ಅಶೋಕ್ ಕುಮಾರ್ ಎ. | Jan 30, 2011
ಐಪ್ಯಾಡಿಗಾಗಿ ಪತ್ರಿಕೆ
ದ ಡೈಲಿ ಎನ್ನುವ ಪತ್ರಿಕೆಯನ್ನು ಐಪ್ಯಾಡಿಗಾಗಿಯೇ ಸಿದ್ಧಪಡಿಸಿ ಒದಗಿಸಲು ಮಾಧ್ಯಮ ತ್ರಿವಿಕ್ರಮ ರೂಪರ್ಟ್ ಮುಡೊìಕ್ ಯೋಜಿಸಿದ್ದಾರಂತೆ. ಈ ಬಗ್ಗೆ ಪ್ರಕಟನೆ ಹೊರಬಿದ್ದಿದೆ. ನ್ಯೂಯಾರ್ಕಿನ ಐಪ್ಯಾಡ್ ಬಳಕೆದಾರರಿಗೆ ವಾರದ ಚಂದಾ 99 ಸೆಂಟುಗಳು. ಅಂತರ್ಜಾಲದ ಡೈಲಿ ಕಾರ್ಪ್ ಸಂಸ್ಥೆ ಅಂತ ರ್ಜಾಲದ ತನ್ನ ಮಾಹಿತಿಗಳನ್ನು ಚಂದಾಹಣದ ಆಧಾರದ ಮೇಲೆಯೇ ಒದಗಿಸಲು ಆರಂಭಿಸಿದ ಹೆಗ್ಗಳಿಕೆ ಹೊಂದಿದೆ. ಆದರೆ ಜನರಿನ್ನೂ ಹಣ ಪಾವತಿಸಿ ಸೇವೆ ಪಡೆಯಲು ಹೆಚ್ಚಿನ ಹುರುಪು ಹೊಂದಿಲ್ಲ.

ಭಾರತದಲ್ಲೂ ಆಪಲ್ ಐಪ್ಯಾಡ್
ಭಾರತದಲ್ಲಿ ಆಪಲ್ ಐಪ್ಯಾಡ್ ಈಗ ಲಭ್ಯವಾಗಿದೆ.ವೈ-ಫೈ ಮತ್ತು ತ್ರೀಜಿ ಸವಲತ್ತುಳ್ಳ ಐಪ್ಯಾಡುಗಳಿಗೆ ಬೆಲೆ 28 ಸಾವಿರದಿಂದ ಹಿಡಿದು 45 ಸಾವಿರದವರೆಗಿದೆ.ಕನಿಷ್ಠ ಬೆಲೆಯಲ್ಲಿ 16 ಜಿಬಿ ಸಾಮರ್ಥ್ಯ ಸಿಕ್ಕಿದರೆ, ಗರಿಷ್ಠ ಬೆಲೆಗೆ 64 ಜಿಬಿ ಸಿಗಲಿದೆ. ಆರು ನಮೂನೆಯ ಐಪ್ಯಾಡುಗಳು ಲಭ್ಯ. 16 ಜಿಬಿ, 32 ಜಿಬಿ, 64 ಜಿಬಿ ಸ್ಮರಣ ಸಾಮರ್ಥ್ಯದವು; ಬರೇ ವೈ-ಫೈ ಅಥವಾ ವೈ-ಫೈ ಜತೆಗೆ ತ್ರಿಜಿ ಸಾಮರ್ಥ್ಯದಲ್ಲಿ ಸಿಗುತ್ತವೆ. ಬಿಎಸೆನ್ನೆಲ್ ಐಪ್ಯಾಡಿಗಾಗಿಯೇ ತನ್ನ ಯೋಜನೆಗಳನ್ನು ಪ್ರಕಟಿಸಿದೆ. ಅದರ ಪ್ರಕಾರ ಮಾಸಿಕ ಶುಲ್ಕ ರೂ. 999 ತೆತ್ತರೆ ಅಪರಿಮಿತ ತ್ರಿಜಿ ಸಂಪರ್ಕ ಲಭ್ಯ. ರೂ.600ಕ್ಕೆ ಆರು ಜಿಬಿ ಮತ್ತು ರೂ.99ಕ್ಕೆ ಒಂದು ದಿನ ಅಪರಿಮಿತ ತ್ರಿಜಿ ಸವಿಯಬಹುದು.
ಹೆಚ್ಚು ಪ್ರಚಾರವಿಲ್ಲದೆ ಐಪ್ಯಾಡ್ ಬಿಡುಗಡೆ ಯಾಗಿದೆ. ಜನರ ಪ್ರತಿಕ್ರಿಯೆಯೂ ತಣ್ಣಗೇ ಇತ್ತು. ನಿಧಾನವಾಗಿ ಹೆಚ್ಚು ಉತ್ಸಾಹ ವ್ಯಕ್ತವಾಗುವ ನಿರೀಕ್ಷೆ ಯಿದೆ. ಬೆಲೆ ಹೆಚ್ಚಿಗೆ ಎನ್ನಬಹುದಾದ್ದರಿಂದ, ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಷ್ಟೇ ಇದನ್ನು ಖರೀದಿಸಿಯಾರು. ಉಳಿದವರು ಕಾದು ನೋಡುವ ತಂತ್ರಕ್ಕೇ ಶರಣಾಗಿ ಇತರ ಕಂಪೆನಿಗಳ ಟ್ಯಾಬ್ಲೆಟ್‌ಗಳ ಬಿಡುಗಡೆಗಾಗಿ ಕಾದಾರು. ಖಾಸಗಿ ಕಂಪೆನಿಗಳ ತ್ರಿಜಿ ಯೋಜನೆಗಳೂ ಲಭ್ಯವಾದಾಗ ತ್ರಿಜಿ ಸಂಪರ್ಕವೂ ಅಗ್ಗವಾದೀತು.
ಬಾಹ್ಯಾಕಾಶಕ್ಕೆ ಮೊಬೈಲ್

ಸೆಲ್‌ಪೋನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅದನ್ನು ಬಳಸಿ ಕೃತಕ ಉಪಗ್ರಹವನ್ನು ನಿಯಂತ್ರಿಸುವ ಪ್ರಯತ್ನವನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ಯುಕೆಯ ವಿಜ್ಞಾನಿಗಳು ಈ ಪ್ರಯೋಗಕ್ಕಿಳಿದವರು. ಸರ್ರೆà ಸ್ಪೇಸ್ ಸೆಂಟರಿನ ತಂಡವು ಗೂಗಲ್ ಆಂಡ್ರಾಯಿಡ್ ವ್ಯವಸ್ಥೆ ಬಳಸಿದ ಸೆಲ್‌ರ್ಭೀನನ್ನು ಕೃತಕ ಉಪಗ್ರಹದೊಂದಿಗೆ ರಾಕೆಟಿನಲ್ಲಿ ಕಳುಹಿಸಿ, ಅದು ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸಲಿದೆ. ಕೆಲಸ ಮಾಡಿದರೆ, ಸೆಲ್‌ರ್ಭೀನಿನ ಮೂಲಕ ಭೂಮಿಯ ಚಿತ್ರ ತೆಗೆದು, ಉಪಗ್ರಹ ಮೂಲಕ ಬಾಹ್ಯಾಕಾಶ ಕೇಂದ್ರದಲ್ಲಿ ಸ್ವೀಕರಿಸಿ, ಚಿತ್ರದ ವೀಕ್ಷಣೆ ನಡೆಯಲಿದೆ. ಸೆಲ್‌ಪೋನ್ ಬಾಹ್ಯಾಕಾಶದ ವೈಪರೀತ್ಯದ ಹವಾಗುಣದಲ್ಲಿ ಕೆಡದಂತೆ ಅದನ್ನು ಸುರಕ್ಷಿತ ಆವರಣದೊಳಗೆ ಇಡಬೇಕಾಗುತ್ತದೆ. ಕೆಮರಾ ಕ್ಕಾಗಿ ಅದರಲ್ಲಿ ರಂಧ್ರವನ್ನು ಮಾಡಿದ್ದಾರೆ. ಇದುವರೆಗೆ ಮೊಬೈಲ್ ರ್ಭೀನುಗಳನ್ನು ಬಲೂನುಗಳಲ್ಲಿ ಕಳುಹಿಸಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಹನೀಕೂಂಬ್
ಆಂಡ್ರಾಯಿಡ್ 3.0 ಆವೃತ್ತಿಯ ತಂತ್ರಾಂಶ ಅಭಿವೃದ್ಧಿ ಕಿಟ್ ಎಸ್‌ಡಿಕೆಗೆ ಹನೀಕೂಂಬ್ ಎಂದು ಹೆಸರಿಸಲಾಗಿದೆ.ಇದು ಗೂಗಲ್‌ನ ಟ್ಯಾಬ್ಲೆಟ್ ಸಾಧನದ ಕಾರ್ಯ ನಿರ್ವಹಣಾ ತಂತ್ರಾಂಶ ವ್ಯವಸ್ಥೆ ಗಾಗಿಯೇ ಅಭಿವೃದ್ಧಿ ಪಡಿ ಸಿದ್ದು ಒಂದು ವಿಶೇಷ. ಟ್ಯಾಬ್ಲೆಟ್‌ಗಾಗಿಯೇ ಬ್ರೌಸರ್, ಮೀಡಿಯಾ ಪ್ಲೇಯರ್ ಇತ್ಯಾದಿ ಇದರಲ್ಲಿದೆ. ಜತೆಗೆ ಎಮ್ಯುಲೇಟರ್ ಇರುವುದರಿಂದ ಟ್ಯಾಬ್ಲೆಟ್ ಸಾಧನಕ್ಕೆ ರಚಿಸಿದ ಯಾವುದೇ ತಂತ್ರಾಂಶ ಹೇಗೆ ಕೆಲಸ ಮಾಡಬಹುದು ಎಂಬ ಪಕ್ಷಿನೋಟ ಸಿಗುತ್ತದೆ.
ಪುಸ್ತಕ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ, ಷಡಕ್ಷರಿ ಯವರ ಕ್ಷಣಹೊತ್ತು, ಆಣಿ ಮುತ್ತು ಪುಸ್ತಕ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್, ಬೆಂಗಳೂರು.
* ತಂತ್ರಾಂಶ ಅಳವಡಿಸಿ, ಹಳೆ ಮೊಬೈಲ್ ಪೋನ್‌ಗಳನ್ನು ಸ್ಪರ್ಶಸಂವೇದಿ ತೆರೆಯವನ್ನಾಗಿ ಮಾಡುವುದು ಹೇಗೆ? (ಉತ್ತರವು ಈ ಅಂಕಣದಲ್ಲಿ ಹಿಂದೆ ಚರ್ಚಿತವಾಗಿದೆ- http://ashok567.blogspot.com
ತಿರುವಿ ನೋಡಿ).
* ನಮ್ಮ ಮೇಲ್ಮನೆಯ ಕಾಸು-ಕುಡಿಕೆ ಬರಹಗಳು ಇರುವ ಬ್ಲಾಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ, ವಿಷಯ: NS16 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು: * ನಂಬರ್ ಪೋಟೇìಬಿಲಿಟಿಗೆ ಕನ್ನಡ ಪದ ನಿಶ್ಚಲಂಕೆ (ನಿಶ್ಚಲ+ಅಂಕೆ).
* ಜಿಎಸ್‌ಎಂ ಮತ್ತು ಸಿಡಿಎಂಎ ಮೊಬೈಲ್ ಸೇವೆ ಒದಗಿಸಲು ಲಭ್ಯವಿರುವ ವಿಭಿನ್ನ ತಂತ್ರಜ್ಞಾನಗಳು. ಮಾಹಿತಿಯನ್ನು ಬಳಕೆದಾರನಿಗೆ ಮುಟ್ಟಿಸುವ ವಿಧಾನ ಈ ತಂತ್ರಜ್ಞಾನಗಳಲ್ಲಿ ಬೇರೆ ಬೇರೆಯಾಗಿವೆ. ಬಹುಮಾನ ಗೆದ್ದವರು ಲಾಯ್ ಕ್ಯಾಸ್ಟೆಲಿನೋ, ಕಲ್ಯಾಣಪುರ, ಉಡುಪಿ.
ಡಾ| ಪೆರ್ಲ ಬ್ಲಾಗ್

http://vasanthkumarperla.blogspot.com/ ನಲ್ಲಿ ಡಾ| ವಸಂತ್ ಕುಮಾರ್ ಪೆರ್ಲ ಅವರ ಬ್ಲಾಗ್ ಬರಹಗಳಿವೆ. 30ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜತೆ ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವವರು ಇವರು. ಸದ್ಯ ಕಾರವಾರ ನಿಲಯದ ಕಾರ್ಯಕ್ರಮ
ನಿರ್ವಾಹಕರು. ಮಂಗಳೂರು ನಿಲಯದ ನಿರ್ದೇಶಕ ರಾಗಿಯೂ ಕೆಲಸ ಮಾಡಿದ್ದ ಪೆರ್ಲರ ಕವನ, ಬರಹ, ಸಂದರ್ಶನಗಳು ಬ್ಲಾಗಿಗೆ ವಸ್ತುಗಳು.
ಕಿಂದರಿಜೋಗಿ
ಮಕ್ಕಳಿಗಾಗಿಯೇ ರಚಿಸಲಾದ ಅಂತರ್ಜಾಲ ತಾಣ http://kindarajogi.com ಕಣ್ಮನ ಸೆಳೆಯು ವಂತಿದೆ.
http://kindarajogi.com ಯಲ್ಲಿ ಓದಿ ಕಲಿ, ಮಾಡಿ ತಿಳಿ, ನೋಡಿ ಕಲಿ, ಭೂಮಿ ಮೇಲೆ - ಹೀಗೆ ಹಲವು ವಿಭಾಗಗಳಿವೆ. ಪ್ರಾಯೋಗಿಕವಾಗಿ ಕಲಿಯಲು ಉತ್ತೇಜನ ನೀಡುವ ವಿಭಾಗವೇ ಮಾಡಿ ಕಲಿ. ಹರಿಣಿಯವರ "ಪೋಕ್ರಿ' ಮಕ್ಕಳನ್ನು ರಂಜಿಸಲು ಇಲ್ಲಿ ಪ್ರತ್ಯಕ್ಷನಾಗಿದ್ದಾನೆ. ಗಣಿತ, ವಿಜ್ಞಾನಕ್ಕೆ ಸಂಬಂಧಿಸಿದ ವಿಭಾಗವೂ ಇದೆ. ಅಂತರ್ಜಾಲ ತಾಣದಲ್ಲಿ ಬರಹ ಗಳನ್ನು ಪ್ರಕಟಿಸಲು info@kindarajogi.comಗೆ ಮಿಂಚಂಚೆ ಕಳುಹಿಸಿ.
ಚಿಲಿಪಿಲಿ
* 15 ವರ್ಷ ಹಿಂದೆ ಇಡ್ಲಿಗೆ 50 ಪೈಸೆ, ಎಸ್‌ಟಿಡಿ ಕರೆಗೆ 15 ರೂ. ಇತ್ತು. ಈಗ ಎಸ್‌ಟಿಡಿಗೆ 50 ಪೈಸೆಯಾದರೆ, ಇಡ್ಲಿಗೆ 15 ರೂ.!
* ನೀರುಳ್ಳಿ ಉತ್ತಪ್ಪ, ರಾಬಿನ್ ಉತ್ತಪ್ಪ ದುಬಾರಿ...
* ಹೊಸ ಪ್ರಶಸ್ತಿಗಳು: ಸ್ಕಾ éಮ್ ರತ್ನ, ಸ್ಕಾ éಮ್ ವಿಭೂಷಣ, ಸ್ಕಾ éಮ್ ಭೂಷಣ....
* ಕುಡಿದ ಸೆಕ್ಯುರಿಟಿವಾಲಾ ಉವಾಚ: ಸಾಬ್‌ಜಿ, ಆಜ್ ಸೆಕ್ಯುರಿಟಿ ಟೈಟ್ ಹೈ...
* ಕಂಪ್ಯೂಟರ್ ಸಾಕ್ಷರ ಹೈಸ್ಕೂಲ್ ಶಿಕ್ಷಕರಿಗೆ ಲೀನಕ್ಸ್ ತರಬೇತಿಯ ಬಗ್ಗೆ ಅಸಕ್ತಿಯಿದ್ದರೆ
ashok567@gmail.comಗೆ ಮಿಂಚಿಸಿ.
* ಮೈಕ್ರೋಸಾಫ್ಟ್ನ ತ್ರೆ„ಮಾಸಿಕ ಸಾಧನೆ: ವ್ಯವಹಾರ ವೃದ್ಧಿ, ಲಾಭ ಇಳಿಕೆ.