Thursday, June 20, 2013
Last Updated: 1:28:35 PM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಶೃಂಗಾರ ಮಾಸಕ್ಕೆ ರಂಗಾದ ಗಾಂಧೀನಗಗರ
    • ಶೃಂಗಾರ ಮಾಸ ಬಂದೇ ಬಿಡು¤. ಪ್ರೇಮಿಗಳ ದಿನಕ್ಕಿನ್ನು ಉಳಿದಿರೋದು ಇಪ್ಪತ್ತೇ ದಿನ. ಕನ್ನಡ ಚಿತ್ರರಂಗದಲ್ಲೀಗ ಪ್ರೇಮ ಚಿತ್ರ

      • Udayavani | Jan 22, 2013

        ಶೃಂಗಾರ ಮಾಸ ಬಂದೇ ಬಿಡು¤. ಪ್ರೇಮಿಗಳ ದಿನಕ್ಕಿನ್ನು ಉಳಿದಿರೋದು ಇಪ್ಪತ್ತೇ ದಿನ. ಕನ್ನಡ ಚಿತ್ರರಂಗದಲ್ಲೀಗ ಪ್ರೇಮ ಚಿತ್ರಗಳ ಸುಗ್ಗಿ ಮತ್ತು ಸುದ್ದಿ. ಹೇಗಾದರೂ ಮಾಡಿ ಪ್ರೇಮಿಗಳಿಗೊಂದಷ್ಟು ಚೆಂದದ ಪ್ರೇಮಕತೆಗಳನ್ನು ಹೇಳಬೇಕು ಅಂತ ಕಾಯ್ತಿದ್ದಾರೆ ಪ್ರೇಮಲೋಕದ ಪುಂಗವರು. ಹೀಗಾಗಿ ಪ್ರೇಮಿಗಳ ದಿನ¨ ‌ ಆಸುಪಾಸಲ್ಲಿ ಪ್ರೇಮ ಪಕ್ಷಿಗಳಿಗಾಗಿ ಸಿನಿಮಾಗಳು ಬರುತ್ತಿವೆ.

        ಉಪೇಂದ್ರ ಬರೆದು, ತಿದ್ದಿ, ನಟಿಸಿರುವ ಟೋಪಿವಾಲಾ ಈ ಪಟ್ಟಿಯಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಟೋಪಿವಾಲಾ ಅನ್ನೋ ಹೆಸರಿಗೂ ಪ್ರೇಮಕ್ಕೂ ಸಂಬಂಧ ಇಲ್ಲ ಬಿಡಿ. ಆದರೆ ಪ್ರೇಮ ದಲ್ಲಿ ಟೋಪಿ ಹಾಕಿಸಿಕೊಳ್ಳೋರ ಸಂಖ್ಯೆ ಹೆಚ್ಚುತ್ತಿ ರೋದರಿಂದ ಒಂದಷ್ಟು ಮಂದಿ ಭಗ್ನಪ್ರೇಮಿಗಳು ಖುಷಿಯಾಗಬಹುದು.

        ಉಪೇಂದ್ರರಂತೂ ಭಗ್ನಪ್ರೇಮಿಗಳ ಆರಾಧ್ಯದೈವ ಬೇರೆ. ಅದರ ಬೆನ್ನಿಗೆ ನಾಗಶೇಖರ್‌ ನಿರ್ದೇಶನದ ಮೈನಾ ತೆರೆಗೆ ಹಾರಿಬರಲು ಕಾಯುತ್ತಿದೆ. ಈಗಾಗಲೇ ಅದನ್ನು ಸೂರ್ಯ ನೋಡಿ ಮೆಚ್ಚಿಕೊಂಡಿದ್ದಾರೆ ಅನ್ನೋ ಮಾತಿದೆ. ನಾಗಶೇಖರ್‌ ಹಿಂದಿನ ಚಿತ್ರದ ಪ್ರಣಯಕತೆ ಎಲ್ಲರಿಗೂ ಇಷ್ಟವಾಗಿರೋದರಿಂದ ಪ್ರೇಮಿಗಳು ಮೈನಾ ನೋಡಲು ಕಾಯುತ್ತಿದ್ದಾರೆ ಎಂದವರು ನಂಬಿದ್ದಾರೆ.

        ಸಿಂಪಲ್ಲಾಗಿ ಒಂದ್‌ ಲವ್‌ಸ್ಟೋರಿ ತನ್ನ ಟ್ರೈಲರ್‌ ಗಳಿಂದಲೇ ಹೆಸರಾಗಿದೆ. ಚುರುಕು ಮಾತು, ಕಚಗುಳಿ ಇಡುವ ಸಂಭಾಷಣೆಯಿಂದಾಗಿ ಅದು ಗೆಲ್ಲುತ್ತದೆ ಅಂತ ಚಿತ್ರತಂಡದ ಮಾತು. ಲವ್‌ಸ್ಟೋರಿ ಆಗಿರೋದರಿಂದ ಫೆಬ್ರವರಿ ಹದಿನಾಲ್ಕರ ಸುತ್ತ ಮುತ್ತ ತೆರೆಕಂಡರೆ ಅನುಕೂಲ ಎಂಬುದು ತಂಡದ ನಂಬಿಕೆ. ಫೆಬ್ರವರಿ ಎಂಟರ ಹೊತ್ತಿಗೇ ತೆರೆಕಾಣಬೇಕು ಎಂದು ಚಾರ್‌ಮಿನಾರ್‌ ಕಾಯುತ್ತಿದೆ. ಅದೂ ಪ್ರೇಮಕತೆಯನ್ನೇ ಒಳಗೊಂಡಿದೆ. ಮತ್ತೂಂದು ಲವ್‌ ಸ್ಟೋರಿ ಹೊಂದಿರುವ ಚಿತ್ರ ಪದೇ ಪದೇ. ಅದನ್ನೂ ಅದೇ ಸುಮಾರಿಗೆ ತೆರೆಗೆ ತರಲು ತಂಡ ಪ್ರಯತ್ನ ನಡೆಸುತ್ತಿದೆ. ಇವೆಲ್ಲದರ ಮಧ್ಯೆ ಆಂತರ್ಯ ಮತ್ತು ಪಾರು ಐ ಲವ್‌ ಯೂ ಕೂಡ ಚಿತ್ರಮಂದಿರಗಳ ಹುಡುಕಾಟದಲ್ಲಿವೆ.

        ಇವುಗಳಲ್ಲದೇ, ತೆರೆಗೆ ಬರುವ ಸರದಿಯಲ್ಲಿ ಇನ್ನೊಂದಷ್ಟು ಸಿನಿಮಾಗಳೂ ಕಾಯುತ್ತಾ ಕೂತಿವೆ. ಸದ್ಯಕ್ಕೆ ಕಾಡುತ್ತಿರುವುದು ಥೇಟರ್‌ ಸಮಸ್ಯೆ. ಈ ಎಲ್ಲಾ ಚಿತ್ರಗಳು ನಿರೀಕ್ಷೆಯ ಸಿನಿಮಾಗಳೆಂದು ನಿರ್ಮಾಪಕರೂ ನಿರ್ದೇಶಕರೂ ನಂಬಿರೋದರಿಂದ ಎಲ್ಲರಿಗೂ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳೇ ಬೇಕು. ಚಿತ್ರಮಂದಿರವನ್ನು ಅಲಂಕರಿಸಿ, ಪ್ರೇಮಿಗಳನ್ನು ಸೆಳೆಯಲು ಹೊಸ ತಂತ್ರಗಳನ್ನೂ ಚಿತ್ರತಂಡ ರೂಪಿಸಿಕೊಳ್ಳುತ್ತಿದೆ.

        ಅಷ್ಟಾಗಿಯೂ ಈ ಎಲ್ಲಾ ಚಿತ್ರಗಳು ಒಂದೇ ವಾರದ ಅವಧಿಯಲ್ಲಿ ಬರಲು ಹವಣಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಅಷ್ಟಕ್ಕೂ ಪ್ರೇಮಿಗಳ ದಿನ ಎನ್ನುವುದು ಖಾಸಗಿ ಆಚರಣೆ. ಆವತ್ತು ರಜೆಯಿಲ್ಲ. ಪ್ರೇಮಿಗಳು ಕೆಂಪೇಗೌಡ ರಸ್ತೆಯ ಚಿತ್ರಮಂದಿರಕ್ಕಿಂತ ಹೆಚ್ಚಾಗಿ ಮಲ್ಟಿಪ್ಲೆಕ್ಸುಗಳ ಕಡೆ ಸಾಗುತ್ತಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಆದರೂ ಗಾಂಧೀನಗರ ಮೇನ್‌ ಥೇಟರ್‌ ವ್ಯಾಮೋಹ ಬಿಟ್ಟಿಲ್ಲ. ಪ್ರೇಮಿಗಳ ದಿನ ಎಂಬುದು ಮಹಾನ್‌ ಸಂಭ್ರಮ ಏನಲ್ಲ. ಈಗಂತೂ ದಿನದಿನವೂ ಚೈತ್ರದ ಪ್ರೇಮಾಂಜಲಿಯೇ. ಅಂಥದ್ದರಲ್ಲಿ ಚಿತ್ರರಂಗ ಇಂಥದ್ದೊಂದು ಸಂಭ್ರಮಕ್ಕೆ ಕಾಯೋದರಲ್ಲಿ ಅರ್ಥ ಇದೆಯಾ? ಅದನ್ನು ಈ ಸಲದ ಬಿಡುಗಡೆ ಮತ್ತು ಯಶಸ್ಸು ನಿರ್ಧಾರ ಮಾಡಲಿದೆ. ಅಷ್ಟಕ್ಕೂ ನೀವು ಕಾಯಬೇಕಾಗಿರೋದು ಕೇವಲ ಮೂರು ವಾರ ಮಾತ್ರ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus