Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ಪ್ರೆà ಉಡುಗೆ
      • Udayavani | Sep 19, 2010

        ದೇಹಕ್ಕೆ ಸಿಂಪಡಣೆಯ ಮೂಲಕ ತೊಡಿಸಬಹುದಾದ ತೊಡುಗೆ ಯಿದೀಗ ಬಂದಿದೆ. ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ಮತ್ತು ಫೇಬ್ರಿಕನ್‌ ಎನ್ನುವ ಕಂಪೆನಿಗಳು ಸೇರಿ ತಯಾರಿಸಿರುವ ದ್ರವವನ್ನು ಸಿಂಪಡಿಸಿ, ಬಿಗಿ ಉಡುಗೆಗಳನ್ನು ದೇಹಕ್ಕೆ ಅಳವಡಿಸುವುದು ಸಾಧ್ಯ. ಈ ದ್ರವದಲ್ಲಿ ಎಳೆಯ ನಾರುಗಳನ್ನು ಪಾಲಿಮರ್‌ನೊಂದಿಗೆ ಮಿಶ್ರ ಮಾಡಿ ಇಡಲಾಗುತ್ತದೆ. ಹೀಗಾಗಿ ಸಿಂಪಡಿಸಿದಾಗ, ಪಾಲಿಮರ್‌ ಒಣಗಿ, ದೇಹಕ್ಕೆ ನಾರಿನ ಪದರದ ತೊಡುಗೆಯನ್ನು ಒದಗಿಸುತ್ತದೆ. ಈ ಬಿಗಿ ಉಡುಗೆಯನ್ನು ಜಾಗರೂಕತೆಯಿಂದ ತೆಗೆದು ಮಡಿಸಿಡಲೂ ಸಾಧ್ಯವೆನ್ನುವುದು ಮತ್ತೂಂದು ವಿಶೇಷ. ಇದನ್ನು ವಿವಿಧ ಬಣ್ಣಗಳ ನಾರಿನಿಂದ ತಯಾರಿಸಬಹುದು. ಹಾಗೆಯೇ ನಾರು ಕೂಡಾ ಬೇರೆ ಬೇರೆ ಮೂಲದ್ದಿರಬಹುದು. ಕೃತಕ ಅಥವಾ ಹತ್ತಿಯ ನಾರನ್ನೂ ಬಳಸಲು ಸಾಧ್ಯ. ಸ್ಪ್ರೆà ಗನ್‌ ಅಥವಾ ಎರೋಸೋಲ್‌ ಬಳಸಿ ಸಿಂಪಡಣೆ ಮಾಡಬಹುದು. ಗಾಯಗಳಿದ್ದ ದೇಹಕ್ಕೆ ಬ್ಯಾಂಡೇಜು ಬಿಗಿಯಲೂ ಈ ತಂತ್ರವನ್ನು ಬಳಸಬಹುದು. ಹಾಗಾಗಿ ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲೂ ಉಪಯೋಗವಿದೆ.

        ಟ್ವಿಟರ್‌ ಪುಟ ಬೆಟರ್‌!
        ಟ್ವಿಟರ್‌ ಬಳಕೆದಾರರು ಸಾಮಾನ್ಯವಾಗಿ ಟ್ವಿಟರ್‌ ಪುಟಕ್ಕೇ ಹೋಗುವುದಿಲ್ಲ. ಟ್ವಿಟರನ್ನು ಸಿಸ್ಮಿಕ್‌, ಬ್ರಿಜಿÉà, ಟ್ವಿàಟ್‌ಡೆಕ್‌ ಹೀಗೆ ಇತರ ತಂತ್ರಾಂಶಗಳ ಮೂಲಕವೋ ವೆಬ್‌ಪುಟಗಳ ಮೂಲಕವೋ ತೆರೆಯುವುದೇ ಹೆಚ್ಚು. ಬಳಕೆದಾರರು ನೇರವಾಗಿ ಠಿಡಿಜಿಠಿಠಿಛಿr.cಟಞ  ವಿಳಾಸಕ್ಕೇ ಬರುವಂತೆ ಮಾಡಬಲ್ಲ ಚಂದವಾದ್ದ  ಟ್ವಿಟರ್‌ ಪುಟವನ್ನು ಟ್ವಿಟರ್‌ ವಿನ್ಯಾಸಗೊಳಿಸಿದೆ. ಸದ್ಯದ ಕೋಟಿಗಟ್ಟಲೆ ಬಳಕೆದಾರರಿಗೆ ಹಳೆಯ ವಿನ್ಯಾಸದ ಪುಟವೇ ಈಗಲೂ ಲಭ್ಯವಾದರೂ ಹೊಸತಾಗಿ ನೋಂದಾಯಿಸಿ ಕೊಂಡವರಿಗೆ ಎರಡು ಭಾಗವಾಗಿ ಕಾಣಿಸಿಕೊಳ್ಳುವ ಹೊಸ ಪುಟದ ಟ್ವಿಟರ್‌ ಸೌಕರ್ಯ ಸಿಗುತ್ತದೆ. ಸಂದೇಶಗಳನ್ನು ವರ್ಗೀಕರಿಸಿ ಟ್ಯಾಬ್‌ಗಳಲ್ಲಿ ತೋರಿಸುವುದು, ಬಳಕೆದಾರ ಕಳುಹಿಸಿದ ಸಂದೇಶಗಳನ್ನು ಬಲಗಡೆಯಲ್ಲಿ ಪ್ರತ್ಯೇಕವಾಗಿಸಿ ಪ್ರದರ್ಶಿಸುವುದು, ಉಚ್ಚಮಟ್ಟದ ಶೋಧ ಫಲಿತಾಂಶ -ಇವು ಹೊಸ ಟ್ವಿಟರಿನ ಮುಖ್ಯ ಬದಲಾವಣೆಗಳು. ಜನರು ಟ್ವಿಟರ್‌ ತಾಣಕ್ಕೆ ಬರುವಂತೆ ಮಾಡಿ, ಪುಟಗಳಲ್ಲಿ ಜಾಹೀರಾತು ನೀಡುವಂತೆ ಜಾಹೀರಾತು ದಾರರನ್ನು ಆಕರ್ಷಿಸುವತ್ತ ಟ್ವಿಟರ್‌ ಮುನ್ನಡೆದಿದೆ ಎಂದರೆ ತಪ್ಪಾಗಲಾರದು.ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿಯೂ ಜಾಹೀರಾತು ಬಲ ಇಲ್ಲದೆ, ನಷ್ಟದಲ್ಲಿರುವ ಸ್ಥಿತಿಯಿಂದ ಟ್ವಿಟರ್‌ ಕಂಪೆನಿ ಹೊರಬರಲೇ ಬೇಕಿದೆ.

        ಇ-ಡೈರಿ ಬರೆಯಿರಿ
        ಡಿಜಿಟಲ್‌ ಪೆನ್‌ ಬಳಸಿ ಕಾಗದ ದಲ್ಲಿ ಬರೆದದ್ದನ್ನು ಕಂಪ್ಯೂಟರ್‌ನಲ್ಲಿ ಉಳಿಸುವ ಇ-ಡೈರಿ ಈಗ ಭಾರತ ದಲ್ಲೂ ಲಭ್ಯವಾಗಿದೆ. ಹೈಟೆಕ್‌ ಸೊಲ್ಯುಶನ್‌ ಎಂಬ ಕಂಪೆನಿಯ ಇ- ಡೈರಿಯ ಡಿಜಿಟಲ್‌ ಪೆನ್‌ ಫ್ಲಾಶ್‌ ಸ್ಮರಣಕೋಶ ಹೊಂದಿರುವುದರಿಂದ ಬರೆದ ದ್ದನ್ನು ಉಳಿಸಿ, ಅನಂತರ ಕಂಪ್ಯೂಟರಿಗೆ ವರ್ಗಾಯಿಸುವ ಅನುಕೂಲವನ್ನೂ ಒದಗಿಸುತ್ತದೆ. ಒಂದು ಸಲಕ್ಕೆ ನೂರು ಪುಟಗಳನ್ನು ಉಳಿಸಿಕೊಳ್ಳುವ ಸ್ಮರಣ ಸಾಮರ್ಥ್ಯ ಡಿಜಿಟಲ್‌ ಪೆನ್‌ಗಿದೆ. ಹತ್ತು ಸಾವಿರ ರೂಪಾಯಿ ಬೆಲೆಯ ಇ-ಡೈರಿ, ಕಲಾವಿದರಿಗೆ ಚಿತ್ರವನ್ನು ಕಂಪ್ಯೂಟರಿನಲ್ಲಿ ಮೂಡಿಸಲು ಬಹು ಸಹಕಾರಿಯಾಗಬಹುದು. ಚಿತ್ರವನ್ನು ಮಾರ್ಪಡಿಸಲು, ಅಡೊಬ್‌, ಕೊರೆಲ್‌ಡ್ರಾದಂತಹ ತಂತ್ರಾಂಶಗಳಲ್ಲಿ ತೆರೆಯಲು ಇದನ್ನು ಬಳಸಬಹುದು.

        ಬಿಎಸ್ಸೆನ್ನೆಲ್‌ ಅಪರಿಮಿತ ಬ್ರಾಡ್‌ಬ್ಯಾಂಡ್‌
        ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಜನರಿಗೆ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಬಿಎಸ್ಸೆನ್ನೆಲ್‌ ಇದೀಗ ಮತ್ತಷ್ಟು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಅಪರಿಮಿತ ಬ್ರಾಡ್‌ಬ್ಯಾಂಡ್‌ ಯೋಜನೆಗಳಾದ ಇವುಗಳಲ್ಲಿ ಬಳಕೆದಾರ ಬಳಸಬಹುದಾದ ಬ್ಯಾಂಡ್‌ವಿಡ್‌¤ ಮೇಲಿನ ಪರಿಮಿತಿ ಇರದು. ಕನಿಷ್ಠವೆಂದರೆ ಮಾಸಿಕ ದರ ರೂ. 499ರದ್ದು. ಇದು 256 ಕೆಬಿಪಿಎಸ್‌ ವೇಗದಲ್ಲಿ ಅಂತರ್ಜಾಲ ಸಂಪರ್ಕವನ್ನು ಗ್ರಾಹಕನಿಗೆ ನೀಡುತ್ತದೆ. ಮಾಸಿಕ 100 ಕರೆಗಳೊಂದಿಗೆ 256 ಕೆಬಿಪಿಎಸ್‌ ವೇಗದ ಅಂತರ್ಜಾಲ ಬೇಕಿದ್ದರೆ ಮಾಸಿಕ ಶುಲ್ಕ ರೂ. 625 ಆಗುತ್ತದೆ.  ರೂ.750 ಶುಲ್ಕ ನೀಡಿದರೆ, 512 ಕೆಬಿಪಿಎಸ್‌ ವೇಗದ ಅಂತರ್ಜಾಲ ಅಪರಿಮಿತ ಬಳಕೆಗೆ ಲಭ್ಯ. ಮಾಸಿಕ ಶುಲ್ಕ ರೂ.900ಕ್ಕೆ 2 ಎಂಬಿಪಿಎಸ್‌ ವೇಗದ ವರೆಗಿನ ಅಂತರ್ಜಾಲ ನಾಲ್ಕುನೂರು ಉಚಿತ ಧ್ವನಿಕರೆಗಳೊಂದಿಗೆ ಲಭ್ಯವಾಗಲಿದೆ. ಅದೇ ರೀತಿ 1,000, 1,350, 1,400, 1,700 ರೂ.ಗಳ ಯೋಜನೆಗಳೂ ಹೆಚ್ಚಿನ ವೇಗ ಮತ್ತು ಉಚಿತ ಕರೆಗಳೊಂದಿಗೆ ಲಭ್ಯವಿವೆ. ಇವೆಲ್ಲವೂ ಗೃಹಬಳಕೆಗೆ ಇರುವ ಬ್ರಾಡ್‌ಬ್ಯಾಂಡ್‌ ಯೋಜನೆಗಳು.

        ನವೆಂಬರ್‌: ಹಳೆ ಸಂಖ್ಯೆ - ಸೇವೆ ವಲಸೆ
        ಮೊಬೈಲ್‌ ಸೇವಾದಾತೃವನ್ನು ಬದಲಿಸಿದಾಗಲೂ ಹಳೆಯ ಸಂಖ್ಯೆ ಉಳಿಸಿಕೊಳ್ಳುವ ಸೌಲಭ್ಯವು ನವೆಂಬರ್‌ ಒಂದರ ಅನಂತರ ಸಿಗುವುದು ಈಗ ಖಚಿತವೆನಿಸಿದೆ. ವಿವಿಧ ಮೊಬೈಲ್‌ ಕಂಪೆನಿಗಳು ಇದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ನಂಬರ್‌ ಪೋಟೇìಬಿಲಿಟಿ ಸೇವೆಯನ್ನು ನೀಡಲು ತಯಾರಾಗಿವೆ. ಎಲ್ಲವೂ ಎಣಿಸಿದಂತೆಯೇ ನಡೆದಿದ್ದರೆ ಇದೀಗಲೇ ಇಂತಹ ಸೇವೆ ಲಭ್ಯವಾಗಬೇಕಿತ್ತು. ಆದರೆ ಕಂಪೆನಿಗಳ ಮೀನಮೇಷದಿಂದ ತಡವಾಗಿದೆ. ಸೇವೆ ಬದಲಿಸಿದರೆ ಹೊಸ ನಂಬರ್‌ಗೆ ಬದಲಾಯಿಸಬೇಕಾಗು ತ್ತದೆ ಎನ್ನುವ ಕಾರಣಕ್ಕೆ ಹಳೆಯ ಕಂಪೆನಿಗೇ ಕಟ್ಟು ಬೀಳಬೇಕಾದ ಪ್ರಮೇಯ ದಿಂದ ಬಳಕೆದಾರನಿಗೆ ಬಿಡುಗಡೆ ಸಿಗುವುದು ನಿಜಕ್ಕೂ ಸ್ವಾಗತಾರ್ಹ.
        ಎಸ್ಸೆಮ್ಮೆಸತ್ಯ


        ಎಸ್ಸೆಮ್ಮೆಸ್‌ ಸಂದೇಶಗಳನ್ನೇ ಸಂಗ್ರಹಿಸಿ ನೀಡಿರುವ ಬ್ಲಾಗು

        http://smsathya.blogspot.com/ನಲ್ಲಿದೆ. ಶಿವಮೊಗ್ಗದ ಸತ್ಯಚರಣ ಈ ಬ್ಲಾಗಿನ ಬರಹಗಾರರು. ವೃತ್ತಿ ಎಂಜಿನಿಯರ್‌, ತಂತ್ರಾಂಶ ಪ್ರವೀಣ. ಸಿಫಿ ಕಂಪೆನಿಯ ಉದ್ಯೋಗಿ. ತರಬೇತಿ ನೀಡುವ ಕೆಲಸವನ್ನೂ ಇವರು ಮಾಡುವುದಿದೆ. ಕಿರು ಸಂದೇಶಗಳು ನೀಡುವ ಕಚಗುಳಿ ಹಿತವಾಗುವವರಿಗೆ ಕಣ್ಣಾಡಿಸಲು ಈ ಬ್ಲಾಗು ಸೂಕ್ತ ಸ್ಥಳ.

         

        ಟ್ವಿಟರ್‌ ಚಿಲಿಪಿಲಿ
        * ಎಂಜಿನಿಯರ್‌ ದಿನದ ತಪ್ಪೊಪ್ಪಿಗೆ: ಅಂದು ನಾನು ಎಂಜಿನಿಯರ್‌
        ಆಗಿದ್ದೆ, ಇಂದು ಉದ್ಯೋಗಿಯಾಗಿದ್ದೇನೆ...
        * ಸುಖವಾಗಿರಲು ನನಗೆ ಬೇಕಾದ್ದು ಸ್ವಲ್ಪ$ ಪ್ರೀತಿ, ಸ್ವಲ್ಪ$ ಗೌರವ
        ಮತ್ತು ತುಂಬಾ ತುಂಬಾ ಹಣ...
        * ಹೃದಯ ಕಲಕಿದ ಮಗುವಿನ ಮುಗ್ಧ ಮಾತು: ಎದುರು ಮನೆಯಲ್ಲಿ
        ಹಲವಾರು ಕಿಟಕಿಗಳಿವೆ, ಹಾಗೆಯೇ ನನ್ನ ಅಂಗಿಯಲ್ಲೂ...


        ಹೊಸ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌
        ಮೈಕ್ರೋಸಾಫ್ಟ್ ಕಂಪೆನಿಯ ಬ್ರೌಸರ್‌ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ನ ಹೊಸ ಆವೃತ್ತಿ ಒಂಬತ್ತನೆಯದು. ಬಳಕೆದಾರರಿಗೆ ಇದು ಈಗ ಲಭ್ಯವಾಗಿದೆ.ಎಚ್‌ಟಿಎಂಎಲ್‌5ನ್ನು ಬಳಸಲು ಅನುವು ಕೊಡುವಂತೆ ರಚಿಸಿರುವ ಕಾರಣ, ವಿಡಿಯೋ ಇರುವ ಪುಟಗಳಲ್ಲಿ ಬ್ರೌಸರ್‌ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಬ್ರೌಸರುಗಳು ಇತ್ತೀಚೆಗೆ ಮೊದಲಿನಂತೆ ಹೆಚ್ಚು ಗುಂಡಿಗಳು, ಮೆನುಗಳನ್ನು ಹೊಂದಿರುವುದಿಲ್ಲ. ಗೂಗಲ್‌ ಕ್ರೋಮ್‌ ಬ್ರೌಸರ್‌ ಮಾದರಿಯಲ್ಲೇ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಕೂಡಾ ಅತ್ಯಂತ ಕನಿಷ್ಠ ವಿನ್ಯಾಸ ಹೊಂದಿದೆ. ಹೆಚ್ಚಿನ ಸವಲತ್ತು ಬೇಕಾದರೆ ಪ್ಲಗಿನ್‌ಗಳನ್ನು ಅಳವಡಿಸಿಕೊಳ್ಳುವ ನೂತನ ವಿಧಾನಕ್ಕೆ ಮೈಕ್ರೋಸಾಫ್ಟ್ ಕೂಡಾ ಒಗ್ಗಿಕೊಂಡಿರುವುದು ಸ್ಪಷ್ಟ. ಇಂಟರ್ನೆಟ್‌ ಎಕ್ಸ್‌ಪ್ಲೋರರಿನಲ್ಲಿ ಭದ್ರತಾ ಕೊರತೆಯದ್ದೇ ಸಮಸ್ಯೆ. ಅದರ ಬಗ್ಗೆ ಮುಂದಿನ ದಿನಗಳಲ್ಲಷ್ಟೇ ಗೊತ್ತಾದೀತು.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus