Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ನಿಸ್ತಂತು ಸಂಸಾರ

      • ಅಶೋಕ್‌ ಕುಮಾರ್‌ ಎ. | Nov 14, 2010

        ಗ್ಯಾಲಕ್ಸಿ -ಐಪ್ಯಾಡ್‌ ಸ್ಪರ್ಧೆ

        ಆ್ಯಪಲ್‌ನ ಹೊಸ ಸಾಧನ ಐಪ್ಯಾಡ್‌ಗೆ ಸ್ಪರ್ಧೆ ನೀಡಲು ಸ್ಯಾಮ್‌ಸಂಗ್‌ ಗ್ಯಾಲಕ್ಸಿಯನ್ನು ಬಿಡುಗಡೆ ಗೊಳಿಸಿದೆ. ಸ್ಯಾಮ್‌ಸಂಗ್‌ ಕಂಪೆನಿಯು ಗ್ಯಾಲಕ್ಸಿ ಎನ್ನುವ ಆಂಡ್ರಾಯಿಡ್‌ ಸೆಲ್‌¶ೊàನನ್ನೂ ತಯಾರಿಸು ತ್ತಿದೆ. ಗ್ಯಾಲಕ್ಸಿ ಪ್ಯಾಡ್‌, ಐಪ್ಯಾಡ್‌ಗೆ ಹೋಲಿಸಿದರೆ ತುಸು ಕಿರಿದು, ಗ್ಯಾಲಕ್ಸಿ ¶ೊàನಿಗೆ ಹೋಲಿಸಿದರೆ ತುಸು ದೊಡ್ಡದು. ನಿಸ್ತಂತು ಜಾಲಕ್ಕೆ ಸಂಪರ್ಕ ದೊಂದಿಗೆ ಬರುವ ಅಮೆರಿಕನ್‌ ಮಾರುಕಟ್ಟೆಯಲ್ಲಿ ಬೆಲೆ 400 ಡಾಲರುಗಳು. ಐಪ್ಯಾಡ್‌ ನಿಗದಿತ ನಿಸ್ತಂತು ಜಾಲಗಳ ಸೇವೆಯ ಹಂಗಿಲ್ಲದೆ ಸಿಗುತ್ತದೆ. ಆದ್ದರಿಂದ ದುಬಾರಿ. ಸಾಮಾನ್ಯ ಐಪ್ಯಾಡ್‌ ಆದರೆ ಬೆಲೆಯಲ್ಲಿ ವ್ಯತ್ಯಾಸ 100 ಡಾಲರು, 3ಜಿ ಸೇವೆ ಬೇಕಿದ್ದರೆ 200 ಡಾಲರು ಅಧಿಕ ಬೆಲೆ ತೆರಬೇಕು. ಗ್ಯಾಲಕ್ಸಿಯಲ್ಲಿ ತೆರೆ ಏಳು ಇಂಚಿನದ್ದಾದರೆ, ಐಪ್ಯಾಡಿನಲ್ಲಿ 10 ಇಂಚಿನ ತೆರೆಯಿದೆ. ಓದಲು, ಆಟಗಳನ್ನು ಆಡಲು ಮತ್ತು ಚಲನ ಚಿತ್ರ ವೀಕ್ಷಣೆಗೆ ಸೆಲ್‌¶ೊàನ್‌ಗಳಿಗಿಂತ ಪ್ಯಾಡು ಗಳೇ ಸೂಕ್ತ. ಐಪ್ಯಾಡ್‌ ತೂಕ ಜಾಸ್ತಿ. ಇ-ಪುಸ್ತಕ ಓದು ವಾಗ ಗ್ಯಾಲಕ್ಸಿಯ ಬ್ಯಾಟರಿ ಐಪ್ಯಾಡಿಗಿಂತ ಬೇಗ ಮುಗಿಯುತ್ತದೆ. ಗ್ಯಾಲಕ್ಸಿಯಲ್ಲಿ ಎರಡು ಕ್ಯಾಮರಾ ಗಳಿದ್ದು ವಿಡಿಯೋ ಕಾನರೆನ್ಸ್‌ಗೆ ಅನುಕೂಲತೆಯಿದೆ.

        ಡಿಸ್ಕವರಿಗೆ ರಂಧ್ರ

        ಡಿಸ್ಕವರಿ ಸ್ಪೇಸ್‌ ಶಟಲ್‌ನ‌ ಜಲಜನಕ ಇಂಧನ ಕೋಶದಲ್ಲಿ ತೂತು ಪತ್ತೆಯಾಗಿರುವುದರಿಂದ ಅದರ ಯಾನವನ್ನು ನಾಸಾ ಕನಿಷ್ಠ ಈ ತಿಂಗಳ ಕೊನೆಯ ವರೆಗೆ ಮುಂದೂಡಿದೆ. ಡಿಸ್ಕವರಿಯ ಯಾನ ಕಳೆದ ವಾರದಲ್ಲಿ ನಿಗದಿಯಾಗಿತ್ತು. 20 ಇಂಚು ಉದ್ದದ ಸೀಳನ್ನು ಇಂಧನ ಕೋಶದಲ್ಲಿ ಕೆಲಸಗಾರರು ಪತ್ತೆ ಮಾಡಿದರು. ಉಡಾವಣಾ ವೇದಿಕೆಯಲ್ಲಿರುವ ಡಿಸ್ಕವರಿಯನ್ನು ದುರಸ್ತಿ ಮಾಡುವುದು ಹೇಗೆಂದು ನಾಸಾ ಎಂಜಿನಿ ಯರುಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.

        ಗೂಗಲ್‌ ಟಿವಿಗೆ ವಿರೋಧ

        ಗೂಗಲ್‌ ಟಿವಿ ಮತ್ತು ಅಂತಜಾìಲಗಳನ್ನು ಬೆಸೆಯಲು ಮಾಡಿರುವ ಗೂಗಲ್‌ ಟಿವಿ ಪ್ರಯತ್ನದ ಬಗ್ಗೆ ನಿಮಗೆ ಗೊತ್ತಿರಬಹುದು. ಟಿವಿಯಲ್ಲೇ ಅಂತಜಾìಲ ಮೂಲಕ ಚಾನೆಲ್‌ಗ‌ಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿಸುವುದು ಗೂಗಲ್‌ನ ಉಪಾಯ. ಇದಕ್ಕೆ ಅಗತ್ಯವಾದ ಸೆಟ್‌ಟಾಪ್‌ ಪೆಟ್ಟಿಗೆಗಳನ್ನು ಲಾಜಿಟೆಕ್‌ ಕಂಪೆನಿಯು ಒದಗಿಸುತ್ತಿದೆ. ಆದರೆ ಈ ಪ್ರಯತ್ನಕ್ಕೆ ಟಿವಿ ಚಾನೆಲುಗಳವರು ತಣ್ಣೀರು ಎರಚಿದ್ದಾರೆ. ಅವರಿಗೆ ಅಂತಜಾìಲ ಮೂಲಕ ಟಿವಿ ತೋರಿಸುವುದರಲ್ಲಿ ಉತ್ಸಾಹವಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂತಜಾìಲ ಜಾಹೀರಾತಿಗಿಂತ ಟಿವಿ ಜಾಹೀರಾತುಗಳೇ ಹೆಚ್ಚು ಲಾಭ ದಾಯಕ. ಹೀಗೆ ಮಾಡುತ್ತಿರುವ ಚಾನೆಲುಗಳ ಪೈಕಿ ಅಮೆರಿಕದ ಎನ್‌ಬಿಸಿ, ಸಿಬಿಸಿ, ಎಬಿಸಿಯ ಅನಂತರ ಇದೀಗ ¶ಾಕ್ಸ್‌ ಟಿವಿಯ ಸರದಿ. ಅವುಗಳು ತಮ್ಮ ಟಿವಿ ಶೋಗಳನ್ನು ಪೂರ್ತಿಯಾಗಿ ಗೂಗಲ್‌ ಟಿವಿಯಲ್ಲಿ ತೋರಿಸಲು ಒಲ್ಲೆ ಎಂದಿವೆ. ಗೂಗಲ್‌ ಈ ನಕಾರದಿಂದ ಪೇಚಿಗೀಡಾಗಿದ್ದರೂ ಇದರಿಂದ ತನ್ನ ಯೋಜನೆಗೆ ಬಾಧಕವಿಲ್ಲ ಎಂದು ಹೇಳಿಕೊಂಡಿದೆ.

        ವೆಬ್‌ಹೋಸ್ಟಿಂಗ್‌ ಬಹುಮಾನ!

        ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ, ನಿಮ್ಮ ಅಂತಜಾìಲ ತಾಣಕ್ಕೆ ಒಂದು ವರ್ಷದ ಉಚಿತ ಆಶ್ರಯ ಗಿಟ್ಟಿಸಿಕೊಳ್ಳಿ. ಬಹುಮಾನ ಪ್ರಾಯೋಜಿಸಿದವರು ಲಿನಕ್ಸಾಯಣ.ನೆಟ್‌

        * ಲೀನಕ್ಸ್‌ನ ಜನಕ ಯಾರು?

        * ನೆಟ್‌ ಬುಕ್‌ ಮತ್ತು ಲ್ಯಾಪ್‌ಟಾಪ್‌ಗೆ ವ್ಯತ್ಯಾಸ

        ಇದೆಯೇ? ಇದ್ದರೆ ಅದೇನು?

        (ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ Linuxaayana.net ಮಿಂಚಂಚೆ ಮಾಡಿ, ವಿಷಯ: NS5 ನಮೂದಿಸಿ contact@linuxaayana.ne).

        (ಕಳೆದ ವಾರದ ಸರಿಯುತ್ತರಗಳು:

        * 32,128

        * 32 ಸ್ಥಾನಗಳನ್ನು ಬಳಸಿಕೊಂಡು ಸಿಗಬಹುದಾದ ಐಪಿ ವಿಳಾಸಗಳು ಅತ್ಯಧಿಕ ಬೇಡಿಕೆಯ ಕಾರಣ ಮುಗಿಯುತ್ತಿವೆ. ಪ್ರತಿ ಸಾಧನವನ್ನೂ ಅಂತಜಾìಲಕ್ಕೆ ಸಂಪರ್ಕಿಸುವ ತವಕವೂ ಇದಕ್ಕೆ ಕಾರಣವಾಗುತ್ತಿದೆ.
        ಬಹುಮಾನ ಗೆದ್ದ ಚೇತನ್‌ ಭಟ್‌, ಮಂಗಳೂರು ಅವರಿಗೆ ಅಭಿನಂದನೆಗಳು.)

        TWITTER ಚಿಲಿಪಿಲಿ

        * ಭಾರತದ ಜಿಡಿಪಿ ಶೇ. 9 ವೃದ್ಧಿಯಾಗಿರಬಹುದು,
        ಆದರೆ ಭ್ರಷ್ಟಾಚಾರ ಶೇ. 90000 ವೃದ್ಧಿಯಾಗಿದೆ.

        * ಸಂಮೋಹಿನಿಗಾರನ ಇಷ್ಟದ ರಾಗ ಯಾವುದು?
        ರಾಗ ಸಂಮೋಹಿನಿ!

        * ನರ್ಸ್‌: ಒಂದು ನಿಮಿಷ ನಿಮ್ಮ ಕೈ ಹಿಡಿದು, ನಾಡಿ
        ಬಡಿತ ಸರಿಯಾಗಿರಬೇಕೆಂದು ನಿರೀಕ್ಷಿಸುವ ಬೆಡಗಿ.


        ಓದುಗರ ಪ್ರತಿಕ್ರಿಯೆಗಳು

        * ಮೊಬೈಲಿನಲ್ಲಿ ಗೂಗಲ್‌ ಶೋಧ ತುಂಬಾ ಉಪಯುಕ್ತವಾಗಬಹುದು, ಪೂರ್ತಿ ಟೈಪು ಮಾಡುವ ಮೊದಲೇ ಬಂದ ¶‌ಲಿತಾಂಶಗಳು ನಿಮ್ಮ ನಿರೀಕ್ಷೆಗನು ಗುಣವಾಗಿಲ್ಲವಾದರೆ ಅವನ್ನು ಕಡೆಗಣಿಸಬೇಕಾದೀತು: ಪ್ರಸನ್ನ ಶಂಕರಪುರ.

        * ಕಸರತ್ತಿನ ಮೂಲಕ ಕಂಪ್ಯೂಟರ್‌ ನಿಯಂತ್ರಣ ಕುತೂಹಲಕಾರಿ, ಮುಂದೆ ಕಂಪ್ಯೂಟರ್‌ ಏನೆಲ್ಲ ಮಾಡ ಬಹುದು - ಭಯವಾಗುತ್ತದೆ: ಮಹೇಶ್‌ ಭಟ್‌.


        ಸಂಪದಕ್ಕೆ ಐದು

        ಸಂಪದ.ನೆಟ್‌ ಸಮುದಾಯ ತಾಣವು ಆರಂಭ ವಾಗಿ ಐದು ವರ್ಷಗಳು ಕಳೆದವು. ಕನ್ನಡದ ಪ್ರಮುಖ ಅಂತಜಾìಲ ತಾಣವಾಗಿ ಮೂಡಿರುವ ಸಂಪದ, ಜಾಹೀರಾತಿನ ಹಂಗಿಗೆ ಬೀಳದೆ ಜನ ಸಾಮಾನ್ಯರಿಗೆ ಕನ್ನಡದಲ್ಲಿ ಚರ್ಚಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು ಮುಕ್ತ ವೇದಿಕೆಯಾಗಿದೆ. ಸಂಪೂರ್ಣ ಕನ್ನಡ ಬಳಕೆ, ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ, ನೋಂದಾಯಿತ ಸದಸ್ಯರಿಗೆ ಯಾವುದೇ ನಿರ್ಬಂಧವಿಲ್ಲದೆ ಬರಹಗಳನ್ನು ಪ್ರಕಟಿಸುವ ಅವಕಾಶ ವನ್ನು ಸಂಪದ ನೀಡಿದೆ. ಸಮುದಾಯ ತಾಣವಾದರೂ ಇದರ ಆರ್ಥಿಕ ನಿರ್ವಹಣೆ ಬಹುತೇಕ ಏಕವ್ಯಕ್ತಿ ಪ್ರದರ್ಶನ ಆಗಿರುವುದು ವಿಪರ್ಯಾಸವೇ ಸರಿ. ತಂತ್ರಾಂಶ ಅಭಿವೃದ್ಧಿಕಾರ,  ಕನ್ನಡಿಗ ಹರಿಪ್ರಸಾದ್‌ ನಾಡಿಗ್‌ ಸಂಪದ ತಾಣವನ್ನು ನಡೆಸುತ್ತ ಬರುತ್ತಿದ್ದಾರೆ. ಈ ಪ್ರಯತ್ನಕ್ಕೆ ನೀವು ಕೈಜೋಡಿಸಲು ಬಯಸುವಿರಾ ದರೆ mail@sampada.net ಗೆ ಮಿಂಚಂಚೆ ಮಾಡಿ.

        360 ಕೋನಗಳಿಂದ ವೀಕ್ಷಣೆ

        http://www.p4panorama.com ಅಂತಜಾìಲ ತಾಣದಿಂದ ಹಲವು ಪ್ರೇಕ್ಷಣೀಯ ಸ್ಥಳಗಳ ಮೂರು ಆಯಾಮದ ವೀಕ್ಷಣೆ ಸಾಧ್ಯವಿದೆ. ಕಂಪ್ಯೂಟರ್‌ ಪರದೆಯ ಮೇಲೆ ತಾಣದ 360 ಡಿಗ್ರಿ ಕೋನಗಳಿಂದಲೂ ವೀಕ್ಷಣೆ ಸಾಧ್ಯ. ಕರ್ನಾಟಕದ ಕೆಲವು ಪ್ರವಾಸೀ ತಾಣಗಳ ನೋಟಗಳೂ ಇವೆ.

        ಲ್ಯಾಪ್‌ಟಾಪ್‌ ಮಾರಾಟ ವೃದ್ಧಿ

        ದೇಶದಲ್ಲಿ ಪಿಸಿಗಳ ಮಾರಾಟ ಭರಾಟೆಯಿಂದ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವೃದ್ಧಿ ಶೇ.27. ಲ್ಯಾಪ್‌ಟಾಪ್‌ಗ್ಳು, ನೋಟ್‌ಬುಕ್‌ಗಳ ಮಾರಾಟ ಡೆಸ್ಕ್ಟಾಪ್‌ ಪಿಸಿಗಳಿಗಿಂತ 3 ಪಟ್ಟು ಹೆಚ್ಚಿದೆ. ಆರ್ಥಿಕ ಚಟುವಟಿಕೆಯಲ್ಲಿ ವೃದ್ಧಿ ಕಂಪ್ಯೂಟರುಗಳಿಗೆ ಬೇಡಿಕೆ ಹೆಚ್ಚಿಸಿರುವುದು ಸ್ಪಷ್ಟ. ಡೆಲ್‌ ಕಂಪೆನಿ ಮಾರಾಟ ದಲ್ಲಿ ಮುಂದಿದೆ. ಎಚ್‌ಪಿ, ಏಸರ್‌ ಕಂಪೆನಿಗಳು ಅನಂತರದ ಸ್ಥಾನ ಪಡೆದಿವೆ.

        ಪ್ರತಿಕ್ರಿಯಿಸಿ: feedback@manipalmedia.com

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus