ಬೆಂಗಳೂರು: ಕುದುರೆ ಹಾಗು ಕತ್ತೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖವಾಡ ಹಾಕಿ ಬಿಜೆಪಿ ಕಾರ್ಯಕರ್ತರು ನಗರದ ಟೌನ್‌ಹಾಲ್‌ನಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಟೌನ್‌ಹಾಲ್ ಬಳಿ 11 ಕತ್ತೆ ಹಾಗೂ ಒಂದು ಕುದುರೆ ಕರೆ ತಂದ ಕಾರ್ಯಕರ್ತರು, ಅವುಗಳಿಗೆ ಕುಮಾರಸ್ವಾಮಿ ಮುಖವಾಡ ಹಾಕಿ, ಜೆಡಿಎಸ್‌ನ ಕುದುರೆ ವ್ಯಾಪಾರದ ವಿರುದ್ಧ ಧಿ ಕ್ಕಾರ ಕೂಗಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ ಶಾಸಕ ಎನ್. ವಿಜಯ್‌ಕುಮಾರ್ ಹಾಗೂ ಶಾಸಕ ಹೇಮಚಂದ್ರ ಸಾಗರ್ ನೇತೃತ್ವದಲ್ಲಿ 25ಕ್ಕೂ ಅಧಿ ಕ ಬಿಬಿಎಂಪಿ ಸದಸ್ಯರು ಮುಖಂಡತ್ವದಲ್ಲಿ ಪ್ರತಿಭಟನೆ ನಡೆಯಿತು.ರೆಸಾರ್ಟ್‌ಗಳಿಗೆ ಕರೆದುಕೊಂಡು ಹೋಗಿ ಶಾಸಕರ ಕದುರೆ ವ್ಯಾಪಾರದಲ್ಲಿ ತೊಡಗಿರುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ. ಸರ್ಕಾರವನ್ನು ಅಸ್ಥಿರಗೊಳಿಸುವುದೇ ಅವರ ಉದ್ದೇಶ. ಬಿಜೆಪಿ ಸರ್ಕಾರದ ಅಭಿವೃದ್ಧಿಯನ್ನು ಸಹಿಸದೇ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.ಜೆಡಿಎಸ್‌ನ ಕಾರ್ಯತಂತ್ರಕ್ಕೆ ಕೈಜೋಡಿಸಿರುವ ಕಾಂಗ್ರೆಸ್, ಆದಾಯ ತೆರಿಗೆ ಅಧಿ ಕಾರಿಗಳ ಮೂಲಕ ದಾಳಿ ನಡೆಸಿದೆ. ಅಲ್ಪ ಶಾಸಕರನ್ನು ಹೊಂದಿರುವ ಕುಮಾರಸ್ವಾಮಿ ,ಶಾಸಕರ ಕುದುರೆ ವ್ಯಾಪಾರ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಇದು ಈ ರಾಜ್ಯದ ಜನತೆ ಅರಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕತ್ತೆಗಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಇದ್ದಲ್ಲಿ ಖಂಡಿತ ಮಾನ ನಷ್ಟ ಮೊಕದ್ದಮೆ ಹೂಡುತ್ತಿದ್ದವು !
ಕತ್ತೆಗಳು ಏನು ತಪ್ಪು ಮಾಡಿವೆ ಎಂದು ತಿಳಿಯುತಿಲ್ಲ ಅಕಟಕಟಾ !!!