Monday, May 20, 2013
Last Updated: 12:51:50 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಲಿಸೆಂಕೊ ಒಲಿಂಪಿಕ್‌ ದಾಖಲೆ
    • ತಾತ್ಯಾನಾ ಲಿಸೆಂಕೊ ಅವರು ಒಲಿಂಪಿಕ್‌ ದಾಖಲೆಯೊಂದಿಗೆ ವನಿತೆಯರ ಹ್ಯಾಮರ್‌ ಸ್ಪರ್ಧೆಯ ಚಿನ್ನವನ್ನು ಗೆದ್ದುಕೊಂಡಿದ್ದಾರ

      • Udayavani | Aug 11, 2012

        ಲಂಡನ್‌ : ಮಾಜಿ ವಿಶ್ವ ಚಾಂಪಿಯನ್‌ ರಶ್ಯದ ತಾತ್ಯಾನಾ ಲಿಸೆಂಕೊ ಅವರು ಒಲಿಂಪಿಕ್‌ ದಾಖಲೆಯೊಂದಿಗೆ ವನಿತೆಯರ ಹ್ಯಾಮರ್‌ ಸ್ಪರ್ಧೆಯ ಚಿನ್ನವನ್ನು ಗೆದ್ದುಕೊಂಡಿದ್ದಾರೆ.

        2011ರ ಎಪ್ರಿಲ್‌ನಲ್ಲಿ ಎರಡು ವರ್ಷಗಳ ನಿಷೇಧದಿಂದ ಮರಳಿದ್ದ 28ರ ಹರೆಯದ ಲಿಸೆಂಕೊ ಅವರು ಪೋಲಂಡಿನ ಅನಿತಾ ವೊಡರ್‌ಚಿಕ್‌ ಅವರನ್ನು ಕೆಡಹಿ ಚಿನ್ನ ಗೆದ್ದರು. ಹ್ಯಾಮರನ್ನು 78.18 ಮೀ. ದೂರಕ್ಕೆ ಎಸೆಯುವ ಮೂಲಕ ಲಿಸೆಂಕೊ ಒಲಿಂಪಿಕ್‌ ದಾಖಲೆಗೈದರೆ ಬೆಳ್ಳಿ ಗೆದ್ದ ವೂಡರ್‌ಚಿಕ್‌ 77.60 ಮೀ. ದೂರ ಎಸೆದರು. ಜರ್ಮನಿಯ ಬೆಟ್ಟಿ ಹೈಡ್ಲರ್‌ ಕಂಚು (77.13 ಮೀ.) ಗೆದ್ದರು.

        ಏಶ್ಯನ್‌ ದಾಖಲೆ ಹೊಂದಿರುವ ಚೀನದ ಝಾಂಗ್‌ ವೆನ್‌ಕ್ಸಿಯು ಅವರು ಕಂಚು ಪಡೆದ ಸಂಭ್ರಮ ಆಚರಿಸಿದರು. ಆದರೆ ಅವರ ಅಂತಿಮ ಪ್ರಯತ್ನವನ್ನು ಅಧಿಕಾರಿಗಳು ಫೌಲ್‌ ಎಂದು ತಿಳಿಸಿದ್ದರಿಂದ ಅವರು ಕಂಚಿನ ಪದಕದಿಂದ ವಂಚಿತರಾಗಬೇಕಾಯಿತು. ಇದನ್ನು ಪ್ರಶ್ನಿಸಿ ಚೀನ ತಂಡದ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೀನ್ಯಾದ ಅಲೆಕ್ಸ್‌ ಒಲೈಟಿಪ್‌ ಮತ್ತು ಗ್ಲೆಡ್ಸ್‌ ಚೆರೊನೊ ಪ್ರತಿಷ್ಠಿತ ವಿಶ್ವ 10ಕೆ ಮ್ಯಾರಥಾನ್‌ ಓಟದ ಪುರುಷ ಮತ್ತು ವನಿತೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ....
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus