Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
      • ಅಶೋಕ್‌ ಕುಮಾರ್‌ ಎ. | Sep 27, 2010

        ಸ್ಟಕ್ಸ್‌ನೆಟ್‌ ವರ್ಮ್

        ಸ್ಟಕ್ಸ್‌ನೆಟ್‌ ಎನ್ನುವ ಕಂಪ್ಯೂಟರ್‌ ವರ್ಮ್ ಈಗ ಹಬ್ಬುತ್ತಿದೆ. ಕಂಪ್ಯೂಟರ್‌ ಜಾಲಗಳಲ್ಲಿರುವ ವಿದ್ಯುತ್‌ ಸ್ಥಾವರ, ಕಂಪ್ಯೂಟರ್‌ ನಿಯಂತ್ರಿತ ಸ್ಥಾವರಗಳ ಕೆಲಸವನ್ನು ಕೆಡಿಸುತ್ತದೆ ಇದು. ಇದರ ಮೂಲ ಯಾವುದು ಎನ್ನು ವುದು ಇನ್ನೂ ಪತ್ತೆಯಾಗದಿದ್ದರೂ ಇಂತಹ ಗಂಭೀರ ಅನಾಹುತಗಳಿಗೆ ಕಾರಣವಾಗಬಲ್ಲ ಕಂಪ್ಯೂಟರ್‌ ವರ್ಮ್, ವ್ಯಕ್ತಿ ಮೂಲದ್ದಾಗಿರದೆ ಯಾವುದಾದರೂ ದೇಶ ಅಥವಾ ಸಂಸ್ಥೆ ಇದರ ಹಿಂದಿರಬಹುದು ಎನ್ನುವ ಗುಮಾನಿ ತಜ್ಞರದ್ದು. ಸ್ಥಾವರಗಳ ನಿಯಂತ್ರಣವನ್ನು ತಾನು ಹಿಡಿತಕ್ಕೆ ತೆಗೆದುಕೊಂಡದ್ದು ಕಂಪ್ಯೂಟರ್‌ ಜಾಲದ ನಿರ್ವಾಹಕರ ಗಮನಕ್ಕೆ ಬರದಂತೆ ಮಾಡುವುದು ಇದರ ವಿಶೇಷ.

        ಫೇಸ್‌ಬುಕ್‌ ಸ್ಥಗಿತ

        ಕಳೆದ ಬುಧವಾರ ಮತ್ತು ಗುರುವಾರಗಳಂದು ಎರಡು ದಿನ ಯುವಜನರ ಮೆಚ್ಚಿನ ತಾಣ ಫೇಸ್‌ಬುಕ್‌ ತೊಂದರೆಗೀಡಾಯಿತು. ಬಳಕೆದಾರರು ತಾಣವನ್ನು ಬಳಸಲು ಸಾಧ್ಯವಾಗದೆ ಹೋಯಿತು. ಗುರುವಾರ ಎರಡೂವರೆ ತಾಸುಗಳ ಕಾಲ ತಾಣ ಸಮಸ್ಯೆಯಿಂದ ಬಾಧಿತವಾಗಿ ಅದರ ಏಳು ದಶಲಕ್ಷದಷ್ಟು ಬಳಕೆದಾರರು ತೊಂದರೆ ಅನುಭವಿಸಿದರು. ಇಷ್ಟು ಹೊತ್ತು ತಾಣ ತೊಂದರೆಗೀಡಾದದ್ದು ಕಳೆದ 4 ವರ್ಷಗಳಲ್ಲಿ ಇದೇ ಮೊದಲು. ದತ್ತಾಂಶ ನಿರ್ವಹಣೆಯಲ್ಲಿ ಬಳಸಲ್ಪಡುವ ತಂತ್ರಾಂಶದಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣವಿರಬಹುದು ಎಂದು ತರ್ಕಿಸಲಾಗಿದೆ. ಸಣ್ಣ ಸಮಸ್ಯೆಯನ್ನು ಸರಿಪಡಿಸುವ ಯತ್ನದಲ್ಲಿ ದತ್ತಾಂಶ ನಿರ್ವಹಣಾ ತಂತ್ರಾಂಶದ ಮೇಲೆ ಅತೀವ ಒತ್ತಡ ಬಿದ್ದು ಅದನ್ನು ಸ್ಥಗಿತಗೊಳಿಸಬೇಕಾಯಿತು. ತೊಂದರೆಯನ್ನು ಪತ್ತೆ ಹಚ್ಚಿ ಸರಿಪಡಿಸಿದ ಅನಂತರವಷ್ಟೇ ಬಳಕೆದಾರರು ತಾಣಕ್ಕೆ ಬರಲು ಅನುಮತಿ ನೀಡಲಾಯಿತು ಎಂದು ಫೇಸ್‌ಬುಕ್‌ ವಿವರಿಸಿ ಬಳಕೆದಾರರಿಗಾದ ತೊಂದರೆಗೆ ವಿಷಾದ ಸೂಚಿಸಿತು.

        ಟ್ವಿಟರ್‌ ಮೂಲಕ ಹಣಪಾವತಿ?

        ಟ್ವಿಟರ್‌ ಸಂದೇಶ ಕಳುಹಿಸಿ, ಅದರ ಮೂಲಕ ಸಂದೇಶ ಕಳುಹಿಸಿದಾತನ ಖಾತೆಯಿಂದ ಸೂಚಿಸಿದ ಬಳಕೆದಾರನ ಪೇಪಾಲ್‌ ಖಾತೆಗೆ ಹಣ ಸಂದಾಯ ಮಾಡುವ ಸೋಶಿಯಲ್‌ ಪೇ ಎನ್ನುವ ಸೇವೆಯನ್ನು ಮಣಿಪಾಲದ ತರುಣ ಎಂಜಿನಿಯರ್‌ ಕಾರ್ತಿಕ್‌ ಕಸ್ತೂರಿ ರೂಪಿಸಿದ್ದಾರೆ. ಸೋಶಿಯಲ್‌ಪೇ ಸೇವೆಗೆ ನೋಂದಾಯಿಸಿ ಕೊಂಡು, ಪೇಪಾಲ್‌ನ ಖಾತೆಯಿಂದ ಪಾವತಿಸಬಹುದಾದ ಗರಿಷ್ಠ ಹಣಪಾವತಿಯ ಮಿತಿ, ಪಾವತಿಯ ಮೇಲಿನ ಸಂಖ್ಯೆಯ ಮಿತಿಯನ್ನು ನಿಗದಿಪಡಿಸಿ, ಭದ್ರತೆಯನ್ನೂ ಒದಗಿಸಬಹುದು. ಟ್ವಿಟರ್‌ ಮತ್ತು ಪೇಪಾಲ್‌ ತಾಣಗಳು ಒದಗಿಸುವ ತಂತ್ರಾಂಶ ಅಭಿವೃದ್ಧಿ ಪಡಿಸಲು ಒದಗಿಸುವ ಅನುಕೂಲಗಳನ್ನು ಬಳಸಿಕೊಂಡು ಈ ಸೇವೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಪೇಪಾಲ್‌ಎಕ್ಸ್‌ ಡೆವಲಪರ್ಸ್‌ ಚಾಲೆಂಜ್‌ ಸ್ಪರ್ಧೆಗೆ ಈ ಸೇವೆಯ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಟ್ವಿಟರ್‌ ಸಂದೇಶದ ಮೂಲಕ ಹಣಪಾವತಿ ಸಾಧ್ಯವಾದರೆ ಅದೊಂದು ಹೊಸ ಶಕೆಯನ್ನು ಆರಂಭಿಸಲಿದೆ ಎಂದರೆ ತಪ್ಪಿಲ್ಲ. ಟ್ವಿಟರಿಗೆ ಮೊಬೈಲ್‌ ಮೂಲಕವೂ ಸಂದೇಶಗಳನ್ನು ರವಾನಿಸಬಹುದಾದ್ದರಿಂದ ಹಣ ಪಾವತಿಯನ್ನು ಮೊಬೈಲ್‌ ಮೂಲಕವೂ ಮಾಡ ಬಹುದು. ಫೇಸ್‌ಬುಕ್‌ ಮೂಲಕವೂ ಇದೇ ರೀತಿ ಪಾವತಿ ಸಂದೇಶಗಳನ್ನು ಮಾಡಬಹುದು. ಹಣ ಪಾವತಿ ಸೌಲಭ್ಯದ ದುರುಪಯೋಗವಾಗದಂತೆ ಇದನ್ನು ನಿರ್ವಹಿಸಲು ಸಾಧ್ಯವಾದರೆ ಪೇಪಾಲ್‌ ಈ ಸೇವೆಗೆ ಮಾನ್ಯತೆ ನೀಡುವ ಸಂಭವವಿದೆ. ಹಾಗಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಷ್ಟೇ.

        ಚಾಮರಾಜ ಸವಡಿ

        ಚಾಮರಾಜ ಸವಡಿಯವರು ಮಾಧ್ಯಮ ಪರಿಣತ. ಕೊಪ್ಪಳ ಜಿಲ್ಲೆಯ ಅಳವಂಡಿಯವರು. ಸದ್ಯ ಸ್ವ-ಉದ್ಯೋಗ ಮಾಡುತ್ತಿದ್ದಾರೆ. ಪತ್ರಕರ್ತರಾಗಿ ದುಡಿದ ಅನುಭವ ಸಾಕಷ್ಟಿದೆ. ಟಿವಿ ಸುದ್ದಿ ಚಾನೆಲ್‌ಗ‌ಳಲ್ಲಿಯೂ ಕೆಲಸ ಮಾಡಿರುವ ಸವಡಿ ಯವರ ಬರವ ಣಿಗೆಗಳಲ್ಲಿ ಆರೋಗ್ಯ, ಮಾನವಿಕ  ಸಂಬಂಧಗಳು, ಸಹಜ ಕೃಷಿ, ಅಭಿವೃದ್ಧಿ, ವ್ಯಕ್ತಿತ್ವ ವಿಕಸನ ಇತ್ಯಾದಿ ವಿಚಾರಗಳನ್ನು ಕಾಣ ಬಹುದು. ಬ್ಲಾಗ್‌ - http://matumanikyablogspot.com ಮತ್ತು http://chamrajsavadiblogspot.com


        ಟ್ವಿಟರ್‌ ಚಿಲಿಪಿಲಿ

        mouse  ನ ಬಹುವಚನ miceಆದರೆ spouse ನ ಬಹುವಚನ spice

        ಮುಳ್ಳಿನ ಬಗ್ಗೆ ಎಚ್ಚರಿಕೆಯಿಂದಿರಬೇಕು.

        * ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಕೆಲವು ದೇಶಗಳು
        ಬಹಿಷ್ಕರಿಸಿದರೇನಂತೆ? ಭಾರತಕ್ಕೆ ಪದಕಗಳ ಸಂಖ್ಯೆ ಹೆಚ್ಚಾಗುತ್ತದೆ.

        ಓದುಗರ ಪ್ರತಿಕ್ರಿಯೆಗಳು

        ಓದುಗ ಶ್ರೀನಿವಾಸ ಬಂಗೋಡಿಯವರು ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಬ್ರೌಸರ್‌ ಬಗೆಗಿನ ಬರಹಕ್ಕೆ ಪ್ರತಿಕ್ರಿಯಿಸಿ, ಬ್ರೌಸರಿನ ಹೊಸ ಆವೃತ್ತಿ ಇನ್ನೂ ಬೇಟಾ ಹಂತದಲ್ಲಿದೆ. ಅದು ವಿಂಡೊಸ್‌7 ಮತ್ತು ವಿಂಡೊಸ್‌ ವಿಸ್ತಾಗಳಿಗೆ ಮಾತ್ರಾ ಲಭ್ಯವಿದೆ ಎಂದಿದ್ದಾರೆ. ಗೂಗಲ್‌ ದಿಢೀರ್‌ ಶೋಧ ಸೇವೆ ಈಗ ಭಾರತದಲ್ಲೂ ಲಭ್ಯವಿರುವ ಬಗ್ಗೆ ವಾಸುದೇವ ಕಾಮತ್‌ ಮತ್ತು ಪ್ರಸನ್ನ ಶಂಕರಪುರ ಓದುಗರ ಗಮನ ಸೆಳೆದಿದ್ದಾರೆ. ಗೋವರ್ಧನ್‌ ಹೆಗ್ಡೆಯವರು ವಿಡಿಯೋಗಿರ್ಮಿಟ್‌.ಕಾಮ್‌ videogirmit.com ತಾಣದಲ್ಲಿ ಕನ್ನಡದ ಟಿವಿ ಸೀರಿಯಲ್‌ಗ‌ಳ ಹಳೆಯ ಕಂತುಗಳನ್ನು ನೋಡಬಹುದು ಎಂಬ ಮಾಹಿತಿ ನೀಡಿದ್ದಾರೆ.

        ಮೃತ್ಯು ಸಂದೇಶ

        ವಾಹನ ಚಲಾಯಿಸುವಾಗ ಮೊಬೈಲ್‌ ಕಿರು ಸಂದೇಶ ಗಳನ್ನು ರವಾನಿಸಿ ಅಪಘಾತಗಳು ಸಂಭವಿಸುವುದಿದೆ. ಇಂತಹ ಅಪಘಾತಗಳಿಂದ ಹದಿನಾರು ಸಾವಿರಕ್ಕೂ ಅಧಿಕ ಜನರು ಪ್ರಾಣತೆತ್ತಿದ್ದಾರೆ ಎಂದು ಉತ್ತರ ಟೆಕ್ಸಾಸ್‌ನ ಸಂಶೋಧಕರು ಅಂದಾಜು ಮಾಡಿದ್ದಾರೆ. 2002-2007ರ ನಡುವಣ ಅಪಘಾತಗಳ ವಿಶ್ಲೇಷಣೆಯಿಂದ ಇದು ಶ್ರುತಪಟ್ಟಿದೆ. ಕಿರು ಸಂದೇಶಗಳ ಕಾರಣದಿಂದ ಈ 5 ವರ್ಷ ಗಳಲ್ಲಿ ಸರಾಸರಿ 4,600 ಜನರು ಸತ್ತಿದ್ದಾರೆ. ಅಮೆರಿಕ ದಲ್ಲಿ ಶೇ. 91 ಮಂದಿ ಮೊಬೈಲ್‌ ಫೋನ್‌ ಬಳಸುತ್ತಿದ್ದಾರೆ. ದಶಕದ ಹಿಂದೆ ಇದು ಶೇ. 30 ಇತ್ತು. ವಾಹನ ಚಲಾಯಿ ಸುವಾಗ ಗಮನ ಬೇರೆಡೆ ಹರಿದು ಅಪಘಾತ ಸಂಭವಿಸುವ ಪ್ರಮಾಣ ಶೇ.11ರಿಂದ 16ಕ್ಕೆ ಏರಿದೆ. ಇದರಲ್ಲಿ ಮೊಬೈಲ್‌ ಫೋನ್‌ ಪಾತ್ರವೇ ಹಿರಿದು.
        ಪ್ರತಿಕ್ರಿಯಿಸಿ: feedback@manipalmedia.com


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus