ನಾಗರಾಜ ವಸ್ತಾರೆ | Sep 30, 2012
ಭಾರತೀಯರು ಯಾವುದೇ ಪರಕೀಯ ವಿಷಯವನ್ನು ಭಾರತೀಯಗೊಳಿಸಿ ತಮ್ಮದಾಗಿಸಿಕೊಳ್ಳುವುದರಲ್ಲಿ ನಿಷ್ಣಾತರು. ಅದೇ ನಿರಾಕರಿಸುವುದರಲ್ಲಿಯೂ ಅವರಿಗೆ ಮುಲಾಜಿಲ್ಲ. ಜಾಗತೀಕರಣವೂ ಭಾರತೀಯ ಸಂದರ್ಭದಲ್ಲಿ ಮರುರೂಪುಗೊಂಡ ಬಗೆಯನ್ನು ನಾವು ಗಮನಿಸಬೇಕು. ನೇರ ವಿದೇಶ ಹೂಡಿಕೆ (ಎಫ್. ಡಿ. ಐ) ವಿಷಯದಲ್ಲಿಯೂ ನಾವು ಇದೇ ದೃಷ್ಟಿಯ ವಿಶ್ಲೇಷಣೆಯನ್ನು ನಡೆಸಬೇಕಾಗಿದೆ...
ಇನ್ನೆಲ್ಲೆಂತೋ ಅರಿಯೆ, ಇಲ್ಲಂತೂ - ಇನ್ನು ಊರು ಬದಲಲಿಕ್ಕಿದೆ; ಕೇರಿ ಬದಲಲಿಕ್ಕಿದೆ... ಬೀದಿ ಬೀದಿ, ಅವುಗಳಿಬ್ಬದಿ ಬದಲಲಿಕ್ಕಿದೆ. ಹಾಗೇ, ಮೆಲ್ಲಗೆ ಗೊತ್ತಾಗದ ಹಾಗೆ - ಇಲ್ಲಿನ ನೆಲನಭವೂ ಬದಲಬಹುದೇನೋ... ಕ್ರಮೇಣ ಹವೆಯೂ ಬದಲೀತು; ಜತೆಗೆ ನೀರೂ! ಊರು, ಕೇರಿ ಬದಲಿದ ಮೇಲೆ ಅವನ್ನೇ ನೆಚ್ಚಿದ್ದ ಮಂದಿ ಸುಮ್ಮನಿದ್ದಾವೆ? ತಪ್ಪೋ ಒಪ್ಪೋ, ಬದಲಿಬಿಡುತ್ತವೆ. ಬೇಕೋ, ಬೇಡವೋ - ಒಟ್ಟಾರೆ, ಇಡಿಯಾಗಿ ಬದುಕೂ ಬದಲಿಕೊಳ್ಳುತ್ತದೆ.
ಈ ದೇಶದಲ್ಲಿನ ಇಪ್ಪತ್ತೂಂದನೆಯ ಶತಮಾನದ ಉದಾರೀಕರಣವನ್ನು ಅತ್ಯುದಾರವಾಗಿ ಒಪ್ಪಿಕೊಂಡವನು ನಾನು! ಅದರ ಆಗುಹೋಗುಗಳೊಟ್ಟಿಗೆ ಬಾಳು ಕಟ್ಟಿಕೊಂಡವನು; ನನ್ನದೇ ನಿಟ್ಟಿನಲ್ಲಿ, ಮಟ್ಟದಲ್ಲಿ ಈ ಊರನ್ನೂ ಅಷ್ಟಿಷ್ಟು "ಕಟ್ಟಿ'ದವನು. ಹಾಗಾಗಿಯೇ ಕಳೆದ ಹದಿನೈದಿಪ್ಪತ್ತು ಸಾಲುಗಳಲ್ಲಿ - ಎಂತೆಂಥದೋ "ಸುಧಾರಣೆ'ಯ ಸಲುವಲ್ಲಿ ಸುಮ್ಮಸುಮ್ಮನೆ ಬದಲಿಬಿಟ್ಟ ಊರಿನ ಅದಿಬದಿಗಳೂ, ತಳಹದಿ ಒಳಹದಿಗಳೂ, ಈ ಬದಲಾವಣೆಯೆನ್ನುವುದರ ಆದ್ಯಂತದ ಬದುಗಳೂ ನನಗೆ ತುಸು ಹೆಚ್ಚೇ ಗೊತ್ತೇನೋ!
ಈ ಊರಿನಲ್ಲಿದ್ದು ಕಟ್ಟಿ ಗೊತ್ತಿರುವ ಸಲುಗೆಯಿಂದಾಗಿ ಸದರದಿಂದಾಗಿ ಹೇಳುತ್ತೇನೆ- ಇನ್ನು ಈ ಊರು ಈ ಮುಂದೆ ಇನ್ನೂ ಬದಲಲಿಕ್ಕಿದೆ !
ಹಾಗಂತ ಈ ಊರು ನನ್ನ ಸ್ವಂತದ್ದೇನಲ್ಲ; ಇಲ್ಲಿನೆಷ್ಟೋ ಮಂದಿಯ ಹಾಗೆ ಎಲ್ಲಿಂದಲೋ ಬಂದು ಸಂದುಕೊಂಡಿದ್ದು. ಓದು ಮುಗಿಸುವ ಹೊತ್ತಿಗೆ, ಇಲ್ಲಿದ್ದ ಊರು ಪೂರ್ತಾ ನನ್ನದುಗೊಳ್ಳುವ ಮೊದಲೇ- ಇಡೀ ದೇಶ ತನ್ನ ದಿಡ್ಡಿ ಬಾಗಿಲನ್ನು ಹೊರಗಿನವರಿಗೆ ತೆರೆದು, ಆಮದು ಹೆಚ್ಚಿ ಅಲ್ಲಿನ ಮೊಹರುಮುದ್ರೆಗಳೆಲ್ಲ ಇಲ್ಲೂ ದೊರಕುವಂತಾಗುವ ಸುಮಾರಿನಲ್ಲಿ, ನನ್ನದು ಇಲ್ಲಿದ್ದು ಗೈಯುವುದೇ ಕೆಲಸ ಅಂತಾದ ಮೇಲೆ- ಆ ತನಕದ ಊರು, ಮಂದಿ- ಎರಡೂ ಇದ್ದಕ್ಕಿದ್ದಂತೆ ಬದಲಹತ್ತಿದ್ದು ಬಲು ಚೆನ್ನಾಗಿ ನೆನಪಿದೆ ನನಗೆ. ಆ ಹೊತ್ತಿನಲ್ಲಿಯೇ, ಊರೆಂದರೆ ದೂರ ಪಶ್ಚಿಮದ ಔದ್ಯೋಗಿಕ ವಿಸ್ತರಣೆಯೆಂದು ನೇರ ಹೇಳದೆಯೂ ಹಾಗೇ ತಿಳಿಹೇಳಿ ನಮ್ಮನ್ನು ನಂಬಿಸಲಾಗಿದ್ದು ಮತ್ತು ನಾವು ಅದನ್ನು ನಂಬಿದ್ದು. ಹೇಳಿದ್ದು ಮಾತ್ರ ಊರೆಂದರೆ ಇಡೀ ಜಗತ್ತಿನ ಹಳ್ಳಿ; ಗ್ಲೋಬಲ್ ವಿಲೇಜ್... ಹೀಗೊಂದು ಗತ್ತಿನಿಂಗ್ಲಿಷು ಬೇರೆ ಅದಕ್ಕೆ! ನಂಬಿದ್ದಾಯಿತು, ಬಿಡಿ- ನಂಬಿ ಬದಲಿದ್ದಾಯಿತೂನೂ.
ನೋಡನೋಡುತ್ತಲೆ ನೋಡಿ - ಪೇಜರು ಬಂತು. ಪೇಜರು ಮೊಬೈಲಾಯಿತು; ಜೆಟೀಎಮ್ ಏರ್‌ಟೆಲ್ಲಾಯಿತು. ಸ್ಪೈಸೆನ್ನುವುದು ಇನ್ನೊಂದಾಯಿತು. ಏಟೀಎಮ್- ನೆನೆದಾಗಲೆಲ್ಲ ದುಡ್ಡೊಡ್ಡುವ ಮೆಶೀನು ಅದು, ಅದು ಬಂತು. ಜತೆಜತೆಗೆ, ಏನೇನೆಲ್ಲ ಬ್ರಾಂಡುಗಳು ಆಗಿಬಂದವು. ಲೀ, ಲೀವೈಸ್, ಲೀಕೂಪರು; ಹೊಸ ಬಟ್ಟೆ ಹೊಸ ಹುರುಪಿನ ಬಂಪರು... ಪಿಜ‚ಾಹಟ್ಟುಗಳಾದವು. ಏನೇನೋ ಬ್ರೆಡ್ಡು ತಂದವು. ಬುರುಗುಗೆನೆಯಿಳಿಬಿಟ್ಟ ಹಬೆಯ ಕಾಫೀಯೆದುರು ಗಂಟೆಗಟ್ಟಲೆ ದುಂಡುಮೇಜಿನ ಪಟ್ಟಾಂಗ ಹೊಡೆಸುವ ಕಾಫೀಡೇಗಳು ಚೈನುಚೈನಾಗಿ ಆದವು. ಹಿಂದೆಯೇ ಕೆಎಫ್ಸೀ, ಮೆಕ್‌ಡೊನಲುxಗಳು ಥರಾವರಿ ಕೋಳಿಗಳನ್ನು ಹುರಿದು, ಕರಿದು ಬಿಕರಿಗಿಟ್ಟವು. ಅಲ್ಲದೆ, ಅಂಗಡಿ ಮುಂಗಟ್ಟುಗಳು ಬದಲಿಬಿಟ್ಟವು. ಎಲ್ಲವೂ ಮುಂದುಗಡೆ ಉದ್ದಗಲವೆತ್ತರಕ್ಕು ಗಾಜು ಹರವಿಕೊಂಡವು. ಬೀದಿಗೂ, ಒಳಗಿಗೂ ನಡುವಿನ ಗೆರೆ ಕಡಿದಾಗಿಬಿಟ್ಟಿತು. ಬೀದಿಗಳು ಬದಲಿಬಿಟ್ಟವು. ಮಾಲುಗಳಾದವು. ಮಾರುrಗಳಾದವು.
ಬಿಗ್‌ಬಜ‚ಾರುಗಳು, ಫುಡ್‌ವಲುxìಗಳು, ಸ್ಪಾರ್‌ಮಾರ್ಕೆಟ್ಟುಗಳು... ಒಳಗೂ ಹೊರಗಿರುವಷ್ಟೇ ಗಜಿಬಿಜಿ; ಗಿಜಿಗುಡುವ ಮಂದಿ.
ಇನ್ನು ಮಂದಿಯೂ ಬದಲಿಬಿಟ್ಟವು. ಎಲ್ಲೆಲ್ಲಿಂದಲೋ ಬಂದು ಇಲ್ಲಿ ಮುಗಿಬಿದ್ದವು. ಎಲ್ಲರನ್ನೂ ಎಲ್ಲವನ್ನೂ ಹೊಂದಿದ ಊರು ಕಂಡಕಂಡಲ್ಲಿ ಕೊಬ್ಬಿತು. ಗುಣಮಟ್ಟದ ಬದುಕು- ಕ್ವಾಲಿಟಿಲೈಫ್ ಅಂತನ್ನುವುದು ಎಲ್ಲರೂ ಸದಾ ಪಿಟಿಪಿಟಿಗುಡುವ ಮಂತ್ರವಾಯಿತು. ಈ ಗುಣಮಟ್ಟಕ್ಕೆಂದೇ ಸಾಲಗಳು ಹೆಚ್ಚಿದವು; ಸಾಲದ ದಾರಿಗಳು ಸುಗಮಗೊಂಡವು. ಎಲ್ಲರಿಗು ಕಾರು, ಬೈಕು, ಮನೆಗಳು... ಈಎಮ್ಮೆ„ ಕಂತುಗಳು, ಏನೇನೋ ಭಾÅಂತುಗಳು... ಅಂತೂ ಇಂತೂ ಬದುಕಿನ ತಂತುಗಳೂನೂ ವಿಸ್ತರಣೆಗೊಂಡವು. ರಸ್ತೆಗಳಲ್ಲಿ ಏರುದಾರಿಗಳಾದವು. ನೆಲ ಬಗೆದು ಧಾವಿಸುವ ಸುರಂಗಗಳೂ ಆದವು. ಇಂಟರೆ°ಟ್ಟಿನ, ಎಸ್ಸೆಮ್ಮೆಸ್ಸುಗಳ ಸಾಮಾನ್ಯ ಸಂವಹನಗಳಾದವು. ಗೂಗಲುಶೋಧಗಳಾದವು. ಫೇಸ್‌ಬುಕ್ ಮುಖಾಮುಖೀಗಳೊದಗಿ ಬಂದವು. ಹೊಸಕಾಲಕ್ಕೆ ತಕ್ಕುದಾಗಿ ಹೊಸ ಹೊಸ ಉದ್ಯೋಗಗಳು ಆಗಿಬಂದವು. ಅವಕ್ಕೆ ತಕ್ಕುದಾದ ಹೊಸ ಹೊಸ ಓದುಗಳೂನೂ ಹುಟ್ಟಿಕೊಂಡವು. ಏನೇನೋ ಇಂಜಿನಿಯರಿಕೆಗಳು, ಟೆಕ್ನಾಲಜಿಗಳು, ಮ್ಯಾನೇಜ್‌ಮೆಂಟಿನ ಫಂಡೂ ಫಂಡಾಗಳು... ದೊಡ್ಡಂಕಿಯ ಸಂಬಳ, ದೊಡ್ಡ ದೊಡ್ಡ ಎಣಿಕೆ ಹವಣುಗಳ ಬದುಕು. ಮಾಲುಮಾರುrಗಳಲ್ಲೋ ಅನವರತ ಪರಿಷೆ; ಏರ್‌ಪೋರಿrನಲ್ಲೂ ಮೆಜೆಸ್ಟಿಕಿನ ಸಂದಣಿ. ಎಂತಹ ಸಮೃದ್ಧಿ! ಊರು ಹಿಂದೆಂದಿಗಿಂತ ಸುಭಿಕ್ಷಗೊಂಡಿತು.
ನೆನಪಿದೆ ತಾನೆ? ಇವಿಷ್ಟೂ ಬರೇ ಒಂದೆರಡು ಹತ್ತು ವರ್ಷಗಳಲ್ಲಿನ ಬದಲಾವಣೆ. ಇಷ್ಟಕ್ಕು, ಇಷ್ಟೆಲ್ಲ ಆಗುವುದರ ಹಿಂದಿನ ಕೈವಾಡವಾದರೂ ಏನು? ಬದುಕಿನ ಈ ಏರ್ಪಾಟು ಮಾರ್ಪಾಟುಗಳ ಹರಿಗೋಲಾದರೂ ಎಂಥದು? ಬಲ್ಲವರು ಇದನ್ನು "ರಿಫಾರು¾$Õ' ಅಂತನ್ನುತ್ತಾರೆ. ಇಕನಾಮಿಕ್ ರಿಫಾರ್¾$Õ . ಅರ್ಥಾತ್ ಆರ್ಥಿಕ ಸುಧಾರಣೆ. ಹೀಗಂದರೆ ದೇಶವನ್ನು ಸೋಕಾಲ್ಡ್ "ಸುಧಾರಿಸುವ' ಸಲುವಾಗಿ ಬಂಡವಾಳವನ್ನು ಹೆಚ್ಚಿಸುವುದು ಅಂತರ್ಥ. ಇಷ್ಟಕ್ಕು, ಈ ಪರಿಯ ಹೂಡಿಕೆಗೆ ಆ ಪಾಟಿ ಹಣವನ್ನು ಹೊಂಚಿದ್ದಾದರೂ ಹೇಗೆ? ಹೂಡಿಕೆದಾರರನ್ನು ಹೊರಗಿನಿಂದ ಕರೆಯಲಾಯಿತು. ನಿಜಕ್ಕಾದರೆ, ಕಳೆದೊಂದೆರಡು ದಶಕಗಳಲ್ಲಿ ನಡೆದಿದ್ದು ಇದೇನೆ. ಫಾರಿನಿನ ದೊಡ್ಡ ದೊಡ್ಡ ದಾಸ್ತಾನುಗಳಿಂದ ದೊಡ್ಡ ದೊಡ್ಡ ಹೆಸರುಗಳ ಹೂಡಿಕೆಯಾಯಿತು. ಅಲ್ಲಿನ ಬ್ರಾಂಡುಗಳನ್ನು ಇಲ್ಲಿನ ಶೆಲು#ಗಳಲ್ಲಿಟ್ಟು ಮಾರಲಾಯಿತು. ಮೋಹಕ ಮೊಹರುಗಳಿಗೆ ಮಾರುಹೋಗುವ ನಮ್ಮವರು ಅವಕ್ಕೆ ಮುಗಿಬಿದ್ದಿದ್ದಾಯಿತು.
ವಹಿವಾಟು ಹೆಚ್ಚಿತು. ಚಂಚಲಗಿತ್ತಿ ಲಕುಮವ್ವ ಕೈಯಿಂದ ಕೈಗೆ ಬಳುಕಿಬಾಗಿ ಸಾಗಿಯೇ ಸಾಗಿದಳು. ಗೈದು ಗಳಿಸುವ ಸೊಗವು ಬಳಸಿಯೇ ಮಿಗಿಲೆಂದು ಬಗೆವ ಮಂದಿ ಖರ್ಚು ಮಾಡಿದವು. ಕಂಡಲ್ಲಿ ಕಾರುx ಉಜ್ಜಿದವು. ಶಾಪಿಂಗೆನ್ನುವುದು ನಮ್ಮಲ್ಲೊಂದು ವೀಕೆಂಡು ವಾಡಿಕೆಯೇ ಆಗಿಬಿಟ್ಟಿತು!
ರೀಟೇಲ್ ಅಂತನ್ನುವ ಸರಕು ಮಾರಾಟ ನಮ್ಮಲ್ಲಿ ಯಾವತ್ತೂ ಇದ್ದ ವಿಷಯವೇ ಆದರೂ ಕಳೆದ ಹತ್ತಾರು ವರ್ಷಗಳಲ್ಲಿ ಅದರ ಅರ್ಥದ ಮಹಿಮೆ ಹೆಚ್ಚಿಬಿಟ್ಟಿದೆಯೇನೋ. ಸದ್ಯಕ್ಕಂತೂ, ನಾವು ಆರಿRಟೆಕ್ಟಿಕೆ ನಡೆಸುವವರ ನಡುವೆ "ರೀಟೇಲ್ ಆರಿRಟೆಕ್ಚರ್' ಅಂತನ್ನುವ ಹೊಸ ಪ್ರಭೇದವೇ ಹುಟ್ಟಿಕೊಂಡಿದೆ.
ಹೀಗಂದರೆ ರೀಟೇಲು ವ್ಯಾಪಾರ ನಡೆಸುವ ಮಳಿಗೆಗಳ ಒಳಹೊರ ವಿನ್ಯಾಸವೆಂದು ಅರ್ಥ. ಬದಿಹೋಕ ಕಣ್ಣುಗಳಿಗೆ ಬೀದಿಯಿಂದ ಅಂಗಡಿಯೊಂದು ಹೇಗೆ ಮತ್ತು ಎಷ್ಟು ಹೆಚ್ಚು ತೋರಿಕೊಳ್ಳುತ್ತದೆ ಎನ್ನುವುದರಿಂದ ಮೊದಲುಗೊಂಡು, ಒಳಾವರಣದಲ್ಲಿನ ವ್ಯಾಪಾರದ ಸರಕನ್ನು ಹೇಗೆ ಚಂದಗಾಣಿಸುತ್ತ ಸಜ್ಜುಗೊಳಿಸಬಹುದೆನ್ನುವವರೆಗೆ ಅದರ ವ್ಯಾಪ್ತಿಯಿದೆ. ಅಂಗಡಿಯನ್ನು ಬೀದಿಗೆ ಎಷ್ಟು ಹೆಚ್ಚು ಮತ್ತು ಹೇಗೆ ತೋರಬಹುದು ಅನ್ನುವುದಕ್ಕೆ ಪೂರಕವಾಗಿಯೇ- ಅದರ ಕಟ್ಟಡದ ವಸ್ತುವಿನಲ್ಲಿ ಗೋಡೆ ಮತ್ತು ಕಂಬಗಳು ಕಡಿಮೆಯಾಗಿದ್ದು ಮತ್ತು ಗಾಜು ಹೆಚ್ಚಿದ್ದು. ಒಳಗೆ ತಣಿದ ಹವಾನುಕೂಲ, ನಾಜೂಕಿನ ಬಡುಗಳು, ಗೋಡೆಗಳಲ್ಲಿ ಹೊಸಕಾಲದ ರಂಗು ಮತ್ತು ಜಾಹಿರಾತು ಭಂಗಿ... ಹೀಗೆ. ಇದು ರಿಟೇಲ್ ವಿನ್ಯಾಸದ ಮೂಲಭೂತ ಮಾದರಿ. ಒಟ್ಟಿನಲ್ಲಿ, ಈ ತನಕವಿದ್ದ ಅಂಗಡಿಯೆನ್ನುವ ಕಲ್ಪನೆಯನ್ನೇ ನಿವಾಳಿಸಿ, ಹೊಸತೇ ಪರಿಕಲ್ಪನೆಯನ್ನು ಈ ಊರಿನ ಬೀದಿಬೀದಿಗು ಹೂಡಿದ್ದು ಇಪ್ಪತ್ತೂಂದನೇ ಶತಮಾನದ ಈ ಸುಧಾರಣೆಯೇ ಹೌದು...
ಆದರೆ, ವಿಷಯ ಇದಲ್ಲ. ಸದ್ಯದ ನನ್ನ ಜಿಜಾnಸೆಯೆಂದರೆ ಈ ಊರು ಮತ್ತೂಮ್ಮೆ ಹಿಂದೆಂದಿಗಿಂತ ಬದಲಿಕ್ಕಿದೆ ಅಂತನ್ನುವುದು! ಎಷ್ಟರ ಮಟ್ಟಿಗೆ ಅಂತನ್ನುವುದು ಊಹೆಗಿಂತ ಈ ಮುಂದಾಗಲಿಕ್ಕಿರುವ ಹಕೀಕತಿಗೆ ಬಿಟ್ಟಿದ್ದು. ಯಾಕೆಂದರೆ, ನಮ್ಮನ್ನಾಳುವ ಧುರೀಣ "ಪಾಲಿಸಿ'ಕಾರರು ದೇಶದ ನೆಲವನ್ನು ಭಾರೀ ವಿದೇಶೀ ಹಣಹೂಡಿಕೆಗೆ ಅಪರೋಕ್ಷವಾಗಿ ಸಜಾjಗಿಸುತ್ತಿದ್ದಾರೆ. ಇಲ್ಲಿನ ರಿಟೇಲ್ ವಹಿವಾಟಿನಲ್ಲಿ ಫಾರಿನುಬ್ರಾಂಡುಗಳನ್ನು ಹಿಂದೆಂದಿಗಿಂತ ನೇರವಾಗಿ ಇಳಿಬಿಡುವುದು ಅವರ ಸದ್ಯದ ಸನ್ನಾಹ.
ಈ ತನಕದ "ಸುಧಾರಣೆ'ಗಳಲ್ಲಿ ಹೊರಗಿನ ಬ್ರಾಂಡನ್ನು ಇಲ್ಲಿ ಮಾರಲಿಕ್ಕೆ ಇಲ್ಲಿನವನೇ ಆದ "ಮೂಲಕ' ಅಂತೊಂದಿರುತ್ತಿತ್ತು. ಸದರಿ "ಮೂಲಕ'ವು ನಮ್ಮದೇ ದೇಶೀಯತೆಯುಳ್ಳ ವ್ಯಕ್ತಿಯೋ, ಕಂಪೆನಿಯೋ ಇರುತ್ತಿತ್ತು. ಆದರೆ ಈಗ ಹಾಗಲ್ಲ; ಘನಸರಕಾರದ ಸದ್ಯದ ಪ್ರಸ್ತಾವನೆಯು ಜಾರಿಗೊಂಡಲ್ಲಿ, ಫಾರಿನಿನ ಎಂಥದೇ "ಮೇಕು'ಮಾಟವನ್ನು ಮಾರಲಿಕ್ಕೆ- ಈ "ಮೂಲಕ'ದ ಅಗತ್ಯವಿರುವುದಿಲ್ಲ. ಇಡೀ ವಹಿವಾಟನ್ನು ವಿದೇಶದ "ಪೇರೆಂಟು' ಕಂಪೆನಿಯೇ ಖುದ್ದು ನಡೆಸಲಿಕ್ಕಿದೆ! ಅಲ್ಲದೆ, ಬರುವ ಲಾಭದಲ್ಲಿ ಇಲ್ಲಿಗೆ ಬಿಟ್ಟುಕೊಟ್ಟೂ ಅರ್ಧಕ್ಕು ಹೆಚ್ಚು ಪಾಲಿರುತ್ತದೆ ಮತ್ತು ಸದರಿ ಕಂಪೆನಿಯು ಈವರೆಗಿನ ಎಲ್ಲ "ಮೂಲಕ'ಗಳನ್ನು ಕೊಳ್ಳುವಷ್ಟು ದೊಡ್ಡದೂ, ತಾಕತ್ತಿನದೂ ಆಗಿರುತ್ತದೆ! ಇದಷ್ಟೇ ವಿಷಯ ಅಂತಂದರೆ, ಅದು ಅದರ ಅರ್ಧಂಬರ್ಧ ಮಾತ್ರ!
ನಿಜಕ್ಕಾದರೆ- ನಮ್ಮ ಊಟೋಪಚಾರಕ್ಕೆ ಉಡಿಕೆತೊಡಿಕೆಗಳಿಗೆ, ನಮ್ಮ ಇರುವಿಕೆಯೆನ್ನುವುದರ ಅಷ್ಟೂ ಅಗತ್ಯಕ್ಕೆ, ಅಷ್ಟೂ ಕುಶಲಕ್ಕೆ, ನಮ್ಮ ಸಕಲಾತಿ ಸಕಲ ಸೌಖ್ಯಕ್ಕೆ ಆಗಿಬರುವ ಸಾಮಗ್ರಿಯಷ್ಟನ್ನೂ ಒಂದೇ ಸೂರಿನಡಿಯಲ್ಲಿ ಮಾರುವ ದೊಡ್ಡ ದೊಡ್ಡ ಶೆಡ್ಡಿನೋಪಾದಿಯಿರುವ ಅಂಗಡಿಗಳು ನಮ್ಮೆದುರಿನ್ನು ಮೈಪಡೆಯಲಿಕ್ಕಿವೆ! ಉಡುಪುಗಳಿಂದ ಸುರುಗೊಳ್ಳುವ ರೆಡಿಮೇಡ್ ಉತ್ಪನ್ನಗಳಿರಲಿ, ದಿನಸಿಯಂತಹ ದಿನಸಿಯುಳ್ಳ ಹೊಟ್ಟೆಯ ಹಿಟ್ಟನ್ನೂ ರ್ಯಾಕುಗಳಲ್ಲಿಟ್ಟು ಮಾರುವ ಸೂಪರ್‌ಮಾರ್ಕೆಟ್ಟುಗಳು, ಮೆಗಾ ಮೆಗಾ ಮಾರುrಗಳು- ಈ ಎರಡು ಸಾವಿರದ ಹನ್ನೆರಡರಲ್ಲಿ ನಮಗೆ ಅಸಾಮಾನ್ಯ ಅಂತಲ್ಲವಾದರೂ, ಈ ಮುಂದೆ ಬರಲಿಕ್ಕಿರುವ ರಿಟೇಲ್ ಮಾರ್ಕೆಟುಗಳು ಈಗಿರುವ ಇಂಥದೇ ಮಾರುrಗಳಿಗೆ ಹೋಲಿಸಿದರೆ ಗಾತ್ರದಲ್ಲಿ ನಾಲ್ಕಾರು ಪಟ್ಟು ದೊಡ್ಡದಾಗಿರುತ್ತವೆ ಅನ್ನುವುದು ನಮ್ಮ ಬೀದಿಗಳ ಲಕ್ಷಣವನ್ನೇ ಬದಲಿಸಲಿಕ್ಕೆ ಸಾಕು ತಾನೆ?! ಇದು ವಿಷಯ.
ವಾಲ್‌ಮಾರ್r ಎಂಬ ಹೆಸರಿನಲ್ಲಿ ಹಲವಾರು ದೇಶಗಳಲ್ಲಿ ರಿಟೇಲ್ ವಹಿವಾಟು ನಡೆಸುವ ಅಮೆರಿಕೆಯ ದೊಡ್ಡ ಕಾರ್ಪೊರೇಶನೊಂದು- ಇನ್ನೊಂದು ಒಂದೂವರೆ ವರ್ಷದಲ್ಲಿ, ನಮ್ಮಲ್ಲಿಯೂ ಡಿಪಾರ್rಮೆಂಟಲ್ ಮತ್ತು ವೇರ್‌ಹೌಸ್ ಸ್ಟೋರುಗಳನ್ನು ತೆರೆಯಲಿಕ್ಕಿದೆಯಂತೆ. ಅದು ಈ ಊರಿನ ಅಷ್ಟೂ ಏರಿಯಾಗಳಲ್ಲಿ ಬೀದಿಗೊಂದರಂತೆ ಮಾರುr ತೆಗೆಯಲಿಕ್ಕಿದೆ ಅಂತನ್ನುವ ವದಂತಿಯಿದೆ. ಹೊಲಗದ್ದೆ ತೋಟಗಳಿಂದ ಸ್ಟೋರೊಳಗಿನ ಶೆಲು#ಗಳವರೆಗೆ- ಈ ಕಾರೊ³ರೇಶನು ತನ್ನದೇ ಸುಪರ್ದಿಯಲ್ಲಿ ವಹಿವಾಟು ಮಾಡಲಿಕ್ಕಿದೆ ಅಂತಂದರೆ ಅದರ ವ್ಯಾಪ್ತಿ ಎಷ್ಟಿರಬಹುದೆಂದು ಊಹೆಯಾದೀತು. ಅಲ್ಲದೆ, ತಾನು ಮಾರುವ ಸರಕಿನ ಗುಣಮಟ್ಟವನ್ನು ಕಚ್ಚಾವಸ್ತುವಿನಿಂದಲೇ, ಧವಸಧಾನ್ಯವಿದ್ದಲ್ಲಿ ಬಿತ್ತನೆಯಿಂದಲೇ ನಿಯಂತ್ರಿಸುತ್ತೇನೆಂಬುದು ಈ ಕಂಪೆನಿಯ ಭಾರೀ ದುಬಾರೀ ಕ್ಲೇಮುಗಳಲ್ಲೊಂದಂತೆ. ಅಂದರೆ, ಅಲ್ಲಿ ಮಾರಾಟಕ್ಕಿರುವ ದಿನಸಿಯ ಹಿಂದಿರುವ ಬೆಳೆ, ಫಸಲಿನವರೆಗೆ ಅದರ ಹತೋಟಿಯಿದೆ ಅಂತಾಯಿತು! ಈಗ ಈ ಮುಂದಿನದನ್ನು ಕಷ್ಟಪಟ್ಟಾದರೂ ಊಹಿಸಿಕೊಳ್ಳಿ. ಹೀಗೇ ಆದಲ್ಲಿ ಈ ಕಂಪೆನಿಯು ಒಡ್ಡುವ ಆಮಿಷದೆದುರು ನಮ್ಮ ರೈತರು ಎಷ್ಟು ಕಾಲ ತಾನೆ ಒಲ್ಲೆನೆಂದು ಪಟ್ಟುಮಾಡಿಯಾರು? ಬಡಪಾಯಿಗಳು ಏಗಲಿಕ್ಕಾಗದೆ ಕಡೆಗೆ ನೆಲ ಮಾರಿಯಾರು. ಇಲ್ಲಾ, ಇದ್ದಲ್ಲೇ ನಿರ್ಗತಿಕರಾದಾರು... ಒಟ್ಟಿನಲ್ಲಿ ನಮ್ಮ ಜಮೀನುಗಳೂ, ಉಳುಮೆದಾರರೂ ಕ್ರಮೇಣವಾಗಿ ಈ ಕಂಪೆನಿಯ ಅಡಿಯಲ್ಲಿ ಬಂದುಬಿಡಬಹುದು. ಇನ್ನೂ ಮುಂದಿನ ಅನರ್ಥವನ್ನು ಯೋಚಿಸುವುದಾದರೆ, ಅಧಿಕ ಇಳುವರಿಯ ಸಲುವಾಗಿ ಏನೇನೆಲ್ಲ ಟೆಕ್ನಾಲಜಿಯ ಬಳಕೆಯಾದೀತು!
ಏನೇನೆಲ್ಲ ಕೆಮಿಕಲುಗಳು ನಮ್ಮ ನೆಲಗಳನ್ನು ಕಲಕಿಯಾವು!! ಕಡೆಗೆ, ಈ ಊರಿನ ಇರುವಿಕೆಗೆ ಗ್ರಾಸದ ಸರಬರಾಜು ಮಾಡುವ ಸುತ್ತಲಿನ ಒಕ್ಕಲುನೆಲದ ಲ್ಯಾಂಡ್‌ಸ್ಕೇಪಷ್ಟೂ ಬದಲಿಬಿಡಬಹುದಷ್ಟೆ. ಹಾಗೇ ನಮ್ಮ ಸುತ್ತಲಿನ ಮೂರ್ತವಷ್ಟೂನೂ!!
ಇಷ್ಟಾಗಿ, ನಾವು ಲೋಕವೆಂದು ಬಗೆಯುವ ಪ್ರಾಪಂಚಿಕ ವಾಸ್ತವವು ನಮ್ಮ ಸುತ್ತಲಿನ ಮೂರ್ತವೇ ಅಷ್ಟೆ? ಅದು ಮೊದಲಿಗೆ ಕಣ್ಣು ಕಂಡುಕೊಳ್ಳುವ ಕಾಣೆRಯೇ ತಾನೆ? ಬಳಿಕ ಮೂಗಿಗೆ ಘ್ರಾಣ, ಕೈಕಾಲುಗಳಿಗೆ ಸ್ಪರ್ಶ, ಕಿವಿಗೆ ಸದ್ದು, ನಾಲಗೆಗೆ ರುಚಿ - ಅಲ್ಲವೆ? ಆ ಬಳಿಕ ಅದು ಮನದಟ್ಟು. ಈ ತನಕದ್ದೊಂದು ಸತ್ಯಕ್ಕೆ ಒಗ್ಗಿಕೊಂಡಿರುವ ಮನಸ್ಸು- ಇಂತಹದೊಂದು ನೆಲ, ನೀರು, ಆಕಾಶಗಳ "ಸಡನ್' ಸ್ಥಿತ್ಯಂತರವನ್ನು ಹೇಗೆ ತಾನೇ ಒಪ್ಪೀತು? ನೆನಪಿನಲ್ಲಿ ಹಳತು ಹಳಹಳಿಕೆಯಾಗಿ ಮಿಕ್ಕೀತು ಅಷ್ಟೆ. ಎಂತಲೇ ಯಾಕೋ ಖೇದವೆನಿಸುತ್ತಿದೆ. ಯೋಚನೆಯೇ ಚೆನ್ನೆನಿಸುತ್ತಿಲ್ಲ... ಹುಹ್Ø ! ಈ ನಡುವೆ- ಇವತ್ತಿಗಿಂತ ಅವತ್ತು ಚೆನ್ನಿತ್ತನ್ನುವುದು ನೀನು ಮುದಿಯಾಗುತ್ತಿರುವ ಲಕ್ಷಣವಂತ ಬೇಕಾದವರೊಬ್ಬರು ಹೇಳಿದ್ದು ನೆನಪಾಗುತ್ತಿದೆ.
ಇದಕ್ಕೆ ಹೇಗೆ ಕೌಂಟರು ಹೇಳುವುದೆಂದು ಸದ್ಯ ಯೋಚಿಸಿದ್ದೇನೆ.
ನಮ್ಮದಾಗಿರುವ ಉಳುಮೆನೆಲವನ್ನು ಈ ವಾಲ್‌ಮಾರಿrಗೋ, ಇನ್ನೊಂದಕ್ಕೋ ಗುತ್ತಿಗೆ ಕೊಟ್ಟ ಸಂದರ್ಭದಲ್ಲಿ ಈ ಊರಿನ ಚಿತ್ರವು ಹೇಗಿರಬಹುದೆಂದು ಊಹಿಸಿ ಊಹಿಸಿ ವಾರದೊಪ್ಪತ್ತಿನಿಂದ ಕಂಗೆಟ್ಟಿದ್ದೇನೆ. ಬೀದಿಬೀದಿಯಲ್ಲಿ ಇಂತಹ ಮಾರುrಗಳೇರ³ಟ್ಟುಬಿಟ್ಟರೆ - ನಮ್ಮ ನಡುವಿರುವ ರಿಟೇಲರುಗಳ ಪಾಡೇನು?! ತುಸು ಅತಿಶಯದ್ದೆನಿಸಬಹುದಾದರೂ, ಅಂಥದೊಂದು ಹೊತ್ತುಗೊತ್ತಿನ ಊಹೆ ಕಾಡಿಯೇ ಕಾಡಿದೆ. ಆಚೀಚೆಗಿದ್ದು ಬೀದಿಯೆನ್ನುವ ಪ್ರಜ್ಞೆಯನ್ನು ಈವರೆಗೆ ಕಟ್ಟಿದ್ದ ಸಾಲಂಗಡಿಗಳಿಗೆ ಇನ್ನು ಉಳಿಗಾಲವಿರಲಿಕ್ಕಿಲ್ಲ. ಈಚಿನ ಶೆಟ್ಟರು, ಆಚಿನ ಮಾರವಾಡಿ, ಅಲ್ಲೊಬ್ಬ ಮಲಯಾಳಿ, ಇಲ್ಲೊಂದು ತರಕಾರಿಯಂಗಡಿ... ಫುಟ್‌ಪಾತಿನ ಪೇವ್‌ಮೆಂಟಿನಲ್ಲಿ ಹಣ್ಣು ತೂಗುವ ಸಾಬಿ, ಬದಿಗೇ ಮಂಕರಿಯಲ್ಲಿ ಕಾಕಡ, ಕನಕಾಂಬರವಿಟ್ಟುಕೊಂಡು ಮೊಳವಳೆಯುವ ಅಮ್ಮ... ಅಕೋ- ಏರುದನಿಯಲ್ಲಿ ಅಪದ್ಧ ಕೂಗುವ ಸೊಪ್ಪಿನಾಕೆ, ಮನೆಯೆದುರು ತರಕಾರಿಯ ಗಾಡಿ ನೂಕುವ ಗೂರಲುದನಿಯ ಆ ಕೊಂಗಾಟಿ, ಕನ್ನಡವನ್ನೂ ತೆಲುಗಿನಲ್ಲಿ ಪಲುಕುವ ಗುಲ್ಟಿಗ... ಇವರುಗಳಿಲ್ಲದ ಬೀದಿಯ ಕಲ್ಪನೆಯಾದರೂ ಎಂಥದು? ಇಂಥವರು ಇದ್ದಲ್ಲೇ ಇದ್ದು, ಇದ್ದಂತೇ ಇರುವುದಾದರೆ- ಮಾರುವ ಸಗಟನ್ನು ಎಲ್ಲಿಂದ ತಂದಾರು? ಅಥವಾ ನಿಯೋಜಿತ ಎಫ್ಡಿಐ-ಮಾರ್ಕೆಟುಗಳು ಬೀಗಲಿಕ್ಕಿರುವ ಗುಣಮಟ್ಟವನ್ನೆಲ್ಲಿ ಒದಗಿಸಿಯಾರು? ಅಥವಾ, ಹೊಸತೇತಕ್ಕು ಮುಗಿಬೀಳುವ ನಮ್ಮ ಆಶೆಬುರುಕ ನಜ‚ರುಗಳಿಗೆಲ್ಲಿ ಛೋಡಿಯಾದಾರು? ಈ ತನಕ ಕೊಳಕು, ಇಲ್ಲಿಸಿಟು, ಅಕ್ರಮ ಅಂತನ್ನುತ್ತ- ಈ ದೇಶ ಉದ್ಧಾರವಾಗುವುದಿಲ್ಲ ಅಂತ ಗೊಣಗುತ್ತಲೇ, ಕಂಡಲ್ಲಿ ಕಾರು ನಿಲ್ಲಿಸಿ ಸಿಗರೇಟು-ಬೀಡಾ ಕೊಳ್ಳುತ್ತಿದ್ದ ನನಗೆ ಈಗ ಮನುಷ್ಯರೇ ಇಲ್ಲದ "ಅಮಾನುಷ' ರೌರವವು ಕಣ್ಣಿಗೆ ಕಟ್ಟುತ್ತಿದೆ. ಯಾಕೋ ಈ "ಆರYನೈಸ್‌ಡ್ ಸೆಲ್ಲಿಂಗ್' ಅಂತನ್ನುವ ಕ್ರಮವೇ ಅಕ್ರಮವೆನಿಸುತ್ತಿದೆ.
ಊರೆಂದರೆ ಮನೆಗಳು, ಮೈದಾನ, ಸಂತೆಮಾಳ, ಪೇಟೆಬೀದಿ... ಅಂತನ್ನುವ ಅರಿವೇ ಕರಗಿಬಿಟ್ಟರೆ ಏನನ್ನುವ ನನ್ನೀ ಸಾಧಾರಣ ಕಂಗಾಲಿಗೆ "ಬುದ್ಧಿ'ಯ ಮಾತು ಹಚ್ಚಿ- ಕಣ್ಣೆದುರೇ ಒಂದು ಪರಂಪರೆಯೋ ಸಂಸ್ಕೃತಿಯೋ ನಶಿಸಲಿಕ್ಕಿದೆಯೆಂದು ಹೇಳಿಯೋ, ಇಲ್ಲಾ, ನಮ್ಮ ಮುತ್ಸದ್ದಿಗಳ ಹಾಗೆ- ಇದು ನಮ್ಮನ್ನಾಳಲಿಕ್ಕೆ ಬಂದ ಮತ್ತೂಂದು "ಕುಂಪೆನಿ-ಸರಕಾರ'ದ ಕೇಡು ಅಂತಲೋ, ಅಥವಾ, ನಿನ್ನೆ ನನ್ನೊಬ್ಬ ಓರಗೆಯವ ಹೇಳಿದ ಹಾಗೆ- ದಿಸ್ ವಿಲ್ ನಾಟ್ ಅಫೆಕ್ಟ್ ಯು ಅಂಡ್ ಮಿ; ಇನ್‌ಫ್ಯಾಕ್ಟ್ , ವಿ ಆಲ್ ಶಲ್ ಬೆನಿಫಿಟ್ ಔಟಾಫಿಟ್... ಅಂತ ಮುಗುಮ್ಮಾಗಿಯೋ... ನಾನು ಸುಮ್ಮಗಿದ್ದುಬಿಡಬಹುದು. ಆದರೆ ಒಂದರ ಸಲುವಾಗಿ ಇನ್ನೊಂದನ್ನು ಕಳಕೊಳ್ಳುವ ಖಾತ್ರಿ ಮಾತ್ರ ಇದ್ದದ್ದೆ; ಅದಕ್ಕು ಮಿಗಿಲಾಗಿ- ನನ್ನ ನೆಲ, ನೆಲೆ, ನಿಲೆಗಳ ಸುತ್ತ ಖಾಯಿಷೆಂದು ಅಮೆರಿಕೆಯನ್ನು ಕವಿಚಿಕೊಳ್ಳುವುದು ಎಷ್ಟು ಹೇಯ!!

****
ಎಂ. ಎಸ್. ಶ್ರೀರಾಮ್
ಚಿಲ್ಲರೆ ವ್ಯಾಪಾರದಲ್ಲಿ ಎಫ್.ಡಿ.ಐ ಈಚಿನ ದಿನಗಳಲ್ಲಿ ಬಹುಚರ್ಚಿತ ವಿಷಯವಾಗಿದೆ. ಈ ವಿಷಯದ ಬಗ್ಗೆ ಅದನ್ನು ವಿರೋಧಿಸುವವರಿಂದ ಕೆಲವು ಆತಂಕಗಳೂ, ಬೆಂಬಲಿಸುವ ವರಿಂದ ಕೆಲವು ಭರವಸೆಗಳೂ ಕೇಳಿಬರುತ್ತಿವೆ. ಈ ಎರಡನ್ನೂ ನಾವು ತುಸು ಉದ್ವೇಗರಹಿತ ವಾಗಿ ನೋಡಬೇಕಾಗಿದೆ. ಈ ಮಲ್ಟಿಬ್ರಾಂಡ್ ಎಫ್.ಡಿ.ಐ ಅಂದಕೂಡಲೇ ನಮಗೆ ಕೇಳಿಬರುವುದು ವಾಲ್ ಮಾರ್ಟ್ ಹೆಸರು. ಒಂದು ಕ್ಷಣಕ್ಕೆ ವಾಲ್ ಮಾರ್ಟನ್ನು ಪಕ್ಕಕ್ಕಿಟ್ಟು ಇದರಿಂದ ರೈತರಿಗಾಗುವ ಪ್ರಯೋಜನವೇನು ಅನ್ನುವುದನ್ನು ಅರ್ಥಮಾಡಿಕೊಳ್ಳೋಣ.
ಈ ಪ್ರಸ್ತಾವದ ಬೆಂಬಲಿಗರು ಎಫ್.ಡಿ.ಐ. ನಿಂದಾಗಿ ಒಟ್ಟಾರೆ ಆಗುವ ಲಾಭವನ್ನು ಉತ್ತಮ ಉದ್ಯೋಗಾವಕಾಶ ಮತ್ತು ಉತ್ತಮವಾದ ಭೌತಿಕ ಸದುಪಾಯಗಳು ಗೋದಾಮುಗಳು, ಶೀತಲೀಕರಣಕ್ಕೆ ಅನುಗುಣವಾದ ದಾಸ್ತಾನು ವ್ಯವಸ್ಥೆ ಬರುತ್ತದೆಂದು ಹೇಳುತ್ತಿ¨ªಾರೆ. ಅದು ನಿಜವೇ? ಹಾಲಿನ ಕ್ಷೇತ್ರದಲ್ಲಿ ಅಮುಲ್ ಸಹಕಾರ ಸಂಸ್ಥೆ ಈ ಇಡೀ ಭೌತಿಕ ಸದುಪಾಯವನ್ನು ಉಂಟುಮಾಡಲು ಅನೇಕ ವರ್ಷಗಳನ್ನೇ ತೆಗೆದುಕೊಂಡಿತು. ಅದರಲ್ಲಿ ಹಾಲನ್ನು ಪ್ರತೀ ಹಳ್ಳಿಯ ಸಹಕಾರ ಸಂಘದಿಂದ ಕೊಳ್ಳುವುದಲ್ಲದೇ, ಅದನ್ನು ದಾಸ್ತಾನು ಮಾಡುವ ಸದುಪಾಯವನ್ನು ಏರ್ಪಾಟು ಮಾಡಿತು. ಇದಲ್ಲದೇ ಹಾಲನ್ನ , ಪುಡಿಯಾಗಿ, ಇತರೆ ಪದಾರ್ಥಗಳಾಗಿ ಪರಿವರ್ತಿಸಲು ಬೇಕಾದ ಸಂಶೋಧನೆಯನ್ನೂ ಅಮುಲ್ ಪ್ರೋತ್ಸಾಹ ವಿಶ್ವದಲ್ಲಿಯೇ ಮೊದಲ ಬಾರಿಗೆ ಎಮ್ಮೆ ಹಾಲಿನಿಂದ ಪುಡಿಯನ್ನೂ, ಚೀಸನ್ನೂ ಮಾಡುವ ತಂತ್ರವನ್ನು ಭಾರತದಲ್ಲಿ ಅಳವಡಿಸಿತು. ಇಂಥ ಕೆಲಸವನ್ನು ವಿದೇಶೀ ಹೂಡಿಕೆದಾರರು ಮಾಡಬಹುದೇ? ಮಾಡುವುದಾದರೆ ನಾವು ಅದಕ್ಕೆ ಸ್ವಾಗತ ಕೋರಬೇಕು.
ಹೂಡಿಕೆಯ ಪರವಾಗಿ ವಾದಿಸುತ್ತಿರುವವರು ಮಾರಾಟ ಮಾಡುತ್ತಿರುವುದು ಇಡುವಳಿಯು ಹೀಗೆ ಗ್ರಾಮ್ಯ ಪ್ರದೇಶಗಳಿಗೆ, ರೈತರ ಬಳಿಗೆ ಬರುವುದಾದರೆ ವಿದೇಶೀ ಹಣ ಯಾಕಾಗಬಾರದು? ಎಂಬ ಈ ಕನಸನ್ನು. ಇದು ಸಫಲವಾಗಬೇಕಾದರೆ ಹೂಡಿಕೆ ಹಾಕುವವರಿಗೆ ತಾಳ್ಮೆಯಿರಬೇಕು. ಅನೇಕ ವರ್ಷಗಳ ನಷ್ಟ ಅನುಭವಿಸುವ ತಾಕತ್ತಿರಬೇಕು. ಕಿರಿಕಿರಿಯ ಸ್ಥಳೀಯ ಮಾರುಕಟ್ಟೆ ಸಮಿತಿಯ ನಿಯಮಗಳ ಚೌಕಟ್ಟಿನೊಳಕ್ಕೆ ಕೆಲಸ ಮಾಡುವ ಕುಶಲತೆಯಿರಬೇಕು.
ಭಾರತದಲ್ಲಿಯೇ ಇದ್ದು ತಂಬಾಕಿನ ಮೂಲಕ ಗ್ರಾವಿೂಣ ಭಾರತವನ್ನು ಚೆನ್ನಾಗಿ ಅರಿತ ಐಟಿಸಿ ಕಂಪನಿ ತಮ್ಮ ಈ-ಚೌಪಾಲ… ಅನ್ನುವ ಹೊಸ ತಂತ್ರವನ್ನು ಹೂಡಿ, ವ್ಯವಸಾಯೋತ್ಪನ್ನಗಳ ವ್ಯಾಪಾರಕ್ಕೆ ಇಳಿದಾಗ ಎದುರಿಸಿದ ತೊಂದರೆಗಳು ಅನೇಕ. ವ್ಯವಸಾಯೋತ್ಪನ್ನಗಳನ್ನು ಕೊಳ್ಳುವ ಅಡತಿಯಾಗಳ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡವರು ಯಾರು? ರೈತರಿಗೆ ಸಾಲ, ಬೀಜ, ರಸಗೊಬ್ಬರ, ಕೀಟನಾಶಕಗಳನ್ನೊದಗಿಸಿ, ಉತ್ಪನ್ನವನ್ನು ಕೊಳ್ಳುವುದಕ್ಕೂ ಎದ್ದು ನಿಲ್ಲುವ ಈ ವ್ಯಕ್ತಿಯ ಸಂಸ್ಥಾಗತ ರೂಪುರೇಷೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭದ ಮಾತಲ್ಲ.
ಹೀಗಾಗಿ ರೈತರ ಜೀವನ ಉತ್ತಮವಾಗುವ ಲೊಳಲೊಟ್ಟೆಯನ್ನು ನಾವುಗಳು ಮರೆಯಬಹುದು. ವ್ಯವಸಾಯೋತ್ಪನ್ನಗಳನ್ನು ಕೊಳ್ಳುವ ದೃಷ್ಟಿಯಿಂದ ನೋಡಿದರೆ ವಿದೇಶೀಯರ ಹೂಡಿಕೆಯಿಂದ ನಮಗಾಗಬಹುದಾದ ಲಾಭವಂತಿರಲಿ, ಅವರುಗಳಿಗಾಗುವ ನಷ್ಟವನ್ನು ಅವರು ಅಂದಾಜು ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಸರ್ವನಾಶವಾಗಿ ಬಿಟ್ಟಿರುವ ಬಡ ಭಾರತೀಯ ರೈತನನ್ನು ಇನ್ನಷ್ಟು ನಾಶ ಮಾಡುವ ಪ್ರತಿಭೆ ಈ ಕಂಪನಿಗಳಿಗಿದ್ದಂತಿಲ್ಲ. ಹೀಗಾಗಿ ಅವರನ್ನು ನಮ್ಮ ಅಖಾಡಾಕ್ಕೆ ಕರೆಯುವುದರಿಂದ ನಮಗೇ ತುಸು ವಿದೇಶೀ ವಿನಿಮಯ ಬಂದರೆ ಯಾಕಾಗಬಾರದು?
ಇನ್ನು ಇದನ್ನು ವಿರೋಧಿಸುವವರು ಏನನ್ನುತ್ತಾರೆ? ಇದರಿಂದಾಗಿ ಸಣ್ಣ ಕಿರಾಣಿಯಂಗಡಿಯವರಿಗೆ ತೊಂದರೆಯಾಗುತ್ತದೆಂಬ ಮಾತು ಕೇಳಿಬರುತ್ತಿದೆ. ದೊಡ್ಡಾಲದ ಮರದ ಕೆಳಗೆ ಪುಟ್ಟ ಪುಟ್ಟ ಮಾಂ ಅಂಡ್ ಪಾಪ್ ಅಂಗಡಿಗಳು ನಲುಗಿಹೋಗುತ್ತವೆಂದು ಜನ ಹೇಳುತ್ತಿರೆ, ಈ ಕಿರಾಣಿಯಂಗಡಿಗಳಲ್ಲಿ ಕೆಲಸ ಮಾಡುವ ಹುಡುಗರ ಉದ್ಯೋಗಾವಕಾಶ ನಾಶವಾಗಿಹೋಗುತ್ತದೆಂದು ಹೇಳುತ್ತಾರೆ. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಬಹುದಾದರೂ ದೇಶಕ್ಕೆ ಇದು ಒಳ್ಳೆಯದೇನನ್ನೂ ಮಾಡುವುದಿಲ್ಲ ಎನ್ನುವ ವಾದವಿದೆ. ಈ ವಾದದಲ್ಲಿ ತುಸು ಹುರುಳಿರಬಹುದಾದರೂ ನಮ್ಮ ಅನುಭವವನ್ನು ತಿರುವಿ ಹಾಕೋಣ.
ವಿದೇಶೀಯರು ತಮ್ಮ ಐಡಿಯಾವನ್ನು ಇಲ್ಲಿಗೆ ತಂದು ಅದನ್ನು ಭಾರತೀಕರಿಸುತ್ತೇವೆಂದು ಕೊಚ್ಚಿಕೊಳ್ಳುವುದು ಸರಳವಾದ ಮಾತಲ್ಲ. ಅದನ್ನು ಭಾರತೀಕರಿಸಬಲ್ಲವರು ನಾವೇಯೇ. ಒಂದು ಬ್ಲಾಕ್‌ಬರಿ ರೀತಿಯ, ಐ-ಫೋನ್ ರೀತಿಯ ಯಂತ್ರವನ್ನು ಅದು ಮಾರುಕಟ್ಟೆಗೆ ಬಂದ ಕೆಲ ತಿಂಗಳುಗಳೊಳಗೇ ತಯಾರಿಸುವ ಕ್ಷಮತೆಯಿರುವ ನಾವು ಭಾರತೀಯರು ವಾಲ್ ಮಾರ್ಟಿನ ಐಡಿಯಾವನ್ನು ವಿಸ್ತೃತವಾಗಿ ನಮ್ಮದಾಗಿಸಿಕೊಂಡಿಲ್ಲವೆಂದರೆ ಅದರಲ್ಲಿ ಏನೋ ವಿಷಯವಿರಲೇಬೇಕು.
ಈಚೆಗೆ ದೊಡ್ಡದಾಗಿ ತೆರೆದ ಫುಡ್ ವರ್ಲ್ಡ್, ಸ್ಪೆನ್ಸರ್ಸ್, ಮೋರ್, ರಿಲಾಯನ್ಸ್ , ಬಿಗ್ ಬಜಾರ್, ಸುಭಿûಾಗಳಲ್ಲಿ ಎಷ್ಟು ಅಂಗಡಿಗಳನ್ನು ಮುಚ್ಚಿ¨ªಾಗಿದೆ ಎನ್ನುವುದನ್ನು ಗಮನಿಸಿದರೆ ಇದರಲ್ಲಿರುವ ಅಪಾಯ ಗೋಚರಿಸುತ್ತದೆ. ಅತೀ ವೇಗದಲ್ಲಿ ಬೆಳೆಯಲೆತ್ನಿಸಿದ ಸುಭಿûಾ ಅಂತೂ ಪೂರ್ತಿಯಾಗಿ ದಿವಾಳಿ ತೆಗೆದು ಹೋಯಿತು.
ಭಾರತೀಯ ಗ್ರಾಹಕನನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ದೊಡ್ಡ ಪುಸ್ತಕದಂಗಡಿಗೆ ಹೋಗಿ, ಅಲ್ಲಿರುವ ಪುಸ್ತಕಗಳನ್ನೆಾ ನೋಡಿ, ಜಾಲಾಡಿ, ರಿಯಾಯಿತಿ ಕೊಡುವ ಸಣ್ಣ ಅಂಗಡಿಯಲ್ಲಿ ಕೊಳ್ಳುವ, ಮಿಸ್ಡ್ಕಾಲ್ ಸಂಸ್ಕೃತಿಯ ಜನಕರಾದ ಭಾರತೀಯರನ್ನು ಅಂದಾಜು ಮಾಡುವಲ್ಲಿ ವಿದೇಶೀ ಕಂಪನಿಗಳು ಎಡವುವುದರಲ್ಲಿ ಅನುಮಾನವಿಲ್ಲ. ಭಾರತೀಯರಿಗೆ ವ್ಯಾಪಾರ ಮಾಡುವುದಕ್ಕೆ, ವಸ್ತುಗಳನ್ನು ಕೊಳ್ಳುವುದಕ್ಕೆ ಸಮಯದ ಅಭಾವವಿಲ್ಲ.
ಹೀಗಾಗಿ ಮನರಂಜನೆಗಾಗಿ ದೊಡ್ಡ ಅಂಗಡಿಗಳಿಗೆ ಹೋಗಿ, ನಿಜದ ಖರೀದಿ ಕಿರಾಣಿಯಂಗಡಿಯಲ್ಲಿ ಮಾಡಿಯಾರು. ಫೋನಿನಲ್ಲಿ ಆರ್ಡರ್ ತೆಗೆದುಕೊಳ್ಳುವ, ಮನೆಗೆ ಹುಡುಗನನ್ನು ಕಳಿಸಿ ಡೆಲಿವರಿ ಮಾಡುವ, ಹಿಸಾಬಿನಲ್ಲಿ ಬರೆದಿಟ್ಟುಕೊಂಡು ಸಂಬಳದ ದಿನ ಹಣ ತೆಗೆದುಕೊಳ್ಳುವ ಸವಲತ್ತನ್ನು ಕಿರಾಣಿಯಂಗಡಿಗಳಲ್ಲದೆ ಯಾರು ನೀಡಬಹುದು?
ಇರಲಿ, ಒಂದು ಕ್ಷಣದ ಮಟ್ಟಿಗೆ ಈ ಹೂಡಿಕೆಯಿಂದಾಗಿ ಅನೇಕ ಸಂಸ್ಥೆಗಳು ಭಾರತಕ್ಕೆ ದಾಳಿಯಿಟ್ಟವು ಎಂದೇ ಅಂದುಕೊಳ್ಳೋಣ. ಅವರುಗಳೆÇÉಾ ಸೇರಿ ಎಷ್ಟು ನಗರಗಳಲ್ಲಿ ಅಂಗಡಿ ತೆರೆಯಬಹುದು? ಒಟ್ಟಾರೆ ಎಷ್ಟು ಕೋಟಿ ರೂಪಾಯಿಯ ವ್ಯಾಪಾರ ಮಾಡಬಹುದು? ಭಾರತದ ಒಟ್ಟಾರೆ ಮಾರುಕಟ್ಟೆಯ ಎಷ್ಟು ಭಾಗವನ್ನು ಅವರುಗಳು ಆಕ್ರಮಿಸಿಕೊಳ್ಳಬಹುದು?
ಈ ಪ್ರಶ್ನೆಗಳನ್ನು ಕೇಳುವಾಗ ನಾವು ಸಹಜವಾಗಿ ಕೇಳಬೇಕಾದ ಪ್ರಶ್ನೆಯೆಂದರೆ ಒಂದು ಮೆಕ್ ಡೊನಾಲ್ಡ್ , ಒಂದು ಕೆ.ಎಫ್.ಸಿ., ಒಂದು ಪೀಡಾj ಹಟ್, ಒಂದು ಡಾಮಿನೋಸ್ ಬಂದದ್ದರಿಂದ ಎಷ್ಟು ದರ್ಶಿನಿಗಳು ಮುಚ್ಚಿದುವು? ಬದಲಿಗೆ ಅವು ಬೆಳೆದಂತೆ ಎಂ.ಟಿ.ಆರ್ ನಾಲ್ಕು ಜಾಗಗಳಲ್ಲಿ ತನ್ನ ಹೊಟೇಲನ್ನು ತೆಗೆಯಿತು. ಶರವಣ ಭವನ, ಅಡ್ಯಾರ್ ಆನಂದ ಭವನ, ಅಡಿಗಾಸ್, ಕಾಮತ್ ಅನೇಕ ಜಾಗಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಪೀಡಾjದಿಂದ ಉಡುಪಿ ಹೊಟೇಲುಗಳ ಕೂದಲೂ ಕೊಂಕಿಲ್ಲವಾದರೆ ಈ ಎಫ್.ಡಿ.ಐನಿಂದ ಏನಾಗಬಹುದು?
ನಿಜವಾದ ಕಥೆಯೆಂದರೆ ನಮ್ಮ ಬೊಕ್ಕಸದಲ್ಲಿದ್ದ ವಿದೇಶಿ ವಿನಿಮಯ ಕುಗ್ಗಿದೆ. ತೈಲದ ಬೆಲೆ, ಹಾಗೂ ಒಟ್ಟಾರೆ ವಿನಿಮಯ ದರದಲ್ಲಿ ಆಗುತ್ತಿರುವ ಏರುಪೇರಿನಿಂದಾಗಿ ದೇಶ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಾಗಿ ವಿದೇಶೀ ವಿನಿಮಯ ಯಾವುದೇ ರೀತಿಯಲ್ಲಿ ನಮ್ಮ ಬೊಕ್ಕಸಕ್ಕೆ ಬಂದರೂ ಅದು ಸ್ವಾಗತಾರ್ಹ ಎನ್ನುವ ಸ್ಥಿತಿಗೆ ನಮ್ಮ ಕೇಂದ್ರ ಸರಕಾರ ತಲುಪಿದೆ. ಈ ವ್ಯೂಹದಲ್ಲಿ ಡೀಸೆಲ…
ಬೆಲೆಯೇರಿಸುವುದೂ, ಹಾಗೂ ಹಲವು ಕ್ಷೇತ್ರದಲ್ಲಿ ಹೂಡಿಕೆಯನ್ನು ಆಹ್ವಾನಿಸುವುದೂ ಒಂದು ಭಾಗವಾಗಿದೆ. ಲಾಭ ಮಾಡಲು ಕಷ್ಟವಾದ ಚಿಲ್ಲರೆ ವ್ಯಾಪಾರ, ವಿಪರೀತ ನಷ್ಟ ಮಾಡುತ್ತಿರುವ ವಾಯುಯಾನ ಕ್ಷೇತ್ರದ ನೆಪದಲ್ಲಿ ವಿದೇಶೀ ವಿನಿಮಯ ಬಂದರೆ ಹಾವೂ ಸಾಯುವುದಿಲ್ಲ, ಕೋಲೂ ಮುರಿಯುವುದಿಲ್ಲ. ಆದರೂ ವಿದೇಶೀಯರೆಂದರೆ ಯಾವುದೋ ಜಾದೂ ತರುತ್ತಾರೆಂಬ ಭಯ ಅಥವಾ ಭಕ್ತಿಯನ್ನಷ್ಟೇ ತೋರಿ ನಾವು ಬೇಕು ಬೇಡವೆನ್ನುತ್ತಿದ್ದೇವೆ. ಅಕಸ್ಮಾತ್ ಹೂಡಿಕೆಯ ನಿರ್ಧಾರ ತಪ್ಪಾಯಿತು ಎಂದು ನಮಗನ್ನಿಸಿದರೆ ಜಾರ್ಜ್ ಫೆರ್ನಾಂಡಿಸ್‌ರಂಥಹವರನ್ನು ಉತ್ಪಾದನಾ ಕ್ಷೇತ್ರದ ಮಂತ್ರಿಯನ್ನಾಗಿಸಿದರೆ ಸಾಕು. ಒಂದೇ ಏಟಿಗೆ 1977ರಲ್ಲಿ ಕೋಕಾಕೋಲಾವನ್ನು ಹೊರಗಟ್ಟಿದಂತೆ ಎಲ್ಲರನ್ನೂ ಅಟ್ಟಿಬಿಡುತ್ತಾರೆ.
ವಿದೇಶೀಯರು ನಮ್ಮನ್ನು ಉಪಯೋಗಿಸುತ್ತಿ¨ªಾರೆ ಅನ್ನುವ ಭಯದಿಂದ ನಾವು ಇದನ್ನು ನೋಡುತ್ತಿದ್ದೇವೆ. ನಾವು ವಿದೇಶೀಯರನ್ನು ಉಪಯೋಗಿಸುತ್ತಿದ್ದೇವೆ ಅನ್ನುವ ಆತ್ಮಾಭಿಮಾನದಿಂದ ಇದನ್ನು ಕಂಡರೆ ಇದರಲ್ಲಿರುವ ಅನೇಕ ಗೊಂದಲಗಳು ತಾವಾಗಿಯೇ ದೂರವಾಗುತ್ತವೆ.