Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕಾಶ್ಮೀರ‌ ಕುರಿತ ರಹಸ್ಯ ಪತ್ರ
  • ಕಾಶ್ಮೀರದ ಜನರನ್ನು ಪ್ರಚೋದಿಸುವ ಯಾವ ಉದ್ದೇಶವೂ ಕೇಂದ್ರ ಸರಕಾರಕ್ಕಿಲ್ಲ

    • ಎಂ. ವಿ. ಕಾಮತ್‌ | Dec 19, 2010

      ಕಾಶ್ಮೀರದಲ್ಲಿ  ಸಶಸŒ ಪಡೆಗಳನ್ನು ನಿಯೋಜಿಸುವುದರ ಮೂಲಕ ವಸ್ತುಶಃ  ಅಲ್ಲಿನ ಯುವಜನರು ಹಿಂಸೆ ಮತ್ತು  ಕಲ್ಲೆಸೆತದಂತಹ  ಕುಕೃತ್ಯಗಳಲ್ಲಿ  ತೊಡಗುವುದಕ್ಕೆ ಪ್ರಚೋದನೆ ನೀಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು ಸೋಗಿನ ಉದಾರವಾದಿಗಳು ಈ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ಬಹುಶಃ ಇದಕ್ಕಿಂತ ಹೆಚ್ಚು ತಲೆನೋವಿನ ಸಂಗತಿ ಬೇರೊಂದಿರಲಾರದು. ಕಾಶ್ಮೀರದ ಜನರನ್ನು ಪ್ರಚೋದಿಸುವ ಯಾವ ಉದ್ದೇಶವೂ ಕೇಂದ್ರ ಸರಕಾರಕ್ಕಿಲ್ಲ  ಎನ್ನುವುದು ವಿವಾದಾತೀತ. ಕಾಶ್ಮೀರಿಗಳು ಗಾಂಧೀಜಿ ಹೇಳಿಕೊಟ್ಟ ಅಹಿಂಸಾತ್ಮಕ ಚಳುವಳಿಯ ಮಾರ್ಗವನ್ನು ಅನುಸರಿಸಿದರೆ ಹಾಗೂ ಪಾಕಿಸ್ಥಾನವು ಗಡಿಯಾಚೆಯಿಂದ ನಿತ್ಯ ನಿರಂತರವಾಗಿ ಕಾಶ್ಮೀರದೊಳಗೆ ಉಗ್ರರನ್ನು ಛೂ ಬಿಡುವುದನ್ನು ನಿಲ್ಲಿಸಿದರೆ ಕೇಂದ್ರ ಸರಕಾರವು ಅತ್ಯಂತ ಸಂತೋಷದಿಂದ ಸಶಸ್ತ್ರ ಪಡೆಗಳನ್ನು ಕಾಶ್ಮೀರ ಕಣಿವೆ ಪ್ರದೇಶದಿಂದ ಹಿಂದೆಗೆದುಕೊಳ್ಳಬಹುದು.

      ಪಾಕಿಸ್ಥಾನದಿಂದ ಕಾಶ್ಮೀರದೊಳಗೆ ನುಸುಳಿ ಬರುವ ಜೆಹಾದಿಗಳನ್ನು ಹಾಗೂ ಉಗ್ರರನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸಶಸ್ತ್ರ ಪಡೆಗಳನ್ನು ಅಲ್ಲಿ ನಿಯೋಜಿಸಿದೆಯೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ.

      ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿರುವುದಕ್ಕೆ ಅಷ್ಟೊಂದು ಆಕ್ರೋಶ ಯಾಕೆ? ಇದುವರೆಗೆ ಅಲ್ಲಿ 60,000 ಮಂದಿ ಕೊಲ್ಲಲ್ಪಟ್ಟಿದ್ದಾರೆ. ಮತ್ತು ಕಳೆದ 15 ವರ್ಷಗಳ ಅವಧಿಯಲ್ಲಿ ಸುಮಾರು 7,000 ಮಂದಿ ನಾಪತ್ತೆಯಾಗಿದ್ದಾರೆ. ಪ್ರತಿದಿನವೆಂಬಂತೆ ಸುಮಾರು 6 ಲಕ್ಷ ಸೈನಿಕರು ಸಮವಸ್ತ್ರ ತೊಟ್ಟುಕೊಂಡು ಕಾಶ್ಮೀರ ಕಣಿವೆ ತುಂಬಾ ಓಡಾಡುತ್ತಾ ಕಣ್ಗಾವಲು ನಡೆಸುತ್ತಿದ್ದಾರೆ. ಅಷ್ಟೂ ಸಾಲದೆಂಬಂತೆ ಸುಮಾರು ಒಂದು ಲಕ್ಷ ಮಂದಿ ಗೂಢಚಯೆì ಮಾಡುತ್ತಿದ್ದಾರೆ. ಇಂತಹ ಆತಂಕಕಾರಿ ಪರಿಸ್ಥಿತಿ ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಹಿನ್ನೆಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಒಳ್ಳೆಯದು.

      ಒಂದು ಅಂದಾಜು ಪ್ರಕಾರ 1990ರಲ್ಲಿ ಫೆಬ್ರವರಿ ಮತ್ತು ಮಾರ್ಚ್‌ ಎರಡು ತಿಂಗಳುಗಳ ಅವಧಿಯಲ್ಲಿ 140,000ದಿಂದ 1,60,000 ದಷ್ಟು ಕಾಶ್ಮೀರಿ ಪಂಡಿತರು ತಂತಮ್ಮ ಮನೆಮಾರು ತ್ಯಜಿಸಿ ಕಾಶ್ಮೀರ ಬಿಟ್ಟು ಹೊರ ತೆರಳುವಂತೆ ಮಾಡಲಾಯಿತು. ಹಿಂಸೆಗೆ ಹೆದರಿದ ಸುಮಾರು ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರು - ಕಾಶ್ಮೀರ ಕಣಿವೆ ಪ್ರದೇಶದಲ್ಲಿದ್ದ  ಹಿಂದುಗಳಲ್ಲಿ ಶೇಕಡಾ 95 ಮಂದಿ ತಮ್ಮದೇ ತಾಯ್ನೆಲದಲ್ಲಿ ನಿರಾಶ್ರಿತರಾದರು. ಸ್ಥಳಾಂತರಗೊಂಡು  ದಿಕ್ಕುದೆಸೆಯಿಲ್ಲದೆ ಬದುಕುತ್ತಿರುವ ಈ ಲಕ್ಷಗಟ್ಟಲೆ ಕಾಶ್ಮೀರಿ ಪಂಡಿತರ ಬಗ್ಗೆ ಮಾತನಾಡುವವರು ಒಬ್ಬರೂ ಇಲ್ಲ.

      1990ರ ದಶಕದಲ್ಲಿ  ಹಿಂಸೆ ಹಾಗೂ ಕಗ್ಗೊಲೆಗಳು ಎಗ್ಗಿಲ್ಲದೇ ಸಾಗಿದುವು. ಮತೀಯ ಘೋಷಣೆಗಳು ರಣಕಹಳೆಯಂತೆ ಮುಗಿಲು ಮುಟ್ಟುವಷ್ಟು ಜೋರಾಗಿದ್ದವು. ""ಇಸ್ಲಾಂ ಅಪಾಯದಲ್ಲಿದೆ' ""ಪಂಡಿತರಿಲ್ಲದ ಆದರೆ ಅವರ ಹೆಣ್ಣು ಮಕ್ಕಳಿರುವ ಕಾಶ್ಮೀರ ಬೇಕು.', ""ಭಾರತೀಯ ನಾಯಿಗಳೇ, ಕಾಶ್ಮೀರ ಬಿಟ್ಟು ತೊಲಗಿ, '  "" ಓ ಪಂಡಿತರೇ ನಮ್ಮ ಜೊತೆ ಸೇರಿಕೊಳ್ಳಿರಿ, ಇಲ್ಲವಾದರೆ ಓಡಿಹೋಗಿ ಅಥವಾ ಸತ್ತು ನಾಶವಾಗಿ' - ಇವು ಕೆಲವು ಆ ಘೋಷವಾಕ್ಯಗಳ ಸ್ಯಾಂಪಲ್‌ಗ‌ಳು.

      "ಇಂಡಿಯಾ ಫೌಂಡೇಶನ್‌, ನ್ಯೂ ಡೆಲ್ಲಿ'  ಪ್ರಕಟಿಸಿದ "ಕಾಶ್ಮೀರ್‌ ಪ್ಯಾರಡೈಸ್‌ ಇನ್‌ ಫ್ಲೆàಮ್ಸ್‌' ಎಂಬ ಶಿರೋನಾಮೆಯ ಅಧ್ಯಯನ ವರದಿಯ ಪ್ರಕಾರ, ""ದಿಲ್ಲಿ ಜಮ್ಮು  ಮುಂತಾದೆಡೆ ಬದುಕು ಸಾಗಿಸುತ್ತಿರುವ ಕಾಶ್ಮೀರಿ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಬರುವಂತೆ ಪ್ರಯತ್ನಗಳನ್ನು ನ‌ಡೆಸಿದಲ್ಲಿ ತತ್‌ಕ್ಷಣವೇ ಉಗ್ರರು ಹಿಂಸೆಗಿಳಿಯುವುದರ ಮೂಲಕ ಅದನ್ನು ವಿಫಲಗೊಳಿಸುತ್ತಾರೆ. "ಆಜಾದ್‌ ಕಾಶ್ಮೀರದ ' ನಿಜವಾದ ಉದ್ದೇಶ ಕಾಶ್ಮೀರಿಗಳಿಗೆ ಪರಿಪೂರ್ಣ  ಸ್ವಾತಂತ್ರÂವನ್ನು ನೀಡುವುದಲ್ಲ. ಪಾಕಿಸ್ಥಾನದ ಇಸ್ಲಾಮಿಕ್‌ ರಿಪಬ್ಲಿಕ್‌ನ ಒಂದು ಪೂರಕ ಘಟಕವಾಗಿ ಕಾಶ್ಮೀರವನ್ನು ಇಸ್ಲಾಮಿಕ್‌ ರಾಜ್ಯವನ್ನಾಗಿ ರೂಪಿಸುವುದು ಜೆಹಾದಿಗಳ ನಿಜವಾದ ಉದ್ದೇಶ. ಚೀನಾ ದೇಶವನ್ನು ಓಲೈಸಿಕೊಂಡು ಅದೂ ಕೂಡಾ ಕಾಶ್ಮೀರದಲ್ಲಿ ತನ್ನ  ಅಸ್ತಿತ್ವವನ್ನು ಕಂಡುಕೊಳ್ಳುವಂತೆ ಮಾಡಿ ಭಾರತಕ್ಕೆ ಇನ್ನೂ ಹೆಚ್ಚಿನ ಬೆದರಿಕೆಯನ್ನೊಡ್ಡುವುದು ಕಾಶ್ಮೀರಿ ಮುಸ್ಲಿಮರ ಇನ್ನೊಂದು ಉದ್ದೇಶ.

      ಜಮ್ಮು - ಕಾಶ್ಮೀರ ಸರಕಾರ ನಿರ್ವೀರ್ಯವಾಗಿಬಿಟ್ಟಿದೆ. ಅದು ತುಟಿ ಬಿಚ್ಚದೇ ಕಣ್ಣುಮುಚ್ಚಿ ಕುಳಿತುಕೊಂಡಿದೆ. ಲಡಾಖ್‌ನ್ನು ಸಂಪೂರ್ಣವಾಗಿ ಮರೆಯಲಾಗಿದೆ.  ಜಮ್ಮು  ಮತ್ತು  ಲಡಾಖ್‌ಗೆ ಸಿಗಬೇಕಾದ ಗೌರವಾದರಗಳು ಸಿಗುತ್ತಾ ಇಲ್ಲ. ಜಮ್ಮು ಮತ್ತು ಕಾಶ್ಮೀರ ಸರಕಾರ ಪಡೆಯುವ ಒಟ್ಟು ಕಂದಾಯದಲ್ಲಿ ಶೇಕಡಾ 70ರಷ್ಟು ಜಮ್ಮುವಿನಿಂದಲೇ ಸಂಗ್ರಹವಾಗುತ್ತಿದೆ. ಆದರೆ ಜಮ್ಮು ವಲಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಖರ್ಚು ಮಾಡುವ ಹಣ ಶೇ. 30ರಷ್ಟು ಮಾತ್ರ. ಸರಕಾರದ ವಿವಿಧ ಕಚೇರಿಗಳ ಹಿರಿಯ ಹುದ್ದೆಗಳಿಗಾಗಿ ಮಾಡುವ ನೇಮಕಾತಿಯಲ್ಲಿ ಜಮ್ಮು ಮಂದಿಯ ಪಾಲು ಶೇಕಡಾ 31ರಷ್ಟು ಮಾತ್ರ.
      ಇಂಡಿಯಾ ಫೌಂಡೇಶನ್‌  ಮಾಡಿರುವ ಸವೀಕ್ಷೆಯ ಪ್ರಕಾರ, ಸಿವಿಲ್‌ ಸೆಕ್ರೆಟೇರಿಯೇಟ್‌ನಲ್ಲಿ ಕಾಶ್ಮೀರದ ಜನರಿಗೆ ಶೇ. 90ರಷ್ಟು ಉದ್ಯೋಗಗಳು ಸಿಗುತ್ತವೆ. ಅವುಗಳಲ್ಲಿ ಜಮ್ಮುವಿನ ಮಂದಿಗೆ ಸಿಗುವ ಅವಕಾಶ  ಶೇ. 10 ರಷ್ಟು ಮಾತ್ರ.

      ಶೇಕಡಾ 35ರಷ್ಟು ಮಾತ್ರ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು ರಾಜ್ಯವು ಶಿಕ್ಷಣಕ್ಕಾಗಿ ಮೀಸಲಿಡುವ  ಅನುದಾನದಲ್ಲಿ ಶೇ. 70 ರಷ್ಟನ್ನು ಕಾಶ್ಮೀರಕ್ಕೆ ನೀಡುತ್ತಿದೆ. ಜಮ್ಮುವನ್ನು ಸಾರಾಸಗಟಾಗಿ ನಿರ್ಲಕ್ಷಿಸಲಾಗಿದೆ. 2007ರಲ್ಲಿ ಜಮ್ಮು ಕಾಶ್ಮೀರ ಸರಕಾರವು ಕೇಂದ್ರಕ್ಕೆ 533 ಕೋಟಿಗಳ ನೇರ ತೆರಿಗೆಯನ್ನು ಪಾವತಿಸಿತು. ಅದಕ್ಕೆ ಪ್ರತಿಯಾಗಿ 1471 ಕೋಟಿ ರೂಪಾಯಿಗಳನ್ನು ಪಡೆಯಿತು.

      ಜಮ್ಮು ಮತ್ತು ಕಾಶ್ಮೀರ ಸರಕಾರವು ಗಳಿಸುತ್ತಿರುವ 2,299 ಕೋಟಿ ರೂಪಾಯಿಗಳ ಕಂದಾಯ ರೂಪದ ಹಣವು ನೌಕರರಿಗೆ ವೇತನ ನೀಡಲಿಕ್ಕೂ ಸಾಕಾಗುವುದಿಲ್ಲ. ನೌಕರರಿಗೆ ವೇತನ ನೀಡಲು ಬೇಕಾದ ಹಣ 4389 ಕೋಟಿ ರಾಪಾಯಿಗಳು. ವಸ್ತುಸ್ಥಿತಿ ಹೀಗಿರುವಾಗಲೂ ಕಾಶ್ಮೀರಿಗಳಿಗೆ "ಸ್ವಾತಂತ್ರÂ' (?) ಬೇಕು. ಜಮ್ಮು ಮತ್ತು ಲಡಾಖ್‌ಗಳನ್ನು ಹೊರಗಿಟ್ಟುಕೊಂಡು ಕಾಶ್ಮೀರಕ್ಕೆ "ಸ್ವಾಯತ್ತೆ' ನೀಡುವುದು ಎಷ್ಟು ಸರಿ?
      ಪ್ರಸಕ್ತ ಕಾಶ್ಮೀರದಲ್ಲಿರುವ ಪರಿಸ್ಥಿತಿಯನ್ನೇ ಕಾಯ್ದುಕೊಂಡು ನಾಳೆಗಳಲ್ಲಿ ಬದುಕಬೇಕಾದರೆ ಕಾಶ್ಮೀರಕ್ಕೆ ಕೇಂದ್ರದ ನೆರವು  ಬೇಕೇ ಬೇಕು. ಈ ವರ್ಷ ಕಾಶ್ಮೀರವು 17,354 ಕೋಟಿ ರೂಪಾಯಿಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಖರ್ಚು ಮಾಡಲಿದೆ. ಆ ಮೊತ್ತದಲ್ಲಿ 11,510 ಕೋಟಿಯಷ್ಟು  ಕೇಂದ್ರದ  ಪಾಲೇ ಇದೆ!!  ಭಾರತದ ಬೇರೆಡೆ ವಾಸಿಸುತ್ತಿದ್ದ ಕಾಶ್ಮೀರಿ ಮಹಿಳೆಯೊಬ್ಬರು ಬಂಧುವೊಬ್ಬರ ಮದುವೆಗೆಂದು ಕಾಶ್ಮೀರಕ್ಕೆ ಹಲವು ವರ್ಷಗಳ ಬಳಿಕ ಹೋದಾಗ ಅವರಿಗೆ ಆಘಾತ ಕಾದಿತ್ತು. ಅವರ ಮನೆಯಿದ್ದ ಅನಂತ್‌ನಾಗ್‌ ಪಟ್ಟಣ ಇಸ್ಲಾಮಾಬಾದ್‌ ಎಂಬುದಾಗಿ ನಾಮಕರಣ ಗೊಂಡಿತ್ತು. ಅನೇಕ ದೇವಸ್ಥಾನಗಳು ಪಾಳು ಬಿದ್ದಿದ್ದವು. ಕೆಲವನ್ನು ಅಪವಿತ್ರಗೊಳಿಸಲಾಗಿತ್ತು. ಬಾಬ್ರಿ ಮಸೀದಿ ಕೆಡವಿ ಹಾಕಿದ್ದಕ್ಕೆ ಕಾಶ್ಮೀರಿ ಮುಸ್ಲಿಮರು ಹಿಂದೂಗಳ ಪೂಜಾ ಸœಳಗಳನ್ನು ಹಾಳುಗೆಡಹಿದ್ದರು ಎಂಬ ವಿಚಾರ ಆಕೆಗೆ ಗೊತ್ತಾಯಿತು. ""ಸಂತ ನಂದ ಋಷಿಯ ಪ್ರಾಚೀನ ಆಶ‌Åಮವನ್ನು ಸುಟ್ಟು ಹಾಕಲಾಗಿತ್ತು. ಕಾಶ್ಮೀರವನ್ನು ಬಿಟ್ಟು ತೆರಳಿದ್ದ ಪಂಡಿತರು ಇಂತಹ ಪರಿಸ್ಥಿತಿಯಲ್ಲಿ ಕಾಶ್ಮೀರಕ್ಕೆ ಮರಳಿ ಬರಲು ಖಂಡಿತವಾಗಿಯೂ ಇಷ್ಟ ಪಡಲಾರರು. ಯಾಕೆಂದರೆ ವಸ್ತುಶಃ ಅವರ ಮನೆಗಳೆಲ್ಲ ನಾಶವಾಗಿವೆೆ' ಎಂದು ಬರಹಗಾರ್ತಿ ಆಶಾ ಕಚುÅ ಹೇಳಿದ್ದಾರೆ.

      ಕಾಶ್ಮೀರಿ ಪಂಡಿತರು ಹಾಗೂ ಇತರ ಹಿಂದೂಗಳು ಸ್ವಾಭಿಮಾನದಿಂದ ಬದುಕು ಸಾಗಿಸುವ ಪರಿಸ್ಥಿತಿ ಈಗಿಲ್ಲ. ವಸ್ತುಸ್ಥಿತಿ ಏನಿದ್ದರೂ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಲ್ಲಿರುವ ಸಶಸ್ತ್ರ ಪಡೆಗಳೇ ಕಾರಣ ಎನ್ನಲಾಗುತ್ತಿದೆ. 2010ರ ತನಕ ಅಪಾ^ನಿಸ್ಥಾನದಲ್ಲಿದ್ದ ಅಮೆರಿಕ ಮತ್ತು ನ್ಯಾಟೋ ಪಡೆಗಳು 1912 ಮಂದಿ ಸೈನಿಕರನ್ನು ಕಳೆದುಕೊಂಡಿವೆ. ಅದೇ ಅವಧಿಯಲ್ಲಿ ಕಾಶ್ಮೀರದಲ್ಲಿ  4390 ರಷ್ಟು ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಆ ಬಗ್ಗೆ ಯಾರೂ ಮಾತನಾಡುವುದಿಲ್ಲ. 

      ಅದೇನೇ ಇರಲಿ, ಪಾಕ್‌ ಪ್ರೇರಿತ ಭಯೋತ್ಪಾದನೆ ನಿಲ್ಲಲೇಬೇಕು. ಉಗ್ರರ ತರಬೇತಿ ಶಿಬಿರಗಳನ್ನು ಬಾಂಬೆಸೆದು  ಧ್ವಂಸ ಮಾಡಬೇಕು. ಭಯೋತ್ಪಾದನೆ ನಿಲ್ಲದೆ ಕಾಶ್ಮೀರದ ಬಗ್ಗೆ  ಪಾಕಿಸ್ಥಾನದ ಜೊತೆ ಮಾತುಕತೆ ನಡೆಸಲೇ ಬಾರದು. ಕಾಶ್ಮೀರಿ ಯುವಕರೂ ಹಿಂಸೆಯಿಂದ ದೂರವುಳಿಯುವಂತಾಗಬೇಕು. ಕಾಶ್ಮೀರದ ಜನರಿಗೆ ಹೊಸ ಬದುಕನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಿಂದೀಗಲೇ ಕಾರ್ಯಪ್ರವೃತ್ತರಾಗಬೇಕು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus