ಮಹಮ್ಮದ್ ಮುಸ್ತಫಾ, ಆತೂರು | Aug 07, 2012
ಭಾರತದ ಸಂದರ್ಭದಲ್ಲಿ ನಾವು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವುದೇನೆಂದರೆ ವೈವಿಧ್ಯತೆ ಭಾರತದ ಡಿಎನ್‌ಎಯ ಭಾಗವಾಗಿದೆ. ಭಿನ್ನ ಜೀವನ ಶೈಲಿಗಳು ಮತ್ತು ಆಳವಾದ ಸಾಂಸ್ಕೃತಿಕ ವೈವಿಧ್ಯತೆ ಇರುವ ಈ ದೇಶದಲ್ಲಿ ಯಾವ ಮಟ್ಟದಲ್ಲಿ ಭಿನ್ನತೆಗಳನ್ನು ಸ್ವೀಕರಿಸಿ ಅವುಗಳ ಜೊತೆ ರಾಜಿ ಮಾಡಿಕೊಂಡು ಬದುಕಬೇಕು? ಜಗತ್ತಿಗೆ ನಮ್ಮ ಮುಕ್ತತೆ, ಬದುಕಿನ ಬಹುರೂಪಿ ಮನೋಧರ್ಮ, ಅಸಂಖ್ಯ ಅಸ್ಮಿತೆಗಳನ್ನು ಒಳಗೊಳ್ಳುವ ಶಕ್ತಿ, ಅವುಗಳ ಜೊತೆಗೆ ಬದುಕುವ ನಮನೀಯತೆ ಮತ್ತು ಸಮನ್ವಯ ದೃಷ್ಟಿಕೋನವೇ ನಮ್ಮ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆಗಳ ಜೀವಾಳವೆನಿಸಿದೆ.
ನನ್ನ ದೇಶ-ಕಾಲಗಳಲ್ಲಿ ಆಹಾರ, ಆಚಾರ-ವಿಚಾರ, ಆರಾಧನೆ, ಆರ್ಥಿಕ ವ್ಯವಸ್ಥೆ ಮತ್ತು ಆಡಳಿತ ನೀತಿಗಳ ವೈವಿಧ್ಯತೆಯನ್ನು ಗಮನಿಸಿದಾಗ ನಿಜಕ್ಕೂ ಅಚ್ಚರಿಯೆನಿಸುತ್ತದೆ. ಸಾಂಸ್ಕೃತಿಕ ಭಿನ್ನತೆಗಳು ಜಗತ್ತನ್ನು ಶ್ರೀಮಂತಗೊಳಿಸಿದರೆ ಕೆಲವೊಮ್ಮೆ ದುಬಾರಿ ಸಂಘರ್ಷ, ಅಪಾರ್ಥ, ಅನರ್ಥಕ್ಕೂ ಕಾರಣವಾಗಿವೆ. ಒಂದು ಸಮುದಾಯದ ವಾಸಸ್ಥಳ, ಹವಾಮಾನ, ಜನಾಂಗ, ಇತಿಹಾಸ, ಜಾತಿ-ವರ್ಗ, ಶಿಕ್ಷಣ, ಆರ್ಥಿಕ ಸ್ಥಿತಿಗತಿಗಳು ಸಾಂಸ್ಕೃತಿಕ ವ್ಯತ್ಯಾಸಗಳಿಗೆ ಕಾರಣಗಳೆನಿಸಿವೆ. ಪಶ್ಚಿಮ ಯುರೋಪಿನಲ್ಲಿ ಮುಖ್ಯವಾಗಿ ವಲಸೆ ಬಹುಸಂಸ್ಕೃತಿವಾದಕ್ಕೆ ಹೊಸ ಆಯಾಮವನ್ನು ನೀಡಿದೆ. ಧರ್ಮ-ವಿಶ್ವಾಸಗಳ ಬಹುತ್ವದ ಸಮಸ್ಯೆಗೆ ಏನು ಪರಿಹಾರ?- ಎಂಬುದು ವಿದ್ವಾಂಸರ ಚರ್ಚೆಗೆ ಕಾರಣವಾಯಿತು.
ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶಗಳ ಸಮಾನತೆ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವುದು ಸೆಕ್ಯುಲರ್ ತತ್ವವೆನಿಸಿತು. ಭಾರತದಂತಹ ವೈವಿಧ್ಯಮಯ ಸಂಸ್ಕೃತಿ, ಧರ್ಮ, ಭಾಷೆ, ಜನಾಂಗ ಮತ್ತು ಪ್ರಾದೇಶಿಕತೆಯ ದೇಶದಲ್ಲಿ ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ಆಡಳಿತ ಎಲ್ಲಾ ಸಮುದಾಯಗಳ ಅಸ್ಮಿತೆಯನ್ನು ರಕ್ಷಿಸಬೇಕೆಂದು ಹೆಬರ್ಮಾಸ್‌ರಂತಹ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇಲ್ಲಿ ಅಸ್ಮಿತೆಗಳು ಸಂವಿಧಾನಾತ್ಮಕ ತತ್ವಗಳ ಮೇಲೆ ಆಧರಿಸಿರಬೇಕೇ ಹೊರತು ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳ ಆಧಾರದಲ್ಲಲ್ಲ. ಆದರೆ ಇದು ಕಾರ್ಯ ಸಾಧುವೇ? ರಾಜಕೀಯ ಮತ್ತು ಕಾನೂನುಗಳು ಒಂದು ಸಮಾಜದ ನೈತಿಕ ಮತ್ತು ಸಾಂಸ್ಕೃತಿಕ ತಳಹದಿಯ ಮೇಲೆ ರೂಪುಗೊಂಡಿರುತ್ತವೆ. ಬಹುಸಂಸ್ಕೃತಿಯ ದೇಶಗಳು ಒಳಗೊಂಡಿರುವ ಸಂಕೀರ್ಣತೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹು ದೊಡ್ಡ ಸವಾಲಾಗಿದೆ. ಕೆನಡಾ, ಫ್ರಾನ್ಸ್, ಸ್ವೀಡನ್ ಮತ್ತು ಬ್ರಿಟನ್ ದೇಶಗಳಲ್ಲಿ ಈ ಬಗೆಯ ಸಮಸ್ಯೆಗಳು ಆಗಾಗ್ಗೆ ತೀವ್ರ ಸ್ವರೂಪವನ್ನು ಪಡೆದುಕೊಂಡಿರುವುದು ನಮ್ಮ ಮುಂದಿದೆ.
ಬ್ರಿಟನ್‌ನಲ್ಲಿ 1960ರಲ್ಲಿ ಸಿಕ್ಖರು ತಮ್ಮ ಶಿರವಸ್ತ್ರ ಧರಿಸುವ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಸಿಕ್ಖ್ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪ್ರವೇಶಾತಿಯ ಸಮಸ್ಯೆಯೂ ಎದುರಾಗಿತ್ತು. ಕಾನೂನಿನ ಮಾರ್ಗಗಳ ಮೂಲಕ ಸಿಕ್ಖ್ ಸಮುದಾಯದ ವಿರುದ್ಧದ ತಾರತಮ್ಯಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗಿತ್ತು. ಪ್ರೊ| ಗುರುಪಾಲ್‌ಸಿಂಗ್ ಮತ್ತು ದರ್ಶನ್‌ಸಿಂಗ್ ಟಾಲ್ಟ ಈ ಹೋರಾಟದ ಮುಂಚೂಣಿಯಲ್ಲಿದ್ದರು. 1983ರಲ್ಲಿ ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಸಿಕ್ಖರನ್ನು ಒಂದು ಜನಾಂಗೀಯ ಗುಂಪಾಗಿ ಮಾನ್ಯತೆ ನೀಡಿ ಅವರಿಗೆ ವಿಶೇಷ ಹಕ್ಕು ಗಳನ್ನು ನೀಡಲಾಯಿತು. ಇತ್ತೀಚಿನ ವರ್ಷಗಳಿಂದ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಮತ್ತು ಜಾಬ್ (ಸ್ಕಾಫ್ì) ತೀವ್ರ ವಾದಕ್ಕೆ ಕಾರಣವಾಯಿತು.
2009ರಲ್ಲಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಮಖಾವೋದಲ್ಲಿನ ತನ್ನ ಭಾಷಣದಲ್ಲಿ ಬುರ್ಖಾ ಪ್ರತ್ಯೇಕತೆಯ ಸಂಕೇತ ಮತ್ತು ಸಮಗ್ರತೆಯ ಪ್ರಕ್ರಿಯೆಗೆ ವಿರುದ್ಧವೆಂದು ಕಿಡಿ ಕಾರಿದ್ದರು. ಆಯೀಷಾ ಅಜ್ಮಿ ಎಂಬ ಶಿಕ್ಷಕಿಯನ್ನು ಈ ಕಾರಣಕ್ಕಾಗಿ ಶಾಲೆಯಿಂದ ಅಮಾನತು ಮಾಡಲಾಗಿತ್ತು. ಈಗಿನ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರಾನ್ ಮ್ಯೂನಿಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಬುರ್ಖಾದಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಪ್ರಾಯೋಜಿತ ಬಹುಸಂಸ್ಕೃತಿಯನ್ನು ಕೊನೆಗೊಳಿಸಲು ಕಾಲ ಪಕ್ವವಾಗಿದೆ ಎಂದಿದ್ದರು. ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ನಿರ್ಲಿಪ್ತ ಸಹಿಷ್ಣುತೆಯನ್ನು ಕೊನೆಗಾಣಿಸಿ ಪಶ್ಚಿಮದ ಮೌಲ್ಯಗಳಿಗೆ ಹೆಚ್ಚು ಕ್ರಿಯಾಶೀಲವಾದ ತೋಳ್ಬಲದ ಉದಾರವಾದ (Muscular Liberalism)ವನ್ನು ಪರ್ಯಾಯವಾಗಿ ಅನುಸರಿಸಬೇಕೆಂದು ಹೇಳಿದ್ದರು. 2005ರ ಲಂಡನ್ ಬಾಂಬ್ ದಾಳಿ ಮತ್ತು 9/11ರಂತಹ ಘಟನೆಗಳ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಇಂತಹ ವಾದಗಳಿಗೆ ಹೆಚ್ಚು ಪುಷ್ಟಿ ದೊರೆಯಿತು.

ವಿವಿಧ ಧರ್ಮ ಸಂಸ್ಕೃತಿಗಳ ಜನರ ನಡುವೆ ಬದುಕುವಾಗ ಅವರೊಂದಿಗಿನ ದೈನಂದಿನ ವ್ಯವಹಾರಗಳು, ಸಂಬಂಧಗಳು, ಅಭಿರುಚಿಗಳು ಮತ್ತು ಆಶೋತ್ತರಗಳ ವಿಷಯಗಳಲ್ಲಿ ಆರೋಗ್ಯಪೂರ್ಣ ಸಂವಾದಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ದೇಶ ನಮ್ಮದು. ನಾವು ಪ್ರಜಾಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯಸಾಧುವಾದ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತು ರಚನಾತ್ಮಕವಾಗಿ ಚಿಂತಿಸಬೇಕಿದೆ.
ಇತ್ತೀಚಿನ ದಿನಮಾನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸ್ಕಾಫ್ì ವಿವಾದಗಳು ಜ್ಞಾನದೇಗುಲಗಳ ಪಾವಿತ್ರÂ ಮತ್ತು ಜ್ಞಾನ ತಪಸ್ಸಿಗಾಗಿ ಶಿಕ್ಷಣ ಸಂಸ್ಥೆಗಳ ಕದ ತಟ್ಟಿ ಬಂದಿರುವ ವಿದ್ಯಾರ್ಥಿಗಳ ಶುಭ್ರ ಮತ್ತು ನಿಷ್ಕಳಂಕ ಮನಸ್ಸುಗಳನ್ನು ಕಲುಷಿತಗೊಳಿಸುವ ಮಟ್ಟಕ್ಕೆ ಬಂದಿರುವುದು ನಿಜಕ್ಕೂ ವಿಷಾದನೀಯ. ಇದರಿಂದಾಗಿ ಮಾನವೀಯ ಮೌಲ್ಯಗಳು, ಜ್ಞಾನ ಸಂಸ್ಕಾರಗಳು, ಸದಾಚಾರ ಮತ್ತು ಸದೌ¾ಲ್ಯಗಳನ್ನು ರೂಢಿಸಿಕೊಳ್ಳುವ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡುವ ಬದಲಾಗಿ ವಿದ್ಯಾರ್ಥಿಗಳನ್ನು ವಿಮುಖರನ್ನಾಗಿಸುವ ಮತ್ತು ವಿಚಲಿತರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಖಂಡನೀಯ.
ದೊಡ್ಡವರು ತೆಗೆದುಕೊಳ್ಳುವ ವಿವೇಚನಾರಹಿತ ಕ್ರಮಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಾರದು. ಸ್ಕಾಫ್ì ಧರಿಸುವ ವಿಷಯದಲ್ಲಿ ಮುಸ್ಲಿಂ ಪಂಡಿತವರ್ಗ ನಿರ್ದಿಷ್ಟ ಕಾರಣವೊಂದಕ್ಕೆ "ಫತ್ವಾ' ಹೊರಡಿಸುವ ಸಾಧ್ಯತೆಗಳಿಲ್ಲ. ನಮ್ಮ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳನ್ನು ಇನ್ನೊಬ್ಬರು ಗೌರವಿಸುವ ರೀತಿಯಲ್ಲಿ ಅವರ ಮನವೊಲಿಸಿ ವ್ಯವಹರಿಸಬೇಕೇ ಹೊರತು ಪಟ್ಟು ಸಡಿಲಿಸದೆ ಸಂಘರ್ಷ ಧೋರಣೆಯನ್ನು ತಾಳುವುದು ಅಸಹನೆಯ ಪರಮಾವಧಿ ಎನಿಸುತ್ತದೆ. ನಮ್ಮ ಖಾಸಗಿ ಬದುಕಿನಲ್ಲಿ ನಾವು ಧಾರ್ಮಿಕ ಕಟ್ಟುಪಾಡುಗಳನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡುತ್ತಾ ಸಮಸ್ಯೆಗಳನ್ನು ತಿಳಿಯಾಗಿಸಬೇಕೇ ಹೊರತು ಹಾದಿ-ಬೀದಿಗೆ ತರುವುದು ಸಮಂಜಸವಲ್ಲ. ಧಾರ್ಮಿಕ, ಸಾಂಸ್ಕೃತಿಕ ಭಿನ್ನತೆಗಳು ಬಂದಾಗ ವಿಕಾರವನ್ನು ತೋರದೆ ಸಹಕಾರ ಮನೋಭಾವದಿಂದ, ಸಹನೆಯಿಂದ ಚರ್ಚಿಸಿ ಸಂವಾದದಲ್ಲಿ ತೊಡಗುವ ಮುಕ್ತ ಮನಸ್ಸುಗಳನ್ನು ಹೊಂದಿದರೆ ವಿವಾದಗಳು ಅಂತ್ಯ ಕಾಣಬಹುದೇನೋ?
ಮಹಮ್ಮದ್ ಮುಸ್ತಫಾ, ಆತೂರು

\