Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಬಿ.ಆರ್‌. ಭಟ್‌ ಎಂಬ ಬೆಳಕು
  • ಶ್ರೀ ಬಿ.ಆರ್‌. ಭಟ್ಟ

    • Udayavani | Feb 25, 2011

      ಜನಪ್ರಿಯತೆ, ತೃಪ್ತ ಬದುಕಿನ ಬುನಾದಿ ಯಾವುದು ಎಂಬ ಪ್ರಶ್ನೆಗೆ ಉತ್ತರ ಬಹುಶಃ ಹೀಗಿರಬಹುದು- 'ಬದುಕಿಗೆ ಬದುಕಲು ಬಿಡಿ'. ನುಡಿದಂತೆ ನಡೆವ ಛಾತಿ, ಪ್ರಾಮಾಣಿಕತೆ, ಪರರ ಕಣ್ಣೀರಿಗೆ ಸ್ಪಂದಿಸುವ ಕರುಣಾಮಯ ಹೃದಯ, ಬದುಕಿನಲ್ಲಿ ತನ್ನ ಪಾಲಿಗೆ ಬಂದದ್ದರಲ್ಲಿ ತೃಪ್ತಿ. ಇದೇ ಸುಖಕ್ಕೆ ವ್ಯಾಖ್ಯಾನವೂ ಹೌದು. ಇದರ ಸಾಕಾರ ರೂಪವೇ ಶ್ರೀ ಬಿ.ಆರ್‌. ಭಟ್ಟ.

      ಬಾಲಕೃಷ್ಣ ರಾಘವೇಂದ್ರ ಭಟ್ಟ ಅವರ ತಂದೆ ಶ್ರೀ ರಾಘವೇಂದ್ರ ಭಟ್ಟ. ಮೂಲ್ಕಿ ವೆಂಕಟರಮಣ ದೇವಸ್ಥಾನದ ಅರ್ಚಕ ಕುಟುಂಬದವರು. ತಾಯಿ ಶ್ರೀಮತಿ ಸರಸ್ವತಿ ಅದೇ ದೇವಸ್ಥಾನದ ಟ್ರಸ್ಟೀ ಕುಟುಂಬದವರು. ದೈವ ಭಕ್ತಿ, ಗುರು ಹಿರಿಯರಲ್ಲಿ ಗೌರವದ ವಾತಾವರಣದಲ್ಲಿ ಹುಟ್ಟಿ ಬೆಳೆದವರು ಬಿ. ಆರ್‌. ಭಟ್ಟ. ಇದೇ ಅವರ ಸಾತ್ವಿಕ ವ್ಯಕ್ತಿತ್ವವನ್ನು ರೂಪಿಸಿತು.

      ವಿದ್ಯಾಬ್ಯಾಸದ ಅನಂತರ ಚಿಕ್ಕಪ್ಪ ಟಿ.ಎನ್‌. ರಾವ್‌ ಅವರು ಮುಂಬೈಯಲ್ಲಿ ನಡೆಸುತ್ತಿದ್ದ ಬ್ರಿಸ್ಟಲ್‌ ಗ್ರಿಲ್‌ನಲ್ಲಿ ಜನರಲ್‌ ಮ್ಯಾನೇಜರ್‌ ಆಗಿ ಉದ್ಯೋಗ ಪ್ರಾರಂಭಿಸಿದರು. ಸರಿಸುಮಾರು ಹದಿನೈದು ವರ್ಷ ಕಾರ್ಯ ನಿರ್ವಹಿಸಿದ್ದರು. ಹುಟ್ಟೂರಿನ ಸೆಳೆತ ಬಲವಾಗಿ ಅವರು ಮೂಲ್ಕಿಗೆ ವಾಪಸಾದರು.

      ಹೀಗೆ ಮುಂಬೈಯಿಂದ ಹುಟ್ಟೂರಿಗೆ ಹಿಂದಿರುಗಿದ ಭಟ್‌ ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್‌ನಲ್ಲಿ ಜನರಲ್‌ ಮ್ಯಾನೇಜರ್‌ ಆಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳ ಮುಖ್ಯ

      ಪ್ರವೇಶಾಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಇದಲ್ಲದೆ ಮಣಿಪಾಲ ಮೆಡಿಕಲ್‌ ರಿಲೀಫ್ ಸೊಸೈಟಿ ಟ್ರಸ್ಟಿ, ಮಣಿಪಾಲ ಕೋ-ಆಪರೇಟಿವ್‌ ಬ್ಯಾಂಕ್‌ನ ಉಪಾಧ್ಯಕ್ಷ, ಮಣಿಪಾಲ ಡಾಟ್‌ನೆಟ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇದರೊಂದಿಗೆ ರೋಟರಿ ಕ್ಲಬ್‌ನಲ್ಲಿ ಸಕ್ರಿಯರಾಗಿದ್ದರು.

      ಅನನ್ಯ ವ್ಯಕ್ತಿತ್ವ

      ಇವರ ವ್ಯಕ್ತಿತ್ವದ ವಿಭಿನ್ನತೆ ಅವರ ಸದಾ ಮುಗುಳು ನಗೆಯ ಮುಖ. ಎಂದೂ ಯಾವ ಕಾರಣಕ್ಕೂ ಪರರ ಮನ ನೋಯಿಸದ, ಕುಂದು ಕಾಣದ, ಕಂಡರೂ ಅದರ ಬಗ್ಗೆ ಚಕಾರವೆತ್ತದ, ಹಾಸ್ಯಪ್ರಜ್ಞೆಯಿಂದ ತಪ್ಪುಗಳನ್ನು ನಗುಮೊಗದಿಂದ ಸೌಮ್ಯ ಶಬ್ದಗಳಲ್ಲಿ ತಿದ್ದುವ, ಸರ್ವರನ್ನೂ ಸಮಾನತೆಯಿಂದ ಕಾಣುವುದರಲ್ಲಿತ್ತು ಇವರ ಪರಮ ಸಾತ್ವಿಕತೆಯ ಗುಟ್ಟು. ಪ್ರತಿಯೊಂದು ಹೆಜ್ಜೆಯನ್ನೂ ರಚನಾತ್ಮಕವಾಗಿ ವಿಮರ್ಶಿಸಿ ನೋಡುವುದರಲ್ಲಿ ಹಾಗೂ ಪ್ರಜ್ಞಾಪೂರ್ವಕವಾಗಿ ತೊಡಗಿಕೊಳ್ಳುವುದರಲ್ಲಿ ಇತ್ತು.

      ಅವರ ವ್ಯಕ್ತಿತ್ವ ಹಾಗೂ ಸಾಮರ್ಥ್ಯವೇ ಟಿ.ಎಂ.. ಪೈ ಅವರನ್ನು ಆಕರ್ಷಿಸಿತು. ಪೈ ಅವರ ಪ್ರೀತಿಗೆ ಪಾತ್ರವಾದ ಹಿನ್ನೆಲೆಯಲ್ಲಿ ಭಟ್‌ ಅವರ ಶಿಕ್ಷಣ ಸಂಸ್ಥೆಗಳಲ್ಲಿ 10 ವರ್ಷಗಳ ಕಾಲ ಪ್ರವೇಶ ಮುಖ್ಯಾಕಾರಿಯಾಗಿ ಅವರು ಕಾರ್ಯ ನಿರ್ವಹಿಸಿದರು.

      ನಿಲುವು

      ಬಿ.ಆರ್‌. ಭಟ್‌ ಬದುಕಿನ ಬಗ್ಗೆ ತನ್ನದೇ ಸಕಾರಾತ್ಮಕ ನಿಲುವು ಹೊಂದಿದ್ದರು. ನಮ್ಮಿಂದ ಬದಲಾಯಿಸಲು ಸಾಧ್ಯವಾಗದ ವಿಷಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಮಗಿರುವ ಹಾರೈಕೆಯ ಲೆಕ್ಕಾಚಾರದಿಂದ ನಾವು ಮುಂದುವರಿಯಬೇಕು. ದೇವರು ವಿಶ್ವದ ಲೆಕ್ಕಾಚಾರ ನಿರ್ವಹಿಸುತ್ತಾನೆ. ಚಿಂತನೆಗಳಲ್ಲಿ ಸಮತೋಲನ ಕಾಯ್ದುಕೊಂಡರೆ ಬದುಕು ಸುಲಲಿತ. ಏನೇ ಕಷ್ಟ ಬರಲಿ, ಋಣಾತ್ಮಕವಾಗಿ ಚಿಂತಿಸಬಾರದು. ಯಾವತ್ತೂ ಸಕಾರಾತ್ಮಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂಬುದು ಅವರ ನಿಲುವು.

      ಮಣಿಪಾಲದ ಅನಂತ ನಗರದಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದ ಮಹಾನ್‌ ಚೇತನ ಬಿ.ಆರ್‌ ಭಟ್‌ ಫೆ. 13ರಂದು ವಿವಶರಾದರು. ಚಿಂತನೆಗಳ ಬೆಳಕಿನಲ್ಲಿ ಹೆಜ್ಜೆ ಹಾಕುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus