Wednesday, June 19, 2013
Last Updated: 12:47:20 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಒಲಿಂಪಿಕ್ಸ್‌ ಅತಿ ಕಿರಿಯ ಸ್ಪರ್ಧಿ ಕಪೋಸಿ
      • Udayavani | Aug 05, 2012

        ಲಂಡನ್‌ : ಟೋಗೊದ 13 ವರ್ಷದ ಬಾಲೆ ಅಡೊj ಕಪೊಸ್ಸಿ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಅತಿ ಕಿರಿಯ ಕ್ರೀಡಾಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

        ಲಂಡನ್‌ ಒಲಿಂಪಿಕ್ಸ್‌ನ 50 ಮೀ. ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಲು ವೆಲ್ಡ್‌ ಕಾರ್ಡ್‌ ಮೂಲಕ ಪ್ರವೇಶ ಪಡೆದಿರುವ ಈ ಬಾಲೆ ಈಜು ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಪೂರ್ವ ಆಫ್ರಿಕಾದಲ್ಲಿ ಜನಿಸಿರುವ ಕಪೋಸಿ ಈಜಿನಲ್ಲಿ ಆಸಕ್ತಿ ಹೊಂದಿದ್ದು ಮನೆಯಿಂದ 12 ಕಿ.ಮೀ. ದೂರವಿರುವ ಹೋಟೆಲ್‌ನ ಈಜುಕೊಳಕ್ಕೆ ವಾರದಲ್ಲಿ ಮೂರು ತರಬೇತಿ ಪಡೆಯುತ್ತಿದ್ದಾರೆ.

        ಒಲಿಂಪಿಕ್ಸ್‌ ಸ್ಪರ್ಧಿಗಳ ಕನಸು ಪದಕದ ಮೇಲಿದ್ದರೆ, ಈಕೆಯದ್ದು ತನ್ನ ವೈಯಕ್ತಿಕ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳುವುದು. 50 ಮೀ.ಫ್ರೀಸ್ಟೈಲ್‌ ವಿಭಾಗದಲ್ಲಿ 44.60ಸೆ.ನಲ್ಲಿ ಗುರಿ ತಲುಪಿ ವೈಯಕ್ತಿಕ ಸಾಧನೆ ಹೊಂದಿದ್ದು, ಅದನ್ನು ಉತ್ತಮ ಪಡಿಸಿಕೊಳ್ಳುವ ಗುರಿ ಹೊಂದಿದ್ದಾರೆ.

        ಮಲೇರಿಯಾ ಜ್ವರದಿಂದ ನರಳುತ್ತಿದ್ದ ಕಪೋಸಿ ಮೂರು ದಿನಗಳ ಚಿಕಿತ್ಸೆ ನಂತರ ಇದೀಗ ಲಂಡನ್‌ಗೆ ಆಗಮಿಸಿದ್ದಾಳೆ. ಒಲಿಂಪಿಕ್ಸ್‌ ಅರ್ಹತಾ ಸಮಯವನ್ನು ಈಕೆ ಹೊಂದಿರದಿದ್ದರೂ, ಅಂತರಾಷ್ಟ್ರೀಯ ಈಜು ಫೆಡರೇಷನ್‌ ವೆಲ್ಡ್‌ ಕಾರ್ಡ್‌ ಅವಕಾಶ ನೀಡಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus