Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಸೃಜನಶೀಲತೆ ಮತ್ತು ತಂತ್ರಜ್ಞಾನ...
  • ಸೃಜನಶೀಲತೆ ಮತ್ತು ತಂತ್ರಜ್ಞಾನ...

    • ಬಿ. ಪಿ. ರಾವ್‌ | Nov 21, 2010

      ಎಲ್ಲರೂ ಎಲ್ಲವೂ ಜಾಗತೀಕರಣದತ್ತ ಮುಖ ಮಾಡಿದ್ದಾರೆ, ಮಾಡಿವೆ. ಹಳ್ಳಿಯ ಜನಪದ ಹಾಡಿಗೂ ಲಂಡನ್‌ನ ವೇದಿಕೆಯಲ್ಲಿ ಹಾಡಿಸಿಕೊಳ್ಳುವ ಆಸೆ. ವಿದೇಶದ ಬೇಡಿಕೆಗೆ ತಕ್ಕಂತೆ ತಮ್ಮನ್ನು ತಾವು ರೂಪಾಂತರಿಸಿಕೊಳ್ಳಲು ಇಲ್ಲಿಯ ಸಂಸ್ಕೃತಿ ಬಹುಮಟ್ಟಿಗೆ ಸಿದ್ಧವಾಗಿದೆ. ಇಂಥ ವಿಚಿತ್ರ ವಿದ್ಯಮಾನಗಳ ನಡುವೆ ಸಿನೆಮಾ ಮಾಧ್ಯಮವನ್ನು ಗಮನಿಸಿ. ಪ್ರಾದೇಶಿಕ ಚಿತ್ರಗಳಿಗೆ "ಹೊಸ ತಂತ್ರಜ್ಞಾನ'ವನ್ನು ಬಳಸಿಕೊಂಡು ಜಾಗತಿಕವಾಗಿ ಪ್ರಸ್ತುತಗೊಳ್ಳುವುದಕ್ಕೆ ಸಾಧ್ಯವಾಗಿಲ್ಲವೆಂದು ಹೇಳಬೇಕು. ಸರಳವಾಗಿ ಹೇಳುವುದಿದ್ದರೆ, ಒಂದು ಕನ್ನಡ ಚಿತ್ರವು ನ್ಯೂಯಾರ್ಕ್‌ನಲ್ಲಿ ಅಮೆರಿಕನ್ನರ ನಡುವೆ ಪ್ರಸಿದ್ಧವಾಗುವುದು ಅಸಾಧ್ಯ. ಬಾಲಿವುಡ್‌ನ‌ ಎಷ್ಟೋ ಚಿತ್ರಗಳೂ ಹಾಲಿವುಡ್‌ ಸಂಸ್ಕೃತಿಯನ್ನು ಅನುಕರಿಸಲು ಹೋಗಿ, ಗೆಲ್ಲಲಾಗದೆ ಚಡಪಡಿಸಿದ್ದಿದೆ. ಕನ್ನಡ ಚಿತ್ರಗಳ ವಿಷಯಕ್ಕೆ ಬಂದರೆ, ಇಲ್ಲಿಯೂ ಹೆಚ್ಚಿನ ಕತೆಗಳು ಮಧ್ಯಮ ವರ್ಗಕ್ಕೆ ನಿಕಟವಾದದ್ದೇ ಆಗಿರುತ್ತವೆ. ಕನ್ನಡದಂತೆ ನೆರೆಪ್ರಾಂತ್ಯಗಳ ಭಾಷೆಗಳ ಸಿನೆಮಾಗಳಿಗೂ ಈ ಮಾತು ಅನ್ವಯವಾಗುತ್ತದೆ. ಮಲಯಾಳದಲ್ಲಂತೂ ಪ್ರಾದೇಶಿಕ ಸೊಗಡಿರದ ಚಿತ್ರಕತೆಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

      ಎಂದಿರನ್‌ ನೋಡಿದ ಮೇಲೆ ಇಷ್ಟೆಲ್ಲ ವಿಚಾರಗಳು ಮನದ ಮುಂದೆ ಬಂದು ನಿಂತವು.
      ತಮಿಳು ಭಾಷೆ ಉಳಿದ ಭಾಷೆಗಳಿಗಿಂತ ಭಿನ್ನವಾಗಿ ಹೇಗೆ, ತಂತ್ರಜ್ಞಾನವನ್ನು ತನ್ನೊಳಗೆ ಅರಗಿಸಿಕೊಳ್ಳುತ್ತಿದೆ ಎಂಬುದಕ್ಕೂ ಈ ಸಿನೆಮಾ ಉದಾಹರಣೆಯಾಗಬಹುದು ಎಂಬುದು ಬಹಳ ಕುತೂಹಲದ ವಿಚಾರ. ಎಂದಿರನ್‌ ಇವತ್ತು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗುತ್ತಿರುವ ಸಿನೆಮಾ!
      ಆದರದು ಎಂಥ ಪ್ರಸಿದ್ಧಿ?

      ಕತೆಯ ಹಂದರ

      ತಮಿಳು ಸಂಸ್ಕೃತಿಯ ಎಳ್ಳಿನಿತೂ ಸ್ಪರ್ಶವಿಲ್ಲದ ಕತೆ ಈ ಸಿನೆಮಾದ್ದು. ತದ್ರೂಪಿಗಳ ಸೃಷ್ಟಿ ಎಂಥ ಅಪಾಯಕ್ಕೆ ಕಾರಣವಾಗಬಹುದು ಎಂಬ ತಾತ್ತಿ$Ìಕತೆಯನ್ನು ಕಟ್ಟುತ್ತ ಮುಂದುವರಿಯುತ್ತದೆ, ಇದರ ಚಿತ್ರಕತೆ. ಎಂದಿರನ್‌ ಅಥವಾ ರೋಬೋಟ್‌ ನೋಡಿದವರಿಗೆ ಇದರ ಕಥಾಹಂದರ ಇಷ್ಟವಾಗುವುದರಲ್ಲಿ ಎರಡು ಮಾತೇ ಇಲ್ಲ. ಮನಸ್ಸು ಎಂಬುದು ಮನುಷ್ಯ ಸೃಷ್ಟಿಯೊಂದಿಗೆ ಸಹಜವಾಗಿ ಬರುವಂತಾದ್ದು.

      ಆದರೆ, ಎಂದಿಗೆ ನಾವು ಮನುಷ್ಯನನ್ನು ಮತ್ತು ಮನಸ್ಸನ್ನು ಮರುಸೃಷ್ಟಿಸಲು ಮುಂದಾಗುತ್ತೇವೊ ಆಗ ಅದು ಅಪಾಯಕ್ಕೆ ದಾರಿಯಾಗುತ್ತದೆ. ಮನಸ್ಸನ್ನು ನಾವು ಯಾವತ್ತೂ ಧನಾತ್ಮಕ ಧೋರಣೆಯಲ್ಲಿಯೇ ಗ್ರಹಿಸುತ್ತೇವೆ. ಒಳ್ಳೆಯ ಮನಸ್ಸು ಎಂಬುದು ಮನುಷ್ಯ ಸಹಜವಾದ ಒಂದು ಲಕ್ಷಣ. ಕೆಟ್ಟ ಮನಸ್ಸು ಕೃತಕವಾದದ್ದು ಮತ್ತು ಮನುಷ್ಯ ತನ್ನ ಧೋರಣೆಗಳಲ್ಲಿ ರೂಪಿಸಿಕೊಂಡದ್ದು ಎಂಬುದು ಒಂದು ಪ್ರಬುದ್ಧವಾದ ತಿಳುವಳಿಕೆ. ಇಂಥ ಸಾಮಾಜಿಕ ಗ್ರಹಿಕೆಯನ್ನು ತಂತ್ರಜ್ಞಾನ ಮತ್ತು ಯಂತ್ರಜ್ಞಾನಗಳು ಬುಡಮೇಲುಗೊಳಿಸುತ್ತವೆ.

      ಆದರೆ, ಬಹಳ ಮುಂದುವರಿದ ತಂತ್ರಜ್ಞಾನವು ಹೇಗೆ ಒಂದು ಸೃಜನಶೀಲವಾದ ಮಾಧ್ಯಮವೊಂದನ್ನು ಆವರಿಸಿಬಿಡುತ್ತದೆ ಮತ್ತು ಉಳಿದೆಲ್ಲ ಅಂಶಗಳಿಗಿಂತ ತಾಂತ್ರಿಕವಾದ ವೈಭವವೇ ಹೇಗೆ ಮುನ್ನೆಲೆಯಲ್ಲಿ ಬಂದು ನಿಲ್ಲುತ್ತದೆ ಎಂಬುದಕ್ಕೆ ಎಂದಿರನ್‌ ಮುಖ್ಯ ಉದಾಹರಣೆಯಾಗುವುದು ಆ ಸಿನೆಮಾದ ಯಶಸೊÕ ವೈಫಲ್ಯವೊ ಗೊತ್ತಾಗುವುದಿಲ್ಲ !

      ಎಂದಿರನ್‌ ಚಿತ್ರದಲ್ಲಿ ಮೊದಲ ಬಾರಿಗೆ ಗಮನ ಸೆಳೆಯುವುದು ರಜನಿಕಾಂತ್‌ ಮತ್ತು ಐಶ್ವರ್ಯಾ ರೈಯವರ ನಟನೆ. ತಾನು ಐಶ್ವರ್ಯಾರನ್ನು ನಾಯಕಿಯನ್ನಾಗಿ ಚಿತ್ರ ಮಾಡಲು ಹೊರಟಾಗ ಅದು ಹೇಗೆ ಹಾಸ್ಯಾಸ್ಪದವಾಯಿತೆಂಬುದನ್ನು ರಜನೀಕಾಂತ್‌ ಅವರೇ ಹೇಳಿಕೊಂಡಿದ್ದಾರೆ ಮತ್ತು ಅದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗಿದೆ. ಇವರಿಬ್ಬರಿಂದಾಗಿ ಈ ಚಿತ್ರ ಜನಪ್ರಿಯವಾಗಿರುವುದು ಒಂದು ಸಂಗತಿಯಾದರೆ, ಇದನ್ನು ನಿರ್ಮಿಸಿದ ಸನ್‌ ವಾಹಿನಿ ಜಾಲದ ವ್ಯಾಪಕ ಪ್ರಚಾರವೂ ಕೂಡ ಒಂದು ಮುಖ್ಯ ಕಾರಣವೇ. ದೊಡ್ಡ ಬಂಡವಾಳದ ಚಿತ್ರವೆಂಬ ಹೆಗ್ಗಳಿಕೆ ಬೇರೆ. ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯೊಳಗೆ ಹೊಕ್ಕು "ಪ್ರಿಂಟ್‌ ಡಿಸ್ಟ್ರಿಬ್ಯೂಶನ್‌' ವಿಷಯದಲ್ಲಿ ವಿವಾದವೆಬ್ಬಿಸುವಲ್ಲಿಯವರೆಗೆ ಎಂದಿರನ್‌ ಪ್ರಭಾವ ಕೆಲಸ ಮಾಡಿದೆ.

      ಅದಿರಲಿ, ಈ ಚಿತ್ರ ನಿರೀಕ್ಷೆಯಷ್ಟು ಜನರ ನಡುವೆ ಪ್ರಭಾವ ಬೀರಿದೆಯೆ ಎಂಬ ವಿಚಾರಕ್ಕೆ ಬಂದರೆ, ಕರ್ನಾಟಕದ ಪ್ರೇಕ್ಷಕರ ಒಟ್ಟಾರೆ ಅವಲೋಕನ ಪ್ರಕಾರ,  ನಿರೀಕ್ಷೆಯಷ್ಟು ಮ್ಯಾಜಿಕ್‌ ಮಾಡಲು ಅದಕ್ಕೆ ಸಾಧ್ಯವಾಗಿಲ್ಲ ಎಂಬ ಉತ್ತರವೇ ದೊರಕುತ್ತದೆ. ಮುಖ್ಯವಾಗಿ, ಪ್ರಾದೇಶಿಕ ಸಂಸ್ಕೃತಿಯ ಯಾವುದೇ ಸ್ಪರ್ಶವಿರದ ಹಾಲಿವುಡ್‌ ಚಿತ್ರವನ್ನು ನೋಡಿದಂತೆ ಅನ್ನಿಸುವುದು ಇದಕ್ಕೆ ಮುಖ್ಯವಾದ ಒಂದು ಕಾರಣವಾಗಿರಬಹುದು.

      ಪ್ರಾದೇಶಿಕ ಚಿತ್ರಗಳನ್ನು ಜನ ಯಾವತ್ತೂ ಸ್ಥಳೀಯ ಸಂಸ್ಕೃತಿಯ ಆವರಣದಲ್ಲಿಯೇ ಕಲ್ಪಿಸಿಕೊಳ್ಳುತ್ತಾರೆ. ಹಾಗಾಗಿಯೇ ಹೊರದೇಶದಲ್ಲಿ ವೈಭವದ ಚಿತ್ರೀಕರಣವನ್ನು ನಡೆಸಿದ ಚಿತ್ರವೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಪಡೆಯದುಳಿಯುತ್ತದೆ. ಬಾಲಿವುಡ್‌ನ‌ಲ್ಲಿ ಎಂತೆಂಥ ಫೈಟಿಂಗ್‌ ದೃಶ್ಯಗಳಿರುವ ಚಿತ್ರಗಳಲ್ಲಿ ನಟಿಸಿ ಸೋತ ಖ್ಯಾತ ನಾಮ ನಟರು, ಮುಂಬಯಿಯ ಮಧ್ಯಮವರ್ಗದ ನಿಕಟವಾದ  ಹಾಸ್ಯ ಸನ್ನಿವೇಶಗಳಿರುವ ಚಿತ್ರಗಳಲ್ಲಿ ಇತ್ತೀಚೆಗೆ ನಟಿಸತೊಡಗಿದ್ದು ಮತ್ತು ಅಂಥ ಚಿತ್ರಗಳು ಯಶಸ್ವಿಯಾದದ್ದು ಕೂಡ  ಗಮನಾರ್ಹ ಬೆಳವಣಿಗೆಯಾಗಿದೆ. ಎಂದಿರನ್‌ ಯಾವುದೋ ಅಮೆರಿಕದ ಚಿತ್ರವನ್ನು ನೋಡಿದಂತೆನ್ನಿಸಿ, ಸಾಮಾನ್ಯ ಸಹೃದಯನಿಗೆ ಹತ್ತಿರವಾಗದೇ ಉಳಿಯುವ ಸಂಭವವೇ ಹೆಚ್ಚು. ಆದರೆ, ಆ ಚಿತ್ರದ ಹಿಂದಿರುವ ಅಬ್ಬರದ ಪ್ರಚಾರ, ಇಂಥ ಸೂಕ್ಷ್ಮಗಳನ್ನು ಮುಚ್ಚಿ ಹಾಕುತ್ತದೆ.

      ಜುರಾಸಿಕ್‌ ಚಿತ್ರ ಮಾಡಿದ ಸ್ಟೀವನ್‌ ಸ್ಪಿಲ್‌ಬರ್ಗ್‌ ಒಂದು ಮಾತು ಹೇಳಿದ್ದರಂತೆ, ""ಇಲ್ಲಿ ಡೈನೋಸಾರ್ಸ್‌ ಇಡೀ ತಂತ್ರಜ್ಞಾನದ ಪ್ರತೀಕ. ಅದು ಬಂದದ್ದರಿಂದ ಹೊಸಸೃಷ್ಟಿ ಹೇಗೆ ಉಳಿಯಲಾಗದೆ ಹೋದವು ಎಂಬುದನ್ನು ನನ್ನ ಚಿತ್ರ ತೋರಿಸುತ್ತದೆ. ಹೊಸಸೃಷ್ಟಿಯೆಂದರೆ ಮತ್ತೇನೂ ಅಲ್ಲ, ಸೃಜನಶೀಲತೆ!'
      ಅವರು ಮುಂದುವರಿದು ಹೇಳುತ್ತಾರೆ, ""ತಾಂತ್ರಿಕವಾಗಿ ನನ್ನ ಚಿತ್ರ ಗೆದ್ದಿದೆ. ಸೃಜನಶೀಲವಾಗಿ ಸೋತಿದೆ'

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
    • ಈ ವಿಭಾಗದಲ್ಲಿಯೂ ಇದೆ
    • Copyright @ 2009-2010 Udayavani.All rights reserved.
    • Designed & Hosted By 4cplus