Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
    • ಐಬಿಎಂ ಕಂಪೆನಿಯ ವಾಟ್ಸನ್‌ 90 ಸರ್ವರು ಗಳು, 2,880ನಷ್ಟು ಸಂಸ್ಕಾರಕಗಳ ಜತೆ ಆನ್‌ಲೈನಿನಲ್ಲಿ ಸಿಗುವ ಸರ್ವರ್‌ ಯೋಜನೆ

      • Udayavani | Feb 20, 2011

        ಬರುತ್ತಿದ್ದಾನೆ ಡಾ| ವಾಟ್ಸನ್‌!

        ಐಬಿಎಂ  ಕಂಪೆನಿಯ ವಾಟ್ಸನ್‌ 90 ಸರ್ವರು ಗಳು, 2,880ನಷ್ಟು ಸಂಸ್ಕಾರಕಗಳ ಜತೆ ಆನ್‌ಲೈನಿನಲ್ಲಿ ಸಿಗುವ ಸರ್ವರ್‌ ಯೋಜನೆ. ಇದನ್ನು ಜನರ ಜತೆ ವ್ಯವಹರಿಸಿ, ಅವರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥವಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ಸಿದ್ಧವಾದಾಗ, ಜನರು ತಮ್ಮ ಕಾಯಿಲೆ- ಕಸಾಲೆ ಗಳ ವಿವರಗಳನ್ನು ನೀಡಿದರೆ, ಈ ಸರ್ವರ್‌ ವೈದ್ಯರಂತೆ ಅದಕ್ಕೆ ಯಾವ ರೋಗ ಕಾರಣ, ಚಿಕಿತ್ಸೆ ಏನು ಎಂದು ಸಲಹೆ ನೀಡ ಬಲ್ಲುದು. ಮುಂದೆ ಕಾನೂನು ಮತ್ತು ಜನ ಸಾಮಾನ್ಯರ ಇತರ ಸಮಸ್ಯೆಗಳಿಗೂ ಪರಿಹಾರ ಸೂಚಿಸಲು ಇದು ಸಮರ್ಥವಾಗುವಂತೆ ಮಾಡುವ ಗುರಿ ಸಂಶೋಧಕರದ್ದು. ಕೊಲಂಬಿಯಾ ಮತ್ತು ಮೇರಿ ಲ್ಯಾಂಡ್‌ ವಿ.ವಿ.ಗಳ ಸಂಶೋಧಕರ ಅಧ್ಯಯನದ ಫ‌ಲವಿದು, ಐಬಿಎಂ ಮತ್ತು ನ್ಯುಆನ್ಸ್‌ ಕಮ್ಯುನಿಕೇಶನ್‌ಗಳ ಜಂಟಿ ಯೋಜನೆ. ಈ ನಡುವೆ, ಜನರಿಗೆ ಖರೀದಿ ಸಲಹೆಗಳನ್ನೂ ನೀಡುವ ರೀತಿಯಲ್ಲಿ ವಾಟ್ಸನ್‌ನ್ನು ಅಭಿವೃದ್ಧಿ ಪಡಿಸುವಂತೆ ಐಬಿಎಂ ಇಲೆಕ್ಟ್ರಾನಿಕ್ಸ್‌ ಕಂಪೆನಿಯೊಂದಕ್ಕೆ ಸೂಚಿಸಿದೆ ಎಂದು ಸುದ್ದಿಯಿದೆ.

        ಆಟ್ರಿಕ್ಸ್‌ 4ಜಿ ರ್ಭೀನ್‌

        ಮೊಟೊರೊಲಾ, ಆಟ್ರಿಕ್ಸ್‌ ಎನ್ನುವ ಮೊಬೈಲ್‌ ರ್ಭೀನನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಮೊದಲ ನೋಟಕ್ಕೆ ಇದು ಆಂಡ್ರಾಯಿಡ್‌ ರ್ಭೀನಿನ ಹಾಗೆ ಕಾಣುತ್ತದೆ.ಆದರೆ ಇದರಲ್ಲಿ ಕೆಲವು ವಿಶೇಷತೆಗಳಿವೆ. ಇದರಲ್ಲಿ ಬೆರಳಚ್ಚಿನ ಮೂಲಕ ಮೊಬೈಲನ್ನು ಲಾಕ್‌ ಮಾಡುವ ಸವಲತ್ತಿದೆ. ಮೊಟೊರೊಲಾದ ಡಾಕ್‌ ಜತೆಗೆ ಇದನ್ನು ಬಳಸಿದರೆ, ಲ್ಯಾಪ್‌ಟಾಪ್‌ ಸಾಧನವನ್ನು ಇದರ ಜತೆ ಬಳಸಬಹುದು. ಕರೆಗಳನ್ನು ಲ್ಯಾಪ್‌ಟಾಪಿನ ಮೂಲಕವೇ ಮಾಡಲು ಅವಕಾಶವಿದೆ. ಆಟ್ರಿಕ್ಸ್‌ ರ್ಭೀನ್‌ ಅತ್ಯಂತ ವೇಗದ ಬಳಕೆಗೆ ಅನುವು ಮಾಡುತ್ತದೆ. ಇದರಲ್ಲಿ ತಂತ್ರಾಂಶಗಳನ್ನು ತೆರೆಯಲು ಅತ್ಯಂತ ಕಡಿಮೆ ಸಮಯ ಸಾಕು. ಕರೆಗಳನ್ನು ಡೆಸ್ಕ್ ಟಾಪಿನ ಮೂಲಕವೂ ಮಾಡಬಹುದು. ಇದರ ವೀಡಿಯೋ ಅತ್ಯಂತ ಸ್ಪಷ್ಟತೆಯುಳ್ಳದ್ದು. ಟಿವಿಯ ಜತೆ ಮೊಬೈಲನ್ನು ಬಳಸಲು ಹೈಡೆಫಿನಿಶನ್‌ ಡಾಕ್‌ ಲಭ್ಯವಿದೆ. ಇದರ ಮೇಲೆ ಮೊಬೈಲ್‌ ಇರಿಸಿದರೆ, ಟಿವಿಯಲ್ಲಿ ಮೊಬೈಲ್‌ ರ್ಭೀನಿನಲ್ಲಿರುವ ವೀಡಿಯೋಗಳನ್ನು ವೀಕ್ಷಿಸಬಹುದು. ಇದರ ಬೆಲೆ 200 ಡಾಲರುಗಳು. ಡಾಕ್‌ ಲಂಗರು ಸಾಧನದ ಜತೆ ಇದರ ಬೆಲೆ 400 ಡಾಲರುಗಳು.

        ಸಂಕೇತ ಶಕ್ತಿಯುತವೇ?


        ಒಂದು ಸ್ಥಳದಲ್ಲಿ ಮೊಬೈಲ್‌ ಟವರ್‌ ಇದ್ದ ಮಾತ್ರಕ್ಕೆ ಸುತ್ತಮುತ್ತಲೂ ಶಕ್ತಿಯುತ ಸಂಕೇತಗಳು ಸಿಗುತ್ತವೆಂದಿಲ್ಲ. ಕೆಲವೊಮ್ಮೆ ಬೃಹತ್‌ ಕಟ್ಟಡಗಳ್ಳೋ ಗುಡ್ಡಗಳ್ಳೋ ಇರುವ ಕಾರಣ ಸಂಕೇತ ಅಲಭ್ಯವಾಗ ಬಹುದು. ಈಗ ರೂಟ್‌ ಮ್ಯಾಟ್ರಿಕ್ಸ್‌ ಎನ್ನುವ ಕಂಪೆನಿಯು ಇದಕ್ಕೊಂದು ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಮೊಬೈಲಿನಲ್ಲಿ ಅನುಸ್ಥಾಪಿಸಿದರೆ, ಮೊಬೈಲ್‌ ಇರುವ ಸ್ಥಳದ ಸಂಕೇತದ ಮಟ್ಟದ ಬಗ್ಗೆ ರೂಟ್‌ಮ್ಯಾಟ್ರಿಕ್ಸ್‌ ಕಂಪೆನಿಗೆ ಮಾಹಿತಿ ಸಿಗುತ್ತಿರುತ್ತದೆ. ಹೀಗೆ ಬಳಕೆದಾರರಿಂದ ಬರುವ ಮಾಹಿತಿಗಳನ್ನು ಕಲೆ ಹಾಕಿ, ಸೇವೆ ನೀಡುವ ಕಂಪೆನಿಗಳ ಸಂಕೇತದ ಗುಣಮಟ್ಟ, ವಿವಿಧ ಸ್ಥಳಗಳಲ್ಲಿ ಹೇಗಿದೆ ಎಂದು ತನ್ನ ಅಂತರ್ಜಾಲ ತಾಣದಲ್ಲಿ ತೋರಿಸಲು ಸಾಧ್ಯವಾಗುತ್ತದೆ. ಇದು ಜನರ ಮೊಬೈಲ್‌ ರ್ಭೀನುಗಳಿಂದ ಬಂದ ಮಾಹಿತಿಯಿಂದಲೇ ಕಲೆ ಹಾಕಿದ್ದಾದ್ದರಿಂದ ಅತ್ಯಂತ ನಿಖರವಾಗಿರುತ್ತದೆ.

        ಡಯನ್ಪೋರಾ

        ನಿಮ್ಮ ಖಾಸಗಿತನವನ್ನು ಗೌರವಿಸುವ, ಫೇಸ್‌ಬುಕ್‌ನ್ನು ಹೋಲುವ ಸಾಮಾಜಿಕ ಜಾಲತಾಣದ ಅವತಾರವೇ ಡಯನ್ಪೋರಾ. ಇದರಲ್ಲಿ ನಿಮ್ಮ ಜತೆ ಸಂಬಂಧವಿರಿಸಿಕೊಂಡವರನ್ನು ಆಸ್ಪೆಕ್ಟ್ ಎಂದು ಕರೆಯ ಲಾಗುತ್ತದೆ. ಕೆಲಸದ ಸ್ಥಳ, ಕುಟುಂಬ, ಗೆಳೆಯರು ಮತ್ತು ಅಂತರ್ಜಾಲದ ಮೂಲಕ ಪರಿಚಯವಾದ ವರು ಎಂದು ಪರಿಚಯಸ್ಥರನ್ನು ವಿಭಾಗಿಸಿರುವುದು ಡಯನ್ಪೋರಾದ ವಿಶೇಷತೆ. ಯಾವ ಗುಂಪಿನ ಜತೆ ಏನನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿಗದಿ ಪಡಿಸಲು ಸಾಧ್ಯವಾಗುವುದು ಈ ತಾಣದ ಇನ್ನೊಂದು ವಿಶೇಷತೆ. ವ್ಯಕ್ತಿಯ ಖಾಸಗಿತನಕ್ಕೆ ಮರ್ಯಾದೆ ನೀಡುವುದು ಇಲ್ಲಿನ ಹೆಗ್ಗಳಿಕೆ.ಉಳಿದಂತೆ ಫೇಸ್‌ಬುಕ್‌ ತಾಣದ ಹಾಗೆ ಈ ತಾಣವನ್ನು ಬಳಸಬಹುದು.

        ಗೂಗಲ್‌ ಕ್ರೋಮಿನ ಬ್ರೌಸರ್‌ ಬೀಟಾ ಆವೃತ್ತಿ ಇದೀಗ ಲಭ್ಯವಾಗಿದೆ. ಇದು 10ನೇ ಆವೃತ್ತಿಯ ಪರೀಕ್ಷಾರ್ಥ ಬಿಡುಗಡೆ. ಜಾವಾ ಸಿðಪ್ಟನ್ನು ಹಿಂದಿನ ಆವೃತ್ತಿಗಳಲ್ಲಿ ಸಾಧ್ಯವಾಗುವುದಕ್ಕಿಂತ ಶೇ. 60ರಷ್ಟು ಹೆಚ್ಚು ವೇಗದಲ್ಲಿ ಗೂಗಲ್‌ ಕ್ರೋಮ್‌ ನಿಭಾಯಿಸ ಬಲ್ಲುದು. ಗೂಗಲ್‌ ಅಪ್ಲಿಕೇಶನ್‌ ಸ್ಟೋರುಗಳಿಗೆ ಗೂಗಲ್‌ ಕ್ರೋಂ ಬಳಕೆದಾರರಿಗೆ ಮಾತ್ರ ಪ್ರವೇಶಾಧಿ ಕಾರ ಸಿಗುತ್ತದೆ. ವಿಂಡೊಸ್‌, ಲೀನಕ್ಸ್‌ ಮತ್ತು ಮ್ಯಾಕ್‌
        ಆಪರೇಟಿಂಗ್‌ ವ್ಯವಸ್ಥೆಗಳ ಆವೃತ್ತಿಗಳೂ ಲಭ್ಯವಾಗಿವೆ. ವಿಡಿಯೋಗಳನ್ನು ತೋರಿಸುವಾಗ, ಕಡಿಮೆ ಬ್ಯಾಟರಿ ಬಳಕೆ ಮತ್ತು ದಕ್ಷ ಸಂಸ್ಕಾರಕ ಬಳಕೆ ಗೂಗಲ್‌ ಕ್ರೋಮಿನ ಹೆಗ್ಗಳಿಕೆ ಎನ್ನಲಾಗಿದೆ. ಹೊಸ ಎಚ್‌ಟಿಎಂಎಲ್‌ 5 ಮಾನಕಕ್ಕೆ ಕ್ರೋಮ್‌ ಹೆಚ್ಚು ಸರಿಹೊಂದುವ ಬ್ರೌಸರ್‌ ಎನ್ನುವುದು ಶ್ರುತಪಟ್ಟಿದೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus