Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ನಿಸ್ತಂತು ಸಂಸಾರ

      • ಅಶೋಕ್‌ ಕುಮಾರ್‌ ಎ. | Nov 07, 2010

        ಕಂಪ್ಯೂಟರ್‌  ಆಟ - ಕಸರತ್ತು

        ಕಂಪ್ಯೂಟರನ್ನು ಆಟವಾಡಲು ಬಳಸುವ ಜನರು ಎಕ್ಸ್‌ಬಾಕ್ಸ್‌ ಎನ್ನುವ ವ್ಯವಸ್ಥೆಯನ್ನು ಬಳಸಿ ಕಂಪ್ಯೂಟರ್‌ ಜತೆ ವ್ಯವಹರಿಸುವುದಿದೆ. ಮೌಸ್‌, ಕೀಲಿ ಮಣೆಯಂತೆ ಕಂಪ್ಯೂಟರ್‌ ಜತೆ ವ್ಯವಹರಿಸಲು ಎಕ್ಸ್‌ಬಾಕ್ಸ್‌ ಅನುವು ಮಾಡುತ್ತದೆ. ಎಕ್ಸ್‌ಬಾಕ್ಸ್‌ ಕಂಪ್ಯೂಟರ್‌ ಆಟಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಈಗ ಮೈಕ್ರೋಸಾಪ್ಟ್…r ಕೈನೆಟಿಕ್‌ ಎನ್ನುವ ಇನ್ನೊಂದು ತೆರನ ವ್ಯವಸ್ಥೆಯನ್ನು ರೂಪಿಸಿದೆ. ಕಂಪ್ಯೂಟರಿನ ಮುಂದೆ ಆಂಗಿಕ ಹಾವಭಾವ ಪ್ರದರ್ಶಿಸಿದರೂ ಅದಕ್ಕೆ ಕಂಪ್ಯೂಟರ್‌ ಪ್ರತಿಕ್ರಿಯಿಸುವಂತೆ ಇದನ್ನು ಯೋಜಿಸಲಾಗಿದೆ. ಕಂಪ್ಯೂಟರ್‌ ಆಟಗಳನ್ನಾಡುವಾಗ ಜನರು ಕಂಪ್ಯೂಟರ್‌ ಮುಂದೆ ಕುಳಿತು ಕೂಚು ಭಟ್ಟರಾಗುವುದು ತಪ್ಪಿಸುವುದು ಹೊಸ ವ್ಯವಸ್ಥೆಯ ವಿಶೇಷ. ಕಂಪ್ಯೂಟರಿನ ಮುಂದೆ ಕೈಯಾಡಿಸಿದರೆ, ಅದಕ್ಕೆ ಕಂಪ್ಯೂಟರ್‌ ಪ್ರತಿಕ್ರಿಯಿಸುತ್ತದೆ. ವಿಡಿಯೋ ಕ್ಯಾಮರಾ, ಮೈಕ್‌ನಂತಹ ಸೆನ್ಸರುಗಳು ಇರುವ ವ್ಯವಸ್ಥೆಯ ಮೂಲಕ ಇದು ಸಾಧ್ಯವಾಗುತ್ತದೆ.ಕಂಪ್ಯೂಟರ್‌ನಲ್ಲಿ ಕಾರ್‌ ರೇಸ್‌ ನಡೆಸಲು ಕೈಯನ್ನು ಎಡ ಬಲಕ್ಕೆ ಬೀಸುತ್ತಾ, ತೆರೆಯಲ್ಲಿ ಕಾಣುವ ಕಾರನ್ನು ನಿಯಂತ್ರಿಸಬೇಕು. ಕೈನೆಟಿಕ್‌ ಬೆಲೆ 400 ಡಾಲರುಗಳು. ಈ ಬೆಲೆಗೆ 250 ಜಿಬಿ ಸ್ಮರಣಶಕ್ತಿ ಸಿಗುತ್ತದೆ.

        ದಿಢೀರ್‌ ಶೋಧ

        ಅಂತಜಾìಲದಲ್ಲಿ ಗೂಗಲ್‌ ದಿಢೀರ್‌ ಶೋಧ ಸೇವೆ ಒದಗಿಸಿದ ಬಗ್ಗೆ ನೀವು ಅರಿತಿದ್ದೀರಿ. ಇದೀಗ ಈ ಸೇವೆ ಮೊಬೈಲ್‌ ಸಾಧನಗಳಲ್ಲೂ ಸಿಗುತ್ತಿದೆ. ಐಪೊನ್‌ ಮತ್ತು ಅಂಡ್ರಾಯಿಡ್‌ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವ ಪೊನುಗಳಲ್ಲಿದು ಲಭ್ಯ. ಮೊದಲಾಗಿ ಮೊಬೈಲ್‌ ಬ್ರೌಸರಿನಲ್ಲಿ ಗೂಗಲ್‌ ತಾಣಕ್ಕೆ ಹೋಗಿ, ದಿಢೀರ್‌ ಶೋಧವನ್ನು ಚಾಲೂ ಮಾಡಿಟ್ಟರೆ, ಮುಂದೆ ಈ ಸೇವೆ ಲಭ್ಯವಾಗುತ್ತದೆ. ಈ ಸೇವೆಯ ಲಭ್ಯತೆ ಮೊಬೈಲ್‌ ಸಾಧನಗಳಲ್ಲಿ ಹೆಚ್ಚು ಪ್ರಸ್ತುತವೂ ಹೌದು. ಕೆಲವೇ ಶಬ್ದಗಳನ್ನು ಟೈಪಿಸಿದೊಡನೆ ಬಳಕೆದಾರರ ಯಾವುದರ ಬಗ್ಗೆ ಶೋಧ ನಡೆಸುತ್ತಿರಬಹುದು ಎಂದು ಊಹಿಸಿ, ವಿವಿಧ ಪ‌ಲಿತಾಂಶಗಳನ್ನು ಪ್ರದರ್ಶಿಸುವುದರ ಮೂಲಕ ಟೈಪಿಂಗ್‌ ಮಾಡುವ ಅಗತ್ಯವನ್ನು ಕಡಿಮೆ ಯಾಗಿಸುವುದು ದಿಢೀರ್‌ ಶೋಧ ಸೇವೆಯ ಹೆಗ್ಗಳಿಕೆ.

        ಬಿಎಸ್‌ಎನ್‌ಎಲ್‌ ಕೇಬಲ್‌ ಬ್ರಾಡ್‌ಬ್ಯಾಂಡ್‌ ಖಾಸಗಿ !

        ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಇನ್ನಷ್ಟು ಜನರಿಗೆ ತಲುಪಿಸಲು ಬಿಎಸ್‌ಎನ್‌ಎಲ್‌ ತನ್ನ ಕೇಬಲ್‌ ಜಾಲವನ್ನು ಇತರರ ಖಾಸಗಿ ಟೆಲಿಕಾಂ ಸೇವೆ ನೀಡುವವರೊಂದಿಗೂ ಹಂಚಿಕೊಂಡು, ಮೂಲ ಸೌಕರ್ಯ ಬಳಸಿದವರಿಂದ ಶುಲ್ಕ ಪಡೆಯುವಂತಾಗಬೇಕೆಂದು ಟೆಲಿಕಾಂ ಇಲಾಖೆ ನೇಮಿಸಿದ ಸಮಿತಿಯೊಂದು ಶಿಪಾರಸು ಮಾಡಿದೆ. ಸೈಬರ್‌ ಜಾಲ ದೇಶದ ತುಂಬೆಲ್ಲಾ ಹಬ್ಬಿದೆ. ಖಾಸಗಿ ಟೆಲಿಕಾಂ  ಕಂಪೆನಿಗಳೂ ಇಂತಹ ಜಾಲವನ್ನು ಹಬ್ಬಿಸಿವೆ.ಆದರೆ ಚಂದಾದಾರನ ಮನೆ ತಲುಪಲು ಮನೆ ಮನೆಗೂ ಕೇಬಲ್‌ ಹಾಕುವುದು ದುಬಾರಿ ಕೆಲಸ. ಆದರೆ ಬಿಎಸ್‌ಎನ್‌ಎಲ್‌ ಈಗಾಗಲೇ ದೇಶಾದ್ಯಂತ ಮೂರು ಕೋಟಿ ಮನೆಗಳ ಸಮೀಪದವರೆಗೂ ಕೇಬಲ್‌ ಜಾಲವನ್ನು ಹೊಂದಿದೆ. ಇಂತಹ ಸಂಪರ್ಕದ ಸದುಪಯೋಗವಾಗಬೇಕು. ಖಾಸಗಿ ರಂಗದ ಟೆಲಿಕಾಂ ಸೇವೆ ಒದಗಿಸುವ ಕಂಪೆನಿಗಳಿಗೂ ಇದರ ಬಳಕೆಯ ಅವಕಾಶ ನೀಡುವುದರ ಮೂಲಕ ಇದನ್ನು ಸಾಧಿಸಬಹುದು ಎನ್ನುವುದು ಟೆಲಿಕಾಂ ಇಲಾಖೆಯ ಲೆಕ್ಕಾಚಾರ. ಬಿಎಸ್‌ಎನ್‌ಎಲ್‌ಗೆ ಇದರ ಬಳಕೆಯ ಮೊದಲ ಹಕ್ಕು ಇದೆ. ಆದರೆ ಇತರ ಸೇವೆ ನೀಡುವ ಕಂಪೆನಿಗಳಿಗೂ ಈ ಜಾಲದ ಬಳಕೆಗೆ ಅವಕಾಶ ನೀಡಿ ಶುಲ್ಕ ಪಡೆಯಬೇಕು ಎನ್ನುವುದು ಪ್ರಸ್ತಾಪ.

        ಶೇರುಕಟ್ಟೆ ವ್ಯವಹಾರ ನಿಲುಗಡೆ

        ನವೆಂಬರ್‌ 1, ಸೋಮವಾರ ಬಾಂಬೇ ಸ್ಟಾಕ್‌ ಎಕ್ಸ್‌ಚೇಂಜ್‌ (ಬಿಎಸ್‌ಇ) ಮಾರುಕಟ್ಟೆಯಲ್ಲಿ ತಾಂತ್ರಿಕ ವೈಪ‌ಲ್ಯದಿಂದ ಮಧ್ಯಾಹ್ನ 12ರಿಂದ 2.30ರ ವರೆಗೆ ವ್ಯವಹಾರ ಸಾಧ್ಯವಾಗಲಿಲ್ಲ. ಇನ್ನೊಂದು ಮಾರುಕಟ್ಟೆ ಎನ್‌ಎಸ್‌ಇಯ ವ್ಯವಹಾರ ಅಬಾಧಿತವಾಗಿತ್ತು.ಎರಡೂ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡ ಬಲ್ಲವ ರಿಗೆ ಹೆಚ್ಚು ಸಮಸ್ಯೆ ಬಾಧಿಸಲಿಲ್ಲ. ಆದರೆ ಬಿಎಸ್‌ಇ ಯಲ್ಲಿ ಮಾತ್ರ ವ್ಯವಹಾರಗೈಯ್ಯುವ ಬ್ರೋಕರುಗಳು ವ್ಯವಹಾರ ನಿಲ್ಲಿಸಿ, ಕೈಚೆಲ್ಲಿ ಗಾಬರಿ ಹುಟ್ಟಿಸಿದರು. ಇಂಥ ತಾಂತ್ರಿಕ ತೊಂದರೆಗಳು ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರಿಗೆ ದುಃಸ್ವಪ್ನವಾಗಿ ಕಾಡುತ್ತವೆ.

        ಪುಸ್ತಕ ಗೆಲ್ಲಿ!

        ಸ್ಪರ್ಧೆಯಲ್ಲಿ ಭಾಗವಹಿಸಿ ಡಾ| ಪ್ರಸನ್ನ ಕುಮಾರ್‌ ಬರೆದಿರುವ ಹೋಮಿಯೋಪತಿ ಪುಸ್ತಕ ಗೆಲ್ಲಿರಿ!
        * ಐಪಿ ವಿಳಾಸವನ್ನು ದ್ವಿಮಾನ ಪದ್ಧತಿಯಲ್ಲಿ ಬರೆದಾಗ ಎಷ್ಟು ಸ್ಥಾನಗಳು ಬೇಕು? ಮುಂದಿನ ಐಪಿ6ನಲ್ಲಿ ಎಷ್ಟು ಸ್ಥಾನಗಳಿವೆ?

        * ಐಪಿ ವಿಳಾಸಗಳು ಮುಗಿಯುತ್ತಾ ಬಂದಿವೆ - ಕಾರಣವೇನು?

        (ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಡಾ| ಪ್ರಸನ್ನ ಕುಮಾರ್‌ಗೆ ಮಿಂಚಂಚೆ ಮಾಡಿ, ವಿಷಯ: KT4 ನಮೂದಿಸಿ drprasa@gmail.com.

        ಕಳೆದ ವಾರದ ಸರಿಯುತ್ತರಗಳು:

        * ಶಿವರಾಮ ಕಾರಂತ, ಸೆಪ್ಟಂಬರ್‌ 8.

        * ತಾಣಕ್ಕೆ ಎಷ್ಟು ಹಿಟ್ಸ್‌ ಬಂದವೆನ್ನುವುದು ಮಾನದಂಡ.

        ಎಂಟು ಮಂದಿ ಸರಿಯುತ್ತರ ಕಳಿಸಿದ್ದು, ಬಹು ಮಾನ ಗೆದ್ದ ರಾಧಾಕೃಷ್ಣ ಅವರಿಗೆ ಅಭಿನಂದನೆಗಳು.)

        ಟ್ವಿಟರ್‌ ಚಿಲಿಪಿಲಿ

        * ಎಲ್ಲಾ ಗ್ರಹಗಳೂ ಅಪ್ರದಕ್ಷಿಣಾಕಾರವಾಗಿ ಸೂರ್ಯನ ಸುತ್ತ ಸುತ್ತುತ್ತವಾದರೆ, ಶುಕ್ರಗ್ರಹ ಮಾತ್ರ ಸೂರ್ಯನಿಗೆ ಪ್ರದಕ್ಷಿಣೆ ಬರುತ್ತದೆ.

        * ಜೈ-ಮಿನಿ-ಭಾರತ ಎನ್ನುವುದು ಮಿನಿಭಾರತದ ಬಗ್ಗೆ ಬರೆದ ಪುರಾಣ :)

        * ಪಟಾಕಿಗಳು, ನಾಯಿಸ್‌, ಸ್ವೀಟುಗಳು, ತಿಂಡಿಗಳು, ಎಸ್ಸೆಮ್ಮೆಸ್ಸುಗಳು, ಗ್ರೀಟಿಂಗುÕಗಳು ಈ ಹಬ್ಬ ಇಷ್ಟೇನೇ!


        ನಿಮ್ಮೊಡನೆ ವಿ. ಆರ್‌. ಭಟ್ರಾ!

        ತಂತ್ರಜ್ಞ, ಸಲಹೆಗಾರ ಮತ್ತು ತರಬೇತುದಾರರಾದ ವಿ. ಆರ್‌. ಭಟ್‌ ಅವರು ತಮ್ಮ ಬರವಣಿಗೆ 
        ಅಂತಜಾìಲದಲ್ಲಿ ಹಂಚಿಕೊಳ್ಳಲು

        http://nimmodanevrbhat.blogspot.com ಬ್ಲಾಗನ್ನು ಬಳಸಿಕೊಂಡಿದ್ದಾರೆ. ಈ ತಾಣಕ್ಕೆ ಬಂದವರಿಗೆ ವಿಡಂಬನೆ, ವಿಚಾರ, ಅಧ್ಯಾತ್ಮ, ಕವನಗಳು, ಚಿಂತನೆ ಹೀಗೆ ವೈವಿಧ್ಯಮಯ ಸಾಮಗ್ರಿಗಳು ಲಭ್ಯವಾಗುವಂತೆ ಭಟ್ಟರು ನೋಡಿಕೊಂಡಿದ್ದಾರೆ.

        ಪ್ರತಿಕ್ರಿಯಿಸಿ: feedback@manipalmedia.com

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus