Saturday, May 25, 2013
Last Updated: 1:24:17 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಮ್ಮೇಳನೋತ್ತರ
    • ಸಮ್ಮೇಳನೋತ್ತರ

      • ವಸುಧೇಂದ್ರ | Feb 18, 2013

        ಕಾಲೇಜು ಹುಡುಗಿಯೊಬ್ಬಳು ಬಂದು "ಛಂದಸ್ಸಿನ ಪುಸ್ತಕ ಕೊಡ್ರಿ' ಅಂದಳು. "ಅಂಥಾ ಪುಸ್ತಕ ನಮ್ಮ ಅಂಗಡಿನಾಗೆ ಇಲ್ಲ' ಅಂದೆ. "ಛಂದ ಪುಸ್ತಕ ಅಂತ ಇಷ್ಟು ದೊಡ್ಡದಾಗಿ ಬೋರ್ಡು ಹಾಕೀರಿ, ಛಂದಸ್ಸಿನ ಪುಸ್ತಕ ಇಲ್ಲ ಅಂತೀರಲಿÅà. ನಿಮ್ಮದೆಂಥ ಅಂಗಡಿ' ಎಂದು ದಬಾಯಿಸಿದಳು.  ಛಂದಕ್ಕೂ, ಛಂದಸ್ಸಿಗೂ ಅದು ಯಾವ ಹೆಣಿಕೆ ಹಾಕಿ ಬಿಟ್ಟಳ್ಳೋ ನನಗೆ ತಿಳಿಯಲಿಲ್ಲ.

        ಎಪ್ಪತ್ತೂಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಮತ್ತೂಮ್ಮೆ ಪುಸ್ತಕದ ಮಳಿಗೆಯನ್ನು ತೆರೆದಿದ್ದೆ. ಇದು ನನ್ನ ಆರನೆಯ ಸಮ್ಮೇಳನ. ಇಡೀ ದಿನ ಪುಸ್ತಕ ಮಳಿಗೆಯಲ್ಲಿಯೇ ಕುಳಿತು ವ್ಯಾಪಾರ ಮಾಡಬೇಕಾದ್ದರಿಂದ ನನ್ನ ಸಮ್ಮೇಳನದ ಅನುಭವವೆಲ್ಲವೂ ಆ ಮಳಿಗೆಯ ಮೂಲಕವೇ ಆಗುವಂತಹದ್ದು.
        ಯಾವತ್ತಿನಂತೆ ಈ ವರ್ಷವೂ ಪುಸ್ತಕ ಮಳಿಗೆಯವರಿಗೆ ಸಮ್ಮೇಳನದ ಆಹ್ವಾನ ಪತ್ರಿಕೆ ಬಂದಿರಲಿಲ್ಲ. ನೂರಾರು ರಾಜಕೀಯ ಧುರೀಣರ ಹೆಸರುಗಳ ಜೊತೆಗೆ ಸೇರಿರುವ ಗೋಷ್ಠಿಗಳ ವಿವರ ಅವರಿಗೆ ಅಷ್ಟು ಮುಖ್ಯವಾಗುವದಿಲ್ಲವಾದ ಕಾರಣ ಅದು ಅಂತಹ ಬೇಸರವನ್ನೇನೂ ತರುವದಿಲ್ಲ. ಆದರೆ, ಸಮ್ಮೇಳನಕ್ಕೆ ಬರುವ ಎರಡು ದಿನಗಳ ಮುಂಚೆಯೇ ನಮಗೆ ಕೊಟ್ಟಿರುವ ಮಳಿಗೆಯ ಸಂಖ್ಯೆಯನ್ನು ಎಸ್‌ಎಂಎಸ್‌ ಮಾಡಿ ತಿಳಿಸಿದ್ದು ಮಾತ್ರ ನನಗೆ ಖುಷಿ ಕೊಟ್ಟಿತು. ಮಳಿಗೆಗಳ ಮೇಲೆಯೂ ಸ್ಪಷ್ಟವಾಗಿ ಸಂಖ್ಯೆಗಳನ್ನು ನಮೂದಿಸಿದ್ದರಿಂದ ನಮ್ಮ ಮಳಿಗೆಯನ್ನು ಹುಡುಕುವುದು ಅಂತಹ ಕಷ್ಟವೂ ಆಗಲಿಲ್ಲ. ಈ ಹಿಂದಿನ ಸಮ್ಮೇಳನಗಳಲ್ಲಿ ಅದಕ್ಕಾಗಿ ಗಂಟೆಗಟ್ಟಲೆ ಅಲೆದಾಡಿದ ಅನುಭವ ನನ್ನದು.

        ನವರಾತ್ರಿಯ ನಂತರ ನಡೆಯಬೇಕಾದ ಸಮ್ಮೇಳನವನ್ನು ಏನೇನೋ ನೆಪ ಒಡ್ಡಿ ಶಿವರಾತ್ರಿಗೆ ತಂದು ಬಿಡುತ್ತಾರೆ. ಅದರ "ಬಿಸಿ' ತಟ್ಟುವುದು ಪುಸ್ತಕ ವ್ಯಾಪಾರಿಗಳಿಗೇ ಆಗಿರುತ್ತದೆ!  ಧನುರ್ಮಾಸದ ಚಳಿಗಾಲ ಮುಗಿದು, ಉತ್ತರ ಕರ್ನಾಟಕದ ಚುರುಗುಡುವ ಬಿಸಿಲನ್ನು "ಶಿವ, ಶಿವ' ಅನ್ನುತ್ತ ಎಲ್ಲರೂ ಯಥೇತ್ಛವಾಗಿ ಅನುಭವಿಸುತ್ತಾರೆ. ಪುಣ್ಯಕ್ಕೆ ಮಳೆರಾಯ ಕಣ್ಣು ಬಿಡಲಿಲ್ಲ ಎನ್ನುವದಷ್ಟೇ ನಮ್ಮ ಅದೃಷ್ಟ. ಹಿಂದಿನ ದಿನಗಳಲ್ಲಿ ಆಗಲೇ ಗುಲ್ಬರ್ಗಾ, ರಾಯಚೂರು ಕಡೆಗಳಲ್ಲಿ ಭರ್ಜರಿ ಮಳೆಯಾಗಿದ್ದು ಗಮನಿಸಿದರೆ, ಯಾವ ಕ್ಷಣದಲ್ಲಿಯೂ ಬಿಜಾಪುರದಲ್ಲಿ ಮಳೆ ಸುರಿದು ಗಂಗಮ್ಮ ತಾಯಿ ನಮ್ಮ ಪುಸ್ತಕಗಳನ್ನು ಆಹುತಿ ತೆಗೆದುಕೊಳ್ಳುವ ಸಾಧ್ಯತೆಯಿತ್ತು. ಪ್ರತಿವರ್ಷ ಸಮ್ಮೇಳನವನ್ನು ಮಾಡುವದಂತೂ ತಪ್ಪುವದಿಲ್ಲ, ಆದರೆ ಏನೇನೋ ನೆಪ ಒಡ್ಡಿ ಅದನ್ನು ಮುಂದೂಡುವದನ್ನು ಇನ್ನು ಮುಂದೆ ನಿಲ್ಲಿಸಿದರೆ ಪುಸ್ತಕ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

        ಮೈದಾನದಿಂದ ಒಂದೆರಡು ಕಿ. ಮೀ. ದೂರದಿಂದಲೇ ರಾರಾಜಿಸುವ ರಾಜಕೀಯ ಧುರೀಣರ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ನೋಡಿದ ಕೂಡಲೇ ನಮಗೆ ಅಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವದೆಂದು ತಿಳಿದು ಬಿಡುತ್ತದೆ. ಮಳಿಗೆಗಳನ್ನು ಹುಡುಕಿ ಹೊರಟಾಗ ನಮಗೆ ಈ ಬಾರಿ ಒಂದು ಸಂತೋಷ ಕಾದಿತ್ತು. ನೆಲಕ್ಕೆ ತೆಳ್ಳನೆಯ ಕಾಪೆìಟ್‌ ಹಾಕಿದ್ದರು. ಇದು ಸ್ವಲ್ಪಮಟ್ಟಿಗೆ ಧೂಳನ್ನು ಕಡಿಮೆ ಮಾಡುವುದಂತೂ ಸತ್ಯ.  ಆದರೆ ಎಲ್ಲಾ ಮಳಿಗೆಗಳಿಗೂ ಈ ಅದೃಷ್ಟವಿರಲಿಲ್ಲ. ಅವರೆಲ್ಲಾ ಧೂಳಿನಲ್ಲಿಯೇ ಮೂರು ದಿನ ದೂಡಬೇಕಾಯ್ತು. ಒಂದು ದಿಕ್ಕಿನ ಮಳಿಗೆಗಳಿಗೆ ಇಡೀ ದಿನ ಬಿಸಿಲು ಹೊಡೆಯುವಂತೆಯೂ, ಇನ್ನೊಂದು ದಿಕ್ಕಿನ ಮಳಿಗೆಗಳಿಗೆ ಇಡೀ ದಿನ ನೆರಳು ಇರುವಂತೆಯೂ ವ್ಯವಸ್ಥೆ ಮಾಡಲಾಗಿತ್ತು. ಬಳ್ಳಾರಿಯಲ್ಲಿ ಬೆಳೆದ ನನಗೆ ನಿರೀಕ್ಷೆಯಂತೆಯೇ ಇಡೀ ದಿನ ಬಿಸಿಲು ಎರಗುವ ಮಳಿಗೆಯೇ ಸಿಕ್ಕಿತ್ತು! ಮೂರು ದಿನ ಬಿಸಿಲನ್ನು ಅನುಭವಿಸಲು ನಾನು ಮತ್ತು ನನ್ನ ಪುಸ್ತಕಗಳು ಸಿದ್ಧವಾದೆವು.

        ರಾಶಿ ರಾಶಿ ಜನರು ಮೂರೂ ದಿನವೂ ಈ ಮೈದಾನದಲ್ಲಿ ಓಡಾಡಿದ್ದು ನೋಡಿದಾಗ ಹೃದಯದಲ್ಲಿ ಖುಷಿಯ ಅಲೆಗಳು ಏಳುತ್ತವೆ. "ಕನ್ನಡ'ದ ಹೆಸರಿನಲ್ಲಿ ಹೀಗೆ ಲಕ್ಷಗಟ್ಟಲೆ ಜನರನ್ನು ಸೇರಿಸುವ ಈ ಕನ್ನಡದ ಹಬ್ಬದ ಶಕ್ತಿಯ ಬಗ್ಗೆ ಹೆಮ್ಮೆಯಾಗುತ್ತದೆ. ತುಟಿ ಮುಚ್ಚುವಂತಹ ಮೀಸೆ ಬಿಟ್ಟ ಧೋತ್ರ ಉಟ್ಟ ಗಂಡಸರು, ಇಲಕಲ್‌ ಸೀರೆಯುಟ್ಟ ತೆಳ್ಳನೆಯ ಹೆಂಗಸರು, ಬಲೂನು ಹಿಡಿದ ಮಕ್ಕಳು-ಮರಿ ಎಲ್ಲರೂ ಬಿಸಿಲು ಧೂಳನ್ನು ಲೆಕ್ಕಿಸದೆ ಮಳಿಗೆಯ ಮುಂದೆ ಓಡಾಡುತ್ತಿದ್ದರು.

        ಪ್ರತಿ ವರ್ಷದಂತೆ ಈ ವರ್ಷವೂ ಹಲವು ಸ್ವಾರಸ್ಯಕರ ಅನುಭವಗಳು ನನಗಾದವು. ನಮ್ಮ ಮಳಿಗೆಗಳ ಸಾಲಿನ ಆರಂಭದಲ್ಲಿ ನಮ್ಮ "ಛಂದ ಪುಸ್ತಕ'ದ ಬ್ಯಾನರ್‌ ಒಂದನ್ನು ಕೈಗೆಟಕುವ ಎತ್ತರದಲ್ಲಿ ನೇತು ಹಾಕಿದ್ದೆ.  ಅದನ್ನು ನೋಡಿ ಪುಸ್ತಕ ಖರೀದಿದಾರರು ಆ ಸಾಲಿಗೆ ಬರುತ್ತಾರೆಂಬ ಅಂದಾಜು ನನ್ನದು. ಆದರೆ, ಸಂಜೆಯ ವೇಳೆಗೆ ಬೇರೇನೋ ಕೆಲಸಕ್ಕೆ ಅಲ್ಲಿಗೆ ಹೋದಾಗ, ಹಲವಾರು ಸನ್ಯಾಸಿಗಳು ಸ್ನಾನ ಮಾಡಿ ತಮ್ಮ ಕಾವಿವಸ್ತ್ರವನ್ನು ಸೊಗಸಾಗಿ ಆ ಬ್ಯಾನರ್‌ ಮೇಲೆ ಒಣಗಿಸಿ ಹಾಕಿದ್ದು ಕಂಡು ಬಂತು!  ಅಲ್ಲಿಯೇ ಗುಂಪಾಗಿ ಕುಳಿತಿದ್ದ ಸನ್ಯಾಸಿಗಳ ಬಳಿಗೆ ಹೋಗಿ "ಇವನ್ನೆಲ್ಲಾ ತೆಗೀರಿ, ಅಂಗಡಿ ಹುಡುಕಿಕೊಂಡು ಬರೋರಿಗೆ ಅನುಕೂಲವಾಗಲಿ ಅಂತ ಇದನ್ನು ಹಾಕಿರೋದು' ಅಂತ ಸಿಟ್ಟು ಮಾಡಿದೆ. "ಸನ್ಯಾಸಿಗಳ ಹತ್ತಿರ ಮರ್ಯಾದೆಯಿಂದ ಮಾತಾಡು. ಹಿಂಗೆ ಅಹಂಕಾರದಿಂದ ಮಾತಾಡಿದರೆ ನಿಂಗೆ ಶಾಪ ತಟ¤ದೆ' ಅಂತ ಒಬ್ಬ ಹಿರಿಯ ನಂಗೆ ಬೈದ!

        ಭೈರಪ್ಪ, ಡಿವಿಜಿ, ತೇಜಸ್ವಿ, ತರಾಸು, ಬೀಚಿ, ಭಗವದ್ಗೀತೆ, ಸರ್ವಜ್ಞನ ವಚನಗಳ ಪುಸ್ತಕಗಳನ್ನು ಕೇಳಿಕೊಂಡೇ ಬರುವ ಓದುಗರಿಗೆ ನಮ್ಮ ಪುಸ್ತಕಗಳ ಲೇಖಕರ ಹೆಸರಂತೂ ಗೊತ್ತಿರುತ್ತಿರಲಿಲ್ಲ. ಹೊಸ ಬರಹಗಾರರ ಪುಸ್ತಕಗಳನ್ನು ಮಾತ್ರ ಪ್ರಕಟಿಸುವ ನಾನು ಅದನ್ನು ನಿರೀಕ್ಷಿಸುವುದೂ ತಪ್ಪೆಂದು ಗೊತ್ತಿತ್ತು.  ಆದರೆ ಹೊಸ ಪುಸ್ತಕಗಳ ಬಗ್ಗೆ ಅವರ ಪ್ರತಿಕ್ರಿಯೆ ಮಾತ್ರ ವಿಶೇಷವಾಗಿರುತ್ತಿತ್ತು. ಒಬ್ಬ ಹುಡುಗ ತನ್ನ ಗೆಳೆಯರ ಜೊತೆಗೆ ಬಂದವನು ನಮ್ಮ ಎಲ್ಲಾ ಪುಸ್ತಕಗಳ ಮೇಲೆ ಕಣ್ಣಾಡಿಸಿ, ನನ್ನ "ಹಂಪಿ
        ಎಕ್ಸ್‌ಪ್ರೆಸ್‌' ಕೈಗೆ ಎತ್ತಿಕೊಂಡ.  ಅದನ್ನು ಗೆಳೆಯರಿಗೆ ತೋರಿಸಿ "ಸಂಜೆ ಆರು ಗಂಟಿಗೆ ನಮ್ಮೂರಿಂದ ಹೊರಡ್ತದಲ್ಲಲೇ, ಆ ರೈಲಿನ ಹೆಸರೇ ಈ ಪುಸ್ತಕಕ್ಕೆ ಇಟ್ಟು ಬಿಟ್ಟಾರೆ' ಎಂದು ಹೇಳಿ "ಹೆ, ಹೆ, ಹೆ' ಎಂದು ಜೋರಾಗಿ ನಕ್ಕು ಬಿಟ್ಟ.  ಹುಡುಗರೆಲ್ಲರೂ ಅವನ ಮಾತಿಗೆ ಬಿದ್ದು ಬಿದ್ದು ನಕ್ಕರು. ಅದರಿಂದ ಉತ್ತೇಜಿತನಾದ ಆ ಹುಡುಗ "ಯಾರ್ರಿ ಈ ಪುಸ್ತಕ ಬರದೋರು?' ಎಂದು ಕೇಳಿದ. "ನಾನೇ' ಎಂದು ತಪ್ಪು$ಒಪ್ಪಿಕೊಂಡೆ. "ರಾಣಿ ಚೆನ್ನಮ್ಮ ಎಕ್ಸ್‌ ಪ್ರಸ್‌ ಪುಸ್ತಕ ಇನ್ನೂ ಬರೆದಿಲ್ಲ ಏನ್ರಿ?' ಎಂದು ಕೇಳಿದ. ಅವನ ಜೋಕಿಗೆ ಇಡೀ ಗೆಳೆಯರ ಗುಂಪು ಮತ್ತೂಮ್ಮೆ ಕೇಕೆ ಹಾಕಿ ನಕ್ಕಿತು. ನನಗೂ ನಗು ಬಂತು.  "ಬಡಾನ ಅದನ್ನೂ ಬರೆದು ಬಿಡ್ರಿ' ಎಂದು ನನಗೆ ಅಪ್ಪಣೆ ಕೊಟ್ಟು ಆ ಗುಂಪು ನಿರ್ಗಮಿಸಿತು.

        ಮತ್ತೂಬ್ಬ ತೆಳ್ಳನೆಯ ಗಂಭೀರ ವ್ಯಕ್ತಿಗೆ ಅಲಕ ತೀರ್ಥಹಳ್ಳಿಯವರ "ಈ ಕತೆಗಳ ಸಹವಾಸವೆ ಸಾಕು' ಪುಸ್ತಕ ಕಣ್ಣಿಗೆ ಬಿತ್ತು. ಅದನ್ನು ತೆಗೆದುಕೊಂಡು ಒಂದು ಸಲ ಸಿಂಹಾವಲೋಕನ ಮಾಡಿ "ಕತೆಗಳ ಸಹವಾಸವೇ ಸಾಕು ಅನ್ನೋರು ಕತೆ ಯಾಕ್ರಿ ಬರದಾರೆ?' ಅಂತ ನನಗೆ ಪ್ರಶ್ನಿಸಿದ. ನನಗೆ ಅದಕ್ಕೆ ಹೇಗೆ ಉತ್ತರಿಸಬೇಕೋ ತಿಳಿಯಲಿಲ್ಲ. "ಏನೋ ಬರದಾರೆ ಬಿಡ್ರಿ ಸಾರ್‌' ಎಂದು ಜಾರಿಕೊಳ್ಳುವದಕ್ಕೆ ಪ್ರಯತ್ನಿಸಿದೆ. "ಹಂಗಲ್ಲ.  ನಮಗೆ ಇಷ್ಟ ಇಲ್ಲ ಅನ್ನೋ ಸಂಗತಿಯಿಂದ ದೂರ ಇರಬೇಕು. ಕತೆಗಳ ಸಹವಾಸ ಬೇಡ ಅನ್ನೋರು ಒಳ್ಳೆ ಕತೆ ಹೆಂಗೆ ಬರೀಲಿಕ್ಕೆ ಆಗ್ತದೆರ್ರೀ? ಓದುಗರಿಗೆ ಇದು ಮೋಸ ಮಾಡಿದಂಗೆ ಅಲ್ಲೇನು? ಹೆಂಡತಿ ಸಹವಾಸ ಬೇಡ ಅನ್ನೋರು ಮದುವಿ ಮಾಡಿಕೊಳ್ಳೋ ಹಂಗಿಲ್ಲ. ಅಲ್ವೇನ್ರಿ?' ಅಂತ ಜಗಳದ ಧ್ವನಿಯಲ್ಲಿ ನನ್ನೊಡನೆ ವಾದಕ್ಕಿಳಿದು ಬಿಟ್ಟ. ಬೇರೆ ದಾರಿ ಕಾಣದೆ ನಾನು, "ಹೌದು ಸಾರ್‌, ತಪ್ಪು$ಮಾಡೀವಿ. ದಯಮಾಡಿ ಇದೊಂದು ಸಲ ಕ್ಷಮಿಸಿ ಬಿಡ್ರಿ' ಅಂತ ಬೇಡಿಕೊಂಡೆ. ಅವನು ಆ ಪುಸ್ತಕವನ್ನು ರಪ್‌ ಅಂತ ಟೇಬಲ್ಲಿಗೆ ಬಡಿದು ಹೊರಟು ಹೋದ.

        ಮತ್ತೂಬ್ಬ ಕಾಲೇಜಿನ ಹುಡುಗಿಯೊಬ್ಬಳು ಬಂದು "ಛಂದಸ್ಸಿನ ಪುಸ್ತಕ ಕೊಡ್ರಿ' ಅಂದಳು. "ಅಂಥಾ ಪುಸ್ತಕ ನಮ್ಮ ಅಂಗಡಿನಾಗೆ ಇಲ್ಲ' ಅಂದೆ. "ಛಂದ ಪುಸ್ತಕ ಅಂತ ಇಷ್ಟು ದೊಡ್ಡದಾಗಿ ಬೋರ್ಡು ಹಾಕೀರಿ, ಛಂದಸ್ಸಿನ ಪುಸ್ತಕ ಇಲ್ಲ ಅಂತೀರಲಿÅà. ನಿಮ್ಮದೆಂಥಾ ಅಂಗಡಿ' ಎಂದು ದಬಾಯಿಸಿದಳು.  ಛಂದಕ್ಕೂ, ಛಂದಸ್ಸಿಗೂ ಅದು ಯಾವ ಹೆಣಿಕೆ ಹಾಕಿ ಬಿಟ್ಟಳ್ಳೋ ನನಗೆ ತಿಳಿಯಲಿಲ್ಲ.

        ಜನರನ್ನು ಆಕರ್ಷಿಸಲು ಅಪಾರ ಅವರ "ಮದ್ಯಸಾರ' ಪುಸ್ತಕವನ್ನು ಪ್ರತ್ಯೇಕ ಟೇಬಲ್‌ ಮೇಲೆ ರಾಶಿಯಾಗಿ ಹಾಕಿಟ್ಟು, ಸೊಗಸಾದ ರಿಯಾ ಯತಿಯ ಬೋರ್ಡನ್ನು ಹಾಕಿದ್ದೆ. ಅಂಗಡಿಗೆ ಬಂದ ವ್ಯಕ್ತಿ "ಎಣ್ಣೆ' ಪಾರ್ಟಿ ಹೌದೋ ಅಲ್ಲವೋ ಅಂತ ಸೂಕ್ಷ್ಮವಾಗಿ ಅವನ ಹೊಟ್ಟೆಯನ್ನು ನೋಡಿ ನಾನು ಊಹಿಸಬಲ್ಲವನಾಗಿದ್ದೆ.  ಅವನು ಅತ್ಯಂತ ಅನಾಸಕ್ತಿಯಿಂದ ನಮ್ಮ ಪ್ರಕಾಶನದ ಪುಸ್ತಕಗಳನ್ನು ಗಮನಿಸುವದನ್ನು ಕಂಡ ತತ್‌ಕ್ಷಣ, "ಈ ಪುಸ್ತಕ ನೋಡ್ರಿ ಸಾರ್‌. ನಿಮಗೆ ಇಷ್ಟ ಆಗಬಹುದು' ಅಂತ ಅಪಾರನ "ಮದ್ಯಸಾರ' ಎಂಬ ಪುಟ್ಟ ಪುಸ್ತಕವನ್ನು ಅವನ ಕೈಗೆ ಇಡುತ್ತಿದ್ದೆ. ಒಂದೆರಡು ಪದ್ಯಗಳನ್ನು ಓದಿದ್ದೇ ಅವರ ಮುಖ ಇಷ್ಟಗಲ ಅರಳಿ ಬಿಡುತ್ತಿತ್ತು. "ಇವನವ್ವನಾ, ಏನ್‌ ಛಂದ ಬರದಾನ‌ಲಿÅ...' ಎಂದು, ಕುಡಿತದ ಸೊಗಸನ್ನು ಹೆಮ್ಮೆಯಿಂದ ಹೇಳುವ ಆ ಪದ್ಯಗಳು ತಮ್ಮದೇ ಎನ್ನುವಷ್ಟು ಸಂತೋಷದಿಂದ ಹಿಗ್ಗುತ್ತಿದ್ದರು. ಕೆಲವೇ ಗಂಟೆಗಳಲ್ಲಿ ತಮ್ಮ ಕುಡಿತದ ಗೆಳೆಯರನ್ನು ಕರೆದುಕೊಂಡು ಬಂದು ಆ ಪುಸ್ತಕವನ್ನು ವಿಶೇಷವಾಗಿ ರೆಕಮಂಡ್‌ ಮಾಡಿ ಕೊಡಿಸುತ್ತಿದ್ದರು. ಸಿನೆಮಾದ "ಐಟಂ ಸಾಂಗಿ'ನಂತೆ ಈ ಪುಸ್ತಕ ನನಗೆ ಸಹಾಯ ಮಾಡಿತು. ಅವರ ಉತ್ಸಾಹದ ಮಧ್ಯೆ ನಮ್ಮ ಪ್ರಕಾಶನದ ಬೇರೆ ಪುಸ್ತಕಗಳನ್ನು ಬಲವಂತವಾಗಿ ಅವರಿಗೆ ಮಾರಲು ನಾನು ಪ್ರಯತ್ನಿಸುತ್ತಿದ್ದೆ.

        ಅಪಾರ‌ ಅವರ‌ "ಮದ್ಯಸಾರ'ದ ಪಕ್ಕದಲ್ಲಿ ಇನ್ನೆರಡು ಪುಸ್ತಕಗಳನ್ನು ಇಟ್ಟಿದ್ದೆ -  ಚ. ಹ. ರಘುನಾಥರ ಲಲಿತ ಪ್ರಬಂಧಗಳ ಸಂಕಲನ "ರಾಗಿಮುದ್ದೆ' ಮತ್ತು ಡಾ. ವಿನಯಾರವರ ಕಥಾಸಂಕಲನ "ಊರ ಒಳಗಣ ಬಯಲು'. ಆ ಮೂರನ್ನೂ ಗಮನಿಸಿದ ಹಿರಿಯರೊಬ್ಬರು ನಾನು ಊಹಿಸಲೂ ಆಗದ ತಮಾಷೆಯ ಸಂಗತಿಯನ್ನು ಹೇಳಿದರು. "ರಾಗಿಮುದ್ದೆ ಹೊಟ್ಟಿ ತುಂಬಾ ತಿಂದು, ಕಂಠ ಮಟ್ಟ ಮದ್ಯಸಾರ ಕುಡಿದು, ಆಮೇಲಕ್ಕೆ ಅವಸರ ಆದರೆ ಊರ ಒಳಗಣ ಬಯಲೂ ಕೊಟ್ಟಿàರಿ ಬಿಡ್ರಿ. ಹೆ, ಹೆ, ಒಳ್ಳೆ ಹೆಸರು ಹುಡುಕಿ ಇಟ್ಟಿàರಿ ಬಿಡ್ರಪ್ಪ' ಎಂದು ವಿಶ್ಲೇಷಿಸಿದರು. ಅವರ ತರ್ಕಕ್ಕೆ ಬೆಚ್ಚಿ ಬಿದ್ದ ನಾನು, ಅನಂತರ ಆ ಮೂರೂ ಪುಸ್ತಕಗಳು ಜೊತೆಯಾಗಿ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      • Copyright @ 2009 Udayavani.All rights reserved.
      • Designed & Hosted By 4cplus