Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಐಸಿರಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೊಳ್ಳೋರಿಗೆ ಬರೆ: ಬಂಗಾರಕ್ಕೆ ತೆರಿಗೆ ಹೊರೆ
    • ಚಿನ್ನದೆ ತೆರಿಗೆ ಏರಿಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಥೈಲಿ ಹಿಡಿದು ನಿಂತಿರುವವರಿಗೆ ಈಗ ಜ್ವರ ಬರಿಸಿದೆ. ಇಷ್ಟೂ ದಿನ ಮ

      • Udayavani | Jan 27, 2013

        ಚಿನ್ನದೆ ತೆರಿಗೆ ಏರಿಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಥೈಲಿ ಹಿಡಿದು ನಿಂತಿರುವವರಿಗೆ ಈಗ ಜ್ವರ ಬರಿಸಿದೆ. ಇಷ್ಟೂ ದಿನ ಮ್ಯೂಚುಯಲ್‌ ಫ‌ಂಡ್‌, ಎಫ್ಡಿಗಳಿಗಿಂತ ರಿಯಲ್‌ ಎಸ್ಟೇಟ್‌, ಚಿನ್ನವೇ ಬೆಸ್ಟು ಅಂತಿದ್ದವರು ಈಗ ಯೂ ಟರ್ನ್ ಮಾಡುವ ಯೋಚನೆ ಮಾಡುವಂತಾಗಿದೆ. ಆದರೂ ಬೇಡಿಕೆ ಇಳಿದಾಗ ಬೆಲೆಯೂ ಬೀಳಬಹುದು ಎನ್ನುವ ಸೂತ್ರ ಮರೆಯುವಂತಿಲ್ಲ.

        ಚಿನ್ನದ ಮೇಲಿನ ಟ್ಯಾಕ್ಸು ಹೆಚ್ಚಾಗಿದೆ. ಇದರಿಂದ ಇಡೀ ಚಿನಿವಾರ ಪೇಟೆಯಲ್ಲಿ ಇದೇ ಸುದ್ದಿ. ಇತ್ತ ಕಡೆ ಚಿನ್ನದ ಮೇಲೆ ಹಣ ಹೂಡಬೇಕಾ, ಬೇಡವಾ? ಅನ್ನೋ ಗೊಂದಲ ಶುರುವಾಗಿದೆ. ತೆರಿಗೆ ಏರಿಸಿದ್ದ ತಡೆ ಚಿನ್ನ ಕೊಳ್ಳೋಕೂ ಲೈಸೆನ್ಸ್‌ ಬೇಕಾ? ಹಾಗಂತ ಪ್ರಶ್ನೆ ಕೇಳ್ಳೋ ಸಮಯ ಎದುರಾಗಿಯೇ ಬಿಟ್ಟಿದೆ.

        ಏಕೆಂದರೆ ಹೂಡಿಕೆಗೆ ಅತ್ಯಂತ ಪ್ರಶಸ್ತ ಎನ್ನಲಾದ ಚಿನ್ನದ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇ.50ರಷ್ಟು ಹೆಚ್ಚಿಸಿದೆ. ಅಂದರೆ ಈವರೆಗೆ ಶೇ.4ರಷ್ಟು ಇದ್ದ ತೆರಿಗೆಯನ್ನು ಶೇ.6ಕ್ಕೆ ಏರಿಸಿದೆ. ಪರಿಣಾಮ ಕೆಜಿ ಚಿನ್ನದ ದರ 60000 ರೂ. ಏರಿಕೆಯಾಗಿದೆ. ಮೇಲ್ನೋಟಕ್ಕೆ ಇದು ಭಾರೀ ಹೊರೆಯಾಗದು ಅನ್ನಿಸಬಹುದು. ಆದರೆ ದೀರ್ಘಾವಧಿಯಲ್ಲಿ ಇದು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಮತ್ತು ಹೂಡಿಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ. ಜೊತೆಗೆ ಮತ್ತೆ ಚಿನ್ನದ ಕಳ್ಳಸಾಗಣೆಗೆ ಅವಕಾಶ ಮಾಡಿಕೊಡುವ ಎಲ್ಲಾ ಸಾಧ್ಯತೆಯನ್ನೂ ಲೆಕ್ಕ ಹಾಕಲಾಗುತ್ತಿದೆ.

        ಇದೆಲ್ಲಕ್ಕಿಂತ ಮಿಗಿಲಾಗಿ ಆಮದು ಸುಂಕ ಏರಿಸುವ ಮೂಲಕ, ಚಿನ್ನದ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಅನ್ನೋ ಅನುಮಾನಗಳು ದಟ್ಟವಾಗಿವೆ. ಹೀಗಾಗಿಯೇ ಹೂಡಿಕೆದಾರರು ಆತಂಕಕ್ಕೆ ಒಳಗಾಗಿರುವುದು. ಇನ್ನು ಮುಂದೆ ಚಿನ್ನ ಖರೀದಿ ಮಾಡೋಕೋ ಲೈಸೆನ್ಸ್‌ ಬೇಕಾ ಅಂತಾ ಪ್ರಶ್ನಿಸುತ್ತಿರುವುದು.

        ಇತ್ತೀಚಿನ ವರ್ಷಗಳಲ್ಲಿ ಹಣದುಬ್ಬರದ ಮಧ್ಯೆಯೂ ಲಾಭ ತಂದುಕೊಡುತ್ತಿರುವ ಹೂಡಿಕೆಯಲ್ಲಿ ಚಿನ್ನ ಮುಂಚೂಣಿಯಲ್ಲಿದೆ. ಪರಿಣಾಮ ಜನ ಬ್ಯಾಂಕ್‌ ಠೇವಣಿ ಸೇರಿದಂತೆ ಸರ್ಕಾರಕ್ಕೆ ಬಂಡವಾಳ ಲಭ್ಯವಾಗುವ ಯಾವುದೇ ವಲಯದಲ್ಲೂ ಹಣ ಹೂಡಿಕೆ ಮಾಡುತ್ತಿಲ್ಲ. ಹೀಗಾಗಿ ಬ್ಯಾಂಕ್‌ಗಳಿಗೆ ಹಣದ ಕೊರತೆ ಉಂಟಾಗಿದೆ. ಇದು ಸರ್ಕಾರಕ್ಕೆ ಸಂಕಟ ತಂದಿರುವ ಒಂದು ಸಂಗತಿ.

        ಸರ್ಕಾರಕ್ಕೆ ಕಾಗೇಬಂಗಾರ ಇದು
        ಇದರ ಜೊತೆಗೆ ಸರ್ಕಾರಕ್ಕೆ ಎದುರಾಗಿರುವ ಇನ್ನೊಂದು ದೊಡ್ಡ ಚಿಂತೆಯೆಂದರೆ ಚಾಲ್ತಿ ಖಾತೆಯಲ್ಲಿನ ಕೊರತೆ (ದೇಶಗಳಿಗೆ ಪಾವತಿಸಬೇಕಾದ ಆಮದು ಪಾವತಿ) ಪ್ರಮಾಣ. ಭಾರತ ವಿಶ್ವದಲ್ಲೇ ಅತಿದೊಡ್ಡ ಚಿನ್ನದ ಆಮದು ರಾಷ್ಟ್ರ. ಇತ್ತೀಚಿನ ವರ್ಷಗಳಲ್ಲಿ ನಾವು ಪ್ರತಿ ವರ್ಷ ಸರಾಸರಿ 1000 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರ ಅಂದಾಜು ಮೌಲ್ಯ 3 ಲಕ್ಷ ಕೋಟಿ ರೂಪಾಯಿ. ಹೀಗೆ ನಾವು ಆಮದು ಮಾಡಿಕೊಳ್ಳುವ ಚಿನ್ನಕ್ಕೆ ನಾವು ಡಾಲರ್‌ ರೂಪದಲ್ಲೇ ಹಣ ಪಾವತಿ ಮಾಡಬೇಕು. ಪೆಟ್ರೋಲಿಯಂ ಉತ್ಪನ್ನ ಹೊರತುಪಡಿಸಿದರೆ ದೇಶದಿಂದ ಆಮದು ಮಾಡಿಕೊಳ್ಳುವ ಗರಿಷ್ಠ ಮೊತ್ತದ ವಸ್ತುವೆಂದರೆ ಚಿನ್ನ.

        ಈ ರೀತಿ ಚಿನ್ನದ ಆಮದು ಪ್ರಮಾಣ ಹೆಚ್ಚುವುದರಿಂದ ಒಂದೆಡೆ ಡಾಲರ್‌ ರೂಪದಲ್ಲಿರುವ ದೇಶಿ ವಿನಿಮಯ ಸಂಗ್ರಹ ಕರಗಿ ಹೋಗುತ್ತಿದೆ. ಮತ್ತೂಂದೆಡೆ ಚಾಲ್ತಿ ಖಾತೆ ಕೊರತೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2011ರಲ್ಲಿ ದೇಶದ ಚಾಲ್ತಿ ಕೊರತೆ ಪ್ರಮಾಣ 11 ಲಕ್ಷ ಕೋಟಿ ರೂ. ಇದ್ದು ಇದರಲ್ಲಿ ಹೆಚ್ಚು ಕಡಿಮೆ ಶೇ.50ರಷ್ಟಕ್ಕೆ ಚಿನ್ನದ ಆಮದೇ ಕಾರಣವಾಗಿತ್ತು. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಕ್ಕೆ ಚಿನ್ನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮಳೆಯರಿಗೆ ಶೃಂಗಾರದ ವಸ್ತು, ಹೂಡಿಕೆದಾರರಿಗೆ ಅದು ಸುರಕ್ಷಿತ ತಾಣವೇ ಆಗಿದ್ದರೂ, ಸರ್ಕಾರದ ಪಾಲಿಗೆ ಮಾತ್ರ ಇದು ಒಂದು ರೀತಿಯಲ್ಲಿ ನಷ್ಟದ ಬಾಬಾ¤ಗಿ ಪರಿಣಮಿಸಿದೆ. ಹೀಗಾಗಿಯೇ ಚಿನ್ನದ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸಿದರೆ ಅದು ಜನರ ಖರೀದಿ ಮತ್ತು ಹೂಡಿಕೆ ಪ್ರವೃತ್ತಿ ಮೇಲೆ ಕಡಿವಾಣ ಹೇರಬಹುದು ಎಂಬುದು ಸರ್ಕಾರದ ಅಂದಾಜು.

        ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಗಿಂತ ಹೆಚ್ಚಿನ ದರ ವಿಧಿಸಿದರೆ ಸಗಟು ವ್ಯಾಪಾರಿಗಳು ಸಹಜವಾಗಿಯೇ ಕಡಿಮೆ ದರಕ್ಕೆ ಲಭ್ಯವಾಗುವ ಚಿನ್ನಕ್ಕೆ ಮೊರೆ ಹೋಗುತ್ತಾರೆ. ಅಂದರೆ ಕಳ್ಳಮಾರ್ಗವಾಗಿ ತೆರಿಗೆ ವಂಚಿಸಿ ಬರುವ ಚಿನ್ನ ಖರೀದಿಸುತ್ತಾರೆ. ಇದರಿಂದ ನೇರವಾಗಿ ನಷ್ಟ ಅನುಭಸುವುದು ಸರ್ಕಾರವೇ!

        ಕಳ್ಳಸಾಗಣೆ ಆರಂಭ?
        ಚಿನ್ನದ ಮೇಲಿನ ತೆರಿಗೆ ಏರಿಕೆ ಪರಿಣಾಮ ಒಂದೊಂದಲ್ಲ. ಹೂಡಿಕೆ ಕಡಿಮೆಯಾಗುವುದು, ಆರ್ಥಿಕತೆ ಏರುಪೇರಾಗುವುದು ಎಲ್ಲವೂ ಒಂದು ಮುಖ. ಇನ್ನೊಂದು ಖರಾಳ ಮುಖವಿದೆ. ದಶಕಗಳ ಹಿಂದೆ ಭಾರತದಲ್ಲಿ ಚಿನ್ನ ಆಮದಿಗೆ ಭಾರೀ ಸುಂಕ ಹೇರಲಾಗುತ್ತಿತ್ತು. ಹೀಗಾಗಿಯೇ ಪ್ರತಿ ವರ್ಷ ಸಾರಾರು ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಮಾರ್ಗವಾಗಿ ಭಾರತಕ್ಕೆ ಬರುತ್ತಿತ್ತು. ಪರಿಣಾಮ ಸರ್ಕಾರಕ್ಕೆ ಸಲ್ಲಬೇಕಿದ್ದ ತೆರಿಗೆ ಹಣ ಸೋರಿಕೆಯಾಗುತ್ತಿತ್ತು. ಆದರೆ ಕಳೆದ ದಶಕದಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದ ಮೇಲೆ ಚಿನ್ನದ ಕಳ್ಳಸಾಗಣೆ ಬಹುತೇಕ ನಿಂತೇ ಹೋಗಿತ್ತು.

        2006 ರಿಂದ 2010ರ ಅವಧಿಯಲ್ಲಿ ವರ್ಷಕ್ಕೆ ಹೆಚ್ಚೆಂದರೆ 5 ಕೋಟಿ ರೂ.ನಷ್ಟು ಮಾತ್ರ ಚಿನ್ನದ ಕಳ್ಳಸಾಗಣೆ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚಿನ್ನದ ಆಮದಿನ ಮೇಲಿನ ಸುಂಕವನ್ನು ಯಾವಾಗ ಶೇ.2ರಿಂದ ಶೇ.4ಕ್ಕೆ ಹೆಚ್ಚಿಸಿತೋ ಚಿನ್ನದ ಕಳ್ಳಸಾಗಣೆ ಕೆಲವೇ ದಿನಗಳಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಹೆಚ್ಚಿತು. 2012ರ ಏಪ್ರಿಲ್‌- ಜುಲೈ ತಿಂಗಳ ಅವಧಿಯಲ್ಲಿ ಒಟ್ಟಾರೆ 942 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ವೇಳೆ ವಶಪಡಿಸಿಕೊಳ್ಳಲಾುತು. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.272ರಷ್ಟು ಹೆಚ್ಚು.

        ಇದೊಂದೇ ಮಾತಿುಂದ, ತೆರಿಗೆ ಏರಿಕೆ ಯಾವ ರೀತಿಯಲ್ಲಿ ಚಿನ್ನ ಕಳ್ಳಸಾಗಣೆಗೆ ಅವಕಾಶ ಮಾಡಿಕೊಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇದರಿಂದಾಗಿ ಆಭರಣ ಉದ್ಯಮ ಮತ್ತು ಆರ್ಥಿಕ ತಜ್ಞರು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳಕ್ಕೆ ರೋಧ ವ್ಯಕ್ತಪಡಿಸಿದ್ದಾರೆ.

        ಆಭರಣ ಉದ್ಯಮಕ್ಕೆ ಭಾರೀ ಹೊಡೆತ
        ಭಾರತದಲ್ಲಿ ಸುಮಾರು 15 ಲಕ್ಷ ಜನ ಚಿನ್ನದ ಆಭರಣಗಳ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಸರ್ಕಾರ ಏಕಾಏಕಿ ಆಮದು ಸುಂಕ ಏರಿಸುವ ಮೂಲಕ ಜನರ ಚಿನ್ನ ಖರೀದಿ ಆಶಯಕ್ಕೆ ಏಟು ನೀಡಿದರೆ ಅದು ಪರೋಕ್ಷವಾಗಿ ಇದೇ ಉದ್ಯಮವನ್ನು ನಂಬಿದ ಜನರ ಮೇಲೆ ಪರಿಣಾಮ ಬೀರಿದೆ. ದೇಶದ ಒಟ್ಟು ರಫ್ತಿನಲ್ಲಿ ಆಭರಣ ವಲಯದ ಪಾಲು ಶೇ.17ರಷ್ಟಿದೆ. ಹೀಗಾಗಿ ಚಿನ್ನದ ಆಮದು ಸುಂಕ ಏರಿಕೆ ರಫ್ತು ವವಾಟಿನ ಮೇಲೆ ಕೆಟ್ಟ ಪರಿಣಾಮ ಬೀರುವ ಆತಂಕವನ್ನು ಲೆಕ್ಕಾಚಾರ ಮಾಡಿಯಾಗಿದೆ.

        ಹೂಡಿಕೆಯಲ್ಲಿ ಭಾರಿ ಏರಿಕೆ
        2006ರಲ್ಲಿ ನಾಣ್ಯ ಅಥವಾ ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡ್‌ ಫ‌ಂಡ್‌ಗಳ (ಹೂಡಿಕೆಯ ದೃಷ್ಟಿಯಿಂದಲೇ ಖರೀದಿ) ಮೂಲಕ ಚಿನ್ನ ಖರೀದಿ ಪ್ರಮಾಣ, ದೇಶದ ಒಟ್ಟು ಚಿನ್ನ ಖರೀದಿಯ ಶೇ.27ರಷ್ಟಿತ್ತು. 2011ರಲ್ಲಿ ಈ ಪ್ರಮಾಣ ಶೇ.37ಕ್ಕೆ ಏರಿದೆ. ಇದು ದೇಶದ ಜನ ಚಿನ್ನ ಖರೀದಿಗೆ ಮುಗಿಬಿದ್ದಿರುವ ರೀತಿಯನ್ನು ಬಿಂಬಿಸುತ್ತದೆ.
        ಎಷ್ಟೋ ಬ್ಯಾಂಕ್‌ಗಳು ಚಿನ್ನ ವ್ಯಾಪಾರವನ್ನೇ ಪ್ರಮುಖ ಆದಾಯ ಮೂಲವನ್ನಾಗಿಟ್ಟು ಕೊಂಡಿದೆ. ಆದರೆ ತೆರಿಗೆ ಏರಿಕೆ ಪರಿಣಾಮ ಇದರ ಮೇಲೂ ಬೀಳಬಹುದು. ಈಗಾಗಲೇ ಸಗಟು ಮಾರುಕಟ್ಟೆಗಿಂತ ಬ್ಯಾಂಕ್‌ಗಳಲ್ಲಿ ಗುಣಮಟ್ಟ ಹಾಗೂ ತೆರಿಗೆ ಹೆಸರಿನಲ್ಲಿ ಗ್ರಾಂಗೆ 200-300ರೂ. ಹೆಚ್ಚಿರುತ್ತದೆ. ಮತ್ತೂಮ್ಮೆ ತೆರಿಗೆ ಏರಿರುವುದು ಬ್ಯಾಂಕ್‌ಗಳ ಆದಾಯ ಮೂಲಕ್ಕೆ ಏಟು ಬೀಳುವುದರಲ್ಲಿ ಯಾವ ಅನುಮಾನವೂ ಇಲ್ಲ.

        ಭಾರತಕ್ಕೆ ಚಿನ್ನ ಎಲ್ಲಿಂದ ಬರುತ್ತದೆ?

        ದೇಶದ ಒಟ್ಟು ಬೇಡಿಕೆಯ ಪೈಕಿ ಶೇ.50ರಷ್ಟು ಚಿನ್ನವನ್ನು ಸ್ವಿಜರ್ಲೆಂಡ್‌ ಮತ್ತು ಯುಎಇ ಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಉಳಿದದ್ದು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮುಂತಾದ ಪ್ರಮುಖ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ.

        ಉಲ್ಟಾ ಆದರೂ ಆಗಬಹುದು
        ಸರ್ಕಾರವೇನೋ ಆಮದು ಸುಂಕ ಹೆಚ್ಚಳ ಮಾಡಿ ಜನರ ಖರೀದಿ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿದೆ. ಇಂಥ ನಿರ್ಧಾರ ಹೊರಬಿದ್ದ ಕೂಡಲೇ ವಿದೇಶದಿಂದ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣದಲ್ಲೂ ದಿಡೀರ್‌ ಕುಸಿತ ಉಂಟಾಗಿದೆ. ಹೀಗಾಗಿ ಬೇಡಿಕೆ ಕಡಿಮೆಯಾದ ಕೂಡಲೇ ಚಿನ್ನದ ಬೆಲೆಯೂ ಇಳಿಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹಾಗೇನಾದರೂ ಚಿನ್ನ ಬೆಲೆ ಕಡಿಮೆಯಾದರೆ ಮತ್ತೆ ಜನ ಚಿನ್ನ ಖರೀದಿಗೆ ಮುಗಿ ಬೀಳುತ್ತಾರೆ. ಹೀಗಾದರೆ ಸರ್ಕಾರ ಆಮದು ಸುಂಕ ಏರಿಸಿದ್ದಕ್ಕೆ ಅರ್ಥವೇ ಬರುವುದಿಲ್ಲ. ಹೂಡಿಕೆ ಮಾಡುವವರು ಹೀಗಾದರೆ ಚಿನ್ನದ ಇಳಿಕೆಯನ್ನು ಕಾಯಲೇ ಬೇಕು. ಆದರೆ ಮೊದಲಷ್ಟು ಲಾಭ ಬರುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯೇ ಆದೀತು.

        ಸುಂಕ ಹೆಚ್ಚಿಸಲು ಕಾರಣ
        - ಜನ ಇತರೆ ಹೂಡಿಕೆಗಳಿಗಿಂತ ಚಿನ್ನಕ್ಕೆ ಆದ್ಯತೆ ನೀಡುತ್ತಿರುವುದು
        - ಬ್ಯಾಂಕ್‌ ಠೇವಣಿ, ಬಾಂಡ್‌ಗಳಲ್ಲಿ ಹೂಡಿಕೆ ಕಡಿಮೆಯಾಗಿರುವುದು
        - ಚಿನ್ನ ಆಮದಿನಿಂದ ದೇಶಿ ವಿನಿಮಯ ಸಂಗ್ರಹದಲ್ಲಿ ಖೋತಾ
        - ಚಿನ್ನ ಆಮದಿನಿಂದ ಚಾಲ್ತಿ ಕೊರತೆ ಪ್ರಮಾಣ ಹೆಚ್ಚುತ್ತಿರುವುದು
        - ಹೂಡಿಕೆಗಾಗಿ ಖರೀದಿಸಿದ ಚಿನ್ನ ಬಳಕೆಗೆ ಲಭ್ಯವಾಗದೇ ತಿಜೋರಿ ಸೇರುತ್ತಿರುವುದು

        ಚಾಲ್ತಿ ಖಾತೆ ಕೊರತೆ ಎಂದರೇನು?
        ಎ) ದೇಶದ ಆಮದು ಮತ್ತು ರಫ್ತಿನ ಮೌಲ್ಯದ ವ್ಯತ್ಯಾಸ + ಬಿ) ದೇಶದಲ್ಲಿನ ಭಾರತದ ಹೂಡಿಕೆುಂದ ಬರುವ ಆದಾಯ ಮತ್ತು ದೇಶಗಳು ಭಾರತದಲ್ಲಿ ಮಾಡಿರುವ ಹೂಡಿಕೆಗೆ ಸಿಗುವ ಆದಾಯದ ನಡುನ ವ್ಯತ್ಯಾಸ + ಸಿ) ಬೇರೆ ಬೇರೆ ಮೂಲಗಳಿಂದ ಭಾರತಕ್ಕೆ ಹರಿದು ಬರುವ ಹಣ ಮತ್ತು ಭಾರತದಿಂದ ದೇಶಗಳಿಗೆ ಹರಿದು ಹೋಗುವ ಹಣದ ನಡುವಣ ವ್ಯತ್ಯಾಸವನ್ನು ಒಟ್ಟುಗೂಡಿಸಿದಾಗ ಸಿಗುವ ಮೌಲ್ಯವನ್ನು ಚಾಲ್ತಿ ಖಾತೆಯಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಲೆಕ್ಕಾಚಾರದ ಅನ್ವಯ ಒಂದು ವೇಳೆ ನಾವು ದೇಶಗಳಿಗೆ ಪಾವತಿ ಮಾಡಬೇಕಾದ ಹಣ ಹೆಚ್ಚಿದ್ದರೆ ಅದನ್ನು ಚಾಲ್ತಿ ಖಾತೆ ಕೊರತೆ ಎಂದೂ, ಒಂದು ವೇಳೆ ದೇಶದಿಂದ ನಮಗೆ ಬರಬೇಕಾದ ಹಣದ ಪ್ರಮಾಣ ಹೆಚ್ಚಿದ್ದರೆ ಅದನ್ನು ಚಾಲ್ತಿ ಖಾತೆ ುಗತೆ ಎಂದೂ ಕರೆಯಲಾಗುತ್ತದೆ.

        ಚಿನ್ನದ ಬಳಕೆ
        25000ಟನ್‌ - ಭಾರತದಲ್ಲಿ ಇರುವ ಒಟ್ಟು ಚಿನ್ನ
        7400000(75 ಲಕ್ಷ ಕೋಟಿರೂ.)- ಭಾರತದಲ್ಲಿರುವ ಒಟ್ಟು ಚಿನ್ನದ ಮೌಲ್ಯ
        1500000- ಭಾರತದ ಆಭರಣ ವಸ್ತುಗಳ ರಫ್ತು ಮೌಲ್ಯ

        ಆಮದು ಪ್ರಮಾಣ
        2007- 722 ಟನ್‌
        2008- 450 ಟನ್‌
        2009- 559 ಟನ್‌
        2010- 958 ಟನ್‌
        2011- 969 ಟನ್‌

        ಆಮದು ಸುಂಕ ಪ್ರಮಾಣ
        ಸ್ಟಾಂಡರ್ಡ್‌ ಚಿನ್ನ- ಶೇ.6
        ನಾನ್‌ ಸ್ಟಾಂಡರ್ಡ್‌ ಚಿನ್ನ- ಶೇ.10

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • ಹೊಸ ಮನೆ, ಹಳೆ ಮನೆಗಳ ಸಮಾಚಾರ
        ಹೊಸ ಮನೆಗಳನ್ನು ಉಪಯೋಗಕ್ಕಾಗಿ ಬಳಸುವ ಮುನ್ನ, ಹಳೆ ಮನೆಗಳಲ್ಲೂ ಧನಾತ್ಮಕ ಶಕ್ತಿಸ್ಪಂದನಗಳು ನಿರ್ದಿಷ್ಟ ಅವಧಿಗಳಲ್ಲಿ ತಿರುಗಿತಿರುಗಿ ಮನೆಯಲ್ಲಿ ತುಂಬಿಕೊಂಡು ಶಾಂತಿ ಸಮೃದ್ಧಿಯು ನೆಲೆಸೆಂದು ವಾಸ್ತು ಶ್ಲಾಘನಗಳನ್ನು ನೆರವೇರಿಸಬೇಕಾಗುತ್ತವೆ. ಗ್ರಹ ಶಾಂತಿ ನಡೆಸಿ ಕ್ರೂರ ಗ್ರಹಗಳನ್ನು ಸಮಾಧಾನಗೊಳಿಸುವುದೂ
      image
      • Copyright @ 2009 Udayavani.All rights reserved.
      • Designed & Hosted By 4cplus