ಪೊನ್ನಂಪೇಟೆ : ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯಾಧಿ ಕಾರಿಗಳ ಹುದ್ದೆಗಳಿಗೆ ಸರಕಾರ ನೇರ ನೇಮಕಾತಿ ಮಾಡುವ ಸಂದರ್ಭ ಸರ್ಕಾರ ಅರಣ್ಯಶಾಸ್ತ್ರ ಪದವೀಧರರಿಗೆ ಶೇ.100 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.ಅರಣ್ಯಶಾಸ್ತ್ರ ಪದವೀಧರರ ಹಾಗೂ ವಿದ್ಯಾರ್ಥಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ಶಫಿ ಹಾಗೂ ಅರಣ್ಯ ಪದವಿಧರ ಎ.ಎಂ ಮಯೂರ್ ಅವರ ನೇತೃತ್ವದಲ್ಲಿ ಮುಷ್ಕರ ಆರಂಭಿಸಿರುವ ವಿದ್ಯಾರ್ಥಿಗಳು, ಸಹಾಯಕ ಅರಣ್ಯಾಧಿ ಕಾರಿ ಹಾಗೂ ವಲಯಯಾಧಿ ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂದರ್ಭ ಅರಣ್ಯಶಾಸ್ತ್ರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ಪರಿಗಣಿಸಬೇಕು. ಅರಣ್ಯ ಆಧಿ ಕಾರಿ ಹುದ್ದೆಗಳಿಗೆ ಪ್ರತೀವರ್ಷ ನೇರ ನೇಮಕಾತಿಯನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರಲ್ಲದೆ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆಯನ್ನು ಉಗ್ರ ಸ್ವರೂಪಕ್ಕೆ ಒಯ್ಯುವುದಾಗಿ ಎಚ್ಚರಿಸಿದರು.ಕಾಲೇಜಿನ ಪ್ರವೇಶ ದ್ವಾರದ ಮುಂಭಾಗದಲ್ಲಿ ಪ್ಲಾಸ್ಟಿಕé ಶಾಮಿಯಾನ ಹಾಕಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು, ಸರ್ಕಾರದ ವಿರುದ ಘೋಷಣೆ ಕೂಗುತ್ತಾ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದರು.ಸರ್ಕಾರ ಪ್ರತಿಭಟನೆಗೆ ಮಣಿಯದಿದ್ದಲ್ಲಿ ಬೆಂಗಳೂರಿನಲ್ಲಿ ಧರಣಿ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಅಲ್ಲದೆ ಸರ್ಕಾರ ಬೇಡಿಕೆಗೆ ಸ್ಪಂದಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.ಅರಣ್ಯ ಪದವೀಧರರು ಹಾಗೂ ವಿದ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದ್ದರೂ, ಸೂಕ್ತ ನ್ಯಾಯ ದೊರಕಿಲ್ಲ. ಕಳೆದ ಸಾಲಿನಲ್ಲಿ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಿದ ಸಂದರ್ಭ ಕೆಲವು ದಿನಗಳ ನಂತರ ಗಮನಹರಿಸಿದ ಸರ್ಕಾರ ಸಚಿವರಾದ ಎಸ್ ಸುರೇ ಕುಮಾರ್ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ಅರಣ್ಯ ಅಧಿ ಕಾರಿಗಳ ಸಭೆ ನಡೆಸಿ ನೇರ ನೇಮಕಾತಿ ವೇಳೆ ಅರಣ್ಯಶಾಸ್ತ್ರ ಪದವೀಧರರಿಗೆ ಶೇ.80 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ತೀರ್ಮಾನವಾಗಿತ್ತು.ಆದರೆ ವರ್ಷ ಕಳೆದರೂ ಸರ್ಕಾರದಿಂದ ಅಧಿ ಕೃತ ಆದೇಶ ಹೊರಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನಸೆಳೆಯುವ ನಿಟ್ಟಿನಲ್ಲಿ ಈಗ ಮತ್ತೂಮ್ಮೆ ಪ್ರತಿಭಟನೆ ಪ್ರಾರಂಭಿಸಿರುವುದಾಗಿ ತಿಳಿಸಿದರು.ವಿಷಯಕ್ಕೆ ಸಂಭಂದಿಸಿದಂತೆ ಕಾಲೇಜಿನ ಪ್ರಭಾರ ಶಿಕ್ಷಣ ನಿರ್ದೇಶಕ ಡಾ| ಸಿ ಜಿ ಕುಶಾಲಪ್ಪ ಅವರನ್ನು ಸಂಪರ್ಕಿಸಿದಾಗ ವಿದ್ಯಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದ್ದರೂ ಮುಷ್ಕರ ನಡೆಸುವ ಸಮಯ ಇದಲ್ಲ. ಬೆಂಗಳೂರು ಕೃಷಿ ಉಪಕುಲಪತಿಗಳಾಗಿ ನಾರಾಯಣ ಗೌಡ ಹಾಗೂ ಅರಣ್ಯ ಸಚಿವರಾಗಿ ವಿಜಯಶಂಕರ್ ಇತ್ತೀಚೆಗಷ್ಟೆ ಅಧಿ ಕಾರ ಸ್ವೀಕರಿಸಿದ್ದು, ವಿದ್ಯಾರ್ಥಿಗಳ ಬೇಡಿಕೆ ಬಗ್ಗೆ ಅಧ್ಯಯನ ನಡೆಸಲು ಅವರಿಗೆ ಕಾಲಾವಕಾಶ ನೀಡುವ ಅಗತ್ಯವಿದೆ. ಅದಲ್ಲದೆ ಅರಣ್ಯ ಕಾಲೇಜಿನ ಶಿಕ್ಷಣ ನಿರ್ದೇಶಕ ಎನ್. ಎ. ಪ್ರಕಾಶ್ ಅವರು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳೊಂದಿಗೆ ಅರಣ್ಯ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಲಿದ್ದಾರೆಂದು ತಿಳಿಸಿದರು.ಅರಣ್ಯ ಸಚಿವರಿಗೆ ಸಮಸ್ಯೆ ಕುರಿತಾದ ವಿವರವಾದ ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಕಾಲಾವಕಾಶ ನೀಡಬೇಕಿತ್ತು. ಆದರೆ ವಿದ್ಯಾರ್ಥಿಗಳ ಮನವೊಲಿಸಿದರೂ ಪ್ರಯೋಜನವಾಗಿಲ್ಲ ಎಂದ ಕುಶಾಲಪ್ಪ ಅವರು, ನೂತನ ಅರಣ್ಯ ಸಚಿವರು ಸಮಸ್ಯೆಯ ಬಗೆ ಹರಿಸುವದಾಗಿ ವಿಶ್ವಾಸವಿದೆ ಎಂದು ತಿಳಿಸಿದರು.ಕಾಲೇಜಿನ ಪ್ರಾಧ್ಯಾಪಕರಾದ ಡಾ| ವಾಸುದೇವ್, ಎಂ. ಎಂ. ಪೂಣಚ್ಚ. ಡಾ| ಜಿ ಎಂ ದೇವಗಿರಿ ಮತ್ತಿತರರು ಹಾಜರಿದ್ದರು.