ಐತಿಹಾಸಿಕ ಬಿಜಾಪುರ ಜಿಲ್ಲೆಯ ಪ್ರವಾಸ ಕೈಗೊಳ್ಳುವು ದೆಂದರೆ ಇತಿಹಾಸದ ಪುಟಗಳನ್ನು ಮತ್ತೆ ಓದತೊಡಗಿದ ಅನುಭವವಾಗುವುದು ಸಹಜ. ಅಂತೆಯೇ ಇದರೊಂದಿಗೆ ಗತಕಾಲದ ವೈಭವವನ್ನು ಕಾಣುವ ಅನನ್ಯ ಅನುಭವವೂ ಪ್ರಾಪ್ತವಾಗುತ್ತದೆ.

ಭಾರತದಲ್ಲಿಯೆ ಅತೀ ದೊಡ್ಡದಾದ ಗುಮ್ಮಟವಿರುವ, ಅತೀ ಹೆಚ್ಚು 92 ಸಂರಕ್ಷಿತ ಸ್ಮಾರಕಗಳಿರುವ ನಗರ ಬಿಜಾಪುರ. ಒಂದು ಕಾಲಕ್ಕೆ ಪಂಚನದಿಗಳನ್ನು ಹೊಂದಿ ದಕ್ಷಿಣದ ಪಂಜಾಬ್ ಎಂದು ಕರೆಸಿಕೊಂಡಿದ್ದ ಜಿಲ್ಲೆ ಬಿಜಾಪುರ. ಆದರೆ ಇಂದು ಇದು ಬಿಸಿಲ ಗೂಡು, ಬರದ ನಾಡು.
ಉತ್ತರ ಕರ್ನಾಟಕದಲ್ಲಿ ಐತಿಹಾಸಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಮನುಷ್ಯ ಸಂಬಂಧಗಳ ನಿಜಪ್ರೀತಿಯ ಪ್ರತೀಕವಾಗಿ ಎತ್ತರಕ್ಕೆ ಏರಿದ ಜಿಲ್ಲೆ ಬಿಜಾಪುರ. ಇದು 160 50 ಉತ್ತರ ಅಕ್ಷಾಂಶ ಮತ್ತು 750 52 ಪೂರ್ವ ರೇಖಾಂಶದ ಮೇಲಿರುವ ಐತಿಹಾಸಿಕ ನಗರವೂ ಹೌದು. ಸಮುದ್ರ ಮಟ್ಟದಿಂದ 2,000 ಅಡಿ ಎತ್ತರದಲ್ಲಿದೆ. ಅಲ್ಲಲ್ಲಿ ಜಿನಿ, ಕರಿಜಾಲಿ, ಬೇವು, ಮುಳ್ಳುಗಿಡಕಂಟಿ ಬೆಳೆದಿರುವ ಬಯಲು ಆಲಯದಂತಿದೆ.

ಈ ಜಿಲ್ಲೆಯಲ್ಲಿರುವಷ್ಟು ಗೋರಿಗಳು, ಗುಮ್ಮಟಗಳು, ಮಸೀದಿ-ಮಂದಿರ, ಜೈನ ದೇವಾಲಯಗಳು, ಚರ್ಚ್‌ಗಳು ಬೇರೆ ಯಾವ ಜಿಲ್ಲೆಯಲ್ಲೂ ಕಂಡುಬರಲಾರವು ! ಇಲ್ಲಿ ಹೆಜ್ಜೆ ಹೆಜ್ಜೆಗೂ ಐತಿಹಾಸಿಕ ಸ್ಮಾರಕಗಳು ಸಿಗುತ್ತವೆ.

ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಇರುವ ದೂರ
ಗೋಳಗುಮ್ಮಟ - 3 ಕಿ.ಮೀ.
ಇಬ್ರಾಹಿಂ ರೋಜಾ - 2 ಕಿ.ಮೀ.
ಜುಮ್ಮಾ ಮಸೀದಿ - 2 ಕಿ.ಮೀ.
ಆಸಾರ್ ಮಹಲ್ - 1 ಕಿ.ಮೀ.
ಬಾರಾ ಕಮಾನ್ - ಅರ್ಧ ಕಿ.ಮೀ.
ಮುಲ್ಕ್-ಎ-ಮೈದಾನ ತೋಪು - 2 ಕಿ.ಮೀ.
ಉಪಲಿ ಬುರುಜು - 2 ಕಿ.ಮೀ.
ತಾಜಬಾವಡಿ - 1 ಕಿ.ಮೀ.
ಮೆಹತರ್ ಮಹಲ್ - 1 ಕಿ.ಮೀ.
ಗಗನ ಮಹಲ್ - ಅರ್ಧ ಕಿ.ಮೀ.

ಆನಂದ ಮಹಲ್ - ಅರ್ಧ ಕಿ.ಮೀ.
ಕುಮಟಗಿ ವರ್ಣಚಿತ್ರಗಳು - 10 ಕಿ.ಮೀ.
ಬೇಗಂ ಸಾಥಿ - 6 ಕಿ.ಮೀ.
ನವರಸಪುರ - 5 ಕಿ.ಮೀ.
ಖ್ವಾಜಾ ಅಮೀನ್ ದರ್ಗಾ - 5 ಕಿ.ಮೀ.
ಶಿವಗಿರಿ - 4 ಕಿ.ಮೀ.
ಮಲ್ಲಿಕಾರ್ಜುನ ಆಶ್ರಮ - 4 ಕಿ.ಮೀ.
ಸಿದ್ದೇಶ್ವರ ದೇವಾಲಯ - 1 ಕಿ.ಮೀ.
ದರ್ಗಾದ ಸಹಸ್ರಫಣಿ ಪಾರ್ಶ್ವನಾಥ ಮಂದಿರ - 5 ಕಿ.ಮೀ.
770 ಅಮರಗಣ ಲಿಂಗಗಳ ದೇಗುಲ - 3 ಕಿ.ಮೀ.
ತೊರವಿ - 5 ಕಿ.ಮೀ.
