ಹೈದರಾಬಾದ್: ಆಂಧ್ರ ಪ್ರದೇಶದ 9 ಜಿಲ್ಲೆಗಳಲ್ಲಿ ಎರಡು ದಿನಗಳ ಮಳೆ ಹಾವಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. ಈ ಪೈಕಿ 12 ಮಂದಿ ಸಿಡಿಲಿಗೆ ಬಲಿಯಾದರೆ ಮೂವರು ವಿದ್ಯುದಾಘಾತದಿಂದ ಮೃತಪಟ್ಟರು ಮತ್ತು ಇಬ್ಬರು ಮನೆ ಕುಸಿದು ಸಾವಿಗೀಡಾದರು.ಅಕಾಲಿಕ ಮಳೆಯಿಂದಾಗಿ ಸುಮಾರು 900 ಮನೆಗಳು ಹಾನಿಗೊಂಡಿದ್ದು2,52,000 ಹೆಕ್ಟೇರ್ ಭೂಮಿಯಲ್ಲಿನ ಭತ್ತ, ಮಾವು, ಮೆಣಸು, ತರಕಾರಿ ಮತ್ತಿತರ ಬೆಳೆಗಳು ನಾಶವಾಗಿವೆ. ಅದಿಲಾಬಾದ್ ಜಿಲ್ಲೆಯಲ್ಲಿ ಗರಿಷ್ಠ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.