Tuesday, May 21, 2013
Last Updated: 8:47:59 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಮೆರಿಕ: ಗುರುದ್ವಾರದಲ್ಲಿ ಗುಂಡೆಸೆತ, 6 ಸಾವು
    • ಗುರುದ್ವಾರದಲ್ಲಿ ನಡೆದ ಗುಂಡೆಸೆತದಲ್ಲಿ ಕನಿಷ್ಠ ಆರು ಮಂದಿ ಸತ್ತು ಮೂವರ ಸ್ಥಿತಿ ಗಂಭೀರವಾಗಿದೆ.

      • Udayavani | Aug 06, 2012

        ವಿಸ್ಕಾನ್ಸ್‌: ಇಲ್ಲಿನ ಓಕ್‌ ಕ್ರೀಕ್‌ನಲ್ಲಿರುವ ಗುರುದ್ವಾರದಲ್ಲಿ ನಡೆದ ಗುಂಡೆಸೆತದಲ್ಲಿ ಕನಿಷ್ಠ ಆರು ಮಂದಿ ಸತ್ತು, ಸುಮಾರು 20 ಮಂದಿ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

        ಸ್ಥಳೀಯ ಕಾಲಮಾನ ಪೂರ್ವಾಹ್ನ 11 ಗಂಟೆಗೆ ವ್ಯಕ್ತಿಯೋರ್ವ ಗುರುದ್ವಾರದೊಳಗೆ ನುಗ್ಗಿ ಬೇಕಾಬಿಟ್ಟಿ
        ಗುಂಡು ಹಾರಿಸಿದನು. ಆಗ ಗುರುದ್ವಾರದೊಳಗೆ ಸುಮಾರು 100 ಮಂದಿ ಸಿಕ್ಖರಿದ್ದರು. ದಾಳಿ ಮಾಡಿದಾತ ಬಿಳಿಯನಾಗಿದ್ದು, ಕಟ್ಟುಮಸ್ತು ದೇಹ ಹೊಂದಿದ್ದನು.ಆತನ ತೋಳಲ್ಲಿ 9/11 ಎಂಬ ಟ್ಯಾಟೂ ಇದ್ದು ಆತ ಅಲ್ಲಿಂದ ಪರಾರಿಯಾದನೆಂದು ಓರ್ವ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಆದರೆ ದಾಳಿಕೋರ ಒಬ್ಬನಾಗಿರದೆ, ಆತನ ಜತೆ ಹಲವರಿದ್ದರು. ಅವರಿನ್ನೂ ಗುರುದ್ವಾರದೊಳಗಿದ್ದಾರೆ. ಅವರು ಮಕ್ಕಳನ್ನು ಒತ್ತೆ ಇರಿಸಿಕೊಂಡಿರುವರೆಂಬ
        ಗೊಂದಲಕಾರಿ ವರದಿಗಳೂ ಬರುತ್ತಿವೆ.

        ಅಮೆರಿಕಾ ಅಧ್ಯಕ್ಷ ಒಬಾಮಾ ಅವರು ಭದ್ರತೆಯ ಕುರಿತು ಪರಿಶೀಲಿಸಿ ಗುರುದ್ವಾರ ಕಾರ್ಯದರ್ಶಿಯನ್ನು ಸಂಪರ್ಕಿಸಿ ಘಟನೆಯ ಕುರಿತಾಗಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus