Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಮತ್ತೆಂದು ಸಿಗುವರು ಆ ಮೇಷ್ಟ್ರು !
  • ಮತ್ತೆಂದು ಸಿಗುವರು ಆ ಮೇಷ್ಟ್ರು !

    • ಎಚ್‌. ಎಸ್‌. ವೆಂಕಟೇಶಮೂರ್ತಿ | Sep 03, 2012

      ನನ್ನ ಬಾಲ್ಯಕಾಲದ ಶಿಕ್ಷಕರ ನಡೆ, ನಿಲುವು, ವ್ಯಕ್ತಿ ವೈಶಿಷ್ಟ್ಯಗಳು ಈವತ್ತೂ ನನ್ನ ನೆನಪಲ್ಲಿ ಗಾಢವಾಗಿ ಅಚ್ಚೊತ್ತಿ ನಿಂತಿವೆ. ನಾನು ನನ್ನ ಬಾಲ್ಯ ಕಾಲವನ್ನು ಕಳೆದದ್ದು ಒಂದು ಸಣ್ಣ ಹಳ್ಳಿಯಲ್ಲಿ. ಅಲ್ಲಿಗೆ ನೇರವಾಗಿ ಬಸ್‌ ಸಂಪರ್ಕ ಸಹಾ ಆ ಕಾಲದಲ್ಲಿ ಇರಲಿಲ್ಲ. ಮುಖ್ಯ ಮಾರ್ಗಕ್ಕೆ ಎತ್ತಿನ ಬಂಡಿಯಲ್ಲಿ ಪಯಣಿಸಿ ನಾವು ಚಿತ್ರದುರ್ಗ, ಶಿವಮೊಗ್ಗದ ಬಸ್‌ ಹಿಡಿಯಬೇಕಾಗಿತ್ತು. ನಮಗೆ ಹತ್ತಿರದ ಟೌನ್‌ಗಳು ಎಂದರೆ ಪೂರ್ವಕ್ಕೆ ಹನ್ನೆರಡು ಮೈಲು ದೂರದಲ್ಲಿದ್ದ ಹೊಳಲಕೆರೆ. ಪಶ್ಚಿಮಕ್ಕೆ ಆರು ಮೈಲು ದೂರದಲ್ಲಿದ್ದ ಚನ್ನಗಿರಿ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿ¨ªಾಗ ಆ ಎರಡೂ ಸಣ್ಣ ಪೇಟೆಗಳಲ್ಲಿ ಪ್ರೌಢಶಾಲೆಯ ಕಟ್ಟಡಗಳ ನಿರ್ಮಾಣ ಶುರುವಾಗಿತ್ತು. ನಮ್ಮೂರಿನ ಮಕ್ಕಳು ಹೈಸ್ಕೂಲಲ್ಲಿ ಓದಬೇಕೆಂದರೆ ಚನ್ನಗಿರಿಗೋ, ಹೊಳಲಕೆರೆಗೋ ಹೋಗುವುದು ಅನಿವಾರ್ಯವಾಗಿತ್ತು. ಹಾಗಾಗಿ ಕೆಲವೇ ಗಂಡುಮಕ್ಕಳು ಮಾತ್ರ ನಮ್ಮೂರಲ್ಲಿ ಹೈಸ್ಕೂಲ್‌ ಅಭ್ಯಾಸ ಮುಂದುವರೆಸುತ್ತಿದ್ದರು. ಹೆಣ್ಣುಮಕ್ಕಳ ಓದು ಮಾಧ್ಯಮಿಕ ಶಾಲೆಗೇ ನಿಂತು ಹೋಗುತ್ತಿತ್ತು. ನಮ್ಮ ಮನೆಯದೇ ಲೆಕ್ಖ ಹಿಡಿದರೆ ನನ್ನ ಇಬ್ಬರು ಅಜ್ಜಿಯರೂ ಶಾಲೆ ಮೆಟ್ಟಿಲು ಹತ್ತಿದವರಲ್ಲ. ನಮ್ಮ ಅಜ್ಜ ಪ್ರಾಥಮಿಕ ಶಾಲೆ ಮಾತ್ರ ಮುಗಿಸಿದ್ದರು. ನಮ್ಮ ಅಜ್ಜ ಕನ್ನಡ ಓದು ಬರಹ ಬಲ್ಲವರಾಗಿದ್ದರು. ಇಂಗ್ಲಿಷ°ಲ್ಲಿ ಸೈನು ಮಾಡುವುದು ಮಾತ್ರ ಕಲಿತಿದ್ದರು. ನಮ್ಮ ಒಬ್ಬರು ಅಜ್ಜಿಗೆ ಹೆಬ್ಬಟ್ಟಿನ ಗುರುತು. ಇನ್ನೊಬ್ಬರು ಕನ್ನಡದಲ್ಲಿ ಸಹಿ ಮಾಡುವುದನ್ನು ಕಲಿತಿದ್ದರು. ಆದರೆ ಓದುವುದನ್ನು ಸ್ವಪ್ರಯತ್ನದಿಂದ ರೂಢಿಸಿ ಕನ್ನಡ ಕಾದಂಬರಿಗಳನ್ನು ಓದುವ ಮಟ್ಟಿಗೆ ಓದಿನ ಹವ್ಯಾಸ ಬೆಳೆಸಿಕೊಂಡಿದ್ದರು. ಕುಮಾರವ್ಯಾಸ ಭಾರತದ ಬಹಳಷ್ಟು ಪದ್ಯಗಳನ್ನು ಕಂಠಪಾಠ ಮಾಡಿ ರಾಗವಾಗಿ ಹಾಡ ಬಲ್ಲವರಾಗಿದ್ದರು. ಅವರ ಒಂದೇ ಬರವಣಿಗೆಯ ಪುಸ್ತಕ ಹಾಡಿನ ಪುಸ್ತಕವಾಗಿತ್ತು. ಇದು ಭೀಮಕ್ಕನ ಬಾಬ್ತು ಎಂದು ಅದರ ಮೇಲೆ ಯಾರಿಂದಲೋ ಬರೆಸಿಕೊಂಡು, ಅದನ್ನು ಜತನವಾಗಿ ತಮ್ಮ ಕಿರುಪೆಟ್ಟಿಗೆಯಲ್ಲಿಟ್ಟು , ತಾವು ಹಾಡು ಹೇಳುವ ಸಂದರ್ಭದಲ್ಲಿ ಮಾತ್ರ ಅದನ್ನು ಹೊರಕ್ಕೆ ತೆರೆಯುತ್ತಾ ಇದ್ದರು. ನಾವು ದೊಡ್ಡಮ್ಮ ಎಂದು ಕರೆಯುತ್ತಿದ್ದ ಇವರೇ ನನಗೆ ಓದಿನ ಹುಚ್ಚು ಹಿಡಿಸಿದ್ದು.

      ನಾನು ಪ್ರçಮರಿ ಮತ್ತು ಮಾಧ್ಯಮಿಕ ಅಭ್ಯಾಸವನ್ನು ನಮ್ಮ ಹಳ್ಳಿಯÇÉೇ ಮುಗಿಸಿದ್ದು. ನಮ್ಮೂರಲ್ಲಿ ಮಾಧ್ಯಮಿಕ ಶಾಲೆಗೆ ಒಂದು ಎಲ್‌ ಆಕಾರದ ಕಟ್ಟಡವಿತ್ತು. ಮೇಲೆ ಕೆಂಪು ಹೆಂಚು ಹೊದಿಸಿದ ಕಟ್ಟಡ. ಊರ ಹೊರಗೆ ಇದ್ದ ಒಂಟಿ ಕಟ್ಟಡ. ಶಾಲೆಯ ಕೈದೋಟದ ಮಧ್ಯೆ ಒಂದು ಚೆನ್ನಕೇಸರಿ ಮರ. ಅದರ ತುಂಬ ಕೆಂಪು ಹೂ ಹಿಡಿದಾಗ ಅದನ್ನು ನೋಡುವುದೇ ಒಂದು ವೈಭವ. ಆ ಮರದ ಸುತ್ತ ನಾಕು ಚೌಕಾಕಾರದ ಕೈದೋಟಗಳಿದ್ದವು. ಮಾಧ್ಯಮಿಕ ಶಾಲೆಯ ನಾಲಕ್ಕು ತರಗತಿಗಳಿಗೆ ನಾಲಕ್ಕು ಕೈದೋಟಗಳು. ಆ ತೋಟಗಳ ಆರೈಕೆ ಆಯಾ ತರಗತಿಯ ಮಕ್ಕಳದ್ದು. ಅದರ ಮೇಲ್ವಿಚಾರಕರು ನಮಗೆ ಇಂಗ್ಲಿಷ್‌ ಕಲಿಸುತ್ತಿದ್ದ ಉಜ್ಜೀನಪ್ಪ ಮಾಸ್ತರರು. ಅವರು ರೈತಾಪಿ ಕುಟುಂಬದಿಂದ ಬಂದವರಾಗಿದ್ದುದರಿಂದ ನೆಲ ಅಗಿಯುವುದು, ಮಡಿ ಮಾಡುವುದು, ಬೀಜ ಊರುವುದು, ಗಿಡ ಬೆಳೆಸುವುದು ಎಲ್ಲದರಲ್ಲೂ  ನಿಷ್ಣಾತರು. ಶಾಲೆಯ ಕೊನೆ ಪೀರಿಯಡ್ಡಿನಲ್ಲಿ ನಾವೆÇÉಾ ಸೇರಿ ತೋಟದ ಕೆಲಸ ಮಾಡುತ್ತಿ¨ªೆವು.

      ನಮ್ಮ ಮಾಸ್ತರರು ತಾವೇ ಖು¨ªಾಗಿ ಗುದ್ದಲಿ ಹಿಡಿದು ನಮಗೆ ನೆಲ ಅಗಿಯುವಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ನಮ್ಮ ಶಾಲೆಗೆ ಓದಿನ ಶಿಸ್ತು ತಂದವರೇ ಈ ಉಜ್ಜೀನಪ್ಪ ಮಾಸ್ತರರು. ನನಗೆ ಅವರ ಮುಖ ಸ್ವಲ್ಪ ಮಂಜು ಮಂಜಾಗಿದೆಯಾದರೂ, ಅವರ ಉದ್ದನೆ ಗಿಣಿ ಮೂಗು ಕಣ್ಣಿಗೆ ಕಟ್ಟಿದೆ. ಅವರ ಉಡುಪು ಯಾವಾಗಲೂ ಶ್ವೇತ ಶುಭ್ರ. ಕ್ರಾಫು ಮೆಟ್ಟಿಲು ಮೆಟ್ಟಿಲಾಗಿ ಇಳಿದಿತ್ತು. ಮೂಗಿನ ತುದಿಗೆ ಜಾರುವ ಕನ್ನಡಕ ಮತ್ತೆ ಮತ್ತೆ ಮೇಲೇರಿಸಿಕೊಳ್ಳುವುದು ಅವರ ಅಭ್ಯಾಸವಾಗಿತ್ತು. ಅವರ ಕೈಲಿರುತ್ತಿದ್ದ ರೂಲುದೊಣ್ಣೆಯನ್ನು ಅವರು ಯಾವತ್ತೂ ಮಕ್ಕಳನ್ನು ಹೊಡೆಯಲು ಬಳಸಲಿಲ್ಲ. ಆದರೆ ದೊಣ್ಣೆ ಅವರ ಕೈಯಲ್ಲಿ ಇರುತ್ತಾ ಇತ್ತು. ಪಾಠಮಾಡುವಾಗ ಅವರು ಅದನ್ನು ಮೂರು ಬೆರಳ ನಡುವೆ ಚಮತ್ಕಾರದಿಂದ ಹಿಡಿದು ಚಕ್ರಾಕಾರವಾಗಿ ತಿರುಗಿಸುತ್ತಿದ್ದುದು ನಮಗೆ ಆಶ್ಚರ್ಯದ ಸಂಗತಿಯಾಗಿತ್ತು. ಮನೆಗೆ ಹೋದಾಗ ನಾವೂ ಹಾಗೆ ಊದುಗೊಳಪೆ ತಿರುಗಿಸುವ ವ್ಯರ್ಥ ಸಾಹಸ ಮಾಡುತ್ತಿ¨ªೆವು. ಉಜ್ಜೀನಪ್ಪ ನಮಗೆ ಇಂಗ್ಲಿಷ್‌ ಕಲಿಸಿದರು ಎಂದು ಹೇಳಿದೆನಲ್ಲವೆ? ಪಾಠಗಳನ್ನು ಸು#ಟವಾಗಿ ಓದಲು ಕಲಿಸಿದ್ದು ಅವರು. ಉಚ್ಚಾರಣೆಯನ್ನು ಮತ್ತೆ ಮತ್ತೆ ತಿದ್ದುತ್ತಿದ್ದರು.

      ಪ್ರತಿಯೊಂದು ಶಬ್ದದ ಸ್ಪೆಲ್ಲಿಂಗನ್ನು ಉರುಹಚ್ಚಿ ತರಗತಿಯ ಮೊದಲು ನಾವು ಒಪ್ಪಿಸಬೇಕಿತ್ತು. ಯಾರು ಸರಿಯುತ್ತರ ಕೊಡುವರೋ ಅವರನ್ನು ಒಂದು ಚಾಕಿ³àಸ್‌ ಕೊಟ್ಟು ಬಹುಮಾನಿಸುತ್ತಿದ್ದರು. ನಾನು ಉಜ್ಜೀನಪ್ಪನವರಿಂದ ಸಂಪಾದಿಸಿದ ಚಾಕಿ³àಸುಗಳ ಭಂಡಾರವನ್ನೇ ಹೊಂದಿ¨ªೆ. ಅವು ನಾನು ಗೆದ್ದ ಬಹುಮಾನಗಳೆಂಬುದು ನನಗೆ ಮಾತ್ರವಲ್ಲ, ನಮ್ಮ ದೊಡ್ಡಮ್ಮನಿಗೂ ಹೆಮ್ಮೆಯ ಸಂಗತಿಯಾಗಿತ್ತು. ಮನೆಗೆ ಯಾರೇ ನಂಟರು ಬಂದರೆ ಚಾಕಿ³àಸುಗಳನ್ನು ಅವರ ಮುಂದೆ ಸುರುವಿ ಮೊಮ್ಮಗನ ಪ್ರತಾಪ ಕೊಚ್ಚಿವುದು ನಮ್ಮ ದೊಡ್ಡಮ್ಮನ ಹವ್ಯಾಸವಾಗಿತ್ತು.

      ಉಜ್ಜೀನಪ್ಪ ನಮ್ಮ ಶಾಲೆಯ ಹೆಡಾ¾ಸ್ಟರ್‌ ಆಗಿ ಬಂದ ಮೇಲೆ ಸ್ಕೂಲಿಗೆ ಒಂದು ಹೊಸ ಕಳೆ ಬಂದಿತ್ತು. ಸ್ಕೂಲಿನ ಗೋಡೆಗಳು ಸುಣ್ಣ ಬಣ್ಣ ಕಂಡವು. ಒಡೆದು ಹೋದ, ಮತ್ತು ಹಳ್ಳಿಯ ಜನ ಕ¨ªೊಯ್ದಿದ್ದ ಹೆಂಚುಗಳಿಂದ ಸೋರುವ ಚಪ್ಪರವಾಗಿದ್ದ ಮೇಲ್ಛಾವಣಿ ಹೊಸ ಹೆಂಚುಗಳನ್ನು ಕಂಡಿತು. ಮಾಸಿದ ಹೆಂಚುಗಳೊಂದಿಗೆ ಅಲ್ಲಲ್ಲಿ ಹೊಸ ಬಣ್ಣದ ಹೆಂಚು ಕಾಣುತ್ತಾ ನಮ್ಮ ಶಾಲೆಯ ಮೇಲ್ಛಾವಣಿ ವರ್ಣಮಯವಾಗಿ ಕಂಗೊಳಿಸುತ್ತ ಇತ್ತು.  ಹಾಗೇ ಶಾಲೆಯ ಮುಂದಿನ ಕೈದೋಟ ಅನೇಕ ಹೂ ಗಿಡಗಳಿಂದ ಕಂಗೊಳಿಸುತ್ತಾ ಇತ್ತು. ತೋಟಕ್ಕೆ ದನಗಳು ನುಗ್ಗದಂತೆ ಉಜ್ಜಿನಪ್ಪ ಮೇಷ್ಟ್ರು ಸುತ್ತಲೂ ಮೊಂಡು ಗಳ್ಳಿ ಬೇಲಿ ನೆಡಿಸಿದ್ದರು. ಈ ಮೊಂಡುಗಳ್ಳಿಯದು ಒಂದು ವಿಶೇಷವಿದೆ. ರಕ್ಕಸವಾಗಿ ಬೆಳೆಯುವ ಈ ಪೊದೆಗೆ ದಪ್ಪವಾದ ಎಲೆಗಳಿರುತ್ತವೆ. ಎಷ್ಟು ದಪ್ಪ ಎಂದರೆ ಆ ಎಲೆಯನ್ನು ಮಧ್ಯಕ್ಕೆ ಮಡಿಸಿದರೆ ಟಪ್‌ ಎಂದು ಸದ್ದು ಬರುತ್ತದೆ. ಹಾಗೆ ಎಲೆ ಮಡಿಸಿದಾಗ ಎಲೆ ಎರಡು ತುಂಡಾಗಿ ಬಾಯಿ ಬಿಡುತ್ತದೆ. ಎರಡೂ ತುದಿ ಹಿಡಿದು ಅದನ್ನು ತುಟಿಯಾಕಾರಕ್ಕೆ ಹಿಗ್ಗಿಸಿದರೆ ತೆಳ್ಳನೆಯ ಹಾಲಿನ ಪೊರೆ. ಆ ಪೊರೆಯಲ್ಲಿ ನಾನಾ ಬಣ್ಣದ ಆಕಾರಗಳು ಮೂಡುತ್ತವೆ. ಬಿಡುವಿನ ವೇಳೆ ನಮಗೆ ಅದೇ ಒಂದು ಆಟವಾಗಿತ್ತು.

      ನಮ್ಮ ಉಜ್ಜೀನಪ್ಪ ಮೇಷ್ಟ್ರು ಸಂಗೀತ ಸಾಹಿತ್ಯ ಪ್ರೇಮಿಯಾಗಿದ್ದರು. ಬರೆಯುವವರನ್ನು ಕಂಡರೆ ಅವರಿಗೆ ವಿಪರೀತ ಮರ್ಯಾದೆ ಕೊಡುತ್ತಿದ್ದರು. ಆ ಕಾಲದಲ್ಲಿ ಸಂಜೀವಯ್ಯ ಎಂಬ ಒಬ್ಬ ಲಾವಣೀಕಾರರು ನಮ್ಮೂರಿಗೆ ಆಗಾಗ ಬರುತ್ತಾ ಇದ್ದರು. ಅವರು ಶಾಲೆಗಳಿಗೆ ಭೆಟ್ಟಿಕೊಟ್ಟು ತಮ್ಮ ರಚನೆಗಳನ್ನು ಮಕ್ಕಳಿಗೆ ಓದಿ ತೋರಿಸುತ್ತಾ ಇದ್ದರು. ಉಜ್ಜೀನಪ್ಪ ಸಂಜೀವಯ್ಯ ಬಂದಾಗಲೆÇÉಾ ಅವರ ಲಾವಣಿ ಹಾಡುವ ಕಾರ್ಯಕ್ರಮ ನಮ್ಮ ಸ್ಕೂಲ್‌ನಲ್ಲಿ ಏರ್ಪಡಿಸುತ್ತಾ ಇದ್ದರು. ಒಮ್ಮೆ ಈ ಸಂಜೀವಯ್ಯ ಬಳೆಗಾರ ಚನ್ನಯ್ಯ ಎಂಬ ಹಾಡು ಹೇಳಿ, ಇದು ನಾನು ಬರೆದದ್ದಲ್ಲ, ಮೈಸೂರುಮಲ್ಲಿಗೆ ಎಂಬ ಪುಸ್ತಕದಲ್ಲಿ ಈ ಹಾಡು ಇದೆ.
      ಇದು ಯಾರೋ ದೊಡ್ಡ ಕವಿಗಳು ಬರೆದದ್ದು ಎಂದಿದ್ದರು. ನಾನು ಹೈಸ್ಕೂಲಿಗೆ ಹೋದ ಮೇಲೆ (ಹೊಳಲಕೆರೆಗೆ) ಮೈಸೂರುಮಲ್ಲಿಗೆ ಪುಸ್ತಕ  ಮತ್ತು ಕವಿ ನರಸಿಂಹಸ್ವಾಮಿಯವರ ಹೆಸರಿನ ಪರಿಚಯ ಆಯಿತು. ಉಜ್ಜಿನಪ್ಪ ಮಾಸ್ತರು, ಸಂಜೀವಯ್ಯನವರ ಕಾರ್ಯಕ್ರಮ ಆದಮೇಲೆ ಒಂದು ಕರೀಟೋಪಿಯನ್ನು ತಲೆಕೆಳಗು ಮಾಡಿ ಹುಡುಗರಿಗೆ ಅದರಲ್ಲಿ ಏನಾದರೂ ಕಾಸು ಹಾಕಲು ಹೇಳುತ್ತಿದ್ದರು. ನಾವು ತೂತುಬಿÇÉೆಯನ್ನೋ, ಅರ್ಧಾಣೆಯನ್ನೋ ಅದರಲ್ಲಿ ಹಾಕುತ್ತಾ ಇ¨ªೆವು. ಅದೆಲ್ಲವನ್ನೂ ಮಾಸ್ತರರು ಸಂಜೀವಯ್ಯನವರಿಗೆ ಕೊಟ್ಟು ಮರ್ಯಾದೆ ಮಾಡುತ್ತಾ ಇದ್ದರು. ತಾವು ಒಂದು ರೂಪಾಯಿ ನಾಣ್ಯವನ್ನು ಕವಿಕಾಣಿಕೆಯಾಗಿ ಕೊಟ್ಟು, ಮಕ್ಕಳಿಗೆ ಒಂದು ಮೇಲ್ಪಂಕ್ತಿ ಹಾಕಿಕೊಡುತ್ತಿದ್ದರು.

      ಉಜ್ಜೀನಪ್ಪ ಮಾಸ್ತರರು ಮಾಡಿದ ಇನ್ನೊಂದು ಒಳ್ಳೆಯ ಕೆಲಸ ತಾವು ತರಗತಿಗೆ ಬರುವಾಗ ಲೈಬ್ರರಿಯಿಂದ ಒಂದು ಪುಸ್ತಕದ ಕಟ್ಟಿ ತರುತ್ತಾ ಇದ್ದರು. ಪ್ರತಿಯೊಬ್ಬ ಹುಡುಗನಿಗೂ ಒಂದೊಂದು ಪುಸ್ತಕ ಕೊಟ್ಟು, ಒಂದು ವಾರದಲ್ಲಿ ಅದನ್ನು ಓದಿ ಸಾರಾಂಶ ಬರೆದುಕೊಂಡು ಬರಲು ಹೇಳುತ್ತಾ ಇದ್ದರು. ನಾನು ದಿವಾನ್‌ ರಂಗಾಚಾರ್ಲು ಎನ್ನುವ ಪುಸ್ತಕವನ್ನು ಓದಿದ್ದು ಆ ದಿನಗಳಲ್ಲಿ. ಒಂದು ಸಾರಿ ಪುಸ್ತಕದ ಹುಚ್ಚು ಹಿಡಿದರೆ ಮುಗಿಯಿತು. ಮತ್ತೆ ಮತ್ತೆ ಓದಬೇಕು ಅನ್ನಿಸುತ್ತದೆ. ಗಳಗನಾಥ, ಬಿ. ವೆಂಕಟಾಚಾರ್ಯರ ಅನೇಕ ಪುಸ್ತಕಗಳನ್ನು ಆ ಕಾಲದಲ್ಲಿ ನಾನು ಓದಿದೆ. ನನ್ನ ಓದಿನ ಹುಚ್ಚು ನೋಡಿ ಉಜ್ಜೀನಪ್ಪ ಆಶ್ಚರ್ಯಪಟ್ಟರು.

      ಭೇಷ್‌...ನಿನಗೆ ನನ್ನ ಸ್ವಂತ ಪುಸ್ತಕ ತಂದುಕೊಡುತ್ತೇನೆ ಮಗು..! ನಿನ್ನ ಓದುವ ಹವ್ಯಾಸ ಹೀಗೇ ಬೆಳೆಸಿಕೋ! ಎಂದು ಬೆನ್ನು ತಟ್ಟಿದರು. ಮುಂದಿನ ವಾರ ತರಾಸು ಅವರ ಚಂದವಳ್ಳಿ ತೋಟ ಎಂಬ ಪುಸ್ತಕವನ್ನು ಅವರು ನನಗೆ ತಂದು ಕೊಟ್ಟರು. ಮುಂದೆ ನಾನು ಪುಂಖಾನುಪುಂಖವಾಗಿ ತರಾಸು, ಅನಕೃ, ನಿರಂಜನ, ಕಟ್ಟಿಮನಿ ಮೊದಲಾದವರ ಪುಸ್ತಕ ಓದಿದೆ.

      ನಮ್ಮ ಹಳ್ಳಿಯಲ್ಲಿ ತರಕಾರಿಯನ್ನು ಬುಟ್ಟಿಯಲ್ಲಿ ಹೊತ್ತು ಮಾರಾಟ ಮಾಡುತ್ತಿದ್ದರು. ಒಂದು ಸಂಜೆ ಆಶ್ಚರ್ಯವೊಂದು ನನಗೆ ಕಾದಿತ್ತು. ಯಾರೋ ಒಬ್ಬ ಮುದುಕ ಪುಸ್ತಕ, ಪುಸ್ತಕ ಎಂದು ಕೂಗುತ್ತಾ ನಮ್ಮ ಬೀದಿಯಲ್ಲಿ ಬುಟ್ಟಿ ಒಂದನ್ನು ತಲೆಯ ಮೇಲೆ ಹೊತ್ತು ಬರಬೇಕೆ? ಬುಟ್ಟಿ ಇಳಿಸು ನೋಡೋಣ ಎಂದೆ ನಾನು. ಬುಟ್ಟಿಯ ತುಂಬ ಬಣ್ಣ ಬಣ್ಣದ ಪುಸ್ತಕಗಳು. ಅದರಲ್ಲಿ ಒಂದು ಮಾಸ್ತಿಯವರ ಕಥೆ ಪುಸ್ತಕ. ಇದರ ಬೆಲೆ ಎಷ್ಟು ಎಂದು ಕೇಳಿದೆ. ಬೆಲೆ ಒಂದೋ ಒಂದೂವರೆ ರೂಪಾಯಿಯೋ ಇತ್ತು. ಅಷ್ಟು ಹಣ ನಾನು ಎಲ್ಲಿಂದ ತರಲಿ. ನಮ್ಮ ದೊಡ್ಡಮ್ಮ ಎಂಟಾಣೆ ಕೊಟ್ಟಳು. ಇನ್ನೊಂದು ರೂಪಾಯಿ. ನನ್ನ ಕಣ್ಣಲ್ಲಿ ನೀರೇ ಸುರಿಯ ತೊಡಗಿತು. ಕಂಬನಿಯಿಂದ ಕಲಸಿಹೋದ ನೋಟದಲ್ಲಿ ನೋಡುತ್ತೇನೆ. ದೂರದಲ್ಲಿ ಕರೀಟೋಪಿ ಹಾಕಿಕೊಂಡ ನಮ್ಮ ಉಜ್ಜಿನಪ್ಪ ಮಾಸ್ತರು. ಹತ್ತಿರ ಬಂದರು. ಏನೋ ಮಗು..ಹೇಗಿದ್ದೀಯೋ ಕೇಳಿದರು.

      ನಿನಗೆ ಯಾವ ಪುಸ್ತಕ ಬೇಕು ಎಂದರು. ಮಾಸ್ತಿಯವರ ಕಥೆಗಳು ನನ್ನ ಕೈಯಲ್ಲಿ ಇತ್ತು. ಅದಕ್ಕೆ ಬೇಕಾಗುವಷ್ಟು ಕಾಸು ಜೋಬಿನಲ್ಲಿ ಇರಲಿಲ್ಲ. ಉಜ್ಜೀನಪ್ಪ ಆ ಪುಸ್ತಕ ನನ್ನ ಕೈಯಿಂದ ಪಡೆದು, ಬೆಲೆ ನೋಡಿ, ಹಣ ಜೋಬಿನಿಂದ ತೆಗೆದು ನನಗಾಗಿ ಆ ಪುಸ್ತಕ ತಾವು ಕೊಂಡರು. ಅದರ ಮೇಲೆ ತಮ್ಮ ನೀಲಿಬಣ್ಣದ ಫೌಂಟೈನ್‌ ಪೆನ್ನಿಂದ ಉಜ್ಜೀನಪ್ಪ ಎಂದು ಬರೆದರು. ಸಣ್ಣಗೆ ನಕ್ಕು, ಪುಸ್ತಕ ನನ್ನ ಕೈಯಲ್ಲಿ ಇಟ್ಟು ಓಣಿಯ ತಿರುವಲ್ಲಿ ಅಂತರ್ಧಾನವಾದರು. ನಾನು ಊರಿಗೆ ಹೋದಾಗಲೆÇÉಾ ಆ ಓಣಿಯ ತಿರುವನ್ನೂ ಈಗಲೂ ಕುತೂಹಲದಿಂದ ಕಾತರದಿಂದ ನೋಡುತ್ತೇನೆ. ಮತ್ತೆ ನಮ್ಮ ಮೇಷ್ಟ್ರು ಆ ಓಣಿ ತಿರುವಿಂದ ಪ್ರತ್ಯಕ್ಷವಾಗಬಹುದೆ ಎಂದು.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
    image
    image
    • Copyright @ 2009 Udayavani.All rights reserved.
    • Designed & Hosted By 4cplus