Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ನಿಸ್ತಂತು ಸಂಸಾರ

      • ಅಶೋಕ್‌ ಕುಮಾರ್‌ ಎ. | Nov 28, 2010

        ಇಂಡೊನೇಶ್ಯಾ - ಅಂತರ್ಜಾಲ

        ಇಂಡೊನೇಶ್ಯಾ ಅಂತರ್ಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ. ¶ೇಸ್‌ಬುಕ್‌ ಮತ್ತು ಟ್ವಿಟರ್‌ ಬಳಕೆಯಲ್ಲಿ ಇಂಡೊನೇಶ್ಯಾದವರದ್ದು ಮೇಲುಗೈ. ಜಗತ್ತಿನ ¶ೇಸ್‌ಬುಕ್‌ ಬಳಕೆದಾರರ ಸಂಖ್ಯೆಯಲ್ಲಿ ಇಂಡೊನೇಶ್ಯಾ 4ನೇ ಸ್ಥಾನದಲ್ಲಿದೆ.ಹೆಚ್ಚಿನವರು ಮೊಬೈಲ್‌ ಸಾಧನಗಳ ಮೂಲಕವೇ ಅಂತರ್ಜಾಲ, ಅದರಲ್ಲೂ ಈ ತಾಣಗಳ ಬಳಕೆ ಮಾಡುತ್ತಿದ್ದಾರೆ. ಭಾರತದ ಭೇಟಿಯ ಅನಂತರ ಒಬಾಮಾ ದಂಪತಿ ಇಂಡೊನೇಶ್ಯಾ ಪ್ರವಾಸಕ್ಕೆ ಹೋದದ್ದು ನೆನಪಿದೆಯೇ? ಒಬಾಮಾ ಪತ್ನಿಯ ಕೈಕುಲುಕಿ ಸ್ವಾಗತಿಸಿದ ಇಲ್ಲಿನ ಸಚಿವರೋರ್ವರ ಕ್ರಮವು ಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಜನರು ಅದರ ಬಗ್ಗೆ ಟ್ವಿಟರಿನಲ್ಲಿ ಚರ್ಚಿಸಿದ ಪರಿ ಹೇಗಿತ್ತೆಂದರೆ ಅದು ಅಂದಿನ ಬಿಸಿ-ಬಿಸಿ ಸುದ್ದಿಯಾಯಿತು. ಇದರಲ್ಲಿ ತಂತ್ರಜ್ಞಾನ ವಿಷಯಗಳ ಚರ್ಚೆಯೂ ಗರಿಗೆದರು ವುದು ವಿಶೇಷ. ಬರೇ ಒಣಚರ್ಚೆಗಲ್ಲದೆ, ಅಭಿವೃದ್ಧಿಗೂ ಈ ತಾಣಗಳ ಬಳಕೆಯಾಗುತ್ತಿದೆ.

        ಇದೀಗ ಏಸರ್‌ ಟ್ಯಾಬ್ಲೆಟ್‌ ಸರದಿ

        ಏಸರ್‌ ಕಂಪೆನಿಯೂ ಟ್ಯಾಬ್ಲೆಟ್‌ ಸಾಧನಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿದೆ. ಆ್ಯಪಲ್‌ ಕಂಪೆನಿಯ ಐಪ್ಯಾಡ್‌, ಸ್ಯಾಮ್ಸಂಗ್‌ನ ಗ್ಯಾಲಕ್ಸಿಯ ಅನಂತರ ಇದೀಗ ಏಸರ್‌ ಪ್ಯಾಡ್‌ಗಳ ಸರದಿ. 10 ಮತ್ತು 7 ಇಂಚಿನ ಎರಡು ವಿಧದ ಸಾಧನಗಳನ್ನು ಏಸರ್‌ ಪರಿಚಯಿಸಿದೆ. ಸ್ಪರ್ಶ ಸಂವೇದಿ ತೆರೆ ಈ ಸಾಧನಗಳ ಹೈಲೈಟ್‌. ಎರಡು ಕೆಮರಾ, ವೈ¶ೈ ಮತ್ತು ತ್ರಿಜಿ ಸಂಪರ್ಕ ಇದೆ. ವಿಂಡೊಸ್‌, ಆಂಡ್ರಾಯಿಡ್‌- ಹೀಗೆ ಎರಡು ರೀತಿಯ ಸಾಧನಗಳ ಜತೆ ಏಸರ್‌ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಏಸರ್‌ ನೆಟ್‌ಬುಕ್‌ಗಳ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದ ಬಳಿಕ ಈ ಮಾರುಕಟ್ಟೆ ಪ್ರವೇಶಿಸಲಿದೆ.
        ಮುಂದಿನ ವರ್ಷದ ಮೊದಲಾರ್ಧದಲ್ಲಿ ಏಸರ್‌ ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಬೆಲೆಯ ವಿಷಯದಲ್ಲಿ ಕಂಪೆನಿ ಬಾಯಿಬಿಟ್ಟಿಲ್ಲ. ಎಚ್‌ಪಿ, ಬ್ಲ್ಯಾಕ್‌ಬೆರಿ ಮುಂತಾದ ಕಂಪೆನಿಗಳೂ ಪ್ಯಾಡ್‌ ತಯಾರಿಸುವ ಯೋಚನೆಯಲ್ಲಿವೆ. ಆ್ಯಪಲ್‌ ಕಂಪೆನಿಯು ಎಂಬತ್ತೇ ದಿನಗಳಲ್ಲಿ ಎರಡು ದಶಲಕ್ಷ ಐಪ್ಯಾಡ್‌ಗಳನ್ನು ಮಾರಿ ಇತರ ಕಂಪೆನಿಗಳ ಚಿತ್ತ ವನ್ನು  ಪ್ಯಾಡುಗಳತ್ತ ಹೋಗುವಂತೆ ಮಾಡಿದೆ. ಇದರ ಜತೆಯಲ್ಲಿಯೇ ಎರಡು ತೆರೆಗಳ ಲ್ಯಾಪ್‌ಟಾಪ್‌ ಐಕಾನಿಕಾವನ್ನೂ ಏಸರ್‌ ಮಾರುಕಟ್ಟೆಗೆ ಪರಿಚಯಿಸಿದೆ.


        ಉದಯವಾಣಿ ಡೈರಿ ಬಹುಮಾನ ಗೆಲ್ಲಿ!

        ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ, ಉದಯವಾಣಿ ಡೈರಿ ಬಹುಮಾನ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ಶ್ರುತಿ ಗ್ರಾಫಿಕ್ಸ್‌, ಉಡುಪಿ.

        * ರೂಬಿ ಆನ್‌ ರೈಲ್‌ ಅಂದರೇನು?

        *ಎಕ್ಸಿಮ್‌ ಪ್ರೋಗ್ರಾಮಿಂಗ್‌ ಪದವನ್ನು ಕನ್ನಡಕ್ಕಿಳಿಸಿ.

        (ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿ ಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ- ವಿಷಯ: NS6 ನಮೂದಿಸಿ adooranilk@gmail.com).

        ಕಳೆದ ವಾರದ ಸರಿಯುತ್ತರಗಳು

        * ಅಂತರ್ಜಾಲದ ಮೂಲಕ ಬಳಕೆದಾರನಿಗೆ ಅಗತ್ಯವಾದ ಯಂತ್ರಾಂಶ, ತಂತ್ರಾಂಶ ಮತ್ತು ಸೌಕರ್ಯಗಳನ್ನು ಒದಗಿಸುವ ವಿಧಾನವೇ ಕೌÉಡ್‌ ಕಂಪ್ಯೂಟಿಂಗ್‌.

        * ಸ್ಮರಣ ಸಾಮರ್ಥ್ಯವನ್ನು, ತಂತ್ರಾಂಶಗಳನ್ನು ಮತ್ತು ಯಂತ್ರಾಂಶಗಳನ್ನು ಇದರ ಮೂಲಕ ನೀಡ ಬಹುದು. ಗೂಗಲ್‌, ಅಮೆಜಾನ್‌, ಸೇಲ್ಸ್‌ ¶ೊàರ್ಸ್‌ ಮುಂತಾದ ಕಂಪೆನಿಗಳು ಕೌÉಡ್‌ಕಂಪ್ಯೂಟಿಂಗನ್ನು ಬಳಸುತ್ತಿವೆ. ಬಹುಮಾನ ಗೆದ್ದ ಶಿವಾನಂದ ಪೈ, ಎಂಐಟಿ, ಮಣಿಪಾಲ ಅವರಿಗೆ ಅಭಿನಂದನೆಗಳು.)

        twitter ಚಿಲಿಪಿಲಿ

        * ಲಾ ಮತ್ತು ಆರ್ಡರ್‌ ಎನ್ನುವುದು  ಇನ್‌-ಲಾ ಮತ್ತು ¶ಾಡರ್‌ (ಮೇವು)ಗಳಿಗಿಂತ ಹೆಚ್ಚು ಮುಖ್ಯವೆಂದು ಬಿಹಾರದ ಚುನಾವಣಾ ¶‌ಲಿತಾಂಶ ರುಜುವಾತು ಪಡಿಸಿದೆ.

        * ಪೋನ್‌‌ ಬನೇಗಾ ಕರೋಡ್‌ಪತಿ!

        * ಬಿಹಾರದಲ್ಲಿ ಬರೇ 4 ಸ್ಥಾನ ಗಳಿಸಿರುವ ರಾಷ್ಟೀಯ ಪಕ್ಷ, ಅಂತಿಮ ಯಾತ್ರೆಗೂ ನಾಲ್ಕು ಜನ ಬೇಕು ಎನ್ನುವುದನ್ನು ನೆನಪಿಡಬೇಕು.

        * ಕಾಂಗ್ರೆಸಿಗರು ಟ್ವಿಟರಿನಲ್ಲಿದ್ದರೆ ಸಂದೇಶ ಬರೆಯರು, ಸೋನಿಯಾ - ರಾಹುಲ್‌ ಬರೆದದ್ದನ್ನು ಮತ್ತೆ ಕಳುಹಿಸಿಯಾರಷ್ಟೇ...

        * ಯೆಡಿಯೂರಪ್ಪನವರಿಗೆ ಬಹುಮಠವಿದೆ...


        ಹಳೆಯ ಕಂಪ್ಯೂಟರಿಗೆ ಬೆಲೆ

        ಆ್ಯಪಲ್‌-1 ಎನ್ನುವ 1976ರ ಮಾದರಿಯ ಕಂಪ್ಯೂಟರ್‌ ಲಂಡನ್‌ನ ಹರಾಜು ಮಾರುಕಟ್ಟೆಯಲ್ಲಿ ಎರಡು ಲಕ್ಷ ಡಾಲರುಗಳಿಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗಿದೆ. ಇಂಥ ಬರೇ 200 ಕಂಪ್ಯೂಟರು ಗಳನ್ನು ತಯಾರಿಸಲಾಗಿತ್ತು. ಇದರಲ್ಲಿ ಕಂಪೆನಿಯ ಹಳೆಯ ಲೋಗೋ ಆದ ನ್ಯೂಟನ್‌ನ ತಲೆಗೆ ಸೇಬು ಬೀಳುವ ಚಿತ್ರವನ್ನು ಲಗತ್ತಿಸಲಾಗಿದೆ. ಇದರ ಆಗಿನ ಮಾರಾಟ ಬೆಲೆ 600 ಡಾಲರು.


        ಕಾಪಿರೈಟ್‌ ಉಲ್ಲಂಘನೆ ಬಗ್ಗೆ ಕ್ರಮ

        ಹಕ್ಕುಸ್ವಾಮ್ಯಕ್ಕೆ ಕ್ಯಾರೇ ಅನ್ನದೆ ಕಡತಗಳನ್ನು ಅದರಲ್ಲೂ ಸಂಗೀತ ಮತ್ತು ವಿಡಿಯೋ ಕಡತಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ಅಂತರ್ಜಾಲ ತಾಣಗಳಿವೆ. ಟೊರೆಂಟ್‌ ಸೇವೆ ಎನ್ನುವ ಸೇವೆಯ ಮುಖಾಂತರವೂ ಇಂತಹ ವಿನಿಮಯ ನಡೆಯುವುದಿದೆ. ಇಂತಹ ನೂರಾರು ತಾಣಗಳನ್ನು ವಶಪಡಿಸಿಕೊಂಡು, ಅವುಗಳಲ್ಲಿ ಹಕ್ಕು ಸ್ವಾಮ್ಯದ ಉಲ್ಲಂಘನೆಗಿರುವ ದಂಡದ ಬಗ್ಗೆ ನೊಟೀಸು ಪ್ರಕಟಿಸುವ ಕ್ರಮವನ್ನೀಗ ಅಮೆರಿಕ ಸರಕಾರ ಕೈಗೊಂಡಿದೆ. ಈ ತಾಣಗಳ ಸೇವೆಯೀಗ ಸ್ಥಗಿತಗೊಂಡಿದೆ ಯಲ್ಲದೆ, ಎಚ್ಚರಿಕೆಯ ನೊಟೀಸು ಕಾಣಿಸಿಕೊಳ್ಳುತ್ತಿದೆ.

        ಜನವರಿ: ಸ್ಥಿರ ಮೊಬೈಲ್‌ ಸಂಖ್ಯೆ

        ಸದ್ಯ ಹರಿಯಾಣದಲ್ಲಿ ಸ್ಥಿರ ವೊಬೈಲ್‌ ಸಂಖ್ಯೆ ಸಾಧ್ಯವಾಗಿದೆ. ಸದ್ಯ ಇರುವ ವೊಬೈಲ್‌ ಸಂಖ್ಯೆಯನ್ನೇ ಹೊಸ ಸೆಲ್‌ ಆಪರೇಟರ್‌ ಸೇವೆಗೂ ಉಳಿಸಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಆದರೆ ಭಾರತದಾದ್ಯಂತ ಈ ಸವಲತ್ತು ಜನವರಿ ಅಂತ್ಯಕ್ಕೆ ಸಿಗಲಿದೆ ಎಂದು ಈಗಿನ ಅಂದಾಜು. ಆದರೂ ಕಾಲು ಭಾಗದಷ್ಟು ಬಳಕೆದಾರರು ತಮ್ಮ ಸೇವೆಯನ್ನು ಬದಲಿಸಿಕೊಳ್ಳುವ ಆಲೋಚನೆಯಲ್ಲೇ ಇಲ್ಲ ಎನ್ನುವಷ್ಟು ಮಟ್ಟಿಗೆ ಸದ್ಯದ ಸೇವೆಯಿಂದ ತೃಪ್ತರು.

        ವೊಟ್ರಾಶಿ ಇಮೇಜಿಂಗ್‌

        ಪೇಸ್‌‌ಬುಕ್‌ನಲ್ಲಿ http://www.facebook.com/votrasi ಕೊಂಡಿಯಲ್ಲಿ ಮಂಗಳೂರಿನಲ್ಲಿ ಡಿಸೆಂಬರ್‌ 12ರಂದು ನಡೆಯಲಿರುವ ¶ೊಟೋಗ್ರಫಿ ಪ್ರದರ್ಶನದ ಬಗ್ಗೆ ಮಾಹಿತಿಯಿದೆ. ಈ ಪ್ರದರ್ಶನದಲ್ಲಿ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನ ಜರಗಲಿದೆ.ಆಸಕ್ತರು votrasi@gmail.com ಸಂಪರ್ಕಿಸಿ.


        ಚುಕ್ಕಿಗೊಂದು ಎಲ್ಲೆ ಎಲ್ಲಿದೆ?

        ವಿಜಯಶ್ರೀಅವರ ಬರಹ, ಚಿತ್ರ ಮತ್ತಿತರ ರಚನೆ ಗಳನ್ನು ಕಾಣಬಹುದಾದ ಬ್ಲಾಗ್‌ http://chukkichittaara.blogspot.com ಪ್ರತಿ ಬರಹಕ್ಕೂ ಉತ್ತಮ ಪ್ರತಿಕ್ರಿಯೆ ಇರುವುದು ಈ ಬ್ಲಾಗಿನ ವಿಶೇಷ. ಕೆಲವು ಪೆನ್ಸಿಲ್‌ ರಚನೆಗಳೂ ಇಲ್ಲಿವೆ. ಅವರ ಕೆಮರಾದ ಕಣ್ಣಿಗೆ ಬಿದ್ದ ದೃಶ್ಯಗಳನ್ನೂ ಓದುಗರ ಜತೆ ಹಂಚಿಕೊಳ್ಳಲು ಇದು ವೇದಿಕೆಯಾಗಿದೆ.

        ಪ್ರತಿಕ್ರಿಯಿಸಿ: feedback@manipalmedia.com

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus