ಅಶೋಕ್ ಕುಮಾರ್ ಎ. | Dec 19, 2010
ಗೂಗಲ್ ಬಾಡಿ ಬ್ರೌಸರ್
ಆಗಸದಿಂದ ನೋಡಿದರೆ ನಮ್ಮ ಭೌಗೋಳಿಕ ಪರಿಸರ ಹೇಗಿರುತ್ತದೆ ಎನ್ನುವುದನ್ನು ಅರಿಯಲು ಗೂಗಲ್ ಮ್ಯಾಪ್ ಬಳಸಿದರೆ ಸಾಕು. ಈಗ ಅದೇ ರೀತಿಯ ಸೌಕರ್ಯ ದೇಹ ರಚನೆಯನ್ನು ಕಲಿಯಲೂ ಸಿಗಲಿದೆ. ಗೂಗಲ್ ಕೃಪೆಯಿಂದ ಲಭ್ಯವಾಗುವ ಬಾಡಿ ಬ್ರೌಸರ್ ಎನ್ನುವ ತಂತ್ರಾಂಶವನ್ನು ಬಳಸಲು ಗೂಗಲ್ ಕ್ರೋಮ್ ಬ್ರೌಸರನ್ನು ಹೊಂದಿರಬೇಕು.http://bodybrowser.googlelabs.com/ ವಿಳಾಸಕ್ಕೆ ಸಂಪರ್ಕಿಸಿ ನೋಡಿ. ಈಗ ನಿಮ್ಮ ಮುಂದಿನ ಕಂಪ್ಯೂಟರ್ ತೆರೆಯಲ್ಲಿ ಮಾನವ ದೇಹದ ಯಾವುದೇ ಕೋನದ ವೀಕ್ಷಣೆಯ ಅವಕಾಶ ಸಿಗುತ್ತದೆ. ದೇಹದೊಳಗಿನ ಭಾಗಗಳ ವೀಕ್ಷಣೆ ಸಾಧ್ಯವಾಗುತ್ತದೆ.ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಅನುಕೂಲ.
ಫುÉಕಾರ್ಡ್ ಎಂಬ ಅದ್ಭುತ
ಹೆನ್ ಟ್ಯಾನ್ ಎನ್ನುವಾತನ ಹೆಸರನ್ನು ಕೇಳಿರು ವಿರಾ? ಥಂಬ್ ಡ್ರೆ„ವ್‌ಗಳೆಂಬ ಯುಎಸ್‌ಬಿ ಸ್ಮರಣ ಸಾಧನಗಳನ್ನು ತಯಾರಿಸಿದ ಖ್ಯಾತಿ ಈತನದ್ದು. ಆತ ತನ್ನ ಕಂಪೆನಿಯ ಮೂಲಕ ಆ ಸಾಧನವನ್ನು ಜಗತ್ತಿನ 30 ದೇಶಗಳಲ್ಲಿ ಮಾರಾಟ ಮಾಡುತ್ತಿದ್ದನಲ್ಲದೆ, ಥಂಬ್ ಡ್ರೆ„ವ್ ಎಂಬ ಹೆಸರಿನ ಮೇಲೆ ಹಕ್ಕುಸ್ವಾಮ್ಯವನ್ನೂ ತನ್ನದಾಗಿಸಿಕೊಂಡಿದ್ದ. ಆದರೆ ಇತರ ದೊಡ್ಡ ಕಂಪೆನಿಗಳೂ ಪೈರಸಿ ದಂಧೆಯವರೂ ಅದೇ ಬಗೆಯ ಸಾಧನ ಗಳನ್ನು ಮಾರುಕಟ್ಟೆಯಲ್ಲಿ ಒದಗಿಸಿ, ನ್ಯಾಯ ವಾಗಿ ಟ್ಯಾನ್‌ಗೆ ಸಲ್ಲಬೇಕಿದ್ದ ಲಾಭಕ್ಕೆ ಅಡ್ಡ ಗಾಲು ಹಾಕಿದರು. ಈಗ ಟ್ಯಾನ್, ಫುÉಕಾರ್ಡ್ ಎಂಬ ಅಂಚೆಚೀಟಿಯ ಗಾತ್ರದ ಸ್ಮರಣಕೋಶವನ್ನು ತಯಾರಿಸಿದ್ದಾನೆ. ಇದರ ಹೆಗ್ಗಳಿಕೆ ಎಂದರೆ, ಇದು ಸ್ಮರಣಕೋಶ ಮಾತ್ರ ಆಗಿರದೆ, ನಿಸ್ತಂತು ಸಂಪರ್ಕ ವನ್ನೂ ಏರ್ಪಡಿಸಬಲ್ಲುದು. ಹೀಗಾಗಿ, ಇದನ್ನು ಬಳಸಿದಾಗ ಕಡತಗಳನ್ನು ಅಂತಜಾìಲಕ್ಕೆ ಅಪ್‌ಲೋಡ್ ಮಾಡುವುದು ಸುಲಭ. ಕ್ಯಾಮರಾದಂತಹ ಸಾಧನ ದಲ್ಲಿ ಫುÉಕಾರ್ಡ್ ಇದ್ದರೆ ತೆಗೆದ ಚಿತ್ರವನ್ನು ಲಭ್ಯ ನಿಸ್ತಂತು ಜಾಲದ ಮೂಲಕ ಅಂತರ್ಜಾಲ ತಾಣ ಗಳಿಗೋ ಬ್ಲಾಗಿಗೋ ಹಾಕು ವುದು ಚಿಟಿಕೆ ಹೊಡೆದಷ್ಟು ಸುಲಭ. ಯಾವುದೇ ಇಲೆಕ್ಟ್ರಾನಿಕ್ ಸಾಧನದಲ್ಲಿ ಬಳಸಬಹುದಾದ ಕಾರಣ ಫುÉಕಾರ್ಡ್ ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ.
ತ್ರೀಜಿ: ವಿಡಿಯೋ ಕರೆ ನಿಲ್ಲಿಸಿ
ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್‌ಗಳು ತ್ರೀಜಿ ಸೇವೆಯ ಮೂಲಕ ವಿಡಿಯೋ ಕರೆಗಳನ್ನು ಒದಗಿಸು ತ್ತಿವೆ. ಈಗ ಖಾಸಗಿ ರಂಗದವರ ತ್ರೀಜಿ ಸೇವೆಯೂ ಲಭ್ಯವಾಗುತ್ತಿದ್ದು ಏರ್‌ಟೆಲ್, ಡೊಕೋಮೋ ಮತ್ತು ರಿಲಾಯನ್ಸ್ ಕಂಪೆನಿಗಳೂ ತ್ರೀಜಿ ಸೇವೆ ಒದಗಿಸುತ್ತಿವೆ. ಆದರೆ ವಿಡಿಯೋ ಕರೆಗಳನ್ನು ನೇರವಾಗಿ, ಪರಿಶೀಲಿ ಸುವ ತಂತ್ರಜ್ಞಾನ ಸದ್ಯ ಲಭ್ಯವಿಲ್ಲ. ಹಾಗಾಗಿ, ಖಾಸಗಿ ತ್ರೀಜಿ ಸೇವಾದಾತೃಗಳು ವಿಡಿಯೋ ಕರೆಗಳನ್ನು ಒದಗಿ ಸುವುದನ್ನು ಭದ್ರತಾ ಕಾರಣಗಳಿಗಾಗಿ ತಡೆ ಹಿಡಿಯ ಬೇಕು ಎಂದು ಕೇಂದ್ರ ಸರಕಾರ ಸೂಚನೆ ನೀಡಿದೆ. ಇದಕ್ಕೆ ಕಂಪೆನಿಗಳು ಆಕ್ಷೇಪ ಸಲ್ಲಿಸಿ, ಟ್ರಾಯ್ ಅನ್ನು ಈ ಬಗ್ಗೆ ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಿವೆ. ಸಾರ್ವಜನಿಕ ರಂಗದ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಕಂಪೆನಿಗಳ ವಿಡಿಯೋ ಕರೆಗಳನ್ನೂ ಪರಿಶೀಲಿಸಲು ಸಾಧ್ಯವಿಲ್ಲ. ಆದರೂ ಅವುಗಳ ಸೇವೆಯ ಮೇಲೆ ಇಲ್ಲದ ನಿಷೇಧ ಖಾಸಗಿರಂಗದ ಕಂಪೆನಿಗಳ ವಿಡಿಯೋ ಕರೆ ಮೇಲೆ ಮಾತ್ರ ಏಕೆ ಎಂಬುದು ಅವುಗಳ ವಾದ.
ಟೈಮ್ ವರ್ಷದ ವ್ಯಕ್ತಿ
ಟೈಮ್ ಪತ್ರಿಕೆಯು 2010 ವರ್ಷದ ವ್ಯಕ್ತಿಯಾಗಿ ಮಾರ್ಕ್ ಜುಕರ್‌ಬರ್ಗ್ ಎನ್ನುವಾತನನ್ನು ಆಯ್ಕೆ ಮಾಡಿದೆ. ವ್ಯಕ್ತಿಯಾಗಿ ಈತನ ಪರಿಚಯ ನಮಗಿಲ್ಲದೆ ಇರಬಹುದು. ಆದರೆ ಆತನ ಅಂತರ್ಜಾಲ ತಾಣ ಫೇಸ್ ಬುಕ್ ಬಗ್ಗೆ ನಮಗೆಲ್ಲಾ ಗೊತ್ತಿದೆ. 7 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಜುಕರ್‌ಬರ್ಗ್ ಆರಂಭಿಸಿದ ಫೇಸ್‌ಬುಕ್ ಈಗ 75 ದಶಲಕ್ಷ ಜನರ ಸದಸ್ಯತ್ವ ಹೊಂದಿದೆ. ಜಗತ್ತಿನ ರಾಷ್ಟ್ರಗಳ ಲೆಕ್ಕಕ್ಕೆ ಇದನ್ನೂ ಸೇರಿಸಿ ದರೆ, ಚೀನ ಮತ್ತು ಭಾರತದ ಅನಂತರ ಅತಿ ದೊಡ್ಡ ರಾಷ್ಟ್ರ ಇದೇ ಆಗಿಬಿಟ್ಟಿದೆ. ಜಗತ್ತಿನ ಜನರು ತಮ್ಮ ದೇಶ, ಧರ್ಮ, ಭಾಷೆಗಳನ್ನು ಮರೆತು ಇಲ್ಲಿ ಒಂದಾಗಿದ್ದಾರೆ. 75 ಭಾಷೆಗಳು ಇಲ್ಲಿ ಬಳಸಲ್ಪಡುತ್ತಿವೆ. ಇಂತಹ ಮಾರ್ಕ್ ಜುಕರ್‌ಬರ್ಗ್ ವರ್ಷದ ವ್ಯಕ್ತಿಯಾದದ್ದು ಸಹಜ.
ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ, ಉದಯವಾಣಿ ಡೈರಿ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ವಿಟಿಯು ವಿಜಿಎಸ್‌ಟಿ ಪ್ರಾಯೋಜಿತ ಶಿಕ್ಷಕ ವಿಕಸನ ಕಾರ್ಯಕ್ರಮ ಆಯೋಜಿಸಿರುವ ಎನ್‌ಎಂಎಎಂಐಟಿ, ನಿಟ್ಟೆಯ ಕಂಪ್ಯೂಟರ್ ವಿಜ್ಞಾನ ಮತ್ತು ಇನಾ#ರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳು. ವಿಎಲ್‌ಎಸ್‌ಐ ವಿಷಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕಾರ್ಯಕ್ರಮವನ್ನು ಬರುವ ಜ. 10ರಿಂದ 12ರ ವರೆಗೆ ಆಯೋಜಿಸಲಾಗಿದೆ.
* 2010ರಲ್ಲಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಾದ ಅತಿ ಪ್ರಮುಖ ಬೆಳವಣಿಗೆ ಯಾವುದು? ಏಕೆ? (ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ, ವಿಷಯ: Nಖ10 ನಮೂದಿಸಿ).
(ಕಳೆದ ವಾರದ ಸರಿಯುತ್ತರಗಳು: * ಮಿರರ್ ಸೈಟ್ ಎಂದರೆ ಅಂತರ್ಜಾಲ ತಾಣದ ಮೇಲಿನ ಅಧಿಕ ಒತ್ತಡವನ್ನು ನಿವಾರಿಸಲು ಬಳಸಲಾಗುವ ತದ್ರೂಪಿ, ಅಣಕು, ದರ್ಪಣ, ಕನ್ನಡಿ ತಾಣ. * ಹ್ಯಾಕರ್ ಎಂದರೆ ಸ್ವಲಾಭಕ್ಕಾಗಿ, ದುರುದ್ದೇಶದಿಂದ ಅಥವಾ ಛಲದಿಂದ ಇತರ ತಾಣಗಳನ್ನು ಬೇಧಿಸಲು ಯತ್ನಿಸುವ ಕಂಪ್ಯೂಟರ್ ನಿಷ್ಣಾತ. ಕನ್ನಡ ಪದ ನುಸುಳುಗಾರ ಸೂಚಿಸಿ ಬಹುಮಾನ ಗೆದ್ದವರು ಯಶಸ್ವಿನಿ.ಅಭಿನಂದನೆಗಳು.)
ಚಿಲಿಪಿಲಿ
* ಕಟುಕ ಬಲ್ಲ ತಾಳ ಯಾವುದು? ಖಂಡಚಾಪ್.
* ವಿಕಿಲೀಕ್ಸ್ ನಮ್ಮ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನೂ ಲೀಕ್ ಮಾಡಿದ್ದರೆ ಚೆನ್ನಾಗಿರೋದು...
* ಕಾಯಿಲೆ ಬಿದ್ದ (ಇಲ್) ಹದ್ದು (ಈಗಲ್) - ಇಲ್ಲೀಗಲ್!
* ಧೂಮಪಾನಿಗಳು ಸಿಗರೇಟು ಬಿಟ್ಟ ಹಾಗೆ ಬಂಗಾರಪ್ಪ ನವರೂ ನಾಲ್ಕನೇ ಬಾರಿ ಕಾಂಗ್ರೆಸ್ ಬಿಟ್ಟರು.