ಬೆಂಗಳೂರು: ಆಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಬಿಟ್ಟು ರಾಜೀನಾಮೆ ನೀಡಿ ಜನರ ಮುಂದೆ ಹೋಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸವಾಲು ಎಸೆದಿದ್ದಾರೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಿಎಂ ವಿರುದ್ದ ವಾಗ್ಧಾಳಿ ನಡೆಸಿದ ಅವರು, ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲ ನಡೆಸಿದರೆ ಬಿಜೆಪಿ ಶಾಸಕರ ಸಂಖ್ಯೆ 80 ಕ್ಕೆ ಕುಸಿದು ಸರ್ಕಾರ ತಂತಾನೇ ಬಿದ್ದು ಹೋಗುತ್ತದೆ. ಜೆಡಿಎಸ್‌ನ ಒಬ್ಬ ಶಾಸಕನನ್ನು ಸೆಳೆಯಲು ಸಹ ಬಿಜೆಪಿಗೆ ಸಾಧ್ಯವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಆರಂಭದಲ್ಲಿ ಆಪರೇಷನ್ ಕಮಲ ನಡೆಸಿ ಶಾಸಕರ ಸಂಖ್ಯಾಬಲ ಹೆಚ್ಚಿಸಿಕೊಂಡರೂ ಇವರಿಗೆ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಿಲ್ಲ. ರಾಜ್ಯ ರಾಜಕಾರಣವನ್ನು ಕಲುಷಿತ ಮಾಡಿದ್ದು ಬಿಟ್ಟರೆ ಬೇರಾವ ಸಾಧನೆಯೂ ಆಗಿಲ್ಲ. ಈಗ ಮತ್ತೆ ಪ್ರತಿಪಕ್ಷಗಳ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.ಅನರ್ಹಗೊಂಡಿರುವ 16 ಮಂದಿ ಶಾಸಕರನ್ನು ಜೆಡಿಎಸ್ ಗೃಹಬಂಧನದಲ್ಲಿ ಇಟ್ಟಿಲ್ಲ. ಅವರ ರಕ್ಷಣೆಗೆ ಪಕ್ಷ ಧಾವಿಸಿದೆ. ಹಿರಿಯ ಶಾಸಕ ಶಂಕರಲಿಂಗೇಗೌಡರ ಮೇಲೆ ಶಾಸಕರ ಭವನಕ್ಕೆ ನುಗ್ಗಿ ಗೂಂಡಾಗಳು ಹಲ್ಲೆ ನಡೆಸಿದರು. ಯಾರು ಈ ಹಲ್ಲೆ ನಡೆಸಿದರು ಎನ್ನುವ ಬಗ್ಗೆ ಗೃಹ ಸಚಿವರು ಉತ್ತರಿಸಬೇಕು ಎಂದ ಕುಮಾರಸ್ವಾಮಿ, ಆ ಶಾಸಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಸ್ಪೀಕರ್ ನಿರ್ವಹಿಸಲಿಲ್ಲ. ಇದರ ಬದಲಾಗಿ ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ಘಟನಾವಳಿ ಬಗ್ಗೆ ಸ್ಪೀಕರ್ ಸದನ ಸಮಿತಿ ರಚಿಸಿದ್ದಾರೆ. ಆ ಸಮಿತಿಯಲ್ಲಿ ನಾಲ್ವರು ಬಿಜೆಪಿ ಸದಸ್ಯರೇ ಇದ್ದಾರೆ ಎಂದರು.ಸ್ಪೀಕರ್ ಅವರು ಪಕ್ಷಪಾತದಿಂದ ನಡೆದುಕೊಂಡಿದ್ದಾರೆ ಎಂದು ಟೀಕಿಸಿದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಅಧಿವೇಶನದಲ್ಲಿ ಸದನ ಪ್ರವೇಶಿಸಲು ಮುಂದಾದ ಪ್ರತಿಪಕ್ಷ ನಾಯಕರು ಮತ್ತು ಸದಸ್ಯರನ್ನು ಪೊಲೀಸರು ತಡೆದರು. ಪೊಲೀಸರೇ ಸದನ ಪ್ರವೇಶಿಸಿದ ಘಟನೆಯೂ ನಡೆದು ಹೋಯಿತು ಎಂದರು.ರಾಜೀನಾಮೆಗೂ ಸಿದ್ಧ:ಸರ್ಕಾರದ ಪತನಕ್ಕೆ ಗಣಿ ಮಾಲಿಕರ ಹಣ ಬಳಕೆಯಾಗಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಅವರು ಈ ಬಗ್ಗೆ ಸರ್ಕಾರ ಯಾವ ರೀತಿಯ ತನಿಖೆ ನಡೆಸಿದರೂ ಅದನ್ನು ಎದುರಿಸಲು ತಾವು ಸಿದ್ಧ ಎಂದರು.ವಿಪಕ್ಷಗಳು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿವೆ ಎಂದು ಸಿಎಂ ಹೇಳುತ್ತಿದ್ದಾರೆ. ಎಲ್ಲಾ ವಿಪಕ್ಷ ಶಾಸಕರು ರಾಜೀನಾಮೆ ನೀಡಲಿ ಎಂದು ಅವರು ಬಹಿರಂಗವಾಗಿ ವಿನಂತಿಸಿದರೆ ತಮ್ಮ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದರು.ಪಕ್ಷದ ಸಂಸದ ಚೆಲುವರಾಯಸ್ವಾಮಿ, ಶಾಸಕರಾದ ಪುಟ್ಟರಾಜು, ಕಲ್ಪನಾ ಸಿದ್ಧರಾಜು, ಇ.ಕೃಷ್ಣಪ್ಪ ಮುಂತಾದವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Mr. Kumarswamy, neevu namma prajaprabhuthva da mele nambike iruvavare aadare, 5 varsha prathipaksha dalli kulithukondu gouravayuthavaagi nadedu kollodannu kaliyiri.. prathee varsha vote haakode ee raajyada janakke kelasa alla annodannu nenapidi.. enri nimage adhikaara bittu irokke aagode ilwa..? ondu vote aagbekidre estu kharchu ide antha swalpanaadru think maadiddira..? adoo alde progress estu stop aagutthe annodannadroo think maadiddira..? swalpa think madi maathadi.. karnataka da jana ella artha maadkotthare. raajyada bokkasa yaarappana aasthinoo alla.. raajyada prajegala tax duddu allirodu..
This Gowda family is curse to karnataka. See that older gowda did to Ramakrshna hegde when he become prime minister. HIs 3 son r villans in history of karnataka .politics. Curse should go away
ಇಂದು ರಾಜಕಾರಣದಲ್ಲಿ ದೂರದೃಷ್ಟಿಯುಳ್ಳ ನಾಯಕರ ಕೊರತೆ ಹೆಚ್ಚಾಗಿದೆ. ಸರಕಾರಗಳು ೫ ವರ್ಷ ಬಾಳುವುದು ಕನಸಿನ ಮಾತಾಗಿದೆ. ನೈತಿಕತೆಯ ಬಗ್ಗೆ ಮಾತನ್ನು ಆಡುವ ಯೋಗ್ಯತೆಯನ್ನು ನಮ್ಮ ಹೆಚ್ಚಿನ ರಾಜಕಾರಣಿಗಳು ಉಳಿಸಿಕೊಂಡಿಲ್ಲ. ಇವರನ್ನು ಆರಿಸಿ ಕಳುಹಿಸಿರುವ ಪ್ರಜೆ ಇಂದು ಅಕ್ಷರಶ: ಅಸಹಾಯಕನಾಗಿದ್ದಾನೆ. ಅಧಿಕಾರ ಮತ್ತು ದುಡ್ಡಿಗಾಗಿ ನಡೆಯುತ್ತಿರುವ ಜೂಜಾಟದಲ್ಲಿ ತಮ್ಮನ್ನು ತಾವೇ ಮಾರಿಕೊಳ್ಳುತ್ತಿರುವ ರಾಜಕಾರಣಿಗಳು ವ್ಯಾಪಾರದ ಸರಕಾಗಿದ್ದಾರೆ. ಇದನ್ನು ಪ್ರಜಾಪ್ರಭುತ್ವದ ಅಧ:ಪತನ ಎನ್ನಲಡ್ಡಿಯಿಲ್ಲ.
Both Kumaraswami and his father are people of zero credibility.He should just shut up if at all he has got any shame.
ರಾಜಕೀಯದಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದರೆ ಒಂದು ಪಕ್ಷ ಇನ್ನೊಂದು ಪಕ್ಷಕ್ಕೆ ಗೇಲಿ ಮಾಡುತ್ತಲೇ ಇರುತ್ತದೆ, ಆದರೆ ಇಲ್ಲಿ ಯುಡಿಯುರಪ್ಪ ರವರ ಹಗರಣಗಳನ್ನು ನೋಡಿದರೆ ಪ್ರತಿಯೊಬ್ಬನು ವಿರುದ್ಧ ಮಾತನಾಡಲೇ ಬೇಕಾಗುತ್ತದೆ, ಯುದಿಯುರಪ್ಪರವರು ಕರ್ನಾಟಕದ ಜನತೆಗೆ ಮೋಸ ಮಾಡುತಿದ್ದಾರೆ ಇದು ಸರಿಯಲ್ಲ. ಅದಕ್ಕಾಗಿ ಕರ್ನಾಟಕದ ಜನತೆ ಏನು ಇಚ್ಚಿಸುತ್ತದೆ ಅದನ್ನು ನೋಡಬೇಕು,
If it is not possible to BJP to grab one JDS MLA, then why JDS is arranging Resort accomodation for their all MLA's.? it means they are not having confidence with their own MLAs.if resigned & fresh election conducted, who will bear the cost of election whether Mr.Gowda's family. Unnecessary talk by HH Kumar swamy.