ ಸಮಸ್ಯೆಗೆ ಪರಿಹಾರವೆಂದರೆ, ಹೆಚ್ಚೆಚ್ಚು ವಿದ್ಯುತ್ಛಕ್ತಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದೇ ಆಗಿದೆ. ಬಂಡವಾಳ ಕೊರತೆಯಿದ್ದರೆ ಖಾಸಗಿ ಕಂಪೆನಿಗಳಿಗೆ ವಿದ್ಯುತ್ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಗ್ಯಾಸ್ ಆಧಾರಿತ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಸಾಧ್ಯ. ಹಾಗಾಗಿ, ಅವಕ್ಕೆ ಪ್ರಾಶಸ್ತ$Â ಕೊಡಬೇಕು. ಇನ್ನು ಸೌರಶಕ್ತಿ, ಪವನಶಕ್ತಿ ಆಧರಿಸಿದ ವಿದ್ಯುತ್ ಯೋಜನೆಗಳ ಕಡೆಗೂ ಗಮನ ಕೊಡಬೇಕಿದೆ.
2ಜಿ: ಆಗಸ್ಟ್ ಅಂತ್ಯಕ್ಕೆ ಹರಾಜು ಮುಗಿದೀತೆ?
ನೂರಕ್ಕೂ ಹೆಚ್ಚು ಟೆಲಿಕಾಂ ಕಂಪೆನಿಗಳ ಲೈಸೆನ್ಸ್ ಅನ್ನು ರದ್ದು ಮಾಡಿದ ನ್ಯಾಯಾಲಯದ ಕ್ರಮದಿಂದಾಗಿ 2ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 31ರ ವರೆಗೆ ಮಾತ್ರ ಸಮಯಾವಕಾಶ ಲಭ್ಯವಿದೆ. ಸರಕಾರವು ಈಗಿನ್ನೂ ಸ್ಪೆಕ್ಟ್ರಮ್‌ನ ಮೂಲಬೆಲೆಯನ್ನಷ್ಟೇ ನಿಗದಿ ಮಾಡಿದೆ. 5 ಮೆಗಾಹರ್ಟ್ಸ್ ಸ್ಪೆಕ್ಟ್ರಮ್‌ಗೆ 14 ಸಾವಿರ ಕೋಟಿ ರೂ. ಬೆಲೆ ನಿಗದಿಪಡಿಸಲಾಗಿದೆ. ಟ್ರಾಯ್ ಇದನ್ನು 18 ಸಾವಿರ ಕೋಟಿ ರೂ. ಎಂದು ಶಿಫಾರಸು ಮಾಡಿತ್ತಾದರೂ ಸರಕಾರ, ಟೆಲಿಕಾಂ ಕಂಪೆನಿಗಳ ಲಾಬಿಗೆ ಮಣಿದು ಬೆಲೆ ಇಳಿಸಿರುವ ಹಾಗಿದೆ. 1.25 ಮೆಗಾಹರ್ಟ್ಸ್ನ ಗುಣಕಗಳಲ್ಲಿ, ಮೂರೂವರೆ ಸಾವಿರ ಕೋಟಿ ರೂ. ಮೂಲಬೆಲೆಗೆ ಹರಾಜು ನಡೆಯಲಿದೆ. ಹೀಗಾಗಿ, ಲೈಸೆನ್ಸ್ ರದ್ದಾದ ಕಂಪೆನಿಗಳಾದ ಯುನಿನಾರ್, ಟೆಲ್ನೋರ್ ಮುಂತಾದ ಕಂಪೆನಿಗಳು ಮತ್ತೆ ಹರಾಜಿನಲ್ಲಿ ಭಾಗವಹಿಸುವುದು ಅನಿವಾರ್ಯ. ಆದರೆ ಲೈಸೆನ್ಸ್ ರದ್ದಾಗದೆ ಇರುವ ಕಂಪೆನಿಗಳು ಹೆಚ್ಚುವರಿ ಸ್ಪೆಕ್ಟ್ರಮ್ ಅಗತ್ಯವಿದ್ದರಷ್ಟೇ ಹರಾಜಿನಲ್ಲಿ ಭಾಗವಹಿಸಬಹುದು. ಒಟ್ಟಿನಲ್ಲಿ ಹರಾಜಿನಿಂದ 18 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಬೇಕಾದ ಪರಿಸ್ಥಿತಿ ಇದೆ. ಕರೆದರಗಳು ಹತ್ತಿಪ್ಪತ್ತು ಶೇಕಡಾ ಏರುವುದೂ ಅನಿವಾರ್ಯವಾಗಲಿದೆ. ಇನ್ನೂ ಹರಾಜು ನಡೆಸುವವರು ಯಾರು ಎನ್ನುವುದು ನಿಗದಿಯಾಗಿಲ್ಲ.
ಇಷ್ಟೆಲ್ಲ ನಡೆದು, ಹರಾಜು ಪ್ರಕ್ರಿಯೆಗೆ ತಂತ್ರಾಂಶ ಸಿದ್ಧವಾಗಿ, ಆಗಸ್ಟ್ 31ರೊಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡರೆ ಅದು ಅಚ್ಚರಿಯೇ ಸರಿ.ವೆಬ್‌ಪುಟವನ್ನು ಪಿಡಿಎಫ್ ಮಾಡಿಯಾವುದಾದರೂ ವೆಬ್‌ಪುಟವನ್ನು ಪಿಡಿಎಫ್ ಆಗಿ ಉಳಿಸಿಕೊಳ್ಳಬೇಕೆನಿಸಿದೆಯೇ? ಹಾಗಾದರೆ, http::/ashok567.blogspot.comಎಂಬ ಇಂಟರ್ನೆಟ್ ತಾಣವನ್ನು ಬಳಸಿಕೊಳ್ಳಿ. ಇಲ್ಲಿ, ಪಿಡಿಎಫ್ ಆಗಿ ಉಳಿಸಬೇಕಾದ ಪುಟದ ವಿಳಾಸವನ್ನು ಟೈಪಿಸಿದರೆ, ಆ ಪುಟವನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ತಂತ್ರಾಂಶದಿಂದ ತತ್ತರಅಮೆರಿಕದ ಶೇರು ಮಾರುಕಟ್ಟೆಯ ಸುಮಾರು ಶೇ.10ರಷ್ಟು ವಹಿವಾಟು ನಡೆಸುವ ನೈಟ್ ಕ್ಯಾಪಿಟಲ್ ಎನ್ನುವ ಕಂಪೆನಿಯು ಕಳೆದ ವಾರದಿಂದ ತನ್ನ ಖರೀದಿ-ಮಾರಾಟ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲು ಹೊಸ ತಂತ್ರಾಂಶವನ್ನು ಬಳಸತೊಡಗಿತು. ಈ ತಂತ್ರಾಂಶವನ್ನು ಗಡಿಬಿಡಿಯಿಂದ ತಯಾರಿಸಿ, ಸರಿಯಾಗಿ ಪರೀಕ್ಷಿಸದೆ ಬಳಸಲು ತೊಡಗಿದ ಕಾರಣ ಅದು ಅಡ್ಡಾದಿಡ್ಡಿಯಾಗಿ ವರ್ತಿಸಿ, ಇಡೀ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿತು. ಕಂಪೆನಿಯು ತನ್ನ ವ್ಯವಹಾರದಲ್ಲಿ ಸುಮಾರು ಅರ್ಧ ಬಿಲಿಯನ್ ಡಾಲರು ನಷ್ಟವನ್ನು ಅನುಭವಿಸಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಅದರ ವ್ಯವಹಾರದ ಪಾಲು ಇಳಿಮುಖವಾಗುವುದು ನಿಶ್ಚಿತ. ಜತೆಗೆ ಸ್ಟಾಕ್ ಎಕ್ಸ್‌ಚೇಂಜ್ ನೈಟ್ ಕ್ಯಾಪಿಟಲ್ ಕಂಪೆನಿಯ ವಿರುದ್ಧ ಶಿಸ್ತುಕ್ರಮವನ್ನೂ ಕೈಗೊಳ್ಳಬಹುದು.
ಔಟ್‌ಲುಕ್: ಹೊಸ ಮಿಂಚಂಚೆಮೈಕ್ರೋಸಾಫ್ಟ್ ಕಂಪೆನಿಯು ಹಾಟ್‌ಮೇಲ್ ಎನ್ನುವ ಮಿಂಚಂಚೆ ಸೇವೆಯನ್ನು ಒದಗಿಸುತ್ತಿತ್ತು. ಈಗ ಅದು ಔಟ್‌ಲುಕ್ ಎಂಬ ಹೊಸ ಹೆಸರನ್ನು ಬಳಸಿ ಹೊಸ ಗಿರಾಕಿಗಳ ಮನಗೆಲ್ಲಲು ಪ್ರಯತ್ನಿಸಲಿದೆ. ಜಿಮೇಲ್‌ನಂತಹ ಗೂಗಲ್ ಮಿಂಚಂಚೆಯ ಜನಪ್ರಿಯತೆಗೆ ಕಡಿವಾಣ ಹಾಕಲು ಔಟ್‌ಲುಕ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕುತೂಹಲದ ವಿಷಯ. ಮೊದಲ ಗಂಟೆಯಲ್ಲಿಯೇ ಸುಮಾರು ಒಂದು ದಶಲಕ್ಷ ಜನರು ಔಟ್‌ಲುಕ್ ಸೇವೆಗೆ ನೋಂದಾಯಿಸಿಕೊಂಡಿರುವುದು ವಿಶೇಷ. ಅಚ್ಚರಿಯೆಂದರೆ, ಕಂಪೆನಿಯ ಸಿಇಒ ಬಾಮರ್ ಅವರ ಹೆಸರಿನಲ್ಲಿ ಮಿಂಚಂಚೆಯನ್ನು ಈಗಾಗಲೇ ಯಾರೋ ನೋಂದಾಯಿಸಿಕೊಂಡಿದ್ದಾರೆ.
ಟ್ವಿಟರ್ ರಾಜಕೀಯ ಸೂಚ್ಯಂಕ ಟ್ವಿಂಡೆಕ್ಸ್‌ಟ್ವಿಟರಿನಲ್ಲಿ ಸುಮಾರು 14 ಕೋಟಿ ಬಳಕೆದಾರರು ಸಕ್ರಿಯವಾಗಿದ್ದಾರೆ. ಇಲ್ಲಿ ಅಮೆರಿಕದ ಚುನಾವಣೆಯ ಬಗ್ಗೆ ಜನರಿಂದ ವ್ಯಕ್ತವಾಗುವ ಅಭಿಪ್ರಾಯವನ್ನು ಗ್ರಹಿಸಿ, ನೈಜ ಸಮಯದಲ್ಲಿ, ಜನರ ಒಲವು ಯಾವ ಅಭ್ಯರ್ಥಿಯ ಕಡೆ ವಾಲುತ್ತಿದೆ ಎನ್ನುವುದನ್ನು ಟ್ವಿಂಡೆಕ್ಸ್ ತೋರಿಸಲಿದೆ. ಒಬಾಮಾ ಮತ್ತು ರೋಮ್ನಿ ಅವರ ಕಡೆ ಜನರ ಒಲವು ಕ್ಷಣ-ಕ್ಷಣ ಹೇಗೆ ಬದಲಾಗುತ್ತಿದೆ ಎನ್ನುವುದು ಟ್ವಿಂಡೆಕ್ಸ್ ಮೂಲಕ ಜನರಿಗೆ ಗೊತ್ತಾಗುತ್ತದೆ. ಟ್ವಿಟರ್, ಟಾಪ್ಸಿ ಮತ್ತು ಚುನಾವಣಾ ಸಮೀಕ್ಷಾ ಕಂಪೆನಿಗಳು ಜತೆಯಾಗಿ ಟ್ವಿಂಡೆಕ್ಸನ್ನು ಹುಟ್ಟುಹಾಕಿವೆ. ಟ್ವಿಂಡೆಕ್ಸ್ ಸ್ಕೋರು ಧನಾತ್ಮಕವಾಗಿದ್ದರೆ ಅದು ವ್ಯಕ್ತಿಯ ಜನಪ್ರಿಯತೆಯ ಸಂಕೇತ. ಋಣಾತ್ಮಕವಾಗಿದ್ದರೆ ಬೆಂಬಲ ಇಳಿಮುಖವಾಗುತ್ತಿದೆ ಎಂದರ್ಥ.
ಮುಟ್ಟಿದ್ದೆಲ್ಲಾ ಸ್ಪರ್ಶತೆರೆ ಯುಬಿ ಎನ್ನುವ ಕಂಪೆನಿಯು ಯಾವುದೇ ಮೇಲ್ಮೆ„ಯನ್ನು ಸ್ಪರ್ಶತೆರೆಯಾಗಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲಕ, ಉದಾಹರಣೆಗೆ, ಕಂಪ್ಯೂಟರ್ ತೆರೆಯಲ್ಲಿರುವುದನ್ನು ಪ್ರೊಜೆಕ್ಟರ್ ಮೂಲಕ ಗೋಡೆಯ ಮೇಲೆ ಪ್ರದರ್ಶಿಸುತ್ತಿರುವಾಗ, ಗೋಡೆಯನ್ನೇ ಸ್ಪರ್ಶತೆರೆಯಾಗಿ ಪರಿವರ್ತಿಸಬಹುದಾಗಿದೆ. ಇದಕ್ಕೆ 150 ಡಾಲರ್ ಖರ್ಚಿದೆ. ಸದ್ಯಕ್ಕೆ ಸ್ಪರ್ಶತೆರೆಗಳು ತುಂಬ ದುಬಾರಿ. ಅವಕ್ಕೆ ಹೋಲಿಸಿದರೆ, ನೂರೈವತ್ತು ಡಾಲರಿನ ಯುಬಿ ತಂತ್ರಾಂಶ ಪಡೆಯುವುದೇ ಲಾಭಕರವೆನಿಸಬಹುದು. ಇನ್ನು ಬರಲಿರುವ ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯು ಸ್ಪರ್ಶತೆರೆಗೆ ಹೇಳಿಮಾಡಿಸಿದ ಹಾಗಿದೆ. ಹಾಗಾಗಿ, ಯುಬಿ ತಂತ್ರಜ್ಞಾನವು ಕ್ಲಿಕ್ ಆಗಬಹುದು.
ಈ ಅಂಕಣ ಬರಹಗಳು http::/ashok567.blogspot.com ನಲ್ಲೂ ಲಭ್ಯವಿವೆ.