ಅಶೋಕ್ ಕುಮಾರ್ ಎ. | Dec 12, 2010
ಇದುವರೆಗೆ ಬಾಹ್ಯಾಕಾಶ ಯಾನದಲ್ಲಿ ಸರಕಾರಿ ಸಂಸ್ಥೆಗಳು ಮಾತ್ರ ಭಾಗವಹಿಸಿವೆ. ಅದೂ ಅಮೆರಿಕ, ರಷ್ಯ, ಜಪಾನ್, ಚೀನ, ಭಾರತದ ಸರಕಾರಿ ಸಂಸ್ಥೆಗಳಿಗೇ ಸೀಮಿತ. ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ವಾಹನವೊಂದನ್ನು ಕಳುಹಿಸಿ, ಅದನ್ನು ಭೂಮಿಯ ಸುತ್ತು ಪ್ರದಕ್ಷಿಣೆ ಬರಿಸಿ, ಬಳಿಕ ಶಾಂತಸಾಗರದಲ್ಲಿ ನಿಗದಿತ ಸ್ಥಾನದಲ್ಲಿ ಇಳಿಸಲು ಖಾಸಗಿ ಕಂಪೆನಿಯಾದ ಸ್ಪೇಸೆಕ್ಸ್ ಸ¶ಲವಾಗಿದೆ. ಸ್ಪೇಸ್ ಎಕ್ಸ್‌ಪ್ಲೊರೇಶನ್ ಟೆಕ್ನಾಲಜೀಸ್ ಇಂಕ್ ಕಂಪೆನಿಯನ್ನು ಸಂಕ್ಷಿಪ್ತವಾಗಿ ಸ್ಪೇಸೆಕ್ಸ್ ಎನ್ನುತ್ತಾರೆ.
ಕಂಪೆನಿ ಕಳುಹಿಸಿದ ಕ್ಯಾಪೂÕಲ್ ಭೂಮಿಗೆ ಎರಡು ಬಾರಿ ಸುತ್ತಿ, ಶಾಂತ ಸಾಗರದ ತನ್ನ ಗುರಿಯಿಂದ ಕೆಲವೇ ದೂರ ಅಂತರದಲ್ಲಿ ಇಳಿಯಿತು. ಗಗನಯಾತ್ರಿಗಳಿದ್ದಿದ್ದರೆ ಅವರನ್ನು ಅಂತಾ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಳಿಸಲು ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ. ಇನ್ನು ಮುಂದೆ ಸ್ಪೇಸ್ ಶಟಲ್‌ನಂತಹ ದುಬಾರಿ ಪ್ರಯೋಗಗಳನ್ನು ಮುಂದುವರಿಸದಿರಲು ನಾಸಾ ಕೈಗೊಂಡ ನಿರ್ಧಾರದ
ಅನಂತರ ಇಂತಹ ಕ್ಯಾಪೂÕಲುಗಳನ್ನು ಬಳಸಿ, ಅಂತಾ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಗಗನಯಾತ್ರಿಗಳನ್ನು ಮತ್ತು ಸಾಮಗ್ರಿಗಳನ್ನು ಕಳುಹಿಸುವುದು ಅನಿವಾರ್ಯ ವಾಗಿದೆ. ಇದು ಸ್ಪೇಸ್ ಶಟಲ್‌ಗೆ ಹೋಲಿಸಿದರೆ ಕಡಿಮೆ ಖರ್ಚಿನದು. ಇದರಲ್ಲಿ ಬಾಹ್ಯಾಕಾಶಯಾನಿಗಳನ್ನು ಕೊಂಡೊಯ್ಯಬಹುದು.
ಕ್ಯಾಪೂÕಲಿನಲ್ಲಿ ಜೀವರಕ್ಷಕ ಸವಲತ್ತುಗಳನ್ನು ಕಲ್ಪಿಸಬೇಕಾಗುತ್ತದೆ. ಹೆಲಿಪ್ಯಾಡಿನಷ್ಟು ವಿಶಾಲ ಪ್ರದೇಶಗಳಲ್ಲಿ ನಿಖರವಾಗಿ ಇಳಿಸುವ ವ್ಯವಸ್ಥೆ ಹೊಂದಿರಬೇಕಾಗುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾ
ಕಾಶ ಕೇಂದ್ರಕ್ಕೆ ಅಮೆರಿಕದ ಗಗನಯಾತ್ರಿಗಳನ್ನು ಕಳುಹಿ ಸಲು ನಾಸಾ ರಷ್ಯದ ಸಹಾಯ ಪಡೆದುಕೊಳ್ಳಬೇಕಿದೆ.ಖಾಸಗಿ ಕಂಪೆನಿಗಳು ಈ ಸೇವೆ ಒದಗಿಸುವಂತಾದರೆ ಕಂಪೆನಿಗಳಿಗೆ ಬೇರೆ ಬೇರೆ ಹೊಣೆ ಹೊರಿಸುವುದು ನಾಸಾದ ಯೋಚನೆ.

ಕ್ರೋಮ್ ಒಎಸ್
ಗೂಗಲ್ ತನ್ನ ಕೌÉಡ್ ಕಂಪ್ಯೂಟಿಂಗ್‌ಗೆ ಹೊಂದಿಕೊಳ್ಳುವ ಕ್ರೋಮ್ ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ಹೊರತಂದಿದೆ. ಕೌÉಡ್ ಕಂಪ್ಯೂಟಿಂಗಿನಲ್ಲಿ ಅಂತರ್ಜಾಲದಲ್ಲಿನ ಸವಲತ್ತು ಗಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಬ್ರೌಸರ್ ಅವಲಂಬಿತ ಕಂಪ್ಯೂಟರ್ ಬಳಕೆಯೇ ಗುರಿಯಾದ ಕಾರಣ ಕ್ರೋಮ್ ಒಎಸ್‌ನಲ್ಲಿ ಎದ್ದು ಕಾಣುವುದು ಬ್ರೌಸರ್ ಮಾತ್ರ. ಹಾಡು ಕೇಳುವ ತಂತ್ರಾಂಶವನ್ನು ತೆರೆದರೂ ಅದು ಬ್ರೌಸರ್ ಟ್ಯಾಬ್ ಆಗಿ ತೆರೆದುಕೊಳ್ಳುತ್ತದೆ! ಇನ್ನು ಪದಸಂಸ್ಕಾರಕ ಕಡತ ಗಳನ್ನು ತೆರೆಯಲು ಗೂಗಲ್ ಡಾಕ್ಸ್ ಸಹಾಯ ಬೇಕು - ಅಂದರೆ ನೀವು ಅಂತರ್ಜಾಲಕ್ಕೆ ಸಂಪರ್ಕ ಹೊಂದಿರಬೇಕು. ಸ್ಮರಣಕೋಶ, ತಂತ್ರಾಂಶಗಳಿಗೆ ಅಂತರ್ಜಾಲವನ್ನೇ ಅವಲಂಬಿಸುವುದು ಈ ಹೊಸ ಪರಿಯ ಕಂಪ್ಯೂಟಿಂಗಿನ ಧ್ಯೇಯವಾದ ಕಾರಣ ಗೂಗಲ್ ಒಎಸ್‌ನಿಂದ ಹೆಚ್ಚಿನ ನಿರೀಕ್ಷೆಯೂ ಇಲ್ಲ. ಇನ್ನು ಗೂಗಲ್ ಬಿಡುಗಡೆ ಮಾಡಿದ ಯಂತ್ರಾಂಶ ಅಡಿ 48 ಎಂಬ ಹೆಸರಿನಿಂದ ಪರೀಕ್ಷಾರ್ಥ ಬಳಕೆಗೆ ಸಿದ್ಧವಾಗಿಸಲಾಗಿರುವ ನೋಟ್‌ಬುಕ್. ಆಯ್ದ ತಂತ್ರಜ್ಞ ರಿಗೆ ಇದನ್ನು ಗೂಗಲ್ ಒದಗಿಸುತ್ತಿದೆ. ಇದು ಬಹಳ ಸರಳ ನೋಟ್‌ಬುಕ್.
ಕೀಲಿಮಣೆ, ಮೌಸ್ ಇದ್ದು ಯುಎಸ್‌ಬಿ, ಮೆಮರಿ ಕಾರ್ಡ್‌ನಂತಹ ಪೋರ್ಟ್ ಗಳನ್ನೂ ಹೊಂದಿದೆ. ಕ್ಯಾಪ್ಸ್ ಲಾಕ್ ಕೀಲಿ ಇದರಲ್ಲಿಲ್ಲ ದಿರುವುದು ಗಮನಿಸಬೇಕಾದ ಅಂಶ. ಅದು ಈಗ ಶೋಧ ಸೇವೆ ಒದಗಿಸುವ ಕೀಲಿಯಾಗಿ ಬಿಟ್ಟಿದೆ. ¶ಂಕ್ಷನ್ ಕೀಲಿಗಳ ಬದಲಿಗೆ ಬ್ರೌಸರ್ ನಿಯಂತ್ರಣ ಕೀಲಿಗಳಿವೆ. ಮೌಸ್ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ, ಅಂತರ್ಜಾಲದ ಹಲವು ಬಹುಮಾಧ್ಯಮ ವಿಷಯ ಇರುವ ಅಂತರ್ಜಾಲ ತಾಣಗಳು ತೆರೆದು ಕೊಳ್ಳುವಾಗ ತುಸು ನಿಧಾನವಾಗುವುದು ಮುಂತಾದ ಸಣ್ಣಪುಟ್ಟ ತೊಂದರೆಗಳು ಎದ್ದು ಕಾಣಿಸುತ್ತವೆ ಎಂದು ಪರೀಕ್ಷಕರ ವರದಿಗಳು ಹೇಳುತ್ತವೆ. ಕ್ರೋಮ್ ಒಎಸ್‌ನಲ್ಲಿ ಬಳಕೆಯ ಸಮಗ್ರ ನೋಟ ನೀಡುವ ಸವಲತ್ತು ಇದೆ.
ವರ್ಷದ ಶೋಧ
ವರ್ಷದ ಕೊನೆ ಮುಟ್ಟುತ್ತಿರುವಂತೆಯೇ ಈ ವರ್ಷ ಜನರು ಗೂಗಲ್ ಶೋಧ ಸೇವೆಯಲ್ಲಿ ಯಾವುದರ ಬಗ್ಗೆ ಹೆಚ್ಚು ಹುಡುಕಾಡಿದರು ಎನ್ನುವು ದನ್ನು ಗೂಗಲ್ ಹೇಳಿಕೊಳ್ಳುತ್ತಿದೆ. ಐಪ್ಯಾಡ್, ಚಾಟ್‌ರೌಲೆಟ್ ಎನ್ನುವ ವಿಡಿಯೋ ಚಾಟ್ ತಾಣಗಳ ಬಗ್ಗೆ ಜನ ಹೆಚ್ಚು ಶೋಧಿಸುತ್ತಿದ್ದಾರೆ.
ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ, ಉದಯವಾಣಿ ಡೈರಿ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ಅಂಬಲಪಾಡಿಯ ನಿವೃತ್ತ ಬ್ಯಾಂಕರ್ ಎ. ಎಸ್. ಕಲ್ಲೂರಾಯ.
* ಮಿರರ್ ಸೈಟ್ ಎಂದರೇನು? ಇದಕ್ಕೆ ಕನ್ನಡ ಪದ
ಸೂಚಿಸಿ.
* ಹ್ಯಾಕರ್ ಎಂದರೆ ಯಾರು? ಈ ಪದಕ್ಕೆ ಕನ್ನಡ ಪದ
ಸೂಚಿಸಿ.
(ಉತ್ತರಗಳನ್ನು ಚsಜಟk567ಃಜಞಚಜಿl.cಟಞಗೆ ಮಿಂಚಂಚೆ ಮಾಡಿ,ವಿಷಯ: Nಖ9 ನಮೂದಿಸಿ).
(ಕಳೆದ ವಾರದ ಸರಿಯುತ್ತರಗಳು: * ಸಿಲ್ವರ್ ಲೈಟ್ ಅಂದರೆ ಮೈಕ್ರೊಸಾ¶…r ಕಂಪೆನಿಯ ಸುಲಭವಾಗಿ ಅಭಿವೃದ್ಧಿ ಪಡಿಸಲಾಗುವ, ಸಂವಹನಶೀಲ ಅಂತ ರ್ಜಾಲ, ಮೊಬೈಲ್ ಮತ್ತು ಡೆಸ್ಕ್ಟಾಪ್ ಅಪ್ಲಿಕೇಶನ್ ರಚಿಸಲು ಅನುವು ಮಾಡುವ ಚೌಕಟ್ಟು.
* ಈ ಅಂಕಣದ ಬರಹಗಳಿರುವ ಬ್ಲಾಗ್ ಜಠಿಠಿಟ://ಚsಜಟk567.ಚಿlಟಜsಟಟಠಿ.cಟಞ, ಬಹುಮಾನ ಗೆದ್ದ ಶ್ರೀಶೈಲ ಭಟ್ಟರಿಗೆ ಅಭಿನಂದನೆಗಳು.)
ವಿಕಿ ಲೀಕ್ಸ್ ಅಪಾಯಕಾರಿ?
ಅಮೆರಿಕದ ಇರಾಕ್, ಅಪಾ^ನ್ ರಹಸ್ಯಗಳನ್ನು ಬಯಲು ಮಾಡಿ ಸುದ್ದಿಗೆ ಬಂದ ವಿಕಿಲೀಕ್ಸ್‌ನ ಮುಖ್ಯಸ್ಥನ ಹೆಸರಿಗೆ ಮಸಿ ಬಳಿಯಲು ಆತನನ್ನು ಲೈಂಗಿಕ ಪ್ರಕರಣದಲ್ಲಿ ಸಿಲುಕಿಸಲಾಯಿತೇ? ಈ ಸಂಶಯ ಹಲವರನ್ನು ಬಾಧಿಸುತ್ತಿದೆ. ವಿಕಿಲೀಕ್ಸ್‌ನ ಮುಖ್ಯಸ್ಥ ಅಸಾಂಗೆ ಆಸ್ಟೇಲಿಯ ಮೂಲದವರು.ಆತನು ತನ್ನ 20ನೇ ವಯಸ್ಸಿನಲ್ಲಿಯೇ ಕೆನಡಾದ ಟೆಲಿಕಾಂ ಕಂಪೆನಿಯ ಅಂತರ್ಜಾಲ ತಾಣವನ್ನು ಭೇದಿಸಿ ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾತ.ಕಂಪ್ಯೂಟರ್ ಮಟ್ಟಿಗೆ ಹ್ಯಾಕರ್ ಎನ್ನುವ ಹೆಗ್ಗಳಿಕೆ ಈತ ನದ್ದು. ವಿಕಿಲೀಕ್ಸ್‌ನ ಮೂಲ ಯಾವುದು ಎನ್ನುವುದು ಸ್ಪಷ್ಟವಿಲ್ಲ. ಆದರೆ ವಿಕಿಲೀಕ್ಸ್‌ಗೆ 1,500 ತದ್ರೂಪಿ ಅಂತರ್ಜಾಲ ತಾಣಗಳಿವೆ. ಅದರ ಬಳಕೆದಾರರಿಗೆ ಈ 1,500 ಸೈಟುಗಳಲ್ಲಿ ಯಾವುದಾದರೂ ಮೂಲ
ದಿಂದ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ ಹಲವಾರು ಸರ್ವರ್‌ಗಳು ಇರುವ ಕಾರಣ ಇದರ ಕಾರ್ಯಾಚರಣೆ ಯನ್ನು ಸುಲಭವಾಗಿ ನಿಲ್ಲಿಸುವುದು ಕಷ್ಟ. ಸೈಬರ್ ಸಮರದ ಮೂಲಕ ವಿಕಿಲೀಕ್ಸ್‌ನ್ನು ಮಣಿಸುವುದು ಸುಲಭವಲ್ಲ. ಅದು ಮಾಹಿತಿಯನ್ನು ಗೂಢಲಿಪಿಯಲ್ಲಿ ಕಾಪಾಡಿಕೊಳ್ಳಲು ಸಮರ್ಥ. ಅಸಾಂಗೆಗೆ ಹ್ಯಾಕರುಗಳ ಬೆಂಬಲ ಸಿಗುತ್ತಿದೆ. ವಿಕಿಲೀಕ್ಸ್ ತಾಣದ ಭವಿಷ್ಯ ಏನು ಎಂಬುದು ಮಸುಕಾಗಿದೆ. ಆರೋಪದ ವಿಚಾರಣೆ ಎದುರು ನೋಡುತ್ತಿರುವ ಅಸಾಂಗೆಗೆ ಈಗ ಕಂಪ್ಯೂಟರ್ ಕೂಡಾ ಲಭ್ಯವಿಲ್ಲ. ತನ್ನಲ್ಲಿ ಬ್ಯಾಂಕ್ ಆ¶… ಅಮೆರಿಕದ ಬಗ್ಗೆ ಒಂದು ಹಾರ್ಡ್‌ಡಿಸ್ಕ್ ತುಂಬಾ ಸೊ#àಟಕ ಮಾಹಿತಿ ಇದೆ ಎಂದು ಅಸಾಂಗೆ ಹೇಳಿಕೊಂಡಿದ್ದಾರೆ.