Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
      • Udayavani | Jan 23, 2011

        ಹೃಸ್ವ ವಿಳಾಸ: ವೈರಸ್‌ಗೆ ರಹದಾರಿ

        ಅಂತರ್ಜಾಲದ ಕೆಲವು ದುಷ್ಟರು ವೈರಸ್‌ ದಾಳಿ ನಿಯೋಜಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ. ನೇರವಾಗಿ ವೆಬ್‌ ವಿಳಾಸಗಳನ್ನು ಕಳುಹಿಸಿದರೆ ಅಂಥವರ ಬಣ್ಣ ಸುಲಭವಾಗಿ ಬಯಲಾಗುತ್ತದೆ- ಬಳಕೆದಾರ ಎಚ್ಚರವಾಗಿದ್ದು, ಅಂತಹ ಕೊಂಡಿಗಳನ್ನು ಕ್ಲಿಕ್ಕಿಸಿದೆ ಉಳಿಯುತ್ತಾನೆಂದು, ಇಂಥವರೀಗ ವಿಳಾಸ ಗಳನ್ನು ಕಿರಿದಾಗಿಸಿ ಕಳುಹಿಸುತ್ತಾರೆ.goo.gl,bit.ly ಇಂತಹ ಸೇವೆ ಒದಗಿಸುವ ತಾಣಗಳು.ಇಲ್ಲಿ ಅಂತರ್ಜಾಲ ವಿಳಾಸಗಳು ಬದಲಾಗಿ ಕಿರಿಯ ವಿಳಾಸ ಬರುವುದರಿಂದ ಇಂತಹ ವಿಳಾಸಗಳನ್ನು ನೋಡಿದಾಗ, ಇವುಗಳ ಬಗ್ಗೆ ಅನುಮಾನ ಬರದು. ಕ್ಲಿಕ್ಕಿಸಿದಾಗಲಷ್ಟೇ ಇವುಗಳ ಬಣ್ಣ ಬಯಲಾಗುತ್ತದೆ. ಅನಪೇಕ್ಷಿತ ಅಂತರ್ಜಾಲ ತಾಣಗಳನ್ನು ಪ್ರಚಾರ ಮಾಡಲೂ ಇಂತಹ ಸೇವೆಗಳನ್ನು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಟ್ವಿಟರಿನಲ್ಲಿ 140 ಅಕ್ಷರಗಳ ಸಂದೇಶದ ಮಿತಿ ಇರುವ ಕಾರಣ, ಉದ್ದ ವಿಳಾಸಗಳ ಕೊಂಡಿಗಳನ್ನು ಕಿರಿದುಗೊಳಿಸುವ ಸೇವೆಯು  ಬಳಕೆ ಯಾಗುತ್ತದೆ. ಹಾಗಾಗಿ ಟ್ವಿಟರ್‌ ಸಂದೇಶಗಳ ಮೂಲಕ ವೈರಸ್‌, ಅನಪೇಕ್ಷಿತ ಸಂದೇಶಗಳ ವಿತರಣೆ ಹೆಚ್ಚಾಗಿ ನಡೆಯುತ್ತಲಿದೆ. ಇದನ್ನು ತಡೆಯಲು ಟ್ವಿಟರ್‌ ಬಳಕೆದಾರರು ಟ್ವಿàಟ್‌ಡೆಸ್ಕ್ನಂತಹ ಟ್ವಿಟರ್‌ ರೀಡರುಗಳನ್ನು ಬಳಸುವುದು ಕ್ಷೇಮ. ಇದರಲ್ಲಿ ಪೂರ್ಣಕೊಂಡಿಯನ್ನು ತೋರಿಸುವ ವ್ಯವಸ್ಥೆಯಿದೆ.

        ಮ್ಯಾಂಡ್ರಿವಾ ಲೀನಕ್ಸ್‌

        ಮ್ಯಾಂಡ್ರಿವಾ ಎನ್ನುವ ಹೊಸ ಲೀನಕ್ಸ್‌ ವಿತರಣೆ ಉಬುಂಟು ಲೀನಕ್ಸಿನಂತೆ ಬಳಕೆದಾರಸ್ನೇಹಿ ಲೀನಕ್ಸ್‌ ಆಗಿದೆ. ಇದರ ಹೊಸ ಆವೃತ್ತಿ ಮ್ಯಾಂಡ್ರಿವಾ 2010.2 ಈಗ ಬಿಡುಗಡೆಯಾಗಿದೆ.ವರ್ಷಕ್ಕೆರಡು ಸಲ ಇದರ ಹೊಸ ಆವೃತ್ತಿಗಳನ್ನು ಬಿಡುಗಡೆಗೊಳಿಸುವುದು ಸಂಪ್ರದಾಯ. ಸಿಡಿ, ಡಿವಿಡಿ ಮತ್ತು ಫಾÉಶ್‌ ಡ್ರೆ„ವ್‌ಗಳಲ್ಲೂ ಇದು ಲಭ್ಯ. ಪವರ್‌ಪ್ಯಾಕ್‌ ಆವೃತ್ತಿಗೆ ಹಣ ಪಾವತಿಸಬೇಕಾಗುತ್ತದೆ. ಹಾಗೆಂದು ಉಚಿತ ಆವೃತ್ತಿಯೂ ಇದೆ. ಅಂತರ್ಜಾಲದ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಲು http://www.mandriva.com/en ತಾಣಕ್ಕೆ ಭೇಟಿ ಕೊಡಬಹುದು.

        ವಿಂಡೊಸ್‌ 7ನಲ್ಲಿ ಸಮಸ್ಯೆ

        ಮೈಕ್ರೋಸಾಫ್ಟಿನ ಮೊಬೈಲ್‌ ಕಾರ್ಯನಿರ್ವಹಣಾ ವ್ಯವಸ್ಥೆ ವಿಂಡೊಸ್‌7 ಬಳಸಿದಾಗ, ಅದು ತನ್ನಿಂದತಾನೇ ಅಂತರ್ಜಾಲಕ್ಕೆ ದತ್ತಾಂಶ ಕಳುಹಿಸಿ ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸುವುದು ಕಂಡು ಬಂದಿದೆ. ಮೈಕ್ರೋಸಾಫ್ಟ್ ಕಂಪೆನಿಯೇ ಹೀಗಾಗುವುದನ್ನು ಒಪ್ಪಿಕೊಂಡು ಇದಕ್ಕೆ ವ್ಯವಸ್ಥೆಯಲ್ಲಿ ಅನುಸ್ಥಾಪಿಸಿದ ಇತರ ತಂತ್ರಾಂಶಗಳು ಕಾರಣ ಎಂದು ದೂರಿದೆ.

        ಮುಖ್ಯಸ್ಥ ಬದಲು

        ಗೂಗಲ್‌ ಕಂಪೆನಿಯ ಮುಖ್ಯಸ್ಥನಾಗಿ ಅದರ ಸಂಸ್ಥಾಪಕ ರಲ್ಲೋರ್ವರಾದ ಲ್ಯಾರೀ ಪೇಜ್‌ ಅವರು ಅಧಿಕಾರ ಸ್ವೀಕರಿಸಿ, ಅಚ್ಚರಿ ಮೂಡಿಸಿದ್ದಾರೆ. ಎರಿಕ್‌ ಸ್ಮಿತ್‌ ಇದುವರೆಗೆ ಮುಖ್ಯಸ್ಥರಾಗಿದ್ದರು. ಗೂಗಲ್‌ನ ಆಕರ್ಷಕ ಹಣಕಾಸು ಸ್ಥಿತಿ ಉತ್ತಮವಾಗಿ ದ್ದರೂ ಈ ಬದಲಾವಣೆ ನಡೆದಿದೆ. ತನ್ನ 4ನೆಯ ತ್ರೆ„ಮಾಸಿಕದಲ್ಲಿ 2.5 ಬಿ. ಡಾಲರ್‌ ಲಾಭ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಇದನ್ನು ಸಾಧಿಸಲು ಗೂಗಲ್‌ ಸುಮಾರು 8.5 ಬಿ. ಡಾಲರ್‌ ವ್ಯವಹಾರ ಮಾಡ ಬೇಕಾಯಿತು. ಗೂಗಲ್‌ ಕಂಪೆನಿಯು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಮೊಬೈಲ್‌ ಕ್ಷೇತ್ರದಲ್ಲಿ ಆ್ಯಪಲ್‌ನ ಸ್ಪರ್ಧೆ ಎದುರಿಸಬೇಕಿದೆ. ಕಂಪೆನಿಯ ಉದ್ಯೋಗಿಗಳ ಸಂಖ್ಯೆಯು 25 ಸಾವಿರ ಸಮೀಪಿಸಿದೆ.

        ಉದಯವಾಣಿ ಡೈರಿ ಗೆಲ್ಲಿ!

        ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ ಉದಯವಾಣಿ 2011 ಡೈರಿ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶ್ರೀನಿವಾಸ್‌ ರಾವ್‌, ಬ್ರಹ್ಮಗಿರಿ, ಉಡುಪಿ.
        * ನಂಬರ್‌ ಪೋಟೇìಬಿಲಿಟಿಗೆ ಕನ್ನಡ ಪದ ಟಂಕಿಸಿ.
        * ಸಿಡಿಎಂಎ ಮತ್ತು ಜಿಎಸ್ಸೆೆಂ ತಂತ್ರಜ್ಞಾನ- ವ್ಯತ್ಯಾಸ ಏನು?
        (ಉತ್ತರಗಳನ್ನುashok567@gmail.comಗೆ ಮಿಂಚಂಚೆ ಮಾಡಿ, ವಿಷಯ: NS15ನಮೂದಿಸಿ.)
        (ಕಳೆದ ವಾರದ ಸರಿಯುತ್ತರಗಳು: * ಬಿಂಗ್‌ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆ. *

        http://brizzly.comಟ್ವಿಟರ್‌ ರೀಡರ್‌.ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ಉಜಿರೆಯ ಅಕ್ಷಯ ಪ್ರಭು. ಅಭಿನಂದನೆಗಳು.)

         ಚಿಲಿಪಿಲಿ
        * ನಿಯತವಾಗಿ ನಿದ್ರಿಸಿದರೆ ಮುಪ್ಪು ತಪ್ಪಿಸಬಹುದು, ಅದರಲ್ಲೂ ಡ್ರೆ„ವಿಂಗ್‌ ಮಾಡುವಾಗ ನಿದ್ರಿಸಿದರೆ...
        * ಗಂಡಸು ಎಷ್ಟು ಚಂದವಿದ್ದರೂ ಆತ ಹ್ಯಾಂಡ್‌ಸಂ, ಹೆಂಗಸು ಸ್ವಲ್ಪವೇ ಚೆನ್ನಾಗಿದ್ದರೂ ಬ್ಯೂಟಿಫ‌ುಲ್‌!
        * ಬಂಗಾಳಿಗಳು ವೀರ್‌ ಎನ್ನುವ ಶಬ್ಧವನ್ನು ಬೀರ್‌ ಎನ್ನುತ್ತಾರೆ... ಹಾಗಾಗಿ ಬೀರ್‌ ಅವರ ಶೋಧ...
        * ಚೈನೀಸ್‌ ಸಾಂಬಾರಿನ ಊಟ ಮಾಡಿದಾಗ ನೀವು ಉಂಡದ್ದು ಚೈನೀಸ್‌ ಫ‌ುಡ್ಡೇ?

        ಸ್ಥಿರ ಮೊಬೈಲ್‌ ನಂಬರ್‌ಜಾರಿ
        ಮೊಬೈಲ್‌ ನಂಬರ್‌ ಬದಲಿಸದೆ ಸೇವೆ ನೀಡುವ ಕಂಪೆನಿಯನ್ನು ಬದಲಿಸುವ ಅವಕಾಶವನ್ನು ಈಗ ದೇಶಾದ್ಯಂತ ಒದಗಿಸಲಾಗಿದೆ. ಹೆಚ್ಚಿನ ಮೊಬೈಲ್‌ ಕಂಪೆನಿಗಳು ಈ ಸೇವೆ ನೀಡಲಾರಂಭಿಸಿವೆ. ಸದ್ಯ ಸೇವೆ
        ನೀಡುತ್ತಿರುವ ಕಂಪೆನಿಯಿಂದ ಬಿಡುಗಡೆ ಹೊಂದಲು ಎಸ್ಸೆಮ್ಮೆಸ್‌ ಸಂದೇಶ ನೀಡಿದರೆ ಸಾಕು. ಪ್ರತ್ಯುತ್ತರವಾಗಿ ಬರುವ ಸಂದೇಶದಲ್ಲಿ ಇರುವ ಕೋಡ್‌ ಅನ್ನು ಹೊಸ ಕಂಪೆನಿಯ ಅರ್ಜಿಯಲ್ಲಿ ನಮೂದಿಸಿ, 19 ರೂ. ಪಾವತಿಸಿದರೆ, ಹೊಸ ಕಂಪೆನಿಯ ಸೇವೆ ಲಭ್ಯವಾಗುತ್ತದೆ. ತಮ್ಮ ಗ್ರಾಹಕರ ಸೇವೆಯಲ್ಲಿ ಉತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ವಿಫ‌ಲವಾದ ಕಂಪೆನಿಗಳಿಗೆ ಈ ಸವಲತ್ತು ಕಹಿಯೆನಿಸಲಿದೆ. ಹೊಸ ಕಂಪೆನಿಗಳಿಗೆ ಆಕರ್ಷಕ ಯೋಜನೆಗಳ ಮೂಲಕ ಇತರ ಕಂಪೆನಿಗಳ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಇದು ಉತ್ತಮ ಅವಕಾಶ ಒದಗಿಸಲಿದೆ. ಬಿಎಸ್ಸೆನ್ನೆಲ್‌ ಆರಂಭದಲ್ಲೇ ಹೊಸ ಗ್ರಾಹಕರಿಗೆ ಎಂಎನ್‌ಪಿ ಸೇವೆಗೆ ದರ ಮನ್ನಾ ಪ್ರಕಟಿಸಿದೆಯಲ್ಲದೆ ತ್ರೀಜಿಗೂ ವರ್ಗಾವಣೆ ಮಾಡುವ ಅವಕಾಶ ಒದಗಿಸಿದೆ. ಟುಜಿ ಸೇವೆಗಳಿಗೆ ವರ್ಗಾವಣೆ ಹೊಂದುವಾಗ ಸಿಮ್‌ ಬದಲಿಸಬೇಕಿಲ್ಲ.

        ಭಾವನಾಪ್ರಪಂಚ

        ಜನ್ಮತಃ ಬೆಂಗಳೂರಿನ ವರಾದ ಭಾವನಾ ರಾವ್‌ ಈಗ ಜೆಕ್‌ ರಿಪಬ್ಲಿಕ್‌ನಲ್ಲಿ ವಾಸವಾಗಿದ್ದಾರೆ. ಅವರ ದ್ವಿಭಾಷಾ ಬ್ಲಾಗ್‌ ಬರವಣಿಗೆಯ ಪ್ರಯೋಗಗಳನ್ನು http://bhavana-pen.blogspot.comಕಾಣಬಹುದು.
        ಅವರ ತಿರುಗಾಟದ ಚಿತ್ರಗಳನ್ನು ಧಾರಾಳವಾಗಿ ಬಳಸಿಕೊಂಡ ಕಾರಣ ಬ್ಲಾಗ್‌ನಲ್ಲಿ ಬರವಣಿಗೆಯ ಜತೆ ದೃಶ್ಯ-ಕಾವ್ಯದ ಆಹಾರವೂ ಸಿಗುತ್ತದೆ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus