Wednesday, May 22, 2013
Last Updated: 4:39:39 PM IST
  • ನಾನೆಲ್ಲಿರುವೆ:
  • ಮುಖಪುಟ Columns VIP_Column_-_Celeb_Writes
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬ್ಯಾಂಕಿಂಗ್‌ ಕ್ಷೇತ್ರದ ಬದಲಾವಣೆಯ ರೂವಾರಿ ಕೆ.ವಿ.ಕಾಮತ್‌
    • 2012-13ನೇ ವರ್ಷದ ಕೆ.ಕೆ. ಪೈ ರಾಷ್ಟ್ರೀಯ ಬ್ಯಾಂಕಿಂಗ್‌ ಪ್ರಶಸ್ತಿ ಪಡೆಯುತ್ತಿರುವ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆ

      • Udayavani | Feb 14, 2013

        2012-13ನೇ ವರ್ಷದ ಕೆ.ಕೆ. ಪೈ ರಾಷ್ಟ್ರೀಯ ಬ್ಯಾಂಕಿಂಗ್‌ ಪ್ರಶಸ್ತಿ ಪಡೆಯುತ್ತಿರುವ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕೆ.ವಿ. ಕಾಮತರು ಭಾರತದ ಮುನ್ನಡೆಗೆ ಅನನ್ಯ ಕೊಡುಗೆ ನೀಡಿರುವ ವ್ಯಕ್ತಿ. ಅವರು ಹಲವು ಬ್ಯಾಂಕಿಂಗ್‌ ಆವಿಷ್ಕಾರಗಳ ಶಿಲ್ಪಿಯೂ ಹೌದು. ಈಗ ಅವರು ಭಾರತದ ಎರಡು ಬೃಹತ್‌ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ. ಅವುಗಳೆಂದರೆ, ಭಾರತದ ಎರಡನೆಯ ಅತಿ ದೊಡ್ಡ ಬ್ಯಾಂಕಾದ ಐಸಿಐಸಿಐ ಬ್ಯಾಂಕ್‌ ಮತ್ತು ಬೃಹತ್‌ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‌.

        ಹೊಸ ಆಯಾಮ
        ನಮ್ಮ ಜಿಲ್ಲೆಯ ಹೆಮ್ಮೆಯ ಸುಪುತ್ರ ಕೆ.ವಿ. ಕಾಮತರು ಭಾರತದ ಬ್ಯಾಂಕಿಂಗ್‌ ಉದ್ದಿಮೆಗೆ ಹೊಸ ಹಾಗೂ ಹೆಚ್ಚುವರಿ ಆಯಾಮ ನೀಡಿರುವ ಸೃಜನಶೀಲ ಬ್ಯಾಂಕರ್‌. ಐಸಿಐಸಿಐ ಬ್ಯಾಂಕಿನ ತ್ವರಿತ ಪ್ರಗತಿಗೆ ಅವರು ನೀಡಿರುವ ಕೊಡುಗೆ ನಿಜವಾಗಿಯೂ ಮಹತ್ತರವಾದುದು. 2002ರ ಜೂನ್‌ 26ರಂದು 2002-2003ರ ಕೆ.ಕೆ. ಪೈ ರಾಷ್ಟ್ರೀಯ ಬ್ಯಾಂಕಿಂಗ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ಐಸಿಐಸಿಐ ಬ್ಯಾಂಕಿನ ಅಂದಿನ ಅಧ್ಯಕ್ಷ ನಾರಾಯಣನ್‌ ವಾಘೂಲರು, ಕೆ.ವಿ. ಕಾಮತರ ಉನ್ನತ ಸಾಧನೆಯ ಕುರಿತಾಗಿ ಸೂಚ್ಯವಾಗಿ ಈ ರೀತಿ ಹೇಳಿದ್ದರು. 'ಐf yಟu ಡಿಚnಠಿ ಠಿಟ rಛಿಡಿಚrಛ sಟಞಛಿಚಿಟಛy fಟ್ಟ ಠಿಜಛಿ ಛಿxcಛಿllಛಿnಠಿ ಡಿಟ್ಟk ಠಿಜಚಠಿ ಐಇಐಇಐ ಆಚnk ಜಚs ಛಟnಛಿ, yಟu ಞusಠಿ ಜಜಿvಛಿ ಠಿಜಛಿ ಚಡಿಚrಛ ಠಿಟ ಖrಜಿ ಓಚಞಚಠಿಜ ಡಿಜಟ ಜಿs nಟಡಿ ಇಉO ಟf ಠಿಜಛಿ ಆಚnk. ಐ ಠಿಜಟuಜಜಠಿ ಠಿಜಚಠಿ ಡಿಟulಛ ಚಿಛಿ ಞಟ್ಟಛಿ ಚಟಟrಟಟrಜಿಚಠಿಛಿ .... '

        1947ರ ಡಿಸೆಂಬರ್‌ 12ರಂದು ಮಂಗಳೂರಿನಲ್ಲಿ ಜನಿಸಿದ ಕುಂದಾಪುರ ವಾಮನ ಕಾಮತ್‌ ಅವರು ತನ್ನ ಹೈಸ್ಕೂಲು ಶಿಕ್ಷಣ ಮತ್ತು ಪಿಯುಸಿಯನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಮುಗಿಸಿದರು. ಆ ತರುವಾಯ, ಅವರು ಎಂಜಿನಿಯರಿಂಗ್‌ ಶಿಕ್ಷಣ ಪಡೆಯಲು ಸುರತ್ಕಲ್‌ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯನ್ನು ಸೇರಿದರು. ಬಿ ಇ ಪದವಿ ಪಡೆದ ಅನಂತರ ಅವರು ನಿರ್ವಹಣಾ ಶಿಕ್ಷಣದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕಾಗಿ ಅಹಮದಾಬಾದಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮೇನೇಜೆ¾ಂಟ್‌ ಸೇರಿದರು. ಎಂಬಿಎ ಪದವಿ ಪಡೆದ ಅನಂತರ ಅವರು 1971ರಲ್ಲಿ ಐಸಿಐಸಿಐ ಸಂಸ್ಥೆಯಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದರು.
        1988ರಲ್ಲಿ ಕೆ.ವಿ. ಕಾಮತರು ಏಷಿಯನ್‌ ಡೆವಲಪೆ¾ಂಟ್‌ ಬ್ಯಾಂಕ್‌ (ಅsಜಿಚn ಈಛಿvಛಿlಟಟಞಛಿnಠಿ ಆಚnk) ಸೇರಿ ಹಲವು ವರ್ಷಗಳ ಕಾಲ ದಕ್ಷಿಣ ಪೂರ್ವ ಏಷ್ಯಾದಲ್ಲಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರಿಗೆ ಚೀನ, ಥೈಲಾಂಡ್‌, ಫಿಲಿಪೈನ್ಸ್‌, ಇಂಡೋನೇಷ್ಯಾ, ವಿಯಟ್ನಾಂ ಇತ್ಯಾದಿ ದೇಶಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

        ಹೊಸ ಬ್ಯಾಂಕ್‌
        ಕಾಮತರು 1996ರಲ್ಲಿ ಭಾರತಕ್ಕೆ ಹಿಂದಿರುಗಿ ಐಸಿಐಸಿಐ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಬ್ಯಾಂಕಿಂಗ್‌ ಸುಧಾರಣೆಗಳ ಅಂಗವಾಗಿ, ಹೊಸ ಬ್ಯಾಂಕುಗಳ ಸ್ಥಾಪನೆಗೆ ಪರವಾನಿಗೆ ನೀಡಲು, ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧರಿಸಿತ್ತು. ಆಗ ದೊರೆತ ಲೈಸನ್ಸನ್ನು ಬಳಸಿ, ಐಸಿಐಸಿಐ ಸಂಸ್ಥೆಯು ಹೊಸ ಬ್ಯಾಂಕೊಂದನ್ನು ಪ್ರವರ್ತಿಸಿತು. ಅದೇ ಐಸಿಐಸಿಐ ಬ್ಯಾಂಕ್‌. ಆ ತರುವಾಯ, ಪ್ರವರ್ತಕ ಸಂಸ್ಥೆಯಾದ ಐಸಿಐಸಿಐ ತಾನೇ ಪ್ರವರ್ತಿಸಿದ ಐಸಿಐಸಿಐ ಬ್ಯಾಂಕಿನೊಂದಿಗೆ ವಿಲೀನಗೊಂಡಿತು. ಇದೊಂದು ರೀತಿಯ ವ್ಯತಿರಿಕ್ತ ಅಥವಾ ಪ್ರತಿಲೋಮ ವಿಲೀನ (Rಛಿvಛಿrsಛಿ Mಛಿrಜಛಿr). ಈ ರೀತಿಯ ವಿಲೀನವೂ ಒಂದು ಆವಿಷ್ಕಾರವೇ. ಈ ವಿಲೀನ ಪ್ರಕ್ರಿಯೆಯ ರೂಪಣೆ ಮತ್ತು ಅನುಷ್ಠಾನದಲ್ಲಿ ಕೆ.ವಿ. ಕಾಮತರು ಮಹತ್ವದ ಪಾತ್ರ ವಹಿಸಿದ್ದರು. ಸೃಜನಶೀಲ ಬ್ಯಾಂಕರರಾದ ಕೆ.ವಿ. ಕಾಮತರು ಭಾರತದ ಬ್ಯಾಂಕಿಂಗ್‌ ಅಭಿವೃದ್ಧಿ ಮತ್ತು ಮುನ್ನಡೆಗೆ ನೀಡಿರುವ ಕೊಡುಗೆ ನಿಜವಾಗಿಯೂ ಮಹತ್ತರವಾದುದು ಮತ್ತು ಚಾರಿತ್ರಿಕವಾದುದು.

        ಸರ್ವವ್ಯಾಪಿ ಬ್ಯಾಂಕಿಂಗ್‌
        ಸರ್ವವ್ಯಾಪಿ ಬ್ಯಾಂಕಿಂಗ್‌(ಖೀnಜಿvಛಿrsಚl ಆಚnkಜಿnಜ)ನ ಪರಿಕಲ್ಪನೆ ಭಾರತಕ್ಕೆ ಅಂದು ಹೊಸತಾಗಿತ್ತು. ಇದನ್ನು ಮೊತ್ತ ಮೊದಲಾಗಿ ಐಸಿಐಸಿಐ ಬ್ಯಾಂಕಿನ ಮೂಲಕ ಅನುಷ್ಠಾನಗೊಳಿಸಿದವರು ಕೆ.ವಿ. ಕಾಮತರು. ಆ ತರುವಾಯ ಇತರ ಬ್ಯಾಂಕುಗಳೂ ಈ ಪರಿಕಲ್ಪನೆಯನ್ನು ಬಳಸಿಕೊಂಡು ವ್ಯವಹಾರ ವಿಸ್ತರಣೆಗೆ ಮುಂದಾದವು.

        ಕೆ.ವಿ. ಕಾಮತರ ಅತಿ ದೊಡ್ಡ ಕೊಡುಗೆ ಗ್ರಾಹಕ ಸೇವಾ ಸುಧಾರಣೆಗೆ ಸಂಬಂಧಿಸಿದುದು. ಗ್ರಾಹಕ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಮಾಹಿತಿ ತಂತ್ರಜ್ಞಾನವನ್ನು ಎಷ್ಟರ ಮಟ್ಟಿಗೆ ಬಳಸಲು ಸಾಧ್ಯ ಎಂಬುದನ್ನು ಮೊತ್ತಮೊದಲಾಗಿ ತೋರಿಸಿಕೊಟ್ಟವರು ಕಾಮತರು. ತಂತ್ರಜ್ಞಾನವನ್ನು ಬಳಸಿ ನವ್ಯ ಬ್ಯಾಂಕಿಂಗ್‌ ಉತ್ಪನ್ನಗಳನ್ನು ಮೊತ್ತ ಮೊದಲಾಗಿ ಗ್ರಾಹಕರಿಗೆ ಒದಗಿಸಿದ ಬ್ಯಾಂಕರ್‌ ಕಾಮತ್‌. ತಂತ್ರಜ್ಞಾನ ಚಾಲಿತ ಬ್ಯಾಂಕಿಂಗ್‌ (ಖಛಿcಜnಟlಟಜy ಈrಜಿvಛಿn ಆಚnkಜಿnಜ) ವ್ಯವಸ್ಥೆಯ ರೂಪಣೆಗೆ ಕಾಮತ್‌ ನೀಡಿರುವ ಕೊಡುಗೆ ಗಮನಾರ್ಹವಾದುದು. ಎಟಿಎಂ (ಅಖM)ಗಳ ಬಳಕೆ, ಇಂಟರ್‌ನೆಟ್‌ ಬ್ಯಾಂಕಿಂಗ್‌ ಇತ್ಯಾದಿಗಳಿಂದಾಗಿ ಇಂದು ಬ್ಯಾಂಕ್‌ ಶಾಖೆಗಳ ಕೌಂಟರುಗಳ ಮುಂದೆ ಗ್ರಾಹಕರ ಸರತಿಯ ಸಾಲು ಇಲ್ಲದಂತಾಗಿದೆ.

        ಬದಲಾವಣೆಯ ರೂವಾರಿ
        ಕೆ.ವಿ. ಕಾಮತರು ಐಸಿಐಸಿಐ ಬ್ಯಾಂಕಿನಲ್ಲಿ ಬದಲಾವಣೆಯ ರೂವಾರಿಯಾದರು; ಸುಧಾರಣೆಯ ಹರಿಕಾರರಾದರು. ಅವರು ಇಡೀ ಐಸಿಐಸಿಐ ಬಳಗವನ್ನು ವ್ಯವಹಾರ ವಿವಿಧೀಕರಣ ಹೊಂದಿರುವ ಮತ್ತು ತಂತ್ರಜ್ಞಾನ ಚಾಲಿತ ಹಣಕಾಸಿನ ಸೇವಾ ಬಳಗವನ್ನಾಗಿ ಪರಿವರ್ತಿಸಿದರು ಮತ್ತು ಬೆಳೆಸಿದರು. ಬ್ಯಾಂಕಿನ ವ್ಯವಹಾರ ಗಾತ್ರವನ್ನು ಗಮನಾರ್ಹವಾಗಿ ಬೆಳೆಸಿ ಬ್ಯಾಂಕ್‌ ಭಾರತದ ಎರಡನೆಯ ಅತಿ ದೊಡ್ಡ ಬ್ಯಾಂಕ್‌ ಆಗುವಂತೆ ಮಾಡಿದರು. ಈಗ ಐಸಿಐಸಿಐ ಬಳಗಕ್ಕೆ ಬ್ಯಾಂಕಿಂಗ್‌, ವಿಮಾ ಕ್ಷೇತ್ರ, ಸೊತ್ತು ನಿರ್ವಹಣೆ (ಅssಛಿಠಿ Mಚnಚಜಛಿಞಛಿnಠಿ) ಇತ್ಯಾದಿ ಕ್ಷೇತ್ರಗಳಲ್ಲಿ ಜಾಗತಿಕ ವ್ಯಾಪ್ತಿ ಹಾಗೂ ನಾಯಕತ್ವ ಸ್ಥಾನವಿದೆ. ಕೆ.ವಿ. ಕಾಮತರು 2009ರ ಎಪ್ರಿಲ್‌ ತಿಂಗಳಲ್ಲಿ ಐಸಿಐಸಿಐ ಬ್ಯಾಂಕಿನ ಆಡಳಿತ ನಿರ್ದೇಶಕರಾಗಿ ನಿವೃತ್ತರಾದರು ಮತ್ತು ಆ ತರುವಾಯ, ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

        2011ರ ಆಗಸ್ಟ್‌ನಲ್ಲಿ ಶ್ರೀ ಕಾಮತರು ಇನ್ಫೋಸಿಸ್‌ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಕಾಮತರು ಭಾರತದ ಕೈಗಾರಿಕಾ ಒಕ್ಕೂಟದ (ಇಟnfಛಿಛಛಿrಚಠಿಜಿಟn ಟf ಐnಛಜಿಚn ಐnಛusಠಿry) ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಅವರು 2008 - 2009ನೇ ವರ್ಷದ ಒಕ್ಕೂಟದ ಅಧ್ಯಕ್ಷರಾಗಿದ್ದರು.

        ಪ್ರಶಸ್ತಿಗಳ ಸರಮಾಲೆ
        ತಮ್ಮ ಉನ್ನತ ಸಾಧನೆಗಳಿಗಾಗಿ ಕಾಮತರು ಪಡೆದ ಪ್ರಶಸ್ತಿಗಳು ಹಲವಾರು. ಅವರು ಉನ್ನತ ಸಾಧನೆಗಳನ್ನು ಪರಿಗಣಿಸಿ ಭಾರತ ಸರಕಾರ ಅವರಿಗೆ 2008ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿ ಕೂಡ ಉನ್ನತ ಸಾಧಕರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿರುವ ಕಾಮತರಿಗೆ ಹಲವಾರು ಇತರ ಪ್ರಶಸ್ತಿಗಳೂ ಬಂದಿವೆ. 2007ರಲ್ಲಿ ಅವರಿಗೆ ಫೋಬ್ಸ್ì ಏಷ್ಯಾ (ಊಟ್ಟಚಿಛಿs ಅsಜಿಚ)ದಿಂದ 'ಬಿಸಿನೆಸ್‌ ಮ್ಯಾನ್‌ ಆಫ್ ದಿ ಇಯರ್‌' (ಆusಜಿnಛಿssಞಚn ಟf ಠಿಜಛಿ yಛಿಚr) ಪ್ರಶಸ್ತಿ ಮತ್ತು ಎಕನಾಮಿಕ್‌ ಟೈಂಸ್‌ನಿಂದ ಬಿಸಿನೆಸ್‌ ಲೀಡರ್‌ ಆಫ್ ದಿ ಇಯರ್‌' (ಆusಜಿnಛಿss ಔಛಿಚಛಛಿr ಟf ಠಿಜಛಿ yಛಿಚr) ಪ್ರಶಸ್ತಿ ಲಭಿಸಿವೆ. 2001ರಲ್ಲಿ ಕಾಮತರಿಗೆ ಸಿಎನ್‌ಬಿಸಿ ಯ 'ಏಷ್ಯನ್‌ ಬಿಸಿನೆಸ್‌ ಲೀಡರ್‌ ಆಫ್ ದಿ ಇಯರ್‌ (ಅsಜಿಚn ಆusಜಿnಛಿss ಔಛಿಚಛಛಿr ಟf ಠಿಜಛಿ yಛಿಚr) ಪ್ರಶಸ್ತಿ ದೊರೆಯಿತು.

        ಹಲವಾರು ಸಂಸ್ಥೆಗಳಲ್ಲಿ ಮತ್ತು ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಕಾಮತ್‌ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮೇನೇಜೆ¾ಂಟ್‌ ರಾಷ್ಟ್ರೀಯ ಬ್ಯಾಂಕ್‌ ನಿರ್ವಹಣಾ ಸಂಸ್ಥೆ (Nಚಠಿಜಿಟnಚl ಐnsಠಿಜಿಠಿuಠಿಛಿ ಟf ಆಚnk Mಚnಚಜಛಿಞಛಿnಠಿ) ಇತ್ಯಾದಿಗಳ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

        ಜನ ನಿರ್ವಹಣೆಯಲ್ಲೂ ಸೃಜನಶೀಲತೆ
        ಕೆ.ವಿ. ಕಾಮತರು ಹಲವು ನಾಯಕರನ್ನು ಬೆಳೆಸಿದ ವ್ಯಕ್ತಿ. ಐಸಿಐಸಿಐ ಬ್ಯಾಂಕಿನಲ್ಲಿ ಇಂದು ಹಲವು ನುರಿತ ಬ್ಯಾಂಕರುಗಳು ಮತ್ತು ಹಲವು ನಾಯಕರಿದ್ದರೆ, ಅದಕ್ಕೆ ಕಾರಣ ಕೆ.ವಿ. ಕಾಮತರು ಅವರಿಗೆ ನೀಡಿರುವ ತರಬೇತಿ ಮತ್ತು ಮಾರ್ಗದರ್ಶನ. ಕಾಮತರು ನಿಜವಾಗಿಯೂ ಒಬ್ಬ ಸಮರ್ಥ ನಾಯಕರ ನಿರ್ಮಾಪಕ . ಮಾನವ ಸಂಪದ ನಿರ್ವಹಣೆಯಲ್ಲಿ ಮತ್ತು ಬ್ಯಾಂಕಿನ ಒಟ್ಟಾರೆ ಜನ ನಿರ್ವಹಣೆಯಲ್ಲಿ ಕಾಮತರು ತಮ್ಮದೇ ಆದ ಸೃಜನಶೀಲತೆಯನ್ನು ತೋರಿಸಿದ್ದಾರೆ. 2000ನೇ ಇಸವಿಯಲ್ಲಿ ಮುಂಬಯಿಯಲ್ಲಿ ನಡೆದ ಜಾಗತಿಕ ಮಾನವ ಸಂಪನ್ಮೂಲ ಕಾಂಗ್ರೆಸ್‌ನ (ಗಟ್ಟlಛ ಏRಈ ಇಟnಜrಛಿss) ಅಧಿವೇಶನದಲ್ಲಿ ಕಾಮತರಿಗೆ ಅವರ ಸೃಜನಶೀಲ ಮಾನವ ಸಂಪದ ನಿರ್ವಹಣೆಯನ್ನು ಗುರುತಿಸಿ, ಅತ್ಯುತ್ತಮ ವರಿಷ್ಠಾಧಿಕಾರಿ (ಆಛಿsಠಿ ಇಉO) ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಾವೋಸ್‌ (ಈಚvಟs)ನಲ್ಲಿ ನಡೆದ ಜಾಗತಿಕ ಆರ್ಥಿಕ ವೇದಿಕೆ (ಗಟ್ಟlಛ ಉcಟnಟಞಜಿc ಊಟ್ಟuಞ) ಯ ವಾರ್ಷಿಕ ಸಭೆಯಲ್ಲಿ ಕಾಮತ್‌ ಸಹ ಅಧ್ಯಕ್ಷರಾಗಿದ್ದರು.

        ಭಾರತದ ಬ್ಯಾಂಕಿಂಗ್‌ ಉದ್ದಿಮೆಯ ತ್ವರಿತ ಪ್ರಗತಿಗೆ ಕೆ.ವಿ. ಕಾಮತರು ನೀಡಿರುವ ಕೊಡುಗೆ ಅಪಾರ ಮತ್ತು ಚಾರಿತ್ರಿಕ. ಸರ್ವವ್ಯಾಪಿ ಬ್ಯಾಂಕಿಂಗ್‌, ತಂತ್ರಜ್ಞಾನ ಚಾಲಿತ ಬ್ಯಾಂಕಿಂಗ್‌ ವ್ಯವಸ್ಥೆ, ಗ್ರಾಹಕ ಸೇವಾ ಸುಧಾರಣೆ, ಬ್ಯಾಂಕಿಂಗ್‌ ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಕಾಮತರು ನೀಡಿರುವ ಕೊಡುಗೆ ನಿಜವಾಗಿಯೂ ಗಮನಾರ್ಹವಾದುದು, ಅನನ್ಯವಾದುದು. ಸೃಜನಶೀಲ ಬ್ಯಾಂಕರರಾಗಿ ತಂತ್ರಜ್ಞಾನ ಚಾಲಿತ ಬ್ಯಾಂಕಿಂಗ್‌ ವ್ಯವಸ್ಥೆಯ ರೂಪಣೆಗೆ ಅತಿ ದೊಡ್ಡ ಕೊಡುಗೆ ನೀಡಿರುವ ಕೆ.ವಿ. ಕಾಮತರು ಇಂದು ಬೃಹತ್‌ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‌ನ ಅಧ್ಯಕ್ಷರೂ ಹೌದು. ಅವರು ಅಧ್ಯಕ್ಷರಾಗಿರುವ ಅವಧಿಯಲ್ಲಿ ಇನ್ಫೋಸಿಸ್‌ ಸಂಸ್ಥೆ ಕೂಡ ಐಸಿಐಸಿಐ ಬ್ಯಾಂಕಿನಂತೆ ಪ್ರಗತಿಯಲ್ಲಿ ವೇಗೋತ್ಕರ್ಷ ಸಾಧಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

        - ಡಾ| ಕೆ.ಕೆ. ಅಮ್ಮಣ್ಣಾಯ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus