ಅಶೋಕ್ ಕುಮಾರ್ ಎ. | Nov 22, 2010
¶ೇಸ್‌ಬುಕ್ ಸಂದೇಶ ಸೇವೆ
ಮಿಂಚಂಚೆಯ ಹೊಸ ಅವತಾರವೆಂದು ಬಣ್ಣಿಸ ಲಾಗುತ್ತಿರುವ ಸಂದೇಶ ಸೇವೆಯನ್ನು ¶ೇಸ್‌ಬುಕ್ ಆರಂಭಿಸಿದೆ. ಇದರಲ್ಲಿ ದಿಢೀರ್ ಸಂದೇಶ ರವಾನೆಗೇ ಒತ್ತು ನೀಡಲಾಗಿದೆ. ಬಳಕೆದಾರ ಆನ್‌ಲೈನ್ ಇದ್ದಾಗ ಆತನ ಜಾಲದಲ್ಲಿರುವವರು ಆತನಿಗೆ ನೇರವಾಗಿ ಸಂದೇಶರವಾನಿಸಬಹುದು. ಆತನ ಮಿಂಚಂಚೆ ವಿಳಾಸ ಹುಡುಕಿ ಸಂದೇಶ ರವಾನಿಸುವ ಅಗತ್ಯ ಇರದು. ಕಳುಹಿಸುವ ಪ್ರತಿ ತುಣುಕು ಸಂದೇಶವಾಗಲಿ, ಅದಕ್ಕೆ ಬರುವ ಉತ್ತರವಾಗಲಿ, ಬಳಕೆದಾರನ ಇನ್‌ಬಾಕ್ಸ್‌ನಲ್ಲಿ ಉಳಿಯುತ್ತದೆ. ಕೆಲವು ವರ್ಷಗಳು ಕಳೆದ ಬಳಿಕವೂ ತಾನು ನಡೆಸಿದ ಪಟ್ಟಾಂಗದ ಪ್ರತಿ ತುಣುಕೂ ಆತನಿಗೆ ಲಭ್ಯವಾಗುವ ಸನ್ನಿವೇಶವನ್ನು ಊಹಿಸಿಕೊಳ್ಳಿ. ¶ೇಸ್‌ಬುಕ್ ತಾಣದಲ್ಲಿರುವಾಗ ನಮಗೆ ಇತರರಿಂದ ಬಂದ ಸಂದೇಶಗಳಿಗೆ ಪ್ರತ್ಯೇಕ ಪಾಪಪ್ ಕಿಟಕಿಗಳು ಆರಂಭವಾಗಿ, ಯಾರಿಂದ ಸಂದೇಶಗಳು ಬರುತ್ತಿವೆ ಎನ್ನುವುದನ್ನು ಅರಿಯುವುದು ಕಠಿನವಾಗುತ್ತದೆ ಎನ್ನುವುದು ಈ ತೆರನ ಸೇವೆಯಲ್ಲಿ ಸಮಸ್ಯೆ ಸೃಷ್ಟಿಸಬಲ್ಲುದು. ದಿಢೀರ್ ಸೇವೆ ಗೂಗಲ್ ಮಿಂಚಂಚೆಗೆ ಅಂತ್ಯ ಕಾಣಿಸುವುದು ಖಚಿತ ಎಂದು ಬಣ್ಣಿಸುವವರೂ ಇದ್ದಾರೆ.
ಗೂಗಲ್‌ನ ¶ಾÂಷನ್ ತಾಣ
ಗೂಗಲ್ ಬೋಟಿಕ್. ಕಾಮ್ ಎನ್ನುವ ಅಂತರ್ಜಾಲ ¶ಾÂಶನ್ ತಾಣವನ್ನು ಆರಂಭಿಸಿದೆ. ಜನರು ಉಡುಪು ಕೊಳ್ಳುವ ಅಭ್ಯಾಸಗಳನ್ನು ಅರಿತುಕೊಂಡು, ಮುಂದೆ ಅವರ ಖರೀದಿಗೆ ಸಲಹೆ ಒದಗಿಸುವ ಸೇವೆಯನ್ನು ಆರಂಭಿಸುವ ನಿಟ್ಟಿನಲ್ಲಿ ಈ ಬಾಟಿಕ್ ತಾಣ ಆರಂಭವಾಗಿದೆ. ಸದ್ಯ ಬಾಟಿಕ್ ತಾಣವು ಮಹಿಳೆಯರ ಉಡುಪುಗಳಿಗೆ ಸೀಮಿತವಾಗಿದೆ. ತಾಣದಲ್ಲಿ ¶ಾÂಶನ್, ಜನಪ್ರಿಯ ತಾರೆಯರಿಗೆ ಸಂಬಂಧಿಸಿದ ಮಾಹಿತಿಗಳಿವೆ. ತಾರೆಯರು ಶಿ¶ಾರಸು ಮಾಡುವ ಉಡುಪುಗಳನ್ನು ಒಂದರ ಅನಂತರ ಒಂದಾಗಿ ನೋಡುತ್ತಾ, ಯಾವುದು ನಿಮಗೆ ಇಷ್ಟವಾಯಿತು ಎಂದು ಗುರುತು ಮಾಡುವ ಸವಲತ್ತು ಈ ತಾಣದಲ್ಲಿದೆ. ಇದನ್ನಾಧರಿಸಿ, ಮುಂದಿನ ಸಲ ನೀವು ಉಡುಪು ಖರೀದಿಸುವಾಗ ಗೂಗಲ್ ತನ್ನ ಕ್ರಮವಿಧಿಯ ಮೂಲಕ ನಿಮಗಿಷ್ಟವಾಗಬಹುದಾದ ¶ಾÂಶನ್ ಉಡುಪನ್ನು ಶಿ¶ಾರಸು ಮಾಡುತ್ತದೆ. ಉಡುಪುಗಳ ಬಣ್ಣ, ವಿನ್ಯಾಸ ದತ್ತಲೂ ಗಮನವೀಯುವ ಸಾಮರ್ಥ್ಯವನ್ನು ಕ್ರಮವಿಧಿ ಹೊಂದಿದೆ. ಯಾವ ವಿನ್ಯಾಸ, ಯಾವ ಬಣ್ಣ ದೊಂದಿಗೆ ಹೆಚ್ಚು ಹೊಂದುತ್ತದೆ ಎಂದು ವಿಶ್ಲೇಷಿಸಿ, ಅದರಂತೆ ಶಿ¶ಾರಸು ಮಾಡುವ ದೃಷ್ಟಿ ಅದಕ್ಕೆ ಸಿದ್ಧಿಸಿದೆ.
ಚೀನಿ ಸೂಪರ್ ಕಂಪ್ಯೂಟರ್
ಜಗತ್ತಿನ ಶಕ್ತಿಮಾನ್ ರಾಷ್ಟ್ರವಾಗಲು ಮುನ್ನುಗುತ್ತಿರುವ ಚೀನ ಸೂಪರ್‌ಪವರ್ ಎಂದು ಕರೆಸಿಕೊಳ್ಳು ವಷ್ಟರಲ್ಲಿ ತೃಪ್ತವಾಗಿಲ್ಲ. ಬದಲಾಗಿ, ಅದು ಸೂಪರ್ ಕಂಪ್ಯೂಟರನ್ನೂ ಅಭಿವೃದ್ಧಿಪಡಿಸಿದೆ. ಟಿಯಾನೆ-1ಎ ಎನ್ನುವ ಸೂಪರ್ ಕಂಪ್ಯೂಟರ್ ಈಗ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್. ಜತೆಗೆ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿರುವ ಸೂಪರ್ ಕಂಪ್ಯೂಟರ್ ಕೂಡಾ ಚೀನದ ಬಳಿಯಿದೆ. ಇಂತಹ ಕಂಪ್ಯೂಟರುಗಳು ದೇಶದ ಸಾರಿಗೆ ವ್ಯವಸ್ಥೆ ಮೇಲೆ, ಜನರ ಅಂತರ್ಜಾಲ ಬಳಕೆ ಬಗ್ಗೆ ಗಮನವಿಡಲು, ಹವಾಮಾನ ಮುನ್ನೋಟ ನೀಡಲು ಹೀಗೆ ಅತಿವೇಗದ ಮತ್ತು ಅತ್ಯಂತ ಹೆಚ್ಚು ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಬೇಕಾಗುತ್ತದೆ. ಸದ್ಯ ಚೀನದ ಬಳಿ 40ಕ್ಕೂ ಹೆಚ್ಚು ಸೂಪರ್ ಕಂಪ್ಯೂಟರುಗಳಿವೆ. ಚೀನ ಅಭಿವೃದ್ಧಿ ಪಡಿಸಿರುವ ಸೂಪರ್ ಕಂಪ್ಯೂಟರುಗಳು ಅಮೆರಿಕದ ಕಂಪೆನಿಗಳಾದ ಇಂಟೆಲ್, ಎನ್ವಿಡಿಯಾ ಮುಂತಾದ ಕಂಪೆನಿಗಳ ಚಿಪ್‌ಗ್ಳನ್ನು ಬಳಸಿವೆ. ಅಮೆರಿಕದ ವಿ.ವಿ.ಗಳು ಈಗ ತಮ್ಮ ಅಗತ್ಯಗಳಿಗೆ ಸೂಪರ್ ಕಂಪ್ಯೂಟರುಗಳನ್ನೂ ಬಾಡಿಗೆಗೆ ಪಡೆದು, ಅಂತರ್ಜಾಲದ ಮೂಲಕವೇ ಸಂಪರ್ಕಿಸುವ ಕೌÉಡ್ ಕಂಪ್ಯೂಟಿಂಗ್ ತಂತ್ರ ಬಳಸಲಾ ರಂಭಿಸಿವೆ. ಜಪಾನ್ ಕೂಡಾ ಸೂಪರ್ ಕಂಪ್ಯೂಟರುಗಳ ಬಗ್ಗೆ ಉತ್ಸಾಹ ಹೊಂದಿರುವ ರಾಷ್ಟ್ರವಾಗಿದೆ.
ಉದಯವಾಣಿ ಡೈರಿ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ, ಉದಯವಾಣಿ ಡೈರಿಯನ್ನು ಬಹುಮಾನವಾಗಿ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ಶ್ರುತಿಗ್ರಾಫಿಕ್ಸ್, ಉಡುಪಿ.
* ಕೌÉಡ್ ಕಂಪ್ಯೂಟಿಂಗ್ ಅಂದರೇನು?
* ಈ ತೆರನ ಸೇವೆಯಲ್ಲಿ ಲಭ್ಯವಿರುವ ವಿವಿಧ ತೆರನ ಸೇವೆಗಳಾÂವುವು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ- ವಿಷಯ: Nಖ6
ನಮೂದಿಸಿ adooranilk@gmail.com
ಕಳೆದ ವಾರದ ಸರಿಯುತ್ತರಗಳು:
* ಲೀನಸ್ ತೋರ್ವಾಲ್ಡ್
* ನೆಟ್‌ಬುಕ್ ಅಂತರ್ಜಾಲಕ್ಕೆ ಸಂಪರ್ಕಿಸಲು ಉದ್ದೇಶದಿಂದ ತಯಾರಿಸಿದ ಸಾಧನವಾದರೆ, ಲ್ಯಾಪ್
ಟಾಪ್ ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್ ಸಾಧನ.
(ಬಹುಮಾನ ಗೆದ್ದ ಜೈದೀಪ್ ರಾವ್, ಉಡುಪಿ ಅವರಿಗೆ ಅಭಿನಂದನೆಗಳು.)
ಚಿಲಿಪಿಲಿ
* ಹಿಂದೆಲ್ಲಾ ಹುಡುಗಿಯರು ತಮ್ಮ ತಾಯಂದಿರಂತೆ ಅಡುಗೆ ಮಾಡುತ್ತಿದ್ದರೆ, ಈಗಿನ ಹುಡುಗಿಯರಲ್ಲಿ ತಮ್ಮ ತಂದೆಯಂತೆ ಕುಡಿಯುವವರೂ ಇದ್ದಾರೆ...
* ಹಗರಣಗಳು ಇಷ್ಟು ಮಟ್ಟಿಗೆ ಸುದ್ದಿ ಮಾಡಿದ ಅನಂತರ ಭಾರತವು ಜಿ-20 ಗುಂಪಿನಿಂದ ಜಿ-420 ಗುಂಪಿಗೆ ಜಾರಬಹುದು.
* ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು!
* ಕರ್ನಾಟಕದ ಮಟ್ಟಿಗೆ ಜಾಗತೀಕರಣ ಅಂದರೆ ಜಾಗ ಅತಿಕ್ರಮಣ ಅನಿಸ್ತಿದೆ...
ಚಿಲಿಪಿಲಿ ಸ್ಕಾಲರ್‌ಶಿಪ್
ಟ್ವಿಟರಿನಲ್ಲಿ ಕಿರು ಸಂದೇಶ ಬರೆದು ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶವನ್ನು ಹೋಟೆಲ್ ಸರಪಣಿ ಉದ್ಯಮದಲ್ಲಿರುವ ಕೆಎ¶…ಸಿ ವಿದ್ಯಾರ್ಥಿಗಳಿಗೆ ನೀಡಿದೆ.ತಮಗೇತಕ್ಕೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಈ ಸಂದೇಶದಲ್ಲಿ ಸುಂದರವಾಗಿ ಹೇಳಬೇಕಾಗುತ್ತದೆ.ಗೆದ್ದವರಿಗೆ ವರ್ಷಕ್ಕೆ ಐದುಸಾವಿರ ಡಾಲರ್‌ನಂತೆ ನಾಲ್ಕು ವರ್ಷ ವಿದ್ಯಾರ್ಥಿವೇತನ ದೊರಕುತ್ತದೆ. ಸದ್ಯ ಇದು ಅಮೆರಿಕದ ವಿದ್ಯಾರ್ಥಿಗಳಿಗೆ ತೆರೆದಿದೆ. ಸಂದೇಶಗಳಲ್ಲಿ #KFCscholar ಎಂದು ನಮೂದಿಸುವ ಮೂಲಕ ಈ ಸಂದೇಶಗಳನ್ನು ಗುರುತಿಸಲು ಬರುತ್ತದೆ.
ಎಕ್ಸೆಂ ಎನ್ನುವ ಹೊಸ ಅಸ
ವಿರೋಧಿ ಸೈನಿಕರು ಗೋಡೆ ಅಥವಾ ಇನ್ಯಾವುದೇ ತಡೆಯ ಹಿಂದೆ ಅಡಗಿದ್ದಾಗ ಅವರ ಮೇಲೆ ನಿಖರ ವಾಗಿ ಆಕ್ರಮಣ ಮಾಡಬೇಕಿದೆಯೇ? ಅಂತಹ ಅಸವೇ ಎಕ್ಸೆಂ-25. ಅದನ್ನು ಎತ್ತ ಮತ್ತು ಎಷ್ಟು ದೂರ ಸಾಗಿ ಸಿಡಿಯಬೇಕು ಎಂದು ಪ್ರೋಗ್ರಾಂ ಮಾಡಲು ಬರುತ್ತದೆ.
ಇದಕ್ಕೆ ಹೆಚ್ಚು ಸಮಯವೂ ಬೇಕಾಗದು -5 ಸೆಕೆಂಡು ಸಾಕು. ಗುರಿಯನ್ನು ಭೇದಿಸಲು ಇನ್ನೆರಡು ಸೆಕೆಂಡು ಬೇಕಾಗಬಹುದು. ಇಂಥ ಎಕ್ಸೆಂ ಅನ್ನು ಅಮೆರಿಕ, ಅಪಾ^ನ್‌ನಲ್ಲಿ ಬಳಸಲಾರಂಭಿಸಿದೆ. ಸಾಮಾನ್ಯವಾಗಿ ಇಂಥ ಕೆಲಸಕ್ಕೆ ಶಕ್ತಿಶಾಲಿ ಸೊಟಕ ಬಳಸಬೇಕು. ಆದರೆ ಇಲ್ಲಿ ಕ್ಷಿಪಣಿಯಂಥ ತಂತ್ರಜ್ಞಾನ ಬಳಸಿ ಹೆಚ್ಚಿನ ನಿಖರತೆ, ಗುರಿಯತ್ತ ಆಕ್ರಮಣ ಸಾಧ್ಯವಾಗುತ್ತದೆ.